ರಾಜ್ಯ

ಉಡುಪಿ ಗ್ಯಾಂಗ್ ವಾರ್ ಆರೋಪಿಗಳಿಂದ ಪೊಲೀಸರ ಮೇಲೆ‌ ಹಲ್ಲೆ

ಸಮಗ್ರ ನ್ಯೂಸ್: ಉಡುಪಿಯಲ್ಲಿ ಇತ್ತೀಚೆಗೆ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದ ಆರೋಪಿಗಳಿಬ್ಬರು ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ದಾಂಧಲೆ ನಡೆಸಿ, ಜಿಲ್ಲಾ ಅಧೀಕ್ಷಕರು ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ಯತ್ನಿಸಿರುವ ಘಟನೆ ಸಂಭವಿಸಿದೆ. ಕಾರಾಗೃಹದಲ್ಲಿರುವ ವಿಚಾರಣಾ ಕೈದಿಗಳಾದ ಮುಹಮ್ಮದ್ ಆಶಿಕ್ ಮತ್ತು ಮಹಮ್ಮದ್ ಸಕ್ಲೀನ್ ಪ್ರಿಜನ್ ಕಾಲ್ ಸಿಸ್ಟಮ್ ಕರೆ ಮಾಡಲು ತಡವಾಯಿತೆಂದು ಹೇಳಿ ಕರ್ತವ್ಯದಲ್ಲಿದ್ದ ಜೈಲ‌ರ್ ಎಸ್‌.ಎ.ಶಿರೋಳ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಜೋರಾಗಿ ಕೂಗಾಡಿದ್ದಾರೆ. ಅಲ್ಲದೆ ಅಧೀಕ್ಷಕರ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಯೊಂದಿಗೆ […]

ಉಡುಪಿ ಗ್ಯಾಂಗ್ ವಾರ್ ಆರೋಪಿಗಳಿಂದ ಪೊಲೀಸರ ಮೇಲೆ‌ ಹಲ್ಲೆ Read More »

ಪಟ್ಲ ಬೆಟ್ಟದಲ್ಲಿ ಚಾರಣಿಗರ ಮೇಲೆ‌ ಹಲ್ಲೆ ನಡೆಸಿದರ ಜೀಪ್ ಚಾಲಕರು ಅರೆಸ್ಟ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಹಾಸನ ಮತ್ತು ಕೊಡಗು ಜಿಲ್ಲೆಯ ಮಧ್ಯದಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಸ್ಥಳೀಯ ಜೀಪು ಚಾಲಕರ ಬಂಧನವಾಗಿದೆ. ಎರಡು ವರ್ಷದ ಹಿಂದೆ ಪುತ್ತೂರಿನ ಪ್ರವಾಸಿಗರಿಗೆ ಹಲ್ಲೆಗೆ ಮುಂದಾಗಿದ್ದ ಈ ತಂಡ ಇದೀಗ ಮತ್ತೆ ಬೈಕ್ ಸವಾರರಿಗೆ ಹಲ್ಲೆ ನಡೆಸಿದೆ. ಈ ಜೀಪು ಚಾಲಕರ ರೌಡಿಸಂನ್ನು ಕೇಳುವವರೇ ಇಲ್ಲದಾಗಿದೆ. ಹಾಸನ ಜಿಲ್ಲಾಡಳಿತ ಮೌನ ವಹಿಸಿರುವುದು ಎಲ್ಲಾ ಅನುಮಾನಕ್ಕೂ ಎಡೆಮಾಡಿಕೊಟ್ಟಿತು. ಇತ್ತಿಚೆಗೆ ಪಟ್ಲಬೆಟ್ಟಕ್ಕೆ ತೆರಳಿದ

ಪಟ್ಲ ಬೆಟ್ಟದಲ್ಲಿ ಚಾರಣಿಗರ ಮೇಲೆ‌ ಹಲ್ಲೆ ನಡೆಸಿದರ ಜೀಪ್ ಚಾಲಕರು ಅರೆಸ್ಟ್ Read More »

