ದೇಶ-ವಿದೇಶ

ಬೈಕ್ ಅಪಘಾತ; ಕಾಲೇಜು ಉಪನ್ಯಾಸಕ ಸಾವು

ಅಂಕೋಲಾ: ಸವಾರನ ನಿಯಂತ್ರಣ ತಪ್ಪಿ ಬೈಕ್‌ ಉರುಳಿದ ಬಿದ್ದ ಪರಿಣಾಮ ಕಾಲೇಜ್ ಉಪನ್ಯಾಸಕ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ತಾಲೂಕಿನ ರಾ.ಹೆ.66ರ ಬೆಳೆಸೆಯಲ್ಲಿ ಗುರುವಾರ ನಡೆದಿದೆ. ತಾಲೂಕಿನ ವಾಸರೆಕುದ್ರಿಗೆಯ ನಿವಾಸಿ ಅರವಿಂದ್ ಬೀರಾ ಆಗೇರ (49) ಮೃತಪಟ್ಟ ದುರ್ದೈವಿ. ಅರವಿಂದ್ ಅಂಕೋಲಾ ಪಟ್ಟಣದ ಪಿ.ಎಂ.ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜ ವಿಷಯದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮುಂಜಾನೆ ವಾಸರೆ ಕುದ್ರಿಗೆಯಿಂದ ಕಾಲೇಜಿಗೆ ಬರುತ್ತಿರುವ ವೇಳೆ ಬೈಕ್ ಸ್ಕಿಡ್ ಆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಬೈಕ್ ಅಪಘಾತ; ಕಾಲೇಜು ಉಪನ್ಯಾಸಕ ಸಾವು Read More »

ಕಾರ್ಗಿಲ್ ವಿಜಯ ದಿವಸ್| ಮರೆಯಲಾಗದ ಆ ನೆನಪುಗಳು

ಸಮಗ್ರ ನ್ಯೂಸ್: ಇಂದು (ಜು.26) ಕಾರ್ಗಿಲ್ ವಿಜಯ ದಿವಸ, ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತದ ಯೋಧರನ್ನು ಇಡೀ ದೇಶವೇ ಗೌರವಿಸುವ ದಿನ. ಈ ದಿನದಂದು ಕಾರ್ಗಿಲ್ ಯುದ್ಧದ ಇತಿಹಾಸ, ಮಹತ್ವ ಮತ್ತು ಸ್ಮರಣಾರ್ಥಗಳ ಬಗ್ಗೆ ನೋಡೋಣ.ಯಾಕೆಂದರೆ ಇದು ಇಡೀ ದೇಶವೇ ಹೆಮ್ಮೆ ಪಡುವ ದಿವಸ. 1999ರ ಇದೇ ದಿನದಂದು ಪಾಕಿಸ್ತಾನದ ವಿರುದ್ಧ ಕಾರ್ಗಿಲ್​ನಲ್ಲಿ ನಡೆದ ಯುದ್ಧದಲ್ಲಿ ಭಾರತ ಜಯ ಸಾಧಿಸಿದ ದಿವಸವಿದು. ಇದರ ನೆನಪಿಗಾಗಿ ಪ್ರತಿ ವರ್ಷ ಜು.26 ರಂದು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.

ಕಾರ್ಗಿಲ್ ವಿಜಯ ದಿವಸ್| ಮರೆಯಲಾಗದ ಆ ನೆನಪುಗಳು Read More »

ಕಸ್ತೂರಿ ರಂಗನ್ ವರದಿ ವಿರೋಧಿಸಿದ್ದ ಶಾಸಕರ ನಿಯೋಗಕ್ಕೆ ಯಶಸ್ಸು| ಹೊಸ ಕಮಿಟಿ ರಚನೆಗೆ ಸಮ್ಮತಿಸಿದ ಕೇಂದ್ರ

