ದೇಶ-ವಿದೇಶ

ಮೂವರು ಲಷ್ಕರ್-ಎ -ತಾಯ್ಬ ಉಗ್ರರನ್ನು ಸದೆಬಡಿದ ಸೇನೆ

ಬರಾಮುಲ್ಲ: ಲಷ್ಕರ್ -ಇ- ತಾಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಭಾರತೀಯ ಸೇನೆ ಇಂದು ಮುಂಜಾನೆ ಹತ್ಯೆ ಮಾಡಿದೆ. ಜಮ್ಮು-ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸುಪೋರ್ ನಲ್ಲಿ ಉಗ್ರರು ಇರುವ ಮಾಹಿತಿ ಪಡೆದ ಸೇನೆ ಯೋಜಿತ ದಾಳಿ ನಡೆಸಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ನಿನ್ನೆ ರಾತ್ರಿ ಆರಂಭವಾದ ಸೇನಾಕಾರ್ಯಾಚರಣೆ ಇಂದು ಮುಂಜಾನೆ ಉಗ್ರ ಸಂಘಟನೆಯ ಕಮಾಂಡರ್ ಮುದಾಸಿರ್ ಪಂಡಿತ್ ಹತ್ಯೆಯಾಗುವ ಮೂಲಕ ಕೊನೆಗೊಂಡಿದೆ ಎಂದು ತಿಳಿದುಬಂದಿದೆ. ಈ ಉಗ್ರರು ವಾರದ ಹಿಂದೆ ಇಬ್ಬರು ನಾಗರಿಕರು ಮತ್ತು […]

ಮೂವರು ಲಷ್ಕರ್-ಎ -ತಾಯ್ಬ ಉಗ್ರರನ್ನು ಸದೆಬಡಿದ ಸೇನೆ Read More »

ಕೊನೆಗೂ ಭಾಷೆ ಕಲಿಸುವ ಲೋಕಸಭಾ ಕಾರ್ಯಗಾರದಲ್ಲಿ ಸೇರ್ಪಡೆಯಾಯ್ತು ಕನ್ನಡ

ಬೆಂಗಳೂರು: ಆರಂಭದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ ಇದೀಗ ಲೋಕಸಭೆ ಸಚಿವಾಲಯದ ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಸೇರ್ಪಡಿಸಿ ಆದೇಶ ಹೊರಡಿಸಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೇಶೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸಲು ಜೂ.22ರಂದು ದೆಹಲಿಯಲ್ಲಿ ಪ್ರೈಡ್‌ ಕಲಿಕಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ತೆಲುಗು, ಬಂಗಾಳಿ, ಮರಾಠಿ, ತಮಿಳು ಸೇರಿದಂತೆ ಬಹುತೇಕ ಭಾಷೆಗಳನ್ನು ಸೇರ್ಪಡೆ ಮಾಡಿ ಕನ್ನಡವನ್ನು ನಿರ್ಲಕ್ಷ್ಯಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಲೋಕಸಭೆ ಕನ್ನಡ ಭಾಷೆಯನ್ನು ಸೇರ್ಪಡಿಸಿಕೊಂಡಿದೆ. ಲೋಕಸಭಾ ಸಚಿವಾಲಯದ

ಕೊನೆಗೂ ಭಾಷೆ ಕಲಿಸುವ ಲೋಕಸಭಾ ಕಾರ್ಯಗಾರದಲ್ಲಿ ಸೇರ್ಪಡೆಯಾಯ್ತು ಕನ್ನಡ Read More »

