ದೇಶ-ವಿದೇಶ

ಅಫ್ಘಾನಿಸ್ತಾನ ಮಸೀದಿಯಲ್ಲಿ ಸಿಡಿದ ಆತ್ಮಹತ್ಯಾ ಬಾಂಬ್| 100 ಕ್ಕೂ ಹೆಚ್ಚು‌ ಮಂದಿ ಸಾವು

ಕಾಬೂಲ್: ಅಫ್ಗಾನಿಸ್ತಾನದ ಕುಂದುಜ್‌ನಲ್ಲಿ ಶಿಯಾ ಮಸೀದಿ ಮೇಲೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ದಾಳಿಯಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಅಮೆರಿಕ ಪಡೆಗಳು ಅಫ್ಗಾನಿಸ್ತಾನ ತೊರೆದ ಬಳಿಕ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ಎನ್ನಲಾಗಿದೆ. ಈವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆಹೊತ್ತುಕೊಂಡಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್ ಉಗ್ರರು ಅಫ್ಗಾನಿಸ್ತಾನದಲ್ಲಿ ಈ ಹಿಂದೆ ಶಿಯಾ ಸಮುದಾಯದವರನ್ನು ಗುರಿಯಾಗಿಸಿ […]

ಅಫ್ಘಾನಿಸ್ತಾನ ಮಸೀದಿಯಲ್ಲಿ ಸಿಡಿದ ಆತ್ಮಹತ್ಯಾ ಬಾಂಬ್| 100 ಕ್ಕೂ ಹೆಚ್ಚು‌ ಮಂದಿ ಸಾವು Read More »

ಪ್ರಧಾನಿ ಮೋದಿ ಉಡುಗೊರೆಗಳ ಇ- ಹರಾಜು| ಕೋಟಿ ದಾಟಿದ ನೀರಜ್ ಚೋಪ್ರಾರ ಜಾವೆಲಿನ್

ನವದೆಹಲಿ: ಕಳೆದ ಸೆಪ್ಟೆಂಬರ್ 17ರಂದು ಆರಂಭವಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಉಡುಗೊರೆಗಳ ಇ – ಹರಾಜಿಗೆ ಅಕ್ಟೋಬರ್ 7ರಂದು ತೆರೆ ಬಿದ್ದಿದೆ. ಈ ಹರಾಜಿನಲ್ಲಿ ಸರ್ದಾರ್ ಪಟೇಲ್ ಅವರ ಶಿಲ್ಪಕಲೆಗೆ ಅತಿಹೆಚ್ಚು ಬಿಡ್‌ಗಳು ನಡೆದಿವೆ ಮತ್ತು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ನೀರಜ್ ಚೋಪ್ರಾ ಅವರ ಜಾವೆಲಿನ್ ಅತಿ ದೊಡ್ಡ ಮೊತ್ತಕ್ಕೆ ಹರಾಜಾಗಿದೆ. ಸರ್ದಾರ್ ಪಟೇಲ್ ಶಿಲ್ಪಕಲೆಯು 140 ಬಿಡ್‌ಗಳನ್ನು ಪಡೆದುಕೊಳ್ಳುವುದರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಡುಗೊರೆಗಳ ಇ – ಹರಾಜಿನಲ್ಲಿ ಅತಿ

ಪ್ರಧಾನಿ ಮೋದಿ ಉಡುಗೊರೆಗಳ ಇ- ಹರಾಜು| ಕೋಟಿ ದಾಟಿದ ನೀರಜ್ ಚೋಪ್ರಾರ ಜಾವೆಲಿನ್ Read More »

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ | ಬೆಳ್ಳಿಗೆದ್ದ ಅಂಶು ಮಲಿಕ್

ಓಸ್ಲೊ: ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಯುವ ಕುಸ್ತಿಪಟುಗಳು ಅಮೋಘ ಸಾಧನೆ ಮೆರೆದಿದ್ದಾರೆ.ನಾರ್ವೆಯ ಓಸ್ಲೋದಲ್ಲಿ ಗುರುವಾರ ರಾತ್ರಿ ನಡೆದ ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ 20 ವರ್ಷದ ಮಲಿಕ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆ ಮೂಲಕ ವಿಶ್ವ ಚಾಂಪಿಯನ್ ಶಿಪ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಹಿರಿಮೆಗೆ ಅಂಶು ಮಲಿಕ್ ಪಾತ್ರರಾಗಿದ್ದಾರೆ. ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ 20 ವರ್ಷದ ಅಂಶು,

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ | ಬೆಳ್ಳಿಗೆದ್ದ ಅಂಶು ಮಲಿಕ್ Read More »

ಮೂತ್ರ ವಿಸರ್ಜನೆ ವೇಳೆ‌ ಸಿಡಿಯಿತು‌ ಕಿಸೆಯಲ್ಲಿದ್ದ ಲೋಡೆಡ್ ಪಿಸ್ತೂಲ್| ಮುಂದೆ…?