ಸಮಗ್ರ ನ್ಯೂಸ್: ಕಸ್ತೂರಿರಂಗನ್ ವರದಿ ವಿರೋಧಿಸಿ ಮಲೆನಾಡಿನ ಶಾಸಕರ ನಿಯೋಗಕ್ಕೆ ಕೊನೆಗೂ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ನೇತೃತ್ವದ ಮಲೆನಾಡಿನ ಶಾಸಕರ ನಿಯೋಗವು ಕಸ್ತೂರಿರಂಗನ್ ವರದಿ ಮಾಡಿದ ಪ್ರಕ್ರಿಯೆಯಲ್ಲಿ ಲೋಪ ಇದೆ ಎಂದು ದೂರು ಸಲ್ಲಿಸಿತ್ತು. ಹೀಗಾಗಿ ಕ್ಯಾಬಿನೆಟ್ ಸಬ್ ಕಮಿಟಿ ರಚಿಸಲು ಮನವಿ ಸಲ್ಲಿಸಿತ್ತು. ಈಗ ಇದಕ್ಕೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಒಪ್ಪಿಗೆ ನೀಡಿದ್ದಾರೆ. ಪಶ್ಚಿಮ ಘಟ್ಟದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಹೊಸ ವರದಿ ತಯಾರಿಸಲು ಹೊಸ ಕಮಿಟಿ ರಚನೆಗೆ ಸಮ್ಮತಿ ನೀಡಿದ್ದಾರೆ. ಈಗಾಗಲೇ

ಕಸ್ತೂರಿ ರಂಗನ್ ವರದಿ ವಿರೋಧಿಸಿದ್ದ ಶಾಸಕರ ನಿಯೋಗಕ್ಕೆ ಯಶಸ್ಸು| ಹೊಸ ಕಮಿಟಿ ರಚನೆಗೆ ಸಮ್ಮತಿಸಿದ ಕೇಂದ್ರ Read More »

ಉದ್ಯಮಿ ಮನೆಯಲ್ಲಿ ಒಂದು ಗಂಟೆಗಳ ಕಾಲ ಪಟಾಕಿ ಸ್ಫೋಟ; 6 ಮಂದಿ ಸಾವು 8ಮಂದಿಗೆ ಗಾಯ

ಬಿಹಾರ: ಉದ್ಯಮಿಯ ಮನೆಯಲ್ಲಿ ಪಟಾಕಿ ಸ್ಫೋಟಗೊಂಡ ಪರಿಣಾಮ 6 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡ ಘಟನೆಯೊಂದು ಬಿಹಾರದ ಸರನ್ ಜಿಲ್ಲೆಯ ಖುದಾಯಿ ಬಾಗ್ ಗ್ರಾಮದಲ್ಲಿ ನಡೆದಿದೆ. ಸುಮಾರು ಒಂದು ಗಂಟೆಯವರೆಗೆ ನಿರಂತರವಾಗಿ ಪಟಾಕಿ ಸ್ಫೋಟಗೊಂಡಿದೆ ಎಂದು ಹೇಳಲಾಗಿದ್ದು, ಇದರಿಂದ ಉದ್ಯಮಿ ಶಬೀರ್ ಹುಸೇನ್ ಮನೆ ನದಿಯ ತಟದಲ್ಲಿದ್ದು , ಸ್ಫೋಟದಿಂದಾಗಿ ಮನೆಯ ಬಹುತೇಕ ಭಾಗ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಭಾರೀ ಸಂಖ್ಯೆಯ ಪಟಾಕಿಗಳನ್ನು ಮನೆಯೊಳಗೆ ಇಡಲಾಗಿತ್ತು. ಅದು ಸ್ಫೋಟಿಸಲು ಪ್ರಾರಂಭವಾದಾಗಿನಿಂದ ಸುಮಾರು

ಉದ್ಯಮಿ ಮನೆಯಲ್ಲಿ ಒಂದು ಗಂಟೆಗಳ ಕಾಲ ಪಟಾಕಿ ಸ್ಫೋಟ; 6 ಮಂದಿ ಸಾವು 8ಮಂದಿಗೆ ಗಾಯ Read More »

ಅವಶ್ಯಕ ಔಷಧಗಳ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ: ಜನಸಾಮಾನ್ಯರ ಕೆಲವು ಪ್ರಮುಖ ಅಂಶಗಳ ಬೆಲೆಯನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಔಷಧಗಳ ಬೆಲೆ ಇಳಿಕೆ ಮಾಡುವ ಮೂಲಕ ಜನರ ಆರೋಗ್ಯ ರಕ್ಷಣೆಯ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆಗಸ್ಟ್ 15 ರಿಂದ ಮಧುಮೇಹ, ಹೃದಯ ಸಂಬಂಧಿ ರೋಗಗಳು, ಕ್ಯಾನ್ಸರ್ ಮೊದಲಾದವುಗಳ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಕೇಂದ್ರ ರಸಾಯನಿಕ ಇಲಾಖೆ ಈ ಕುರಿತಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದಂದು ಅಧಿಕೃತ ಪ್ರಕಟಣೆ ಹೊರ ಬೀಳುವ ನಿರೀಕ್ಷೆ

