ರಾಜ್ಯ

ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಪ್| ಮುಂದಿನ ವಿಚಾರಣೆವರೆಗೆ ಬಂಧಿಸದಂತೆ ಹೈಕೋರ್ಟ್ ‌ಆದೇಶ

ಸಮಗ್ರ ನ್ಯೂಸ್: ಪೋಕ್ಸೋ ಪ್ರಕರಣದಲ್ಲಿ ಬಿ.ಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದ್ದು, ಬಂಧಿಸದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ ಹೈಕೋರ್ಟ್ ಬಿಎಸ್ವೈ ಅವರನ್ನು ಬಂಧಿಸದಂತೆ ಸಿಐಡಿಗೆ ಹೈಕೋರ್ಟ್ ಸೂಚನೆ ನೀಡಿದೆ.ಅಂತೆಯೇ ಜೂ.17 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ […]

ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಪ್| ಮುಂದಿನ ವಿಚಾರಣೆವರೆಗೆ ಬಂಧಿಸದಂತೆ ಹೈಕೋರ್ಟ್ ‌ಆದೇಶ Read More »

ಉಡುಪಿ: ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್‌ : ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಉಡುಪಿ‌ ಅಂಬಾಗಿಲಿನಲ್ಲಿ ಸಂಭವಿಸಿದೆ. ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಸಂಚರಿಸುತಿದ್ದ ಕಾರು ಅತೀ ವೇಗದಲ್ಲಿ ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆಯಲ್ಲಿ ಕಾರಿನ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿವೆ. ಕಾರಿನ ಇಂಜಿನ್ ಬೇರ್ಪಟ್ಟು ಮಾರುದ್ದ ಹೋಗಿ ಬಿದ್ದಿದೆ. ಗಾಯಗೊಂಡ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ

ಉಡುಪಿ: ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ನಾಲ್ವರಿಗೆ ಗಾಯ Read More »

ಅಥಣಿ: ಅಗ್ನಿಶಾಮಕ ಸಿಬ್ಬಂದಿಗೆ ಒಲಿದು ಬಂದ ಮುಖ್ಯಮಂತ್ರಿ ಚಿನ್ನದ ಪದಕ

ಸಮಗ್ರ ನ್ಯೂಸ್: ವಿಪತ್ತು ಹಾಗೂ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅತ್ಯುತ್ತಮ ಸೇವೆಯನ್ನ ಸಲ್ಲಿಸಿದ ಅನಿಲ ಕುಮಾರ್ ಬಡಚಿ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಒಲಿದು ಬಂದಿದೆ. ಅಗ್ನಿ ಅವಗಡ ಮತ್ತು ವಿಪತ್ತು ಮತ್ತು ತುರ್ತು ಸೇವೆಗಳ ಸಂದರ್ಭದಲ್ಲಿ ನಾಗರಿಕರ ಜೀವ ರಕ್ಷಣೆ ಹಾಗೂ ಆಸ್ತಿ ಸಂರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಅತ್ಯುತ್ತಮ ಸೇವೆ ಸಲ್ಲಿಸಿದ ಅಗ್ನಿಶಾಮಕ ಮತ್ತು ಅಧಿಕಾರಿ ಹಾಗೂ ಸಿಬ್ಬಂದಿ ಗಳಿಗೆ ಮುಖ್ಯ ಮಂತ್ರಿ ಚಿನ್ನದ ಪದಕವನ್ನ ಜೂ. 11 ರಂದು ಬೆಂಗಳೂರಿನ ಅಗ್ನಿಶಾಮಕ

ಅಥಣಿ: ಅಗ್ನಿಶಾಮಕ ಸಿಬ್ಬಂದಿಗೆ ಒಲಿದು ಬಂದ ಮುಖ್ಯಮಂತ್ರಿ ಚಿನ್ನದ ಪದಕ Read More »

ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು..!