ನ್ಯೂಯಾರ್ಕ್​: ಇಲ್ಲಿನ ಟೈಮ್ಸ್​ ಸ್ಕ್ವೇರ್​ ಸಬ್​ವೇ ಸ್ಟೇಷನ್​ ನಲ್ಲಿ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡುವಾಗ ಆಕಸ್ಮಿಕವಾಗಿ ಕಿಸೆಯಲ್ಲಿದ್ದ ಪಿಸ್ತೂಲ್​ನಿಂದ ಗುಂಡು ಹಾರಿದ ಘಟನೆ ನಡೆದಿದೆ. ದೊಡ್ಡದಾಗಿ ಶಬ್ದವಾಗುತ್ತಿದ್ದಂತೆಯೇ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ವ್ಯಕ್ತಿ ತನ್ನ ಪ್ಯಾಂಟ್ ಕಿಸೆಯಲ್ಲಿ ಲೋಡ್ ಆಗಿದ್ದ ಪಿಸ್ತೂಲನ್ನು ಇಟ್ಟುಕೊಂಡಿದ್ದನು, ಮೂತ್ರ ವಿಸರ್ಜಿಸುತ್ತಿರುವಾಗ ಆಕಸ್ಮಿಕವಾಗಿ ಪಿಸ್ತೂಲ್​ನಿಂದ ಗುಂಡು ಹಾರಿದೆ. ಇದರ ಪರಿಣಾಮ ಆತನ ಕಾಲಿಗೆ ಗುಂಡು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡೈಲಿ ನ್ಯೂಸ್ ಪ್ರಕಾರ, 39

ಮೂತ್ರ ವಿಸರ್ಜನೆ ವೇಳೆ‌ ಸಿಡಿಯಿತು‌ ಕಿಸೆಯಲ್ಲಿದ್ದ ಲೋಡೆಡ್ ಪಿಸ್ತೂಲ್| ಮುಂದೆ…? Read More »

ಗಡಿಯಲ್ಲಿ ಭಾರತ-ಚೀನಾ ಮುಖಾಮುಖಿ| ಚೀನೀ ಸೇನೆಗೆ ಬಿಸಿಮುಟ್ಟಿಸಿದ ಇಂಡಿಯನ್ ಆರ್ಮಿ|

ಅರುಣಾಚಲ : ಭಾರತ ಮತ್ತು ಚೀನಾ ಪಡೆಗಳು ಕಳೆದ ವಾರ ಮತ್ತೊಂದು ಮುಖಾಮುಖಿಯಲ್ಲಿ ತೊಡಗಿದ್ದು, ಇದರಲ್ಲಿ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಸಮೀಪದಲ್ಲಿ ಸುಮಾರು 200 ಪಿಎಲ್ ಎ ಸೈನಿಕರನ್ನು ತಡೆಹಿಡಿಯಲಾಗಿದೆ. ಕಳೆದ ವಾರ ಚೀನಾದ ಗಡಿಗೆ ಹತ್ತಿರವಿರುವ ವಾಡಿಕೆಯ ಗಸ್ತು ಸಂದರ್ಭದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವಿನ ಮುಖಾಮುಖಿ ಸಂಭವಿಸಿದೆ. ಗಡಿಗೆ ಹತ್ತಿರದಲ್ಲಿ ಸುಮಾರು 200 ಚೀನೀ ಸೈನಿಕರನ್ನು ಭಾರತೀಯ ಪಡೆಗಳು ತಡೆದಿವೆ ಎಂದು ಮೂಲಗಳು ತಿಳಿಸಿವೆ. ಉಭಯ ಪಡೆಗಳ ಕಮಾಂಡರ್‌ಗಳು ವಿಚಾರವನ್ನು

ಗಡಿಯಲ್ಲಿ ಭಾರತ-ಚೀನಾ ಮುಖಾಮುಖಿ| ಚೀನೀ ಸೇನೆಗೆ ಬಿಸಿಮುಟ್ಟಿಸಿದ ಇಂಡಿಯನ್ ಆರ್ಮಿ| Read More »