ಅವಶ್ಯಕ ಔಷಧಗಳ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ನಿರ್ಧಾರ Read More »

ಇಂದಿನಿಂದ ಮಹಾಭಾರತದಲ್ಲಿ ದ್ರೌಪದಿ ಯುಗ| ಪ್ರಮಾಣವಚನ ಸ್ವೀಕರಿಸಲಿದ್ದಾರೆ ಮುರ್ಮು

ಸಮಗ್ರ ನ್ಯೂಸ್: ರಾಮಾನಾಥ ಕೋವಿಂದ್ ಅವರ ಅಧಿಕಾರಾವಧಿ ಜು.24ಕ್ಕೆ ಅಂತ್ಯಗೊಂಡ ಕಾರಣ, ದೇಶದ 15ನೇ ರಾಷ್ಟ್ರಪತಿಯಾಗಿ, ಇಂದು ದ್ರೌಪದಿ ಮುರ್ಮು ಅವರು ಪ್ರಮಾಣವಚನ ಸ್ವೀಕರಿಸಿ, ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಭಾರೀ ಬಹುತದೊಂದಿಗೆ ಎನ್ ಡಿಎ ಬೆಂಬಲಿತ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಗೆಲುವು ಸಾಧಿಸಿದ್ದರು. ಇಂತಹ ಅವರು ಇಂದು 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಬೆಳಿಗ್ಗೆ 10.15ಕ್ಕೆ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ

ಇಂದಿನಿಂದ ಮಹಾಭಾರತದಲ್ಲಿ ದ್ರೌಪದಿ ಯುಗ| ಪ್ರಮಾಣವಚನ ಸ್ವೀಕರಿಸಲಿದ್ದಾರೆ ಮುರ್ಮು Read More »

ಇನ್ಮುಂದೆ ರಾತ್ರಿಯೂ ಹಾರಿಸಬಹುದು ತಿರಂಗಾ| ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದ ಸರ್ಕಾರ

ಸಮಗ್ರ ನ್ಯೂಸ್::ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗಾ’ ಅಭಿಯಾನವನ್ನ ಪ್ರಾರಂಭಿಸುವುದರ ಜೊತೆಗೆ, ಭಾರತದ ಧ್ವಜ ಸಂಹಿತೆ 2002ರಲ್ಲಿ ಬದಲಾವಣೆಗಳನ್ನ ತಂದಿದೆ. ಇನ್ಮುಂದೆ ತ್ರಿವರ್ಣ ಧ್ವಜವನ್ನ ಹಗಲು ಮತ್ತು ರಾತ್ರಿ ಸಾರ್ವಜನಿಕರಿಗೆ ಹಾರಿಸಲು ಅನುಮತಿ ನೀಡಲಾಗಿದೆ. ಸ್ವತಂತ್ರ ಭಾರತದ 75ನೇ ವರ್ಷದ ಸ್ಮರಣಾರ್ಥ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರವರೆಗೆ ‘ಹರ್ ಘರ್ ತಿರಂಗಾ’ ಆಚರಿಸಲಾಗುವುದು. ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ,

ಇನ್ಮುಂದೆ ರಾತ್ರಿಯೂ ಹಾರಿಸಬಹುದು ತಿರಂಗಾ| ಧ್ವಜ ಸಂಹಿತೆಯಲ್ಲಿ ಬದಲಾವಣೆ ತಂದ ಸರ್ಕಾರ Read More »

ಜಗತ್ತಿನಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್| ಜಾಗತಿಕ ತುರ್ತುಪರಿಸ್ಥಿತಿ ಘೋಷಿಸಿದ W.H.O

