ರಾಜ್ಯ

ಕಡಬ: ಸಿನಿಮೀಯ ಶೈಲಿಯಲ್ಲಿ ವಾಹನಕ್ಕೆ ಡೀಸೆಲ್ ತುಂಬಿಸಿ ಪರಾರಿ

ಸಮಗ್ರ ನ್ಯೂಸ್: ಬೆಳ್ಳಂಬೆಳಗ್ಗೆ ಕಡಬದ ಹಳೆಸ್ಟೇಶನ್‌ ಬಳಿಯ ಪೆಟ್ರೋಲ್‌ ಬಂಕೊಂದಕ್ಕೆ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ವಾಹನಕ್ಕೆ ಫುಲ್‌ಟ್ಯಾಂಕ್‌ ಡೀಸೆಲ್‌ ತುಂಬಿಸಿಕೊಂಡು ಹಣ ನೀಡದೆ ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಘಟನೆ ಜ.23ರಂದು ನಡೆದಿದೆ. ಬೆಳಗ್ಗೆ 6 ಗಂಟೆಯ ಸುಮಾರಿಗೆ ಕೆಎ 01 ಎಂಎಕ್ಸ್‌ 9632 ನೋಂದಣಿ ಸಂಖ್ಯೆಯ ಥಾರ್‌ ಜೀಪ್‌ನಲ್ಲಿ ಬಂದ ವ್ಯಕ್ತಿ ತನ್ನ ವಾಹನಕ್ಕೆ ಫುಲ್‌ ಟ್ಯಾಂಕ್‌ ಡೀಸೆಲ್‌ ತುಂಬಿಸಿಕೊಂಡಿದ್ದಾನೆ. ಬಳಿಕ ಒಂದು ಕ್ಯಾನ್‌ ನೀಡಿ ಅದರಲ್ಲಿ ಪೆಟ್ರೋಲ್‌ ತುಂಬಿಸಿ ಕೊಡಲು ಬಂಕ್‌ನ ಸಿಬಂದಿಗೆ ಹೇಳಿದ್ದಾನೆ. ಪೆಟ್ರೋಲ್‌

ಕಡಬ: ಸಿನಿಮೀಯ ಶೈಲಿಯಲ್ಲಿ ವಾಹನಕ್ಕೆ ಡೀಸೆಲ್ ತುಂಬಿಸಿ ಪರಾರಿ Read More »

ಮಹಾರಾಷ್ಟ್ರ ಜಲಗಾಂವ್ ನಲ್ಲಿ ಭೀಕರ ಅಗ್ನಿ ದುರಂತ| ಪುಷ್ಪಕ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ 20 ಪ್ರಯಾಣಿಕರು ಸಜೀವ ದಹನ

ಸಮಗ್ರ ನ್ಯೂಸ್: ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಜಲಗಾಂವ್ ಬಳಿ ಪುಷ್ಪಕ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 20 ಜನ ಪ್ರಯಾಣಿಕರು ಸಜೀವವಾಗಿ ದಹನಗೊಂಡಿದ್ದಾರೆ. ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ ಅಗ್ನಿ ಕಾಣಿಸಿಕೊಂಡಿದ್ದು ಈ ವೇಳೆ 20 ಪ್ರಯಾಣಿಕರು ಪುಷ್ಪಕ ಎಕ್ಸ್ಪ್ರೆಸ್ ರೈಲಿನಲ್ಲಿ ಸಿಲುಕಿ ಸಜೀವವಾಗಿ ದಹನಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕೂಡಲೇ ಪೊಲೀಸರು ಭೇಟಿ ನೀಡಿದ್ದು, ಅಲ್ಲದೇ ಅಗ್ನಿಶಾಮಕ ದಳ ಆಗಮಿಸಿ ಸಿಬ್ಬಂದಿ ಕೂಡ ಆಗಿಸಿ ಬೆಂಕಿ ನಂದಿಸಿದ್ದಾಗಿ ತಿಳಿದುಬಂದಿದೆ.