ಯೋಗ ಕೊರೊನ ಸಂಕಷ್ಟ‌ ನಿವಾರಣೆಯ ಆಶಾಕಿರಣ- ಪ್ರಧಾನಿ ಮೋದಿ

ನವದೆಹಲಿ : ಕೊರೊನಾ ಸಂಕಷ್ಟ ತೊಲಗಿಸಲು ಯೋಗ ಆಶಾಕಿರಣವಾಗಿದೆ. ಯೋಗದಿಂದ ಜನರ ಉತ್ಸಾಹ ಪ್ರೀತಿ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಇಂದು 7 ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾಷಣ ಮಾಡಿದ ಪ್ರಧಾನಿ ಮೋದಿ, ದೇಶದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಜನರಿಂದ ಯೋಗ ನಡೆಯುತ್ತಿದೆ. ಕೊರೊನಾದ ವಿರುದ್ಧ ಹೋರಾಡಲು ಯೋಗ ಸಹಕಾರಿಯಾಗಿದೆ. ಕೊರೊನಾದಿಂದ ಇಂದು ವಿಶ್ವವೇ ನರಳುತ್ತಿದೆ. ಹೀಗಾಗಿ ದೊಡ್ಡ ಕಾರ್ಯಕ್ರಾಮ ಆಯೋಜನೆ ಮಾಡಲಾಗುತ್ತಿಲ್ಲ.ಆದರೂ ಯೋಗ ದಿನದ ಹುಮ್ಮಸ್ಸು ಮಾತ್ರ ಕಡಿಮೆಯಾಗಲ್ಲ. ಈ ಬಾರಿಯ

ಯೋಗ ಕೊರೊನ ಸಂಕಷ್ಟ‌ ನಿವಾರಣೆಯ ಆಶಾಕಿರಣ- ಪ್ರಧಾನಿ ಮೋದಿ Read More »

ಮಾದಕ ಚೆಲುವೆಯ ಸೆಕ್ಸಿ ಶೋ | ಪಂದ್ಯವನ್ನೇ ಮರೆತ ಕ್ಯಾಮರಾಮ್ಯಾನ್ |ಹಾಡುಗಾರನಾದ ಕಮೆಂಟೇಟರ್

ಇತ್ತೆಚಿನ ದಿನಗಳಲ್ಲಿ ಪ್ರಮುಖ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಸುಂದರಿಯರು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಫುಟ್ಬಾಲ್ ಪಂದ್ಯ, ಕ್ರಿಕೆಟ್ ಪಂದ್ಯಗಳ ವೇಳೆ ಕ್ಯಾಮರಾ ಮ್ಯಾನ್ ಕಣ್ಣಿಗೆ ಸುಂದರಿಯರು ಬಿದ್ದರೆ ಆದಿನ ಪಡ್ಡೆ ಹುಡುಗರಿಗೆ ಹಬ್ಬವಾಗುತ್ತದೆ. ಈ ಹಿಂದೆ ಹಲವಾರು ಸುಂದರಿಯರು ಕ್ರೀಡಾಂಗಣದ ಕ್ಯಾಮರಾ ಮ್ಯಾನ್ ಕಣ್ಣಿಗೆ ಬಿದ್ದು ಪಂದ್ಯ ನೋಡುತ್ತಿದ್ದ ಕ್ರೀಡಾಭಿಮಾನಿಗಳು ಪಂದ್ಯವನ್ನೇ ಮರೆಯುವಂತೆ ಮಾಡಿದ್ದಾರೆ. ಜೊತೆಗೆ ಸೆಲೆಬ್ರಿಟಿಗಳಾಗಿ ಮೆರೆದ್ದಾರೆ. ಐಪಿಎಲ್ ನ ಇತ್ತೀಚಿನ ಸೀಸನ್ ಗಳಲ್ಲಿ ಒಬ್ಬೊಬ್ಬ ಚೆಲುವೆಯರು ಕಾಣಿಸಿಕೊಂಡು ಯುವಕರ ಕ್ರಶ್ ಗಳಾಗಿದ್ದಾರೆ. ಅರೇಬಿಯನ್ ದೇಶದಲ್ಲಿ ನಡೆದ

ಮಾದಕ ಚೆಲುವೆಯ ಸೆಕ್ಸಿ ಶೋ | ಪಂದ್ಯವನ್ನೇ ಮರೆತ ಕ್ಯಾಮರಾಮ್ಯಾನ್ |ಹಾಡುಗಾರನಾದ ಕಮೆಂಟೇಟರ್ Read More »