ಸಮಗ್ರ ನ್ಯೂಸ್: ಜಗತ್ತಿನಲ್ಲಿ ಮಂಕಿಪಾಕ್ಸ್ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಗ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಕೊರೊನಾ ತಣ್ಣಗಾಗುವ ಹೊತ್ತಿನಲ್ಲಿ ಮತ್ತೊಂದು ಮಹಾಮಾರಿ ವಕ್ಕರಿಸಿದ್ದು, ಜಗತ್ತು‌ ಬೆಚ್ಚಿಬಿದ್ದಿದೆ. ಜುಲೈ 20ರಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಮಂಕಿಪಾಕ್ಸ್ 72 ದೇಶಗಳ 15,800 ಕ್ಕೂ ಹೆಚ್ಚು ಜನರನ್ನು ಬಾಧಿಸಿದೆ. ಪಶ್ಚಿಮ ಮತ್ತು ಮಧ್ಯ ಆಫ್ರಿಕನ್ ದೇಶಗಳ ಹೊರಗೆ ಮೇ ತಿಂಗಳ ಆರಂಭದಿಂದ ಮಂಕಿಪಾಕ್ಸ್

ಜಗತ್ತಿನಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್| ಜಾಗತಿಕ ತುರ್ತುಪರಿಸ್ಥಿತಿ ಘೋಷಿಸಿದ W.H.O Read More »

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ| ನಟ ಸೂರ್ಯ ಮತ್ತು ಅಜಯ್ ದೇವಗನ್‌ ಅತ್ಯುತ್ತಮ ನಟರು| “ಡೊಳ್ಳು” ಕನ್ನಡದ ಅತ್ಯುತ್ತಮ ಚಿತ್ರ

ಸಮಗ್ರ ನ್ಯೂಸ್: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದ್ದು ತಮಿಳು ನಟ ಸೂರ್ಯ ಮತ್ತು ಅಜಯ್ ದೇವಗನ್ ಕ್ರಮವಾಗಿ ಸೂರರೈ ಪೊಟ್ರು ಮತ್ತು ತನ್ಹಾಜಿ: ದಿ ಅನ್ಸಂಗ್ ವಾರಿಯರ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ನಟಿ ಅಪರ್ಣಾ ಬಾಲಮುರಳಿ ಸೂರರೈ ಪೊಟ್ರು ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು “ಡೊಳ್ಳು” ಪಡೆದುಕೊಂಡಿತು. 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ| ನಟ ಸೂರ್ಯ ಮತ್ತು ಅಜಯ್ ದೇವಗನ್‌ ಅತ್ಯುತ್ತಮ ನಟರು| “ಡೊಳ್ಳು” ಕನ್ನಡದ ಅತ್ಯುತ್ತಮ ಚಿತ್ರ Read More »

ರಾಜಕೀಯ ನಿವೃತ್ತಿ ಘೋಷಿಸಿದ ರಾಜಾಹುಲಿ; ಪುತ್ರನಿಗಾಗಿ ಶಸ್ತ್ರ ತ್ಯಾಗ

ಸಮಗ್ರ‌ ನ್ಯೂಸ್: ರಾಜ್ಯ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೊಡ್ಡ ಮಟ್ಟಿನ ಶಾಕ್ ನೀಡಿದ್ದು ಇದೀಗ ರಾಜ್ಯ ಬಿಜೆಪಿ ವಲಯದಲ್ಲಿ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ನಾನು ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದು ಇದೀಗ ಶಿವಮೊಗ್ಗದ ಶಿಕಾರಿಪುರದಲ್ಲಿ ನನ್ನ ಬದಲಿಗೆ ವಿಜೇಯೇಂದ್ರರವರು ಸ್ಪರ್ದಿಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.ಇದೀಗ ಯಡಿಯೂರಪ್ಪರ ಈ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಬಾರೀ ಸಂಚಲನ ಸೃಷ್ಟಿಸಿದ್ದು,ಯಡಿಯೂರಪ್ಪ ನಿವೃತ್ತಿ ಘೋಷಿಸಿದರೆ ರಾಜ್ಯ ಬಿಜೆಪಿಗೆ ಈ ಬಾರಿಯ ಚುನಾವಣೆ ನುಂಗಲಾರದ ತುತ್ತಾಗಲಿದೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರನಿಗಾಗಿ ತಮ್ಮ

ರಾಜಕೀಯ ನಿವೃತ್ತಿ ಘೋಷಿಸಿದ ರಾಜಾಹುಲಿ; ಪುತ್ರನಿಗಾಗಿ ಶಸ್ತ್ರ ತ್ಯಾಗ Read More »