ದೇಶ-ವಿದೇಶ

ಕನ್ನಡಿಗರಿಗೆ ಕನ್ನಡದಲ್ಲೇ ಯುಗಾದಿ‌ ಶುಭಾಶಯ ಕೋರಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ನಾಡಿನಾದ್ಯಂತ ಜನರು ಯುಗಾದಿ ಹಬ್ಬ ಸಂತಸದಲ್ಲಿದ್ದಾರೆ. ಮನೆ ಮನೆಯಲ್ಲೂ ಈ ಹಬ್ಬವನ್ನು ಆಚರಿಸುತ್ತಿದ್ದಾರೆ. ಅದರಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಕನ್ನಡದಲ್ಲೇ ಟ್ವೀಟ್​ ಮಾಡುವ ಮೂಲಕ ಪ್ರಾರ್ಥಿಸಿದ್ದಾರೆ. ಮೋದಿ ಅವರು ಟ್ವೀಟ್​ನಲ್ಲಿ ಎಲ್ಲರಿಗೂ ಸಂತಸದ ಯುಗಾದಿಯ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ […]

ಕನ್ನಡಿಗರಿಗೆ ಕನ್ನಡದಲ್ಲೇ ಯುಗಾದಿ‌ ಶುಭಾಶಯ ಕೋರಿದ ಪ್ರಧಾನಿ ಮೋದಿ Read More »

ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೆ ಶಾಲಾ ಶಿಕ್ಷಣ ಇಲಾಖೆ

ಸಮಗ್ರ ನ್ಯೂಸ್: ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಮಂಡಳಿಯನ್ನು ಒಂದು ಮಾಡಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂಬುದಾಗಿ ಮರು ನಾಮಕರಣ ಮಾಡಲಾಗಿತ್ತು. ಈ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಇಲಾಖೆ ಎಂದು ಮರು ಪದನಾಮೀಕರಿಸಿ ಸರ್ಕಾರ ಆದೇಶಿಸಿದೆ. ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಸಾರ್ವಜನಿಕ ಶಿಕ್ಷಣ ಆಯುಕ್ತರು ಹಾಗೂ ಅದರ ಅಧೀನದಲ್ಲಿ ಬರುವ

ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೆ ಶಾಲಾ ಶಿಕ್ಷಣ ಇಲಾಖೆ Read More »

ಭಾರತ ಕೇವಲ ಎರಡ್ಮೂರು ಮಂದಿಗೆ ಸೇರಿದ್ದಲ್ಲ; ಅದು ಎಲ್ಲಾ ಭಾರತೀಯರದ್ದು – ರಾಹುಲ್ ಗಾಂಧಿ

ಸಮಗ್ರ ನ್ಯೂಸ್: ಈ ದೇಶ ಎಲ್ಲರಿಗೂ ಸೇರಿದ್ದು, ಯಾರೋ 2ರಿಂದ 3 ಮಂದಿಗೆ ಸೇರಿದ್ದಲ್ಲ ಅಥವಾ ಅದಾನಿಯವರದ್ದಲ್ಲ. ಬಿಜೆಪಿಯ ಮಿತ್ರರಾದ ಆಯ್ದ ಜನರಿಗೆ ಎಲ್ಲಾ ಲಾಭಗಳು ಸಿಗುತ್ತಿವೆ. ಇದುವೇ ಭ್ರಷ್ಟಾಚಾರಕ್ಕೆ ಕಾರಣ. ಕರ್ನಾಟಕದ ಸರ್ಕಾರವು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ಬೆಳಗಾವಿಯ ಸಿಪಿಎಡ್​ ಮೈದಾನದಲ್ಲಿ ನಡೆದ ‘ಯುವ ಕ್ರಾಂತಿ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭಾರತ ಅದಾನಿಯವರದ್ದಲ್ಲ. ಬದಲಿಗೆ ರೈತರ,

ಭಾರತ ಕೇವಲ ಎರಡ್ಮೂರು ಮಂದಿಗೆ ಸೇರಿದ್ದಲ್ಲ; ಅದು ಎಲ್ಲಾ ಭಾರತೀಯರದ್ದು – ರಾಹುಲ್ ಗಾಂಧಿ Read More »

