ದೇಶ-ವಿದೇಶ

ದೇವಸ್ಥಾನದಲ್ಲಿ ನಡೆಯಿತು ‘ಪ್ಯಾಷನ್ ಶೋ’| ಭಜರಂಗದಳದಿಂದ ದೂರು ದಾಖಲು

ಸಮಗ್ರ ನ್ಯೂಸ್: ದೇವಸ್ಥಾನದಲ್ಲಿ ‘ಫ್ಯಾಷನ್ ಶೋ’ ಆಯೋಜಿಸಿದ್ದನ್ನು ಭಜರಂಗ ದಳದ ಕಾರ್ಯಕರ್ತರು ಆಕ್ಷೇಪಿಸಿರುವ ಘಟನೆ ಛತ್ತೀಸ್ ಗಢ ರಾಜ್ಯದ ರಾಯ್ಪುರದ ಬಾಲಾಜಿ ದೇವಸ್ಥಾನದಲ್ಲಿ ‌ನಡೆದಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಭಜರಂಗ ದಳ ಹೇಳಿದೆ. ಟೆಲಿಬಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲಸರ್ ದೇವಸ್ಥಾನದಲ್ಲಿ ಭಾನುವಾರ ಎಫ್‌ಡಿಸಿಎ ಹೆಸರಿನ ಕಂಪನಿಯು ‘ಫ್ಯಾಷನ್ ಶೋ’ ಆಯೋಜಿಸಿದೆ. ಆರಿಫ್ ಮತ್ತು ಮನೀಶ್ ಸೋನಿ ಎಂಬುವವರೇ ಈ ‘ಫ್ಯಾಶನ್ ಶೋ’ದ ಆಯೋಜಕರು ಎಂದು ವರದಿಯಾಗಿದೆ. ಧಾರ್ಮಿಕ

ದೇವಸ್ಥಾನದಲ್ಲಿ ನಡೆಯಿತು ‘ಪ್ಯಾಷನ್ ಶೋ’| ಭಜರಂಗದಳದಿಂದ ದೂರು ದಾಖಲು Read More »

ಕೇರಳದ ಪ್ರಸ್ತಾವನೆಗೆ ಕರ್ನಾಟಕ ಎಳ್ಳುನೀರು| ಕಾಂಞಂಗಾಡ್- ಕಾಣಿಯೂರು ರೈಲು ಮಾರ್ಗ‌ ಅಸಾಧ್ಯವೆಂದ ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ರೈಲ್ವೆ ಮಾರ್ಗ, ರಸ್ತೆ ಸಾರಿಗೆ ಸೇರಿ ಮೂರು ವಿಚಾರಗಳಲ್ಲಿ ಕರ್ನಾಟಕ ಸರ್ಕಾರವನ್ನು ಮನವೊಲಿಸಲು ಬಂದಿದ್ದ ನೆರೆ ರಾಜ್ಯ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ಎಲ್ಲ ಮೂರು ಪ್ರಸ್ತಾವನೆಗಳನ್ನೂ ಕರ್ನಾಟಕ ಸರ್ಕಾರ ತಿರಸ್ಕರಿಸಿದೆ. ಕಾಞಂಗಾಡ್- ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಹಮತಿ ನೀಡುವಂತೆ ಕೇರಳ ಸರ್ಕಾರ ಕೋರಿದೆ. ಪ್ರಸ್ತಾವಿತ ಕಾಞಂಗಾಡ್ – ಕಾಣಿಯೂರು ರೈಲು ಮಾರ್ಗವು ಕೇರಳದಲ್ಲಿ 40 ಕಿ.ಮೀ. ಹಾಗೂ ಕರ್ನಾಟಕದಲ್ಲಿ 31 ಕಿ.ಮೀ.

ಕೇರಳದ ಪ್ರಸ್ತಾವನೆಗೆ ಕರ್ನಾಟಕ ಎಳ್ಳುನೀರು| ಕಾಂಞಂಗಾಡ್- ಕಾಣಿಯೂರು ರೈಲು ಮಾರ್ಗ‌ ಅಸಾಧ್ಯವೆಂದ ಸಿಎಂ ಬೊಮ್ಮಾಯಿ Read More »