ಮಹಾರಾಷ್ಟ್ರ ಜಲಗಾಂವ್ ನಲ್ಲಿ ಭೀಕರ ಅಗ್ನಿ ದುರಂತ| ಪುಷ್ಪಕ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ 20 ಪ್ರಯಾಣಿಕರು ಸಜೀವ ದಹನ Read More »

ಪ್ರತ್ಯೇಕ ಅಪಘಾತದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿಕೆ| ಮೃತರಿಗಾಗಿ ಕಂಬನಿ ಮಿಡಿದ ಸಿಎಂ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಜನ ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಹಣ್ಣು ತರಕಾರಿ ತುಂಬಿ ವ್ಯಾಪಾರಸ್ಥರೊಂದಿಗೆ ಸಂತೆಗೆ ತೆರಳುತ್ತಿದ್ದ ಲಾರಿಯೊಂದು ಕಂದಕ್ಕಕ್ಕೆ ಉರುಳಿ9 ಜನರು ಜೀವ ಕಳೆದುಕೊಂಡು 10ಕ್ಕೂ ಜನ ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಭಾಗದಲ್ಲಿ ಬೆಳಗಿನ ಜಾವ ನಡೆದಿದೆ. ಕ್ರೂಸರ್ ವಾಹನ ಪಲ್ಟಿಯಾಗಿ

ಪ್ರತ್ಯೇಕ ಅಪಘಾತದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿಕೆ| ಮೃತರಿಗಾಗಿ ಕಂಬನಿ ಮಿಡಿದ ಸಿಎಂ Read More »

ಛತ್ತೀಸ್ ಘಡ್: ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ| 14 ಮಂದಿ ಮಾವೋವಾದಿಗಳು ಸಾವು

ಸಮಗ್ರ ನ್ಯೂಸ್: ಒಡಿಶಾದ ಗಡಿಯಲ್ಲಿರುವ ಛತ್ತೀಸ್ ಗಢದ ಗರಿಯಾಬಂದ್ ಜಿಲ್ಲೆಯ ಅರಣ್ಯದಲ್ಲಿ ನಡೆದ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ಮಾವೋವಾದಿ ಕಮಾಂಡರ್ ಜೈ ರಾಮ್ ಸೇರಿ ಕನಿಷ್ಠ 14 ಮಂದಿ ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಆದರೆ, ಕಾರ್ಯಾಚರಣೆಯ ನಂತರ ವಶಪಡಿಸಿಕೊಂಡ ಮೃತದೇಹಗಳ ಆಧಾರದ ಮೇಲೆ 14 ಮಂದಿ ಮಾವೋವಾದಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ

ಛತ್ತೀಸ್ ಘಡ್: ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ| 14 ಮಂದಿ ಮಾವೋವಾದಿಗಳು ಸಾವು Read More »

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ| ಮೂವರು ಆರೋಪಿಗಳು ಸೆರೆ

ಸಮಗ್ರ ನ್ಯೂಸ್: ಮಂಗಳೂರು ಕೋಟೆಕಾರ್ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಗೆ ಕಳೆದ ಶುಕ್ರವಾರ ನುಗ್ಗಿದ ದರೋಡೆಕೋರರು ಸಿಬ್ಬಂದಿಯನ್ನು ಬೆದರಿಸಿ ದರೋಡೆಗೈದು ಪರಾರಿಯಾದವರ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ. ಕಾರೊಂದರಲ್ಲಿ ಬಂದ ಐವರು ಮುಸುಕುಧಾರಿಗಳ ತಂಡ ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ಈ ದರೋಡೆ ನಡೆಸಿದ್ದರು. ದರೋಡೆ ಮಾಡಿದ ನಂತರ ಆರೋಪಿಗಳು ತಮಿಳುನಾಡಿನ ತಿರುವನ್ವೇಲಿಗೆ ತೆರಳಿದ್ದರು. ಬಂಧಿತರಿಂದ ತಲ್ವಾರ್, 2 ಪಿಸ್ತೂಲ್ ಹಾಗು ಇತರ ಸೊತ್ತುಗಳನ್ನು ಜಪ್ತಿ

ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ| ಮೂವರು ಆರೋಪಿಗಳು ಸೆರೆ Read More »

‘ಕಾಂತಾರ-೨’ ಚಿತ್ರತಂಡದ ವಿರುದ್ಧ ಅರಣ್ಯಕ್ಕೆ ಬೆಂಕಿ ಹಚ್ಚಿ‌ ಹಾನಿ ಆರೋಪ; ದೂರು ದಾಖಲು

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರತಂಡದ ವಿರುದ್ಧ ಅರಣ್ಯಕ್ಕೆ ಹಾನಿ ಮಾಡಿದ ಆರೋಪ ಕೇಳಿ ಬಂದಿದೆ. ಅರಣ್ಯದ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ‘ಕಾಂತಾರ -2’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಹೊಸೂರು ಗ್ರಾಮ ಪಂಚಾಯಿತಿಯ ಹೆರೂರು ಗ್ರಾಮದಲ್ಲಿ ಚಿತ್ರೀಕರಣ ಸ್ಥಳದಲ್ಲಿ ಅರಣ್ಯಕ್ಕೆ ಹಾನಿ ಮಾಡಲಾಗಿದೆ. ಜನವರಿ 2ರಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣಕ್ಕಾಗಿ ಗೋಮಾಳ

‘ಕಾಂತಾರ-೨’ ಚಿತ್ರತಂಡದ ವಿರುದ್ಧ ಅರಣ್ಯಕ್ಕೆ ಬೆಂಕಿ ಹಚ್ಚಿ‌ ಹಾನಿ ಆರೋಪ; ದೂರು ದಾಖಲು Read More »

‘ಬಿಗ್ ಬಾಸ್’ ನಿರೂಪಣೆಗೆ ಗುಡ್ ಬೈ ಹೇಳಿದ ಕಿಚ್ಚ| ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್

ಸಮಗ್ರ ನ್ಯೂಸ್: ‘ಬಿಗ್ ಬಾಸ್’ ನಿರೂಪಣೆಗೆ ನಟ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಶೋ ನನ್ನು ಕಳೆದ 11 ಸೀಸನ್ ಗಳಿಂದ ನಾನು ಆನಂದಿಸಿದ್ದೇನೆ. ನೀವು ತೋರಿಸಿದ ಎಲ್ಲಾ ಪ್ರೀತಿಗೆ ಧನ್ಯವಾದಗಳು. ಬಿಗ್ ಬಾಸ್ ಶೋ ನನ್ನು ಕಳೆದ 11 ಸೀಸನ್ ಗಳಿಂದ ನಾನು ಆನಂದಿಸಿದ್ದೇನೆ. ನೀವು ತೋರಿಸಿದ ಎಲ್ಲಾ ಪ್ರೀತಿಗೆ ಧನ್ಯವಾದಗಳು. ಈ ಸೀಸನ್‌ನ ಫಿನಾಲೆಯೇ ನನ್ನ ಬಿಗ್‌ಬಾಸ್‌ನ ಕೊನೆ ಹೆಜ್ಜೆ ಎಂದು ಹೇಳಿದ್ದಾರೆ.

‘ಬಿಗ್ ಬಾಸ್’ ನಿರೂಪಣೆಗೆ ಗುಡ್ ಬೈ ಹೇಳಿದ ಕಿಚ್ಚ| ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ Read More »

ಪ್ರಯಾಗ್ ರಾಜ್: ಕುಂಭಮೇಳದಲ್ಲಿ ಭಾರೀ ಅಗ್ನಿದುರಂತ| ಹಲವು ಡೇರೆಗಳು ಬೆಂಕಿಗಾಹುತಿ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮಹಾಕುಂಭಮೇಳದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಉಡಾಸಿನ್ ಕ್ಯಾಂಪ್ ಪ್ರದೇಶದ ಸೆಕ್ಟರ್ 19ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಎಸ್ಡಿಆರ್‌ಎಫ್ ತಂಡವೂ ಸ್ಥಳದಲ್ಲಿತ್ತು. ತ್ವರಿತ ಪ್ರಯತ್ನಗಳ ನಂತರ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದಾಗ್ಯೂ, ಅಧಿಕಾರಿಗಳ ಜಾಗರೂಕತೆಯು ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದ್ದರಿಂದ ದೊಡ್ಡ ಘಟನೆಯನ್ನು ತಪ್ಪಿಸಿದೆ ಮತ್ತು ಇಲ್ಲಿಯವರೆಗೆ ಯಾವುದೇ

ಪ್ರಯಾಗ್ ರಾಜ್: ಕುಂಭಮೇಳದಲ್ಲಿ ಭಾರೀ ಅಗ್ನಿದುರಂತ| ಹಲವು ಡೇರೆಗಳು ಬೆಂಕಿಗಾಹುತಿ Read More »

ಇಂದು ಉಮಾಶ್ರೀ, ನಾಳೆ ಸನ್ನಿ ಲಿಯೋನ್| ಯಕ್ಷಗಾನದ ಚೌಕಟ್ಟು ಮೀರಿದ್ದಕ್ಕೆ ಯಕ್ಷಗಾನ ಪ್ರೀಯರ ಅಸಮಾಧಾನ