ಪ್ರತಿಷ್ಠಿತ ಯುರೋಪಿಯನ್ ಪ್ರಶಸ್ತಿಗೆ ಭಾಜನರಾದ ಶೈಲಜಾ ಟೀಚರ್

ತಿರುವನಂತಪುರ: ಭಾರತಕ್ಕೆ ಕೋವಿಡ್ ಕಾಲಿಟ್ಟ ಆರಂಭದಲ್ಲಿ ಉತ್ತಮ ರೀತಿಯ ನಿರ್ವಹಣೆ ತೋರಿದ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ಅವರಿಗೆ ಪ್ರತಿಷ್ಠಿತ ಸೆಂಟ್ರಲ್ ಯುರೋಪಿಯನ್ ಯೂನಿವರ್ಸಿಟಿ, ಓಪನ್ ಸೊಸೈಟಿ ಪ್ರಶಸ್ತಿ ನೀಡಿ ಗೌರವಿಸಲಿದೆ. ಸಾರ್ವಜನಿಕ ಆರೋಗ್ಯ ಸೇವೆಗಳ ಬದ್ಧತೆಯನ್ನು ಗುರುತಿಸಿ ಸಿಇಯು ಕೊಡಮಾಡುವ ಈ ಪ್ರಶಸ್ತಿಗೆ ಶೈಲಜಾ ಅರ್ಹವಾಗಿಯೇ ಭಾಜನರಾಗಿದ್ದಾರೆ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ನಡೆದ 30 ನೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮುಕ್ತ ಸಮಾಜದ ಆದರ್ಶಗಳನ್ನು ಪೂರೈಸುವ ಅಸಾಧಾರಣ ಭಿನ್ನತೆಯ ವ್ಯಕ್ತಿಗಳಿಗೆ ವರ್ಷಂಪ್ರತಿ ನೀಡಲಾಗುವ

ಪ್ರತಿಷ್ಠಿತ ಯುರೋಪಿಯನ್ ಪ್ರಶಸ್ತಿಗೆ ಭಾಜನರಾದ ಶೈಲಜಾ ಟೀಚರ್ Read More »

ಸುಳ್ಯದ ವ್ಯಕ್ತಿ ನ್ಯೂಜಿಲೆಂಡ್‌ನಲ್ಲಿ ಅನಾರೋಗ್ಯದಿಂದ ನಿಧನ

ಸುಳ್ಯ: ನ್ಯೂಜಿಲೆಂಡ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಅರಂತೋಡು ಮೇರ್ಕಜೆಯ ಮೂಲದ ಜಯಪ್ರಕಾಶ್(45) ಅವರು ಜೂನ್ 15 ರ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಸೌಖ್ಯದ ಕಾರಣದಿಂದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಬ್ರೈನ್ ಟ್ಯೂಮರ್ ಇರುವುದು 3 ವಾರದ ಹಿಂದೆ ಗೊತ್ತಾಗಿತ್ತು. ಅದಕ್ಕಾಗಿ ಆಪರೇಶನ್ ಮಾಡಲು ಸಿದ್ಧತೆ ನಡೆಸಿದಾಗ ಅವರು ಅಸೌಖ್ಯ ತೀವ್ರಗೊಂಡು ಕೋಮಕ್ಕೆ ಜಾರಿದರೆನ್ನಲಾಗಿದೆ. ಶುಕ್ರವಾರ ರಾತ್ರಿ 2.30 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಜಯಪ್ರಕಾಶ್ ಅವರ ಪತ್ನಿ ಪುಷ್ಪಾ ಇವರೂ ನ್ಯೂಝಿಲೆಂಡ್‌ನಲ್ಲಿದ್ದು,

ಸುಳ್ಯದ ವ್ಯಕ್ತಿ ನ್ಯೂಜಿಲೆಂಡ್‌ನಲ್ಲಿ ಅನಾರೋಗ್ಯದಿಂದ ನಿಧನ Read More »