ಲೋಕಸಭಾ ಸ್ಪೀಕರ್ ಹುದ್ದೆಗೆ ಮೊದಲ ಬಾರಿ‌ ನಡೆಯಲಿದೆ ಚುನಾವಣೆ| ನಾಮಪತ್ರ ಸಲ್ಲಿಸಿದ ಒಂ ಬಿರ್ಲಾ, ಕೆ.ಸುರೇಶ್

ಸಮಗ್ರ ನ್ಯೂಸ್: ಲೋಕಸಭೆ ಸ್ಪೀಕರ್ ಹುದ್ದೆಗೆ ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಿಸಿವೆ. ಪ್ರತಿಪಕ್ಷಗಳ ಸ್ಪೀಕರ್ ಅಭ್ಯರ್ಥಿಯಾಗಿ ಕೆ.ಸುರೇಶ್ ಕಣಕ್ಕೆ ಇಳಿಯುತ್ತಿದ್ದಾರೆ. ಇದಕ್ಕಾಗಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಎನ್‌ಡಿಎ ಪರವಾಗಿ ಓಂ ಬಿರ್ಲಾ ಲೋಕಸಭೆ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದರು. ಲೋಕಸಭೆ ಸ್ಪೀಕರ್ ಚುನಾವಣೆ ಜೂನ್ 26, ಬುಧವಾರ ನಡೆಯಲಿದೆ. ಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಇಲ್ಲಿಯವರೆಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಒಮ್ಮತದ ಮೇರೆಗೆ ಸ್ಪೀಕರ್ ಆಯ್ಕೆಯಾಗುತ್ತಿತ್ತು.

ಲೋಕಸಭಾ ಸ್ಪೀಕರ್ ಹುದ್ದೆಗೆ ಮೊದಲ ಬಾರಿ‌ ನಡೆಯಲಿದೆ ಚುನಾವಣೆ| ನಾಮಪತ್ರ ಸಲ್ಲಿಸಿದ ಒಂ ಬಿರ್ಲಾ, ಕೆ.ಸುರೇಶ್ Read More »

ಗ್ರಾಹಕರಿಗೆ ಮತ್ತೊಂದು ಬರೆ| ನಾಳೆಯಿಂದ ನಂದಿನಿ ಹಾಲಿನ ದರ ಏರಿಕೆ| ಪ್ಯಾಕೇಟ್ ನಲ್ಲೂ ಅಧಿಕ ಹಾಲು!!

ಸಮಗ್ರ ನ್ಯೂಸ್: ನಂದಿನಿ ಹಾಲಿನ ದರ ಲೀ.ಗೆ 2.10 ರೂ ಹೆಚ್ಚಳವಾಗಿದ್ದು, ನಾಳೆಯಿಂದಲೇ ಪರಿಷ್ಕ್ರತ ದರ ಜಾರಿಗೆ ಬರಲಿದೆ. ಕೆಎಂಎಫ್ ನಂದಿನಿ ಹಾಲಿ ದರ ಹೆಚ್ಚಳ ಮಾಡಿದ್ದು, ನಂದಿನಿ ಹಾಲಿನ ದರ ಲೀ.ಗೆ 2.10 ರೂ ಹೆಚ್ಚಳ ಮಾಡಿದೆ. ನಾಳೆಯಿಂದಲೇ ಪರಿಷ್ಕ್ರತ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಮಾಹಿತಿ ನೀಡಿದ್ದಾರೆ. ಪ್ರತಿ ಲೀಟರ್ ಹಾಲಿನ ದರವನ್ನ 2.10 ರೂ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ

ಗ್ರಾಹಕರಿಗೆ ಮತ್ತೊಂದು ಬರೆ| ನಾಳೆಯಿಂದ ನಂದಿನಿ ಹಾಲಿನ ದರ ಏರಿಕೆ| ಪ್ಯಾಕೇಟ್ ನಲ್ಲೂ ಅಧಿಕ ಹಾಲು!! Read More »

ಪಟ್ಲಬೆಟ್ಟಕ್ಕೆ ತೆರಳಿದ್ದ ತಂಡದ ಮೇಲೆ ಸ್ಥಳೀಯರಿಂದ ಹಲ್ಲೆ; ದೂರು ದಾಖಲು

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಬಿಸಿಲೇ ಘಾಟ್‌ ಸಮೀಪದ ಸಕಲೇಶಪುರ ತಾಲೂಕು ವ್ಯಾಪ್ತಿಯ ಪ್ರವಾಸಿ ತಾಣ ಪಟ್ಲಬೆಟ್ಟಕ್ಕೆ ತೆರಳಿದ್ದ ಮಂಗಳೂರಿನ ತಂಡದ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಲ್ಲೆಗೊಳಗಾದವರಲ್ಲಿ ಮಂಗಳೂರಿನ ಕೊಟ್ಟಾರದ ಯುವಕ ಈ ಬಗ್ಗೆ ಸಕಲೇಶಪುರ ತಾಲೂಕಿನ ಯಸಲೂರು ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್‌ನಲ್ಲಿ ಬಂದಿರುವ ತಂಡದ ಜತೆ ಅಲ್ಲಿದ್ದ ವ್ಯಕ್ತಿಗಳು ಬೈಕ್‌ನಲ್ಲಿ ಹೋಗಬೇಡಿ ಎಂಬಿತ್ಯಾದಿ

ಪಟ್ಲಬೆಟ್ಟಕ್ಕೆ ತೆರಳಿದ್ದ ತಂಡದ ಮೇಲೆ ಸ್ಥಳೀಯರಿಂದ ಹಲ್ಲೆ; ದೂರು ದಾಖಲು Read More »

ಅಂಗನವಾಡಿಗಳಲ್ಲೇ LKG, UKG ಆರಂಭಿಸಲು ಸಿಎಂ ಸಮ್ಮತಿ – ಲಕ್ಷ್ಮೀ‌ ಹೆಬ್ಬಾಳ್ಕರ್

ಸಮಗ್ರ ನ್ಯೂಸ್: ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಣಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ, ಇನ್ನುಳಿದಂತೆ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೆ ಪೂರ್ವ ಪ್ರಾಥಮಿಕ (LKG, UKG) ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಲು ಸಿಎಂ ಸೂಚಿಸಿದ್ದಾರೆ ಎಂದು ಸಚಿವರು ಹೇಳಿದರು. ಅಂಗನವಾಡಿ

ಅಂಗನವಾಡಿಗಳಲ್ಲೇ LKG, UKG ಆರಂಭಿಸಲು ಸಿಎಂ ಸಮ್ಮತಿ – ಲಕ್ಷ್ಮೀ‌ ಹೆಬ್ಬಾಳ್ಕರ್ Read More »

ರಾಜ್ಯದಲ್ಲಿ ಕೃತಕ ಬಣ್ಣ ಬಳಕೆ ನಿಷೇಧಿಸಿ ಆದೇಶ| ನಿಯಮ‌ ಉಲ್ಲಂಘಿಸಿದರೆ ಜೈಲು, ಭಾರೀ ದಂಡ ಪಕ್ಕಾ

ಸಮಗ್ರ ನ್ಯೂಸ್: ವೆಜ್ & ನಾನ್‌ವೆಜ್ ಕಬಾಬ್‍ ಮುಂತಾದ ಆಹಾರ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೃತಕ ಬಣ್ಣಗಳನ್ನು ಬಳಸಿರುವ

ರಾಜ್ಯದಲ್ಲಿ ಕೃತಕ ಬಣ್ಣ ಬಳಕೆ ನಿಷೇಧಿಸಿ ಆದೇಶ| ನಿಯಮ‌ ಉಲ್ಲಂಘಿಸಿದರೆ ಜೈಲು, ಭಾರೀ ದಂಡ ಪಕ್ಕಾ Read More »

ವಯನಾಡಿನ ಜನರಿಗೆ ಪತ್ರ ಬರೆದ ರಾಹುಲ್ ಗಾಂಧಿ

ಸಮಗ್ರ ನ್ಯೂಸ್: ವಯನಾಡ್ ಲೋಕಸಭಾ ಕ್ಷೇತ್ರವನ್ನು ತೊರೆಯಲು ನಿರ್ಧರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಯನಾಡ್‌ ಜನತೆಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ನೀವು ನನ್ನನ್ನು ಅಪರಿಮಿತ ಪ್ರೀತಿ ಮತ್ತು ವಾತ್ಸಲ್ಯದಿಂದ ಅಪ್ಪಿಕೊಂಡಿದ್ದೀರಿ. ನೀವು ಯಾವ ರಾಜಕೀಯ ರಚನೆಯನ್ನು ಬೆಂಬಲಿಸಿದ್ದೀರಿ?, ನೀವು ಯಾವ ಸಮುದಾಯಕ್ಕೆ ಸೇರಿದವರು?, ನೀವು ಯಾವ ಧರ್ಮವನ್ನು ನಂಬಿದ್ದೀರಿ? ಅಥವಾ ನೀವು ಯಾವ ಭಾಷೆಯಲ್ಲಿ ಮಾತನಾಡುತ್ತೀರಿ? ಎಂಬುದು ಮುಖ್ಯವಲ್ಲ ಎಂದರು. ನಾನು ದಿನದಿಂದ ದಿನಕ್ಕೆ ನಿಂದನೆಯನ್ನು ಎದುರಿಸಿದಾಗ ನೀವು ಕೊಟ್ಟ ಪ್ರೀತಿ ನನ್ನನ್ನು ರಕ್ಷಿಸಿತು. ನೀವೇ

ವಯನಾಡಿನ ಜನರಿಗೆ ಪತ್ರ ಬರೆದ ರಾಹುಲ್ ಗಾಂಧಿ Read More »

ಸಂಸತ್ತಿನಲ್ಲಿ ಅನುರಣಿಸಿದ ತುಳು| ದೈವದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ ಚೌಟ

ಸಮಗ್ರ ನ್ಯೂಸ್: ದ.ಕ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿವ ಬ್ರಿಜೇಶ್ ಚೌಟರವರು ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಲೋಕಸಭೆಯಲ್ಲಿ ಸದಸ್ಯರಾಗಿ ಅವರು ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 18ನೇ ಸಂಸತ್ನಲ್ಲಿ ಮೊದಲ ಲೋಕಸಭೆ ಅಧಿವೇಶನ ಆರಂಭವಾಯಿತು. ಪದ್ದತಿಯಂತೆ ಎಲ್ಲಾ ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು. ಈ ವೇಳೆ ದಕ್ಷಿಣ ಕನ್ನಡ ಲೋಕಸಭೆ ಸದಸ್ಯರಾಗಿ ನೂತನವಾಗಿ ಆಯ್ಕೆಯಾಗಿರುವ ಬ್ರಿಜೇಶ್ ಚೌಟರವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಚೌಟರವರು ತುಳುನಾಡಿನ

ಸಂಸತ್ತಿನಲ್ಲಿ ಅನುರಣಿಸಿದ ತುಳು| ದೈವದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಂಸದ ಚೌಟ Read More »

ಲೈಂಗಿಕ‌ ದೌರ್ಜನ್ಯ ಪ್ರಕರಣ|ಜು.8ರವರೆಗೂ ಪ್ರಜ್ವಲ್ ರೇವಣ್ಣಗೆ ಜೈಲು ಖಾಯಂ

ಸಮಗ್ರ ನ್ಯೂಸ್: ಲೈಂಗಿಕ ದೌರ್ಜನ್ಯ, ಅಶ್ಲೀಲ ವೀಡಿಯೋ ಕೇಸ್, ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಎಸ್‌ಐಟಿ ಕಸ್ಟಡಿಗೆ ಕೋರ್ಟ್ ನೀಡಿತ್ತು. ಇಂದು ಎಸ್‌ಐಟಿ ಕಸ್ಟಡಿ ಅಂತ್ಯಗೊಂಡ ಕಾರಣ, ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಪ್ರಜ್ವಲ್ ಗೆ ಜು.8 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್‌ಐಟಿ ಕಸ್ಟಡಿಯಲ್ಲಿದ್ದಂತ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅವಧಿ ಅಂತ್ಯಗೊಂಡ ಹಿನ್ನಲೆಯಲ್ಲಿ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ

ಲೈಂಗಿಕ‌ ದೌರ್ಜನ್ಯ ಪ್ರಕರಣ|ಜು.8ರವರೆಗೂ ಪ್ರಜ್ವಲ್ ರೇವಣ್ಣಗೆ ಜೈಲು ಖಾಯಂ Read More »