ಸಮಗ್ರ ನ್ಯೂಸ್: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಬೆಂಗಳೂರು ಮೂಲದ ವಿಶಾಲ್(19)‌ ಹಾಗೂ ತಮಿಳುನಾಡು ಮೂಲದ ರೋಹನ್ (18) ಮೃತ ಯುವಕರು. ಈ ಯುವಕರು ಮೈಸೂರಿನ ಅಜ್ಜಿ ಮನೆಗೆ ಪೋಷಕರೊಂದಿಗೆ ಬಂದಿದ್ದರು‌. ಶ್ರೀರಂಗಪಟ್ಟಣದ ನಿಮಿಷಾಂಭ ದೇವಿ ದರ್ಶನಕ್ಕಾಗಿ ಕುಟುಂಬ ಸಮೇತ ಬಂದಿದ್ದರು. ಇದೇ ಸಂದರ್ಭದಲ್ಲಿ ಯುವಕರಿಬ್ಬರುಈಜಲು ಕಾವೇರಿ ನದಿಗಿಳಿದಿದ್ದರು. ಆದರೆ ಇವರಿಬ್ಬರಿಗೂ ಈಜು ಬಾರದೇ ಸಾವನ್ನಪ್ಪಿದ್ದಾರೆ. ಇನ್ನು ಮಗನನ್ನ ಕಳೆದುಕೊಂಡ ತಾಯಿ ರೋಧನೆ ಮುಗಿಲು ಮುಟ್ಟಿದ್ದು, ಕಾವೇರಿ

ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು..! Read More »

ಭದ್ರತಾ ಸಲಹೆಗಾರರಾಗಿ ಮತ್ತೆ ನೇಮಕಗೊಂಡ ಅಜಿತ್ ದೋವಲ್

ಸಮಗ್ರ ನ್ಯೂಸ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಅವರನ್ನು ಕೇಂದ್ರ ಸರ್ಕಾರವು ಮೂರನೇ ಅವಧಿಗೂ ಸಲಹೆಗಾರರನ್ನಾಗಿ ನೇಮಕ ಮಾಡಿದೆ . ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಕಾರ್ಯದರ್ಶಿಯಾಗಿ ಪಿ.ಕೆ.ಮಿಶ್ರಾ ಅವರೇ ಮುಂದುವರಿಯಲಿದ್ದಾರೆ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಜಿತ್ ದೋವಲ್ ಅವರನ್ನು ಮೂರನೇ ಅವಧಿಗೆ ನೇಮಿಸಿರುವ ಕುರಿತು ಸಂಪುಟದ ನೇಮಕಾತಿ ಸಮಿತಿಯು ಆದೇಶ ಹೊರಡಿಸಿದೆ. ನೂತನ ಆದೇಶದ ಪ್ರಕಾರ, ಅಜಿತ್ ದೋವಲ್ ಅವರು ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವವರೆಗೆ

ಭದ್ರತಾ ಸಲಹೆಗಾರರಾಗಿ ಮತ್ತೆ ನೇಮಕಗೊಂಡ ಅಜಿತ್ ದೋವಲ್ Read More »

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಜಾಮೀನು ರಹಿತ ವಾರಂಟ್ ಜಾರಿ| ಬಂಧನ ಬೀತಿಯಲ್ಲಿ ರಾಜಾಹುಲಿ

ಸಮಗ್ರ ನ್ಯೂಸ್: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸಲ್ಲಿ ಸಿಐಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಈ ಬೆನ್ನಲ್ಲೇ ಕೋರ್ಟ್ ನಿಂದ ಬಿಎಸ್ ಯಡಿಯೂರಪ್ಪ ಅವರಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿರೋದಾಗಿ ತಿಳಿದು ಬಂದಿದೆ. ಪೋಕ್ಸ್ ಕೇಸ್ ನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಬಂಧನದ ಭೀತಿ ಎದುರಾಗಿದೆ. ಬೆಂಗಳೂರಿನ 1ನೇ ತ್ವರಿತ ನ್ಯಾಯಾಲಯವು ಇಂದು ಅವರ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಜಾರಿಗೊಳಿಸಿದೆ. ಮತ್ತೊಂದೆಡೆ ಗೃಹ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಜಾಮೀನು ರಹಿತ ವಾರಂಟ್ ಜಾರಿ| ಬಂಧನ ಬೀತಿಯಲ್ಲಿ ರಾಜಾಹುಲಿ Read More »

ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ರಾಹುಲ್/ ವಯನಾಡಿಗೆ ರಾಜೀನಾಮೆ ನೀಡುವ ಸಾಧ್ಯತೆ

ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡು ಮತ್ತು ರಾಯ್‍ಬರೇಲಿಯಲ್ಲಿ ಎರಡೂ ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದಿದ್ದು, ಕೇರಳದ ವಯನಾಡು ಕ್ಷೇತ್ರ ತೊರೆಯುವ ಸಾಧ್ಯತೆ ದಟ್ಟವಾಗಿದೆ. ತಮ್ಮನ್ನು ಗೆಲ್ಲಿಸಿದ ವಯನಾಡು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್, ವಯನಾಡು ಜನತೆ ಮತ್ತೆ ನನ್ನ ಕೈ ಹಿಡಿದಿದ್ದು, ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಎಲ್ಲರಿಗೂ ಧನ್ಯವಾದಗಳು. ನಾನು ಈಗ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ವಯನಾಡು, ರಾಯ್‍ಬರೇಲಿ ಯಾವುದಾದರೂ ಒಂದು ಕ್ಷೇತ್ರವನ್ನು

ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ರಾಹುಲ್/ ವಯನಾಡಿಗೆ ರಾಜೀನಾಮೆ ನೀಡುವ ಸಾಧ್ಯತೆ Read More »

ಕೇರಳ ವಿಶ್ವವಿದ್ಯಾನಿಲಯದಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್/ ವಿದ್ಯಾರ್ಥಿ ಸಂಘದ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಉಪಕುಲಪತಿ

ಸಮಗ್ರ ನ್ಯೂಸ್: ಕೇರಳ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನ ಯೂನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘವು ಆಯೋಜಿಸಲು ಸಿದ್ಧತೆ ನಡೆಸಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ನೃತ್ಯ ಕಾರ್ಯಕ್ರಮಕ್ಕೆ ಉಪಕುಲಪತಿ ಬ್ರೇಕ್ ಹಾಕಿದ್ದಾರೆ. ವಿಶ್ವವಿದ್ಯಾಲಯದ ಅನುಮತಿ ಪಡೆಯದೇ ಜುಲೈ5 ರಂದು ಸನ್ನಿ ಲಿಯೋನ್ ನೃತ್ಯ ಪ್ರದರ್ಶನ ನಡೆಸಲು ಸಿದ್ಧತೆಗಳು ನಡೆದಿದ್ದವು. ಕಾಲೇಜಿನಲ್ಲಿ ಯಾವುದೇ ಸಂದರ್ಭದಲ್ಲೂ ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಉಪಕುಲಪತಿ ಹೇಳಿದ್ದಾರೆ. ಈ ಹಿಂದೆ ವಿದ್ಯಾರ್ಥಿ ಸಂಘಟನೆಗಳು ಆಯೋಜಿಸಿದ್ದ ಕೆಲವು ಕಾರ್ಯಕ್ರಮಗಳಲ್ಲಿ ಅವಘಡ ಸಂಭವಿಸಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.