ಪಾಕಿಸ್ತಾನದಲ್ಲಿ ಪ್ರಬಲ‌ ಭೂಕಂಪ| ಕನಿಷ್ಠ 15 ಮಂದಿ ಸಾವು

ಇಸ್ಲಾಮಾಬಾದ್: ದಕ್ಷಿಣ ಪಾಕಿಸ್ತಾನದಲ್ಲಿ ಗುರುವಾರ ಭೂಕಂಪ ಸಂಭವಿಸಿದ್ದು, ಕನಿಷ್ಠ 15 ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ. 5.7ರಷ್ಟು ತೀವ್ರತೆಯ ಭೂಕಂಪ ಆಗಿರುವುದಾಗಿ ಯುರೋಪಿಯನ್‌ ಮೆಡಿಟರೇನಿಯನ್‌ ಭೂಕಂಪ ವಿಜ್ಞಾನ ಕೇಂದ್ರವು (ಇಎಂಎಸ್‌ಸಿ) ತಿಳಿಸಿದೆ. ಪಾಕಿಸ್ತಾನದ ಕ್ವೆಟ್ಟಾದಿಂದ ಪೂರ್ವ-ಈಶಾನ್ಯ ಭಾಗದಲ್ಲಿ 102 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದ ಭೂಗರ್ಭದಲ್ಲಿ ಭೂಕಂಪನ ಕೇಂದ್ರ ಗುರುತಿಸಲಾಗಿದೆ. ಭೂಕಂಪನದಿಂದ ಮನೆಗಳ ಛಾವಣಿ ಮತ್ತು ಗೋಡೆಗಳು ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿ ಹಲವು ಮಂದಿ ಸಾವಿಗೀಡಾಗಿರುವುದಾಗಿ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಮತ್ತು ಆರು ಮಕ್ಕಳು

ಪಾಕಿಸ್ತಾನದಲ್ಲಿ ಪ್ರಬಲ‌ ಭೂಕಂಪ| ಕನಿಷ್ಠ 15 ಮಂದಿ ಸಾವು Read More »

ಇಂದಿನಿಂದ ರಾಷ್ಟ್ರಪತಿ ರಾಜ್ಯ ಪ್ರವಾಸ|

ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ನಾಳೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಭಾರತೀಯ ವಾಯುಸೇನೆಯ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಯಳಂದೂರು ತಾಲ್ಲೂಕಿನ ವಡಗೆರೆ ಹಾಗೂ ಯಡಬೆಟ್ಟದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ಗಳನ್ನು ಪರಿಶೀಲಿಸಲಾಯಿತು. ರಾಷ್ಟ್ರಪತಿ ಕೋವಿಂದ್ ಚಾಮರಾಜನಗರ, ಮಂಗಳೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಚಾಮರಾಜನಗರದಲ್ಲಿ ಅಕ್ಟೋಬರ್ 7ರಂದು ವಡ್ಡಗೆರೆ ಹೆಲಿಪ್ಯಾಡ್, ಬಿಳಿಗಿರಿ ರಂಗನ ಬೆಟ್ಟ, ಚಾಮರಾಜನಗರ ವೈದ್ಯಕೀಯ ಕಾಲೇಜು ವ್ಯಾಪ್ತಿಯಲ್ಲಿ

ಇಂದಿನಿಂದ ರಾಷ್ಟ್ರಪತಿ ರಾಜ್ಯ ಪ್ರವಾಸ| Read More »

ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಸರ್ವರ್ ದೋಷ| ಆ ಒಂದು ಗಂಟೆಯ ಆರ್ಥಿಕ ಹೊಡೆತ ಎಷ್ಟು ಗೊತ್ತೇ?

ಬೆಂಗಳೂರು: ಡಿಜಿಟಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಭಾಗವನ್ನೇ ಹೊಂದಿರುವ ಫೇಸ್​ಬುಕ್​, ವಾಟ್ಸ್​ ಆ್ಯಪ್​ ಹಾಗೂ ಇನ್​ಸ್ಟಾಗ್ರಾಮ್​ ಸರ್ವರ್​ ಇದ್ದಕ್ಕಿದ್ದಂತೆ ಕೈಕೊಟ್ಟಿರುವುದರಿಂದ ಬರೀ ಸಂವಹನದಲ್ಲಷ್ಟೇ ವ್ಯತ್ಯಯವಾಗಿರುವುದಲ್ಲ. ಜತೆಗೆ ಜಾಗತಿಕ ಆರ್ಥಿಕತೆಯಲ್ಲೂ ಭಾರಿ ನಷ್ಟ ಉಂಟಾಗಿದೆ. ಸದ್ಯ ಒಂದು ಗಂಟೆಗೂ ಹೆಚ್ಚು ಕಾಲದಿಂದ ಈ ಮೂರೂ ಸಾಮಾಜಿಕ ತಾಣಗಳಿಗೆ ಸಂಬಂಧಿಸಿದಂತೆ ಸರ್ವರ್​ ಡೌನ್​ ಆಗಿದ್ದು, ಪರ್ಸನಲ್​ ಮೆಸೇಜಿಂಗ್ ಹಾಗೂ ಸೋಷಿಯಲ್ ಕಮ್ಯುನಿಕೇಷನ್​ ಎರಡೂ ಸಾಧ್ಯವಾಗಿರಲಿಲ್ಲ. ಇದ್ದಕ್ಕಿದ್ದಂತೆ ಕೈಕೊಟ್ಟ ಇವುಗಳ ಹೊಡೆತ ತಾಳಲಾರದೆ ಪರ್ಯಾಯವಾಗಿ ಡಿಜಿಟಲ್​ ಬಳಕೆದಾರರು ಟ್ವಿಟರ್​, ಟೆಲಿಗ್ರಾಂ ಹಾಗೂ

ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಸರ್ವರ್ ದೋಷ| ಆ ಒಂದು ಗಂಟೆಯ ಆರ್ಥಿಕ ಹೊಡೆತ ಎಷ್ಟು ಗೊತ್ತೇ? Read More »

ಪೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಸರ್ವರ್ ಸ್ಥಗಿತ| ಬಳಕೆದಾರರು ಕಂಗಾಲು

ನವದೆಹಲಿ: ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಗಳು ಇಂದು ಸಂಜೆಯಿಂದ ಸ್ಥಗಿತಗೊಂಡಿದ್ದು, ಬಳಕೆದಾರರು ಯಾವುದೇ ರೀತಿಯ ಮಸೇಜ್ ಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ವೆಬ್‌ಸೈಟ್‌ಗಳು ಮತ್ತು ಸೇವೆಗಳ ಸ್ಥಿತಿಯ ಬಗ್ಗೆ ಮಾಹಿತಿ ಒದಿಗಿಸುವ ವೆಬ್‌ಸೈಟ್‌ ‘ಡೌನ್‌ ಡಿಟೆಕ್ಟರ್‌’ ಪ್ರಕಾರ ಫೇಸ್‌ಬುಕ್‌ ಒಡೆತನದ ಸಾಮಾಜಿಕ ಮಾಧ್ಯಮಗಳಲ್ಲಿ ಸಂಜೆ ಐದು ಗಂಟೆಯಿಂದಲೇ ಸಮಸ್ಯೆ ಎದುರಾಗಿದೆ. ನಂತರ ಸಮಸ್ಯೆಯು ವಿಶ್ವದೆಲ್ಲೆಡೆ ಕಾಣಿಸಿಕೊಂಡಿದೆ. ಸೇವೆಯಲ್ಲಿನ ವ್ಯತ್ಯಯದ ಕುರಿತು ಪ್ರತಿಕ್ರಿಯೆ ನೀಡಿರುವ ಫೇಸ್ ಬುಕ್ ಸಮಸ್ಯೆ ಅರಿವಿಗೆ ಬಂದಿದ್ದು,

ಪೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಸರ್ವರ್ ಸ್ಥಗಿತ| ಬಳಕೆದಾರರು ಕಂಗಾಲು Read More »

ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡ ತೈಲೋತ್ಪನ್ನ ದರ| ಈ ಹಗಲು ದರೋಡೆಗೆ ಕೊನೆ ಎಂದು…?

ನವದೆಹಲಿ: ದೇಶದಾದ್ಯಂತ ಇಂಧನ ದರ ಭಾನುವಾರವೂ ಹೆಚ್ಚಳವಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್‌ ದರವನ್ನು ಲೀಟರಿಗೆ 25 ಪೈಸೆ ಮತ್ತು ಡೀಸೆಲ್‌ ದರವನ್ನು ಲೀಟರಿಗೆ 30 ಪೈಸೆ ಹೆಚ್ಚಿಸಿವೆ. ಸತತ ನಾಲ್ಕನೇ ದಿನವೂ ದೇಶಾದ್ಯಂತ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಭಾನುವಾರ ಪೆಟ್ರೋಲಿಯಂ ಉತ್ಪನ್ನಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. ಸರ್ಕಾರಿ ತೈಲ ಕಂಪನಿಗಳ ಅಕ್ಟೋಬರ್ 3 ರಂದು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು, ಇಂದು ಲೀಟರ್ ಪೆಟ್ರೋಲ್ ದರ 25

ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡ ತೈಲೋತ್ಪನ್ನ ದರ| ಈ ಹಗಲು ದರೋಡೆಗೆ ಕೊನೆ ಎಂದು…? Read More »