ರಾಜ್ಯ

ನಾಳೆ(ಜೂ.25) ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ನಾಳೆ(ಜೂ. ೨೫)ರಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಮಂಗಳವಾರ ಮಂಗಳೂರಿಗೆ ವಿಮಾನ ಮೂಲದ ಆಗಮಿಸಲಿರುವ ಡಿಸಿಎಂ‌ ಕಡಬ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ‌ ಮುಂಜಾನೆ 10.30ಕ್ಕೆ ಆಗಮಿಸಲಿದ್ದಾರೆ. ಬಳಿಕ ದೇವರ ದರ್ಶನ ಪಡೆದು ಅಂದು ರಾತ್ರಿ ಮಂಗಳೂರಿನಿಂದ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನಾಳೆ(ಜೂ.25) ಕುಕ್ಕೆ ಸುಬ್ರಹ್ಮಣ್ಯಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ Read More »

ದರ್ಶನ್ ಪ್ರಕರಣದ ಬೆನ್ನಲ್ಲೇ ಮತ್ತೆ ಮುನ್ನಲೆಗೆ ಬಂದ ಸೌಜನ್ಯ ಕೊಲೆ ಪ್ರಕರಣ| ಮರುತನಿಖೆಗಾಗಿ ಮುಖ್ಯಮಂತ್ರಿಗಳಿಗೆ ಪತ್ರ

ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಸದ್ಯ ಪರಪ್ಪನ ಜೈಲು ಸೇರಿದ ಬೆನ್ನಲ್ಲೇ ರಾಜ್ಯದಲ್ಲಿ ಸೌಜನ್ಯ ಪ್ರಕರಣ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಈ ಕುರಿತು ಕೆಲವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲೇನಿದೆ?“ನಮ್ಮ ರಾಜ್ಯದ ಮುಖ್ಯಮಂತ್ರಿ ಅದಾ ಸಿದ್ದರಾಮಯ್ಯ ಸರ್ ರವರಿಗೆ ಒಂದು ಮನವಿ. ನಮ್ಮ ಹೆಮ್ಮೆಯ ಪೊಲೀಸ್ ಅಧಿಕಾರಿಗಳು ನಟ ದರ್ಶನ್ ಅವರ ಕೇಸ್ ನಲ್ಲಿ ಯಾರೋ ಒತ್ತಡಕ್ಕೂ ಮಣಿಯದೆ ಒಳ್ಳೆ ರೀತಿಯ ತನಿಖೆಯನ್ನು ಮಾಡಿದ್ದಾರೆ. ಅದಕ್ಕೆ ನಮ್ಮ ಹೃದಯಪೂರ್ವಕ

ದರ್ಶನ್ ಪ್ರಕರಣದ ಬೆನ್ನಲ್ಲೇ ಮತ್ತೆ ಮುನ್ನಲೆಗೆ ಬಂದ ಸೌಜನ್ಯ ಕೊಲೆ ಪ್ರಕರಣ| ಮರುತನಿಖೆಗಾಗಿ ಮುಖ್ಯಮಂತ್ರಿಗಳಿಗೆ ಪತ್ರ Read More »

ಅಸಹಜ ಲೈಂಗಿಕ ದೌರ್ಜನ್ಯ| ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ

ಸಮಗ್ರ ನ್ಯೂಸ್: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರ ವಶವಾಗಿದ್ದ ಜೆಡಿಎಸ್​ ಪಕ್ಷದ ಎಂಎಲ್​ಸಿ ಸೂರಜ್ ರೇವಣ್ಣ ಅವರಿಗೆ ಇದೀಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ 42ನೇ ಎಸಿಎಂಎಂ ಕೋರ್ಟ್​ ಆದೇಶಿಸಿದೆ. ವಿಧಾನಪರಿಷತ್​ ಸದಸ್ಯ ಡಾ. ಸೂರಜ್​ ರೇವಣ್ಣ ವಿರುದ್ಧ ಓರ್ವ ಯುವಕ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಎಸಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಸೂರಜ್​ ರೇವಣ್ಣ ಅವರ ಆಪ್ತ ಸಹಾಯಕ ಕೂಡ ದೂರು ನೀಡಿದ್ದರು. ದೂರನ್ನು