ಕೇರಳ ವಿಶ್ವವಿದ್ಯಾನಿಲಯದಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್/ ವಿದ್ಯಾರ್ಥಿ ಸಂಘದ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ ಉಪಕುಲಪತಿ Read More »

ರೈಲಿನೊಳಗೆ ಪ್ರೇಮಿಗಳ ಲವ್ವಿಡವ್ವಿ| ಪ್ರೀತಿ ಕುರುಡು ನಿಜ…ಆದ್ರೆ ಸಾರ್ವಜನಿಕವಾಗಿ ಸರಸವಾಡುವಷ್ಟೇ? ಮುಜುಗರಕ್ಕೀಡಾದ ಸಹ ಪ್ರಯಾಣಿಕರು!!

ಸಮಗ್ರ ನ್ಯೂಸ್: ಪ್ರೇಮಿಗಳು ಕುರುಡುತನ ತೋರಿದ್ರೆ ಸಾರ್ವಜನಿಕರಿಂದ ಧರ್ಮದೇಟು ಬೀಳುವುದಂತು ಪಕ್ಕಾ. ಏಕೆಂದರೆ ಬಸ್‌, ಟ್ರೈನ್‌, ಮೆಟ್ರೋ, ಪಾರ್ಕ್‌ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಂದು ಎಲ್ಲೆ ಮೀರಿದ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಇಂತಹ ಅನುಚಿತ ವರ್ತನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತವೆ. ಇತ್ತೀಚಿಗಂತೂ ಇಂತಹ ಕೆಲವೊಂದು ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಇದೀಗ ಅಂತಹದೇ ಸುದ್ದಿಯೊಂದು ವೈರಲ್‌ ಆಗಿದ್ದು, ಪ್ರೇಮಿಗಳಿಬ್ಬರು ರೈಲಿನಲ್ಲಿ ರೊಮ್ಯಾನ್ಸ್‌ ಮಾಡಿ ಸಹ ಪ್ರಯಾಣಿಕರಿಗೆ ಮುಜುಗರ ಉಂಟುಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ

ರೈಲಿನೊಳಗೆ ಪ್ರೇಮಿಗಳ ಲವ್ವಿಡವ್ವಿ| ಪ್ರೀತಿ ಕುರುಡು ನಿಜ…ಆದ್ರೆ ಸಾರ್ವಜನಿಕವಾಗಿ ಸರಸವಾಡುವಷ್ಟೇ? ಮುಜುಗರಕ್ಕೀಡಾದ ಸಹ ಪ್ರಯಾಣಿಕರು!! Read More »

ಚಾರ್ಮಾಡಿ: ಬಸ್ಸಿಗೆ ಅಡ್ಡ ಬಂದ ಕಾಡಾನೆ| ಪ್ರಯಾಣಿಕರಿಗೆ ಫುಲ್ ಶಾಕ್

ಸಮಗ್ರ ನ್ಯೂಸ್ : ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಾಡಾನೆಯೊಂದು ಅಡ್ಡ ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ನಡೆದಿದೆ. ಬಸ್ಸಿನ ಪಕ್ಕದಲ್ಲೇ ಕಾಡಾನೆ ಹಾದು ಹೋಗಿದೆ. ಕಾಡಾನೆ ಕಂಡು ಪ್ರಯಾಣಿಕರು ಗಾಬರಿಗೊಂಡಿದ್ದರು. ಒಂಟಿ ಸಲಗ ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ನಿಂತಿತ್ತು. ಆನೆಯನ್ನ ಕಂಡು ತಕ್ಷಣ ಬಸ್ ನಿಲ್ಲಿಸಿದ್ದರು ಚಾಲಕ. ಚಾರ್ಮಾಡಿ ಘಾಟಿಯಲ್ಲಿ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಚಿಕ್ಕಮಗಳೂರು-ಮಂಗಳೂರು ಎರಡೂ ಕಡೆಯಲ್ಲೂ ಟ್ರಾಫಿಕ್ ಜಾಮ್

ಚಾರ್ಮಾಡಿ: ಬಸ್ಸಿಗೆ ಅಡ್ಡ ಬಂದ ಕಾಡಾನೆ| ಪ್ರಯಾಣಿಕರಿಗೆ ಫುಲ್ ಶಾಕ್ Read More »