ವಿಶ್ವದ ಮೊದಲ ಹಾರುವ ಬೈಕ್ ಪ್ರದರ್ಶನ; ವಿಡಿಯೋ ವೈರಲ್

ಸಮಗ್ರ ನ್ಯೂಸ್ : ವಿಶ್ವದ ಮೊದಲ ಹಾರುವ ಬೈಕ್ ತಯಾರಾಗಿ ಹೊಸ ಮಾಡೆಲ್ ಬೈಕ್‌ ಬಂದಿದೆ. ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಜಪಾನ್‌ ಮೂಲದ ಸ್ಟಾಟಪ್‌ ಕಂಪನಿ ಏರ್‌ವಿನ್ಸ್ ಟೆಕ್ನಾಲಜೀಸ್ ಅಮೆರಿಕದ ಡೆಟ್ರಾಯಿಟ್‌ನಲ್ಲಿ ನಡೆಯುತ್ತಿರುವ ಆಟೋ ಶೋನಲ್ಲಿ ಈ ಬೈಕನ್ನು ಪ್ರದರ್ಶನ ಮಾಡಿದೆ. ಇದು ಸಂಪೂರ್ಣವಾಗಿ ಬ್ಯಾಟರಿ ಚಾಲಿತವಾಗಿದ್ದು, ವ್ಯಕ್ತಿಯೊಬ್ಬರು ಕುಳಿತುಕೊಂಡು ಹಾರಾಟ ಮಾಡಬಹುದು. ಈ ಬೈಕ್ 40 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಬಲ್ಲದು ಅಂತ ತಯಾರಿಸಿದ ಕಂಪನಿ ಹೇಳಿಕೊಂಡಿದೆ. ಹಾರುವ ಬೈಕ್ ಗಂಟೆಗೆ 60

ವಿಶ್ವದ ಮೊದಲ ಹಾರುವ ಬೈಕ್ ಪ್ರದರ್ಶನ; ವಿಡಿಯೋ ವೈರಲ್ Read More »

ಚೀತಾ ಪ್ರಾಜೆಕ್ಟ್ ನಲ್ಲಿ ಪುತ್ತೂರಿನ ಮುಳಿಯದ ಪಶುವೈದ್ಯ ಡಾ. ಸನತ್ ಕೃಷ್ಣ|

ಸಮಗ್ರ ನ್ಯೂಸ್: ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತಂದ ನಿಯೋಗದಲ್ಲಿದ್ದ ಪಶುವೈದ್ಯ ಡಾ.ಸನತ್‌ ಕೃಷ್ಣ ಮುಳಿಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯದವರು. ಅವರು ನವದೆಹಲಿಯ ನ್ಯಾಷನಲ್‌ ಝೂವಾಲಾಜಿಕಲ್‌ ಪಾರ್ಕ್‌ನಲ್ಲಿ ಸಹಾಯಕ ಪಶುವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತಕ್ಕೆ ಚೀತಾಗಳನ್ನು ತಂದ ಬಗ್ಗೆ ಖುಷಿ ಹಂಚಿಕೊಂಡ ಡಾ.ಸನತ್‌ಕೃಷ್ಣ ಮುಳಿಯ ಅವರ ಸಂಬಂಧಿ, ಗುತ್ತಿಗಾರು ಗ್ರಾಮದ ಕೇಶವ ಭಟ್‌ ಮುಳಿಯ, ‘ಇದು ದೇಶಕ್ಕೆ ಹೆಮ್ಮಯ ಕ್ಷಣ. ಅಂತೆಯೇ ಈ ಚೀತಾಗಳನ್ನು ಕರೆತಂದ ತಂಡದಲ್ಲಿದ್ದ ಪಶುವೈದ್ಯರು ನಮ್ಮ ರಾಜ್ಯದವರು ಎಂಬುದು

ಚೀತಾ ಪ್ರಾಜೆಕ್ಟ್ ನಲ್ಲಿ ಪುತ್ತೂರಿನ ಮುಳಿಯದ ಪಶುವೈದ್ಯ ಡಾ. ಸನತ್ ಕೃಷ್ಣ| Read More »

ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕ ಸಿಬ್ಬಂದಿಯನ್ನು ನೇಮಿಸಿ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಸಮಗ್ರ ನ್ಯೂಸ್: ಬ್ಯಾಂಕ್‌ಗಳಿಗೆ ಸ್ಥಳೀಯ ಭಾಷೆ ಮಾತನಾಡಬಲ್ಲ ಸಿಬ್ಬಂದಿಯನ್ನು ನೇಮಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ. ನೀವು ವ್ಯಾಪಾರ ಮಾಡಲು ಅಲ್ಲಿದ್ದೀರಿ. ನಾಗರಿಕರಲ್ಲಿ ಕೆಲವು ಮೌಲ್ಯ ವ್ಯವಸ್ಥೆಯನ್ನು ಬೆಳೆಸಲು ಅಲ್ಲ ಎಂದು ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕ್‌ಗಳ ಸಂಘದ 75ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಾದೇಶಿಕ ಭಾಷೆಯಲ್ಲಿ ಮಾತನಾಡದ ಸಿಬ್ಬಂದಿಯನ್ನು ನೀವು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಹೊಂದಿದ್ದು ಅಲ್ಲಿ ನೀವು ಹಿಂದಿ ಮಾತನಾಡುವುದಿಲ್ಲ, ಬಹುಶಃ ನೀವು ಭಾರತೀಯರಲ್ಲ ಎಂದು

ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕ ಸಿಬ್ಬಂದಿಯನ್ನು ನೇಮಿಸಿ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ Read More »

ಭಾರೀ ಭೂಕುಸಿತದಲ್ಲಿ 13 ಸಾವು, 10 ಮಂದಿ‌ ಕಣ್ಮರೆ

ಸಮಗ್ರ ನ್ಯೂಸ್: ಪಶ್ಚಿಮ ನೇಪಾಳದ ಅಚಾಮ್ ಜಿಲ್ಲೆಯಲ್ಲಿ ಭಾರಿ ಭೂಕುಸಿತದಿಂದ 13 ಮಂದಿ ಸಾವನ್ನಪ್ಪಿದ್ದಾರೆ, 10 ಮಂದಿ ಕಾಣೆಯಾಗಿದ್ದಾರೆ ಮತ್ತು 10 ಮಂದಿಯನ್ನು ರಕ್ಷಿಸಲಾಗಿದೆ ಎಂದು ಉಪ ಮುಖ್ಯ ಜಿಲ್ಲಾ ಅಧಿಕಾರಿ ದೀಪೇಶ್ ರಿಜಾಲ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ಗೃಹ ಸಚಿವರು ಆದೇಶಿಸಿದ್ದಾರೆ.

ಭಾರೀ ಭೂಕುಸಿತದಲ್ಲಿ 13 ಸಾವು, 10 ಮಂದಿ‌ ಕಣ್ಮರೆ Read More »

ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿಳಿದ 8 ಚಿರತೆಗಳು

ಸಮಗ್ರ ನ್ಯೂಸ್ : ಭಾರತ ಕಾಡುಗಳಿಂದ ಕಣ್ಮರೆಯಾಗಿದ್ದ ಚಿರತೆಗಳು ಸುಮಾರು 70 ವರ್ಷಗಳ ಬಳಿಕ ಮತ್ತೆ ಬಂದಿದೆ. ಇದೀಗ ನಮೀಬಿಯಾ ದೇಶದಿಂದ ಎಂಟು ಚಿರತೆಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿದೆ. ನಮೀಬಿಯಾದಿಂದ ಎಂಟು ಚಿರತೆಗಳನ್ನು ಹೊತ್ತ ವಿಶೇಷ ಚಾರ್ಟರ್ಡ್‌ ಕಾರ್ಗೋ ವಿಮಾನವು ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿರುವ ಭಾರತೀಯ ವಾಯುಪಡೆಯ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಂದು ಇಳಿದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಲಿದ್ದಾರೆ.

ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿಳಿದ 8 ಚಿರತೆಗಳು Read More »

‘ನಮೋ’ಗೆ ವಿಶಿಷ್ಟವಾಗಿ ಬರ್ತ್ ಡೇ ಶುಭಾಶಯ ತಿಳಿಸಿದ ಪುಟಿನ್

ಸಮಗ್ರ ನ್ಯೂಸ್: ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ನಡೆದ ಎಸ್ ಸಿಒ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಸಂಪ್ರದಾಯದಲ್ಲಿ, ಜನ್ಮದಿನಗಳಿಗೆ ಮುಂಚಿತವಾಗಿ ಶುಭಾಶಯಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದರು. ಆದ್ದರಿಂದ ನಾನು ಈ ಸಮಯದಲ್ಲಿ ನಿಮ್ಮನ್ನು ಅಭಿನಂದಿಸುತ್ತಿಲ್ಲ, ಆದರೆ ನನ್ನ ಶುಭ ಹಾರೈಕೆಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ. ನಿಮ್ಮ ನಾಯಕತ್ವದಲ್ಲಿ