ನರ್ಸ್’ಗಳ ಯಡವಟ್ಟು: ಒಂದೇ ಬಾರಿಗೆ ಕೋವಿಶೀಲ್ಡ್ ಜೊತೆ ಕೊವ್ಯಾಕ್ಸಿನ್ ಚುಚ್ಚಿಸಿಕೊಂಡ ಮಹಿಳೆ

ಬಿಹಾರ: ನರ್ಸ್ ಗಳು ಮಾಡಿದ ಯಡವಟ್ಟಿನಿಂದ ಮಹಿಳೆಯೊಬ್ಬರು ಒಂದೇ ದಿನ ಎರಡು ಕೋವಿಡ್ ವ್ಯಾಕ್ಸಿನ್ ಗಳನ್ನು ಚುಚ್ಚಿಸಿಕೊಂಡ ಘಟನೆ ಜೂನ್ 16ರಂದು ನಡೆದಿದೆ. ಈ ಹಿನ್ನಲೆಯಲ್ಲಿ ತಪ್ಪೆಸಗಿದ ಶುಶ್ರೂಷಕಿಯರಿಗೆ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ. ಪಾಟ್ನಾದ ಫುನ್’ಫುನ್ ಬ್ಲಾಕ್ ಎಂಬಲ್ಲಿ ಸುನೀಲಾ ದೇವಿ ಎಂಬ ಮಹಿಳೆ ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಕ್ಕೆ ಬಂದಿದ್ದರು. ರಿಜಿಸ್ಟರ್​ ಬಳಿಕ ನರ್ಸ್​ ಒಬ್ಬರು ಆಕೆಗೆ ಕೋವಿಶೀಲ್ಡ್​ ಲಸಿಕೆ ನೀಡಿದ್ದಾರೆ. ಲಸಿಕೆ ಪಡೆದ ನಂತರ ಐದು ನಿಮಿಷ ಕುಳಿತುಕೊಳ್ಳಬೇಕು ಎಂದು ಹೇಳಿ

ನರ್ಸ್’ಗಳ ಯಡವಟ್ಟು: ಒಂದೇ ಬಾರಿಗೆ ಕೋವಿಶೀಲ್ಡ್ ಜೊತೆ ಕೊವ್ಯಾಕ್ಸಿನ್ ಚುಚ್ಚಿಸಿಕೊಂಡ ಮಹಿಳೆ Read More »

ರಕ್ತಚರಿತ್ರೆಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಮಿಲ್ಖಾ ಸಿಂಗ್ | ಜೀವರಕ್ಷಣೆಯ ಓಟ ಸ್ಥಾಪಿಸಿತ್ತು ಹೊಸ ಮೈಲಿಗಲ್ಲು | ಇದು ಪ್ಲೇಯಿಂಗ್ ಸಿಖ್ ನ ಬದುಕಿನ ಅನಾವರಣ

ಮಿಲ್ಕಾ ಸಿಂಗ್..ಈ ಹೆಸರೇ ಸ್ಫೂರ್ತಿಯ ಚಿಲುಮೆ. ಟ್ರ್ಯಾಕ್ ನಲ್ಲಿ ಓಡಲು ಶುರು ಮಾಡುವ ಪ್ರತಿ ಅಥ್ಲೀಟ್ ಗೆ ಭರವಸೆಯ ಬೆಳಕು ಈ ಒಂದು ಹೆಸರು. ಮಿಲ್ಕಾ ಸಿಂಗ್ ಅಂದ್ರೆ ಓಟ.. ಓಟ ಅಂದ್ರೆ ಮಿಲ್ಕಾ ಸಿಂಗ್.. ಅಂತಹುದ್ದೊಂದು ಮಾಂತ್ರಿಕತೆ ಮಿಲ್ಕಾ ಸಿಂಗ್ ಹೆಸರಿನಲ್ಲಿದೆ.ಭಾಘ್ ಮಿಲ್ಕಾ.. ಭಾಘ್ ಮಿಲ್ಕಾ.. ಹೌದು ಮಿಲ್ಕಾ ಸಿಂಗ್ ಮೊದಲು ಜೀವ ಉಳಿಸಿಕೊಳ್ಳಲು ಓಡಲು ಶುರು ಮಾಡಿದ್ದರು. ನಂತರ ಅಕ್ಷರ ಕಲಿಯಲು ಕಿಲೋ ಮೀಟರ್‌ ಗಟ್ಟಲೇ ಓಡುತ್ತಿದ್ದರು. ಬಳಿಕ ದಂಗೆಯ ಭಯದಿಂದ ಓಡುತ್ತಾ ಗಡಿ