ಅಸಹಜ ಲೈಂಗಿಕ ದೌರ್ಜನ್ಯ| ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ Read More »

ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಸಿಐಡಿಗೆ ಹಸ್ತಾಂತರ

ಸಮಗ್ರ ನ್ಯೂಸ್: ಜೆಡಿಎಸ್‌ ಪಕ್ಷದ‌ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಎಚ್‌ಡಿ ರೇವಣ್ಣ ಹಿರಿಯ ಪುತ್ರ ಸೂರಜ್ ರೇವಣ್ಣ ವಿರುದ್ಧ ಕೇಳಿಬಂದಿರುವ ಸಲಿಂಗ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೆಶಕರ ಕಚೇರಿಯಿಂದ ಆದೇಶ ಹೊರಡಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್ ಹಿತೇಂದ್ರ ಅವರು, ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಕ್ರೈಮ್ ನಂಬರ್ 92/2024 ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಈ

ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಸಿಐಡಿಗೆ ಹಸ್ತಾಂತರ Read More »

ಹಾಸನ: ಸಲಿಂಗ ರತಿ ಆರೋಪ| ಎಂಎಲ್ ಸಿ ಸೂರಜ್‌ ರೇವಣ್ಣ ಅರೆಸ್ಟ್!?

ಸಮಗ್ರ ನ್ಯೂಸ್: ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಹಾಸನ ಸೆನ್‌ ಪೊಲೀಸ್‌ ಠಾಣೆಯ ಪೊಲೀಸರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪುತ್ರ ಎಂಎಲ್‌ ಸಿ ಸೂರಜ್‌ ರೇವಣ್ಣರನ್ನು ಅರೆಸ್ಟ್‌ ಮಾಡಲಾಗಿದೆ ಎನ್ನಲಾಗಿದೆ. ನಿನ್ನೆ ಹಾಸನದ ಸೆನ್‌ ಪೊಲೀಸ್‌ ಠಾಣೆಗೆ ಕರೆತಂದಿದ್ದ ಪೊಲೀಸರು ಇಂದು ಮುಂಜಾನೆ ನಾಲ್ಕು ಗಂಟೆಯವರೆಗೂ ಸುಧೀರ್ಘ ವಿಚಾರಣೆ ನಡೆಸಿದ್ದಾರೆ. ಸೂರಜ್‌ ರೇವಣ್ಣ ಆಪ್ತ ಶಿವಕುಮಾರ್‌ ನೀಡಿದ್ದ ತಾಂತ್ರಿಕ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ. ಸಂತ್ರಸ್ತ ಯುವಕ ಹಣಕ್ಕಾಗಿ ಬ್ಲ್ಯಾಕ್‌‌ಮೇಲ್‌ ಮಾಡಿದ ಸಂಬಂಧದ ಆಡಿಯೋ ಗಳನ್ನು

ಹಾಸನ: ಸಲಿಂಗ ರತಿ ಆರೋಪ| ಎಂಎಲ್ ಸಿ ಸೂರಜ್‌ ರೇವಣ್ಣ ಅರೆಸ್ಟ್!? Read More »

ಹವಾಮಾನ ವರದಿ| ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ| ರೆಡ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಮುಂದಿನ ಮೂರು ದಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಅತೀ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್’ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇಂದು(ಜೂ.23)ರ ಭಾನುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ 20 ಸೆಂ.ಮೀ ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.ಉಳಿದಂತೆ ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗೆ ‘ಆರೆಂಜ್ ಅಲರ್ಟ್’, ಮೈಸೂರು, ಬೀದರ್ ಕಲಬುರಗಿ ಜಿಲ್ಲೆಗೆ ‘ಯಲ್ಲೋ ಅಲರ್ಟ್’

ಹವಾಮಾನ ವರದಿ| ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ| ರೆಡ್ ಅಲರ್ಟ್ ಘೋಷಣೆ Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್ ಸೇರಿದಂತೆ ನಾಲ್ಕು‌ ಮಂದಿ ಪರಪ್ಪನ ಅಗ್ರಹಾರ ಜೈಲಿಗೆ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಸೇರಿದಂತೆ 4 ಆರೋಪಿಗಳು ಪರಪ್ಪನ ಅಗ್ರಹಾರ ಪಾಲಾಗಿದ್ದಾರೆ. ದರ್ಶನ್ ಸೇರಿದಂತೆ ಉಳಿದ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿಯ ಅವಧಿ ಅಂತ್ಯವಾದ ಹಿನ್ನೆಲೆ ಇಂದು 5ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು ದರ್ಶನ್ ಸೇರಿದಂತೆ ಒಟ್ಟು 4 ಆರೋಪಿಗಳಿಗೆ ಜುಲೈ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ. ಅದರಂತೆ ಎರಡನೇ ಬಾರಿಗೆ ನಟ ದರ್ಶನ್ ಜೈಲು ಪಾಲಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್ ಸೇರಿದಂತೆ ನಾಲ್ಕು‌ ಮಂದಿ ಪರಪ್ಪನ ಅಗ್ರಹಾರ ಜೈಲಿಗೆ Read More »

ವಯನಾಡಿನಿಂದ ಪ್ರಿಯಾಂಕಾ ಸ್ಪರ್ಧೆ/ ಪ್ರಚಾರಕ್ಕೆ ಬರಲಿದ್ದಾರೆ ಮಮತಾ ಬ್ಯಾನರ್ಜಿ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣಾ ಪೂರ್ವ ಹೋರಾಟದ ನಂತರ ತೃಣಮೂಲ ಕಾಂಗ್ರೆಸ್ ಮತ್ತು I.N.D.I.A ಬಣಗಳ ನಡುವಿನ ಸಂಬಂಧವು ಸುಧಾರಿಸುತ್ತಿದೆ ಎಂಬ ಸಂಕೇತವಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪರ ಪ್ರಚಾರ ಮಾಡುವ ಸಾಧ್ಯತೆಯಿದೆ. ರಾಹುಲ್ ಗಾಂಧಿ ಗೆದ್ದ ಕೇರಳದ ಸೀಟಿನಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಮತ್ತು ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ

ವಯನಾಡಿನಿಂದ ಪ್ರಿಯಾಂಕಾ ಸ್ಪರ್ಧೆ/ ಪ್ರಚಾರಕ್ಕೆ ಬರಲಿದ್ದಾರೆ ಮಮತಾ ಬ್ಯಾನರ್ಜಿ Read More »

ಒಂದೇ ಮಳೆಗೆ ಬಿರುಕು ಬಿಟ್ಟ ನೂತನ ಅಟಲ್ ಸೇತುವೆ| ಬಹುಕೋಟಿ ವೆಚ್ಚದ ಸೇತುವೆ ಕಾಮಗಾರಿ ಕಳಪೆ

ಸಮಗ್ರ ನ್ಯೂಸ್: ವರ್ಷಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದ ನವಿ ಮುಂಬೈನ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಸೇವಾ ಅಟಲ್ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಇಂದು ಸೇತುವೆಯಲ್ಲಿ ಕಾಣಿಸಿಕೊಂಡಿರುವ ಬಿರುಕುಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಸೇವ್ರಿ ನ್ಹವಾ ಶೇವಾ ಅಟಲ್ ಸೇತು, ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. 21.8 ಕಿಮೀ ಉದ್ದದ ಸೇತುವೆಯ 16.5 ಕಿಮೀ ಭಾಗ ಸಮುದ್ರದ ಮೇಲೆ ಇದೆ.

ಒಂದೇ ಮಳೆಗೆ ಬಿರುಕು ಬಿಟ್ಟ ನೂತನ ಅಟಲ್ ಸೇತುವೆ| ಬಹುಕೋಟಿ ವೆಚ್ಚದ ಸೇತುವೆ ಕಾಮಗಾರಿ ಕಳಪೆ Read More »

ಮಡಿಕೇರಿ: ಜೂ.27 ರಿಂದ ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿ

ಸಮಗ್ರ ನ್ಯೂಸ್: ಜೂನ್, 27 ರಿಂದ ಜುಲೈ, 02 ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೈನಿಕ ಕಲ್ಯಾಣ ಇಲಾಖೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿಯು ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು. ವಸತಿ ಊಟೋಪಚಾರ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು

ಮಡಿಕೇರಿ: ಜೂ.27 ರಿಂದ ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿ Read More »