‘ನಮೋ’ಗೆ ವಿಶಿಷ್ಟವಾಗಿ ಬರ್ತ್ ಡೇ ಶುಭಾಶಯ ತಿಳಿಸಿದ ಪುಟಿನ್ Read More »

ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಅಪ್ಪು ಪೋಟೊ ಹಾಗೂ ಕನ್ನಡದ ಬಾವುಟ ಹಾರಿಸಿದ ಶಿವಮೊಗ್ಗದ ಯುವಕರು

ಸಮಗ್ರ ನ್ಯೂಸ್: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನು ಅಗಲಿ ಒಂದು ವರ್ಷ ಆಗುತ್ತಾ ಬರುತ್ತಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಶಾಶ್ವತವಾಗಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗದ ಯುವಕರು, ವಿಶ್ವದ ಅತಿ ಎತ್ತರದ ಲಡಾಕ್‌ನ ರಸ್ತೆಯಲ್ಲಿ ಅಪ್ಪು ಫೋಟೊ ಹಾಗೂ ಕನ್ನಡದ ಬಾವುಟ ಅನಾವರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಜಗತ್ತಿನ ಅತಿ ಎತ್ತರದ ರಸ್ತೆಯಾದ ಭಾರತದ ಖರ್ದುಂಗ್‌ ಲಾ ಪಾಸ್ (17,582 ಅಡಿ ಎತ್ತರ) ರಸ್ತೆಯಲ್ಲಿ ಶಿವಮೊಗ್ಗದ ಅಪ್ಪು ಅಭಿಮಾನಿಗಳಾದ ವಿನಯ್ ತಾಂದ್ಲೆ, ಪ್ರಮೋದ್, ಗೌತಮ್, ಹರೀಶ್

ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಅಪ್ಪು ಪೋಟೊ ಹಾಗೂ ಕನ್ನಡದ ಬಾವುಟ ಹಾರಿಸಿದ ಶಿವಮೊಗ್ಗದ ಯುವಕರು Read More »

ಕೋತಿಗಳ ಕಾಟಕ್ಕೆ ಸಿಲುಕಿದ ಪೊಲೀಸರು/ ಮಧ್ಯೆ ಎಂಟ್ರಿ ಕೊಟ್ಟ ಹಾವು/ ಮುಂದೇನಾಯ್ತು ನೀವೇ ನೋಡಿ

ತಿರುವನಂತಪುರಂ: ಸಮಾಜದಲ್ಲಿ ಶಾಂತಿ ಭದ್ರತೆಯನ್ನು ಕಾಪಾಡುವ ಪೊಲೀಸರನ್ನು ಕೋತಿಗಳಿಂದ ಕಾಪಾಡುವವರೇ ಇರಲಿಲ್ಲ. ಇಲ್ಲಿ ನಡೆದಿರೋದು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕೇರಳ ಅರಣ್ಯ ಪ್ರದೇಶದ ಕುಂಬುಮೆಟ್ಟು ಪೊಲೀಸ್​ ಠಾಣೆಯಯಲ್ಲಿ. ಕೋತಿಗಳ ಗುಂಪು ಏಕಾಏಕಿ ದಾಳಿ ಮಾಡಿ ನಾನಾ ಹಂಗಾಮಾ ಮಾಡೋದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಸ್ಥಳೀಯ ರೈತರೊಬ್ಬರು ನೀಡಿದ್ದ ಸಲಹೆ ಸದ್ಯ ವರ್ಕ್​ ಆಗಿದ್ದು, ಪೊಲೀಸರ ಸಮಸ್ಯೆಗೆ ಪರಿಹಾರ ಲಭ್ಯವಾಗಿದೆ. ಕೇರಳದ ಇಡುಕಿಯಲ್ಲಿರುವ ಕುಂಬುಮೆಟ್ಟು ಪೊಲೀಸ್​​ ಠಾಣೆಯ ಬಳಿ ಅತೀ ಹೆಚ್ಚು ಕೋತಿಗಳ ಕಾಟವಿದ್ದು.

ಕೋತಿಗಳ ಕಾಟಕ್ಕೆ ಸಿಲುಕಿದ ಪೊಲೀಸರು/ ಮಧ್ಯೆ ಎಂಟ್ರಿ ಕೊಟ್ಟ ಹಾವು/ ಮುಂದೇನಾಯ್ತು ನೀವೇ ನೋಡಿ Read More »