ಸಮಗ್ರ ನ್ಯೂಸ್: ಚಿತ್ರನಟಿ ಉಮಾಶ್ರೀ ಯಕ್ಷಗಾನ ವೇಷದ ಬಗ್ಗೆ ಚಲನಚಿತ್ರ ಪ್ರೇಮಿಗಳು ಹಾಗೂ ಜನರಿಂದ ಪ್ರಶಂಸೆ ವ್ಯಕ್ತವಾದ ಬೆನ್ನಲ್ಲೇ ಹಿರಿಯ ಕಲಾವಿದರು ಹಾಗೂ ಅಪ್ಪಟ ಯಕ್ಷಗಾನ ಪ್ರಿಯರಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಉಮಾಶ್ರೀ ಈಚೆಗೆ ಹೊನ್ನಾವರದಲ್ಲಿ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ನಿರ್ವಹಿಸಿದ ಮಂಥರೆಯ ಪಾತ್ರ ಚರ್ಚೆಗೆ ಗ್ರಾಸವಾಗಿದೆ. ಚಿತ್ರರಂಗ ಹಾಗೂ ನಾಟಕದಲ್ಲಿ ಉಮಾಶ್ರೀ ಅವರ ಕಲೆಯ ಬಗ್ಗೆ ಎಲ್ಲರೂ ಗೌರವ ವ್ಯಕ್ತಪಡಿಸಿದ್ದಾರೆ. ಆದರೆ, ಯಕ್ಷಗಾನದಲ್ಲಿ ಅವರನ್ನು ಕರೆತಂದು ಪಾತ್ರ ಮಾಡಿಸಬೇಕಿತ್ತೇ? ಎಂದು ಪ್ರಶ್ನಿಸಿದ್ದಾರೆ. ಜತೆಗೆ

ಇಂದು ಉಮಾಶ್ರೀ, ನಾಳೆ ಸನ್ನಿ ಲಿಯೋನ್| ಯಕ್ಷಗಾನದ ಚೌಕಟ್ಟು ಮೀರಿದ್ದಕ್ಕೆ ಯಕ್ಷಗಾನ ಪ್ರೀಯರ ಅಸಮಾಧಾನ Read More »

ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ| ಘಟನೆ ಹಿಂದೆ ಬ್ಯಾಂಕ್ ಸಿಬ್ಬಂದಿ ಕೈವಾಡ!?

ಸಮಗ್ರ ನ್ಯೂಸ್: ಮಂಗಳೂರು ಉಳ್ಳಾಲದ ಕೋಟೆಕಾರ್ ಸಹಕಾರಿ ಬ್ಯಾಂಕ್ ನಲ್ಲಿ ನಡೆದ ದರೋಡೆ ಬಗ್ಗೆ ಈಗ ಬ್ಯಾಂಕ್ ಸಿಬ್ಬಂದಿ ಮೇಲೆಯೇ ಅನುಮಾನ ಶುರುವಾಗಿದೆ. ಬ್ಯಾಂಕ್ ಅಧ್ಯಕ್ಷರು ಮತ್ತು ಇತರರ ಹೇಳಿಕೆಗಳು ಅನುಮಾನ ಮೂಡಿಸುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಕೈವಾಡ ಇದೆ ಎಂಬ ಗುಸುಗುಸು ಕೇಳಿಬರುತ್ತಿದೆ. ನಿನ್ನೆ(ಜ.17) ಮಧ್ಯಾಹ್ನ ಕೋಟೆಕಾರ್ ಬ್ಯಾಂಕ್ ನಲ್ಲಿ ಸಿನಿಮೀಯ ರೀತಿಯಲ್ಲಿ ನುಗ್ಗಿದ ಐವರು ದುಷ್ಕರ್ಮಿಗಳು ನೋಡ ನೋಡುತ್ತಿದ್ದಂತೇ ಕೋಟಿ ಕೋಟಿ ಹಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದೆ. ಇದೀಗ ಬ್ಯಾಂಕ್ ಸಿಬ್ಬಂದಿ

ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ| ಘಟನೆ ಹಿಂದೆ ಬ್ಯಾಂಕ್ ಸಿಬ್ಬಂದಿ ಕೈವಾಡ!? Read More »