ದೇಶ-ವಿದೇಶ

ನಿಂತಿದ್ದ ಟ್ರಕ್ ಗೆ ಬಸ್ ಡಿಕ್ಕಿ; 7ಮಂದಿ ಸಾವು, ಮೂವರಿಗೆ ಗಾಯ

ಸಮಗ್ರ ನ್ಯೂಸ್ : ನಿಂತಿದ್ದ ಟ್ರಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನಪ್ಪಿದ ಘಟನೆಯೊಂದು ಛತ್ತೀಸಗಡದ ಕೊರಬಾ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಟ್ರಾವೆಲ್ ಕಂಪನಿಗೆ ಸೇರಿದ ಬಸ್ ಛತ್ತೀಸಗಡ ರಾಜಧಾನಿ ರಾಯ್‌ಪುರದಿಂದ ಸರ್‌ಗುಜ ಜಿಲ್ಲೆಗೆ ಸಂಚರಿಸುತ್ತಿತ್ತು. ಬಂಗೋ ಪೊಲೀಸ್ ಠಾಣೆ ವ್ಯಾಪ್ತಿಯ ಮಡಾಯಿ ಘಾಟಿ ಬಳಿ ಇಂದು ಮುಂಜಾನೆ ಸುಮಾರು 4 ಗಂಟೆಗೆ ಅವಘಡ ಸಂಭವಿಸಿದೆ. ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದ ವೇಳೆ ಬಸ್ ವೇಳೆ ನಿಯಂತ್ರಣ ತಪ್ಪಿ

ನಿಂತಿದ್ದ ಟ್ರಕ್ ಗೆ ಬಸ್ ಡಿಕ್ಕಿ; 7ಮಂದಿ ಸಾವು, ಮೂವರಿಗೆ ಗಾಯ Read More »


ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿಗೆ ಗಂಡು ಮಗುವಿನ ಜನನ

ಸಮಗ್ರ ನ್ಯೂಸ್: ಸೂಪರ್ ಸ್ಟಾರ್ ರಜನೀಕಾಂತ್ ಗೆ ಮತ್ತೊಬ್ಬ ಮೊಮ್ಮಗನ ಆಗಮನದ ಸಂಭ್ರಮ. ಪುತ್ರಿ ಸೌಂದರ್ಯಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೌಂದರ್ಯ ಪತಿ ವಿಶಾಖನ್ ವನಂಗಮುಡಿ ದಂಪತಿಗೆ ನಿನ್ನೆ ಗಂಡು ಮಗುವಾಗಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಮಗುವಿಗೆ ವೀರ್ ಎಂದು ಹೆಸರಿಡಲಾಗಿದೆ. 2019 ರಲ್ಲಿ ಸೌಂದರ್-ವಿಶಾಖನ್‍ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೌಂದರ್ಯಗೆ ಈಗಾಗಲೇ ಅಶ್ವಿನ್ ಕುಮಾರ್ ಜೊತೆಗಿನ ಮೊದಲ ಮದುವೆಯಿಂದ ಓರ್ವ ಪುತ್ರನಿದ್ದಾನೆ.


ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿಗೆ ಗಂಡು ಮಗುವಿನ ಜನನ
Read More »

ಏಷ್ಯಾಕಪ್ ಗೆ ಮುತ್ತಿಕ್ಕಿದ ಶ್ರೀಲಂಕಾ| ಪಾಕ್ ವಿರುದ್ಧ 23 ರನ್ ಗಳ ರೋಚಕ ಗೆಲುವು

ಸಮಗ್ರ ನ್ಯೂಸ್: ರೋಚಕ ಹಣಾಹಣಿಯಲ್ಲಿ ಪಾಕ್​ ವಿರುದ್ಧ 23 ರನ್​​ಗಳ ಗೆಲುವು ದಾಖಲಿಸಿರುವ ಶ್ರೀಲಂಕಾ 2022ನೇ ಸಾಲಿನ ಏಷ್ಯಾ ಕಪ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಇದರ ಜೊತೆಗೆ ಬಲಿಷ್ಠ ಭಾರತ, ಪಾಕಿಸ್ತಾನ ತಂಡಗಳಿಗೂ ಸೋಲಿನ ರುಚಿ ತೋರಿಸಿದೆ. ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಸಿಂಹಳೀಯರು ಅಂತಿಮವಾಗಿ ವಿಜೇತರಾಗಿ ಹೊರಹೊಮ್ಮಿದರು. ಫೈನಲ್​​​ನಲ್ಲಿ ವಿಜಯಿಯಾಗಿರುವ ಶ್ರೀಲಂಕಾ ಅಂದಾಜು ​₹1,59,53,000 ಬಹುಮಾನ ಮೊತ್ತವನ್ನು ಜೇಬಿಗಿಳಿಸಿಕೊಂಡಿದೆ. ಇದರ ಜೊತೆಗೆ

ಏಷ್ಯಾಕಪ್ ಗೆ ಮುತ್ತಿಕ್ಕಿದ ಶ್ರೀಲಂಕಾ| ಪಾಕ್ ವಿರುದ್ಧ 23 ರನ್ ಗಳ ರೋಚಕ ಗೆಲುವು Read More »

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ಮತ್ತೆ ಭಾರೀ ಮಳೆ ಸಾಧ್ಯತೆ; ಪ್ರವಾಹ ಭೀತಿಯಲ್ಲಿ ಹಲವು ರಾಜ್ಯಗಳು!!

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಹಲವು ರಾಜ್ಯಗಳಲ್ಲಿ ಮತ್ತೆ ಪ್ರವಾಹ ಭೀತಿಯನ್ನು ಉಂಟುಮಾಡಿದೆ. ಶನಿವಾರದಿಂದಲೇ ಒಡಿಶಾ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಧಾರಾಕಾರ ಮಳೆ ಆರಂಭವಾಗಿದ್ದು, ಇನ್ನೂ 5 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗಲೇ ಮಳೆ, ಪ್ರವಾಹ, ಭೂಕುಸಿತದಂತಹ ದುರಂತಗಳಿಂದ ಕಂಗಾಲಾಗಿದ್ದ ಜನರನ್ನು ಮತ್ತೆ ಆತಂಕಕ್ಕೆ ನೂಕಿದೆ. ಒಡಿಶಾದಲ್ಲಿ ಶನಿವಾರ ರಾತ್ರಿಯಿಂದೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ಮತ್ತೆ ಭಾರೀ ಮಳೆ ಸಾಧ್ಯತೆ; ಪ್ರವಾಹ ಭೀತಿಯಲ್ಲಿ ಹಲವು ರಾಜ್ಯಗಳು!! Read More »

ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ ಭಕ್ತ

ಸಮಗ್ರ ನ್ಯೂಸ್: ಭಕ್ತನೊಬ್ಬ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿದ ಘಟನೆಯೊಂದು ಇಲ್ಲಿನ ಶೀಟ್ಲಾ ದೇವಸ್ಥಾನದಲ್ಲಿ ನಡೆದಿದೆ. ಕೌಶಂಬಿ ನಿವಾಸಿ ಸಂಪತ್ (38) ದೇವರಿಗೆ ನಾಲಿಗೆ ಅರ್ಪಿಸಿದ ಭಕ್ತ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂಪತ್ ತನ್ನ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದರು. ದೇವಾಲಯ ಪ್ರದಕ್ಷಿಣೆ ಮುಗಿಸಿದ ನಂತರ, ಅವನು ತನ್ನ ನಾಲಿಗೆಯನ್ನು ಬ್ಲೇಡ್‌ನಿಂದ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ

ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿದ ಭಕ್ತ Read More »

ಎಲಿಜಬೆತ್ ಹಿರಿಯ ಪುತ್ರ ; ಬ್ರಿಟನ್ ದೇಶಕ್ಕೆ ನೂತನ ರಾಜ

ಸಮಗ್ರ ನ್ಯೂಸ್: ಬ್ರಿಟನ್ ದೇಶವನ್ನು ಅತ್ಯಧಿಕ ಕಾಲ ಆಳಿದ ರಾಣಿ 2ನೇ ಎಲಿಜಬೆತ್ ಗುರುವಾರ ನಿಧನ ಹೊಂದಿದ್ದು, ಇದೀಗ ಎಲಿಜಬೆತ್ ಹಿರಿಯ ಪುತ್ರ ವೇಲ್ಸ್ ಮಾಜಿ ಯುವರಾಜ 3ನೇ ಚಾರ್ಲ್ಸ್ ಬ್ರಿಟನ್ ದೇಶಕ್ಕೆ ನೂತನ ರಾಜರಾಗಲಿದ್ದಾರೆ. ಬ್ರಿಟನ್‌ನ ರಾಜ ಅಥವಾ ರಾಣಿ ಕಣ್ಮುಚ್ಚಿದ 24 ಗಂಟೆಯಲ್ಲಿ ಉತ್ತರಾಧಿಕಾರಿ ಹೆಸರು ಘೋಷಣೆ ಮಾಡಬೇಕಿದೆ. ಈ ಹಿನ್ನೆಲೆ ರಾಜ ಚಾರ್ಲ್ಸ್, ರಾಣಿ ಕೆಮಿಲ್ಲಾ ಪಾರ್ಕರ್ ಇಂದು ಸ್ಕಾಟ್ಲೆಂಡ್‌ನಿಂದ ಲಂಡನ್ ತಲುಪಿದ್ದಾರೆ. ಚಾರ್ಲ್ಸ್ ಅವರು ಶನಿವಾರ ಬ್ರಿಟನ್‌ನ ಹೊಸ ರಾಜನೆಂದು ಅಧಿಕೃತವಾಗಿ ಘೋಷಣೆಯಾಗಲಿದ್ದಾರೆ.

ಎಲಿಜಬೆತ್ ಹಿರಿಯ ಪುತ್ರ ; ಬ್ರಿಟನ್ ದೇಶಕ್ಕೆ ನೂತನ ರಾಜ Read More »

ಫ್ಲಿಪ್‌ಕಾರ್ಟ್ ನಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್/ವರ್ಕ್ ಫ್ರಮ್ ಹೋಮ್​ಗೂ ಅವಕಾಶ

ಉದ್ಯೋಗ ಸಮಾಚಾರ: ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ನಿರುದ್ಯೋಗಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ. ಕಂಪನಿಯಲ್ಲಿ ವಿವಿಧ ಉದ್ಯೋಗದ ಪಾತ್ರಗಳಿಗೆ ಹೊಸ ನೇಮಕಾತಿಯನ್ನು ಕೈಗೊಂಡಿರುವ ಕಂಪನಿಯು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶವನ್ನು ನೀಡಲಾಗುವುದು ಎಂದು ಬಹಿರಂಗಪಡಿಸಿದೆ. ಫ್ಲಿಪ್‌ಕಾರ್ಟ್ ಅನುಭವಿ ಮತ್ತು ಫ್ರೆಶರ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದೆ. ಕಂಪನಿಯಲ್ಲಿನ ವಿವಿಧ ಉದ್ಯೋಗದ ಪಾತ್ರಗಳಿಗೆ ಹೊಸ ನೇಮಕಾತಿಯನ್ನು ಕೈಗೊಂಡಿರುವ ಈ ಕಂಪನಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ಮನೆಯಿಂದಲೇ ಕೆಲಸ ಮಾಡಲು (ವರ್ಕ್ ಫ್ರಮ್ ಹೋಮ್)

ಫ್ಲಿಪ್‌ಕಾರ್ಟ್ ನಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್/ವರ್ಕ್ ಫ್ರಮ್ ಹೋಮ್​ಗೂ ಅವಕಾಶ Read More »

ಬ್ರಿಟನ್ ರಾಣಿ ಎಲಿಜಬೆತ್ ನಿಧನ

ಸಮಗ್ರ ನ್ಯೂಸ್: ಬ್ರಿಟನ್‌ ನ ರಾಣಿ ಎಲಿಝಬೆತ್ || ಗುರುವಾರ ನಿಧನರಾಗಿದ್ದಾರೆ. 96 ವರ್ಷದ ಎಲಿಝಬೆತ್ ಅವರ ಆರೋಗ್ಯದಲ್ಲಿ ಏರುಪೇರಾದ ಬಳಿಕ ವೈದ್ಯರ ನಿಗಾದಲ್ಲಿ ಅವರನ್ನು ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಬಂಕಿಂಗ್‌ಹ್ಯಾಮ್‌ ಅರಮನೆ ಹೇಳಿಕೆ ಬಿಡುಗಡೆ ಮಾಡಿದೆ. “ಇಂದು ಬೆಳಗ್ಗೆ ಹೆಚ್ಚಿನ ಪರೀಕ್ಷೆಯ ಬಳಿಕ, ರಾಣಿಯ ವೈದ್ಯರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಅವರು ವೈದ್ಯಕೀಯ ನಿಗಾದಲ್ಲಿ ಉಳಿಯಲು ಶಿಫಾರಸು ಮಾಡಿದ್ದರು. ನಂತರ ಅವರ ಹಿರಿಯ ಮಗ ಮತ್ತು ಉತ್ತರಾಧಿಕಾರಿ

ಬ್ರಿಟನ್ ರಾಣಿ ಎಲಿಜಬೆತ್ ನಿಧನ Read More »

‘ರಾಷ್ಟ್ರೀಯ ಧರ್ಮಗ್ರಂಥ’ವಾಗಿ ‘ಶ್ರೀಮದ್ ಭಗವದ್ಗೀತೆ’! ಶೀಘ್ರದಲ್ಲೇ ಕೇಂದ್ರ ಸರ್ಕಾರ ಘೋಷಣೆ ಸಾಧ್ಯತೆ

ಸಮಗ್ರ ನ್ಯೂಸ್: ರಾಷ್ಟ್ರಗೀತೆ, ರಾಷ್ಟ್ರಗೀತೆ, ರಾಷ್ಟ್ರ ಧ್ವಜದಂತೆಯೇ ಶೀಘ್ರದಲ್ಲೇ ರಾಷ್ಟ್ರ ಗ್ರಂಥ ಬರಲಿದೆ. ಭಾರತ ಸರ್ಕಾರವು ಶ್ರೀಮದ್ ಭಗವದ್ಗೀತೆಯನ್ನ ರಾಷ್ಟ್ರೀಯ ಗ್ರಂಥವೆಂದು ಘೋಷಿಸಬಹುದು. ಇದನ್ನು ಜಾರಿಗೆ ತರುವ ಪ್ರಯತ್ನವನ್ನ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ಇದಕ್ಕಾಗಿ, ಭಾರತ ಸರ್ಕಾರವು ವಿವಿಧ ಸಚಿವಾಲಯಗಳಿಂದ ಅಭಿಪ್ರಾಯವನ್ನ ತೆಗೆದುಕೊಳ್ಳುತ್ತಿದೆ. ಗಮನಾರ್ಹವಾಗಿ, ಮಹಾರಾಷ್ಟ್ರದ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಅವರು ಕಳುಹಿಸಿದ ಪತ್ರದ ಆಧಾರದ ಮೇಲೆ ಸರ್ಕಾರವು ಈ ಅಭ್ಯಾಸ ನಡೆಸಿದೆ. ಮಹಾರಾಷ್ಟ್ರದ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಜುಲೈ 5ರಂದು ಕೇಂದ್ರ

‘ರಾಷ್ಟ್ರೀಯ ಧರ್ಮಗ್ರಂಥ’ವಾಗಿ ‘ಶ್ರೀಮದ್ ಭಗವದ್ಗೀತೆ’! ಶೀಘ್ರದಲ್ಲೇ ಕೇಂದ್ರ ಸರ್ಕಾರ ಘೋಷಣೆ ಸಾಧ್ಯತೆ Read More »

25 ಲಕ್ಷ ರೂ. ಗೆ ಹುಲಿ ಮರಿಗಳ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ

ಸಮಗ್ರ ನ್ಯೂಸ್:  ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ವ್ಯಾಟ್ಸಾಪ್ ಮೂಲಕ 25 ಲಕ್ಷ ರೂ.ಗೆ ಹುಲಿ ಮರಿಗಳನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸರ್ಪನಮೇಡುವಿನ ವಾಸಿ ಪಥಿಬನ್ ಎಂದು ಗುರುತಿಸಲಾಗಿದ್ದು, ಈತ ತಿರುಪತಿಯಲ್ಲಿ ಕಾನೂನು ಅಧ್ಯಯನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಟ್ಸಪ್ ಮೂಲಕ ಬುಕ್ಕಿಂಗ್ ಮಾಡಿದ 10 ದಿನಗಳ ನಂತರ ಮರಿಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ  ಅಬಕಾರಿಗಳ ತಂಡ ಆತನ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಹುಲಿಮರಿಗಳು ಇರುವುದು

25 ಲಕ್ಷ ರೂ. ಗೆ ಹುಲಿ ಮರಿಗಳ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ Read More »