ರಕ್ತಚರಿತ್ರೆಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಮಿಲ್ಖಾ ಸಿಂಗ್ | ಜೀವರಕ್ಷಣೆಯ ಓಟ ಸ್ಥಾಪಿಸಿತ್ತು ಹೊಸ ಮೈಲಿಗಲ್ಲು | ಇದು ಪ್ಲೇಯಿಂಗ್ ಸಿಖ್ ನ ಬದುಕಿನ ಅನಾವರಣ Read More »

ಸಿಎಂ ಯಡಿಯೂರಪ್ಪ ಇನ್ಮುಂದೆ ಆಂದ್ರ ಗವರ್ನರ್?

ಅಮರಾವತಿ(ಜೂ.19): ನಾಯಕತ್ವ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಡಳಿತರೂಢ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದ್ದು, ಈ ವಿಚಾರ ಈಗ ಹೈಕಮಾಂಡ್ ಅಂಗಳ ಸೇರಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪ ನೆರೆ ರಾಜ್ಯ ಆಂಧ್ರಪ್ರದೇಶದ ಗವರ್ನರ್ ಆಗಲಿದ್ದಾರೆಂಬ ವಿಚಾರ ಭಾರೀ ಸದ್ದು ಮಾಡಲಾರಂಭಿಸಿದೆ.ಹೌದು ಯಡಿಯೂರಪ್ಪ ಅವರು ರಾಜ್ಯಪಾಲರಾಗಲಿದ್ದಾರೆ ಎನ್ನುವುದು ಆಂಧ್ರಪ್ರದೇಶದಲ್ಲಿ ಬಹುಚರ್ಚಿತ ವಿಷಯ. ಕಳೆದ

ಸಿಎಂ ಯಡಿಯೂರಪ್ಪ ಇನ್ಮುಂದೆ ಆಂದ್ರ ಗವರ್ನರ್? Read More »

ಕೊರೊನ ಲಸಿಕೆಯಿಂದ ಪುರುಷತ್ವ ಕಡಿಮೆಯಾಗುತ್ತಾ? ಇಲ್ಲಿದೆ ಅಧ್ಯಯನ ವರದಿ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿನ ಹರಡುವಿಕೆ ತಡೆಗೆ ಜನವರಿಯಿಂದಲೇ ಲಸಿಕಾ ಅಭಿಯಾನ ಆರಂಭವಾಗಿದೆ. ಆದರೆ ಲಸಿಕೆ ತೆಗೆದುಕೊಂಡ ನಂತರ ಆರೋ ಗ್ಯದ ಮೇಲಾಗುವ ಪರಿಣಾಮಗಳ ಕುರಿತು ಕೆಲವು ಚರ್ಚೆಗಳೂ ಮುನ್ನೆಲೆಗೆ ಬಂದಿವೆ. ಕೊರೊನಾ ಲಸಿಕೆ ಪಡೆದುಕೊಂಡ ನಂತರ ಪುರುಷರಲ್ಲಿ ವೀರ್ಯದ ಗುಣಮಟ್ಟ ಕಡಿಮೆಯಾಗುತ್ತದೆ. ವೀರ್ಯದ ಉತ್ಪತ್ತಿ ಹಾಗೂ ಗುಣಮಟ್ಟದ ಮೇಲೆ ಕೊರೊನಾ ಲಸಿಕೆ ಪರಿಣಾಮ ಬೀರುತ್ತದೆ ಎಂಬ ಕೆಲವು ಮಾತುಗಳು ಕೇಳಿಬಂದಿದ್ದವು. ಈ ಕುರಿತು ಮಿಯಾಮಿ ವಿಶ್ವವಿದ್ಯಾಲಯ ಅಧ್ಯಯನ ನಡೆಸಿದೆ. 45 ಪುರುಷರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು,

ಕೊರೊನ ಲಸಿಕೆಯಿಂದ ಪುರುಷತ್ವ ಕಡಿಮೆಯಾಗುತ್ತಾ? ಇಲ್ಲಿದೆ ಅಧ್ಯಯನ ವರದಿ Read More »