ಕೊರೊನಾ ವೈರಸ್ ನ ಮೂಲ ಯಾವ್ದು ಗೊತ್ತಾ? ಹೊಸದೊಂದು ವಾದ ಮುಂದಿಟ್ಟ ವಿಜ್ಞಾನಿಗಳು

ಸಮಗ್ರ ನ್ಯೂಸ್: ಕೊರೊನಾ ವೈರಸ್‌ನ ಮೂಲ ಚೀನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ವುಹಾನ್‌ ಮಾರುಕಟ್ಟೆಯಿಂದ 2020ರ ಜನವರಿಯಲ್ಲಿ ಅನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇಲ್ಲಿ ಮಾರಾಟ ಮಾಡುತ್ತಿದ್ದ ರಕೂನ್‌ ಪ್ರಾಣಿಯ ಮಾಂಸದಲ್ಲಿ ಸಾರ್ಸ್‌-ಕೊವ್‌-2 ವೈರಸ್‌ ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ತಜ್ಞರ ತಂಡವು ತಿಳಿಸಿದೆ. ಕೊರೊನಾ ಸ್ಫೋಟದ ಹಿನ್ನೆಲೆಯಲ್ಲಿ 2020ರ ಜನವರಿಯಲ್ಲಿ ಚೀನ ಸರ್ಕಾರ ವುಹಾನ್‌ ಮಾರುಕಟ್ಟೆ ಬಂದ್‌ ಮಾಡಿದ ಕೂಡಲೇ ಸಂಶೋಧಕರು ಅಲ್ಲಿದ್ದ ಗೋಡೆಗಳು, ನೆಲ, ಪ್ರಾಣಿಗಳನ್ನು ಸಾಗಾಟ ಮಾಡುತ್ತಿದ್ದ ಲೋಹದ ಪಂಜರಗಳು, ಬಂಡಿಗಳು,

ಕೊರೊನಾ ವೈರಸ್ ನ ಮೂಲ ಯಾವ್ದು ಗೊತ್ತಾ? ಹೊಸದೊಂದು ವಾದ ಮುಂದಿಟ್ಟ ವಿಜ್ಞಾನಿಗಳು Read More »

ದಿಢೀರ್ ದೆಹಲಿಗೆ ಹಾರಿದ ಸುಳ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ.ಕೃಷ್ಣಪ್ಪ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಚುನಾವಣೆಗೆ ಭರ್ಜರಿ ತಯಾರಿಗಳು ನಡೆಯುತ್ತಿದೆ. ಹೈಕಮಾಂಡ್ ಪಕ್ಷವನ್ನು ಗೆಲ್ಲಿಸಲು ಜನ ಮ‌ನವೊಲಿಸಲು ಮುಂದಾದರೆ ಇನ್ನೊಂದು ಕಡೆ ಟಿಕೆಟ್ ಆಕಾಂಕ್ಷಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕೆಲವರ ಹೆಸರುಗಳು ಕೇಳಿ ಬಂದಿದ್ದು ಇನ್ನು ಕೆಲವರು ಸದ್ದಿಲ್ಲದೆ ಹೈಕಮಾಂಡ್ ಬಾಗಿಲಲ್ಲಿ ಸಾಲು ನಿಂತಿರುವುದು ಪರದೆಯ ಹಿಂದೆ ಕಾಣುವ ನೆರಳಿನಂತಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಹೆಸರು ಕೇಳಿ ಬಂದಿದ್ದು ಇಬ್ಬರಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲವಾಗಿದೆ. ಈ

ದಿಢೀರ್ ದೆಹಲಿಗೆ ಹಾರಿದ ಸುಳ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ.ಕೃಷ್ಣಪ್ಪ Read More »

5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷಾ ವೇಳಾಪಟ್ಟಿ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್…

ಸಮಗ್ರ ನ್ಯೂಸ್: ರಾಜ್ಯದಲ್ಲಿ 5 ಹಾಗೂ 8ನೇ ತರಗತಿ ಮೌಲ್ಯಂಕನ ಪರೀಕ್ಷಾ ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಇಲಾಖೆ ಇಂದು ಬಿಡುಗಡೆ ಮಾಡಿದೆ. ಮಾ.27ರಿಂದ ಪರೀಕ್ಷೆ ಆರಂಭವಾಗಲಿದ್ದು, ಏ.1ರವರೆಗೆ ಪರೀಕ್ಷೆ ನಡೆಯಲಿದೆ. 5 ಹಾಗೂ 8 ನೇ ತರಗತಿ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ:ಮಾ.27- ಸೋಮವಾರ- ಪ್ರಥಮ ಭಾಷೆ ಕನ್ನಡಮಾ.28- ಮಂಗಳವಾರ – ದ್ವಿತೀಯ ಭಾಷೆ ಇಂಗ್ಲೀಷ್ ಅಥವಾ ಕನ್ನಡಮಾ.29- ಬುಧವಾರ- ತೃತೀಯ ಭಾಷೆ ಹಿಂದಿ ಅಥವಾ ಪರಿಸರ ಅಧ್ಯಯನಮಾ.30- ಗುರುವಾರ – ಗಣಿತಮಾ.31- ಶುಕ್ರವಾರ- ವಿಜ್ಞಾನಏ.1- ಶನಿವಾರ –

5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷಾ ವೇಳಾಪಟ್ಟಿ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್… Read More »

Cheethah capter crashed|ಅರುಣಾಚಲದಲ್ಲಿ ಸೇನಾ ಹೆಲಿಕಾಪ್ಟರ್ ಚೀತಾ ಪತನ| ಪೈಲಟ್ ಗಳು ನಾಪತ್ತೆ

ಸಮಗ್ರ ನ್ಯೂಸ್: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿದ್ದು, ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಗುರುವಾರ ಅರುಣಾಚಲ ಪ್ರದೇಶದ ಮಂಡಲ ಹಿಲ್ಸ್ ಪ್ರದೇಶದ ಬಳಿ ಪತನಗೊಂಡಿದೆ. ಪೈಲಟ್‌ಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Cheethah capter crashed|ಅರುಣಾಚಲದಲ್ಲಿ ಸೇನಾ ಹೆಲಿಕಾಪ್ಟರ್ ಚೀತಾ ಪತನ| ಪೈಲಟ್ ಗಳು ನಾಪತ್ತೆ Read More »

ಪ್ರಧಾನಿ ನರೇಂದ್ರ ಮೋದಿಗೆ ನೊಬೆಲ್ ಶಾಂತಿ ಪ್ರಶಸ್ತಿ!? ಉಪ ಸಮಿತಿ ಮುಖ್ಯಸ್ಥರಿಂದ ಮಹತ್ವದ ಮಾಹಿತಿ

ಸಮಗ್ರ ನ್ಯೂಸ್: ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್‌ ಶಾಂತಿ ಪ್ರಶಸ್ತಿ ಈ ಬಾರಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ರಷ್ಯಾ – ಉಕ್ರೇನ್‌ ಯುದ್ದ ನಡೆಸುತ್ತಿರುವ ಮಧ್ಯೆ ಸಹಜವಾಗಿಯೇ ಈ ಪ್ರಶಸ್ತಿ ಯಾರಿಗೆ ಸಲ್ಲುತ್ತದೆ ಎಂಬ ನಿರೀಕ್ಷೆ ಸಹಜವೂ ಕೂಡಾ ಇದೆ. ಇದರ ನಡುವೆ ನೊಬೆಲ್‌ ಪ್ರಶಸ್ತಿ ಸಮಿತಿ ಉಪ ಮುಖ್ಯಸ್ಥ ಅಸಲ್ ತೋಜೆ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಈ ಬಾರಿಯ ನೊಬೆಲ್‌ ಶಾಂತಿ ಪ್ರಶಸ್ತಿಗೆ ದೊಡ್ಡ

ಪ್ರಧಾನಿ ನರೇಂದ್ರ ಮೋದಿಗೆ ನೊಬೆಲ್ ಶಾಂತಿ ಪ್ರಶಸ್ತಿ!? ಉಪ ಸಮಿತಿ ಮುಖ್ಯಸ್ಥರಿಂದ ಮಹತ್ವದ ಮಾಹಿತಿ Read More »

ತಾಯಿ ಗರ್ಭದಲ್ಲಿನ ಭ್ರೂಣಕ್ಕೆ ನಡೆಯಿತು ಹೃದಯದ ಶಸ್ತ್ರಚಿಕಿತ್ಸೆ| ದೇಶದಲ್ಲೇ ಮೊದಲ ಪ್ರಯೋಗ ಯಶಸ್ವಿ

ಸಮಗ್ರ ನ್ಯೂಸ್: ತಾಯಿಯ ಗರ್ಭದಲ್ಲಿರುವ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಯನ್ನು ದೆಹಲಿಯ ಏಮ್ಸ್ ಯಶಸ್ವಿಯಾಗಿ ನಡೆಸಿದೆ. ಸುಮಾರು 28 ವಾರಗಳ ಗರ್ಭಿಣಿ ಭ್ರೂಣದ ಹೃದಯದ ಮೇಲೆ ಕಾರ್ಯವಿಧಾನವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರೂಣದ ಹೃದಯದ ಗಾತ್ರ ಇನ್ನೂ ದ್ರಾಕ್ಷಿಯಂತೆ ತುಂಬಾ ಚಿಕ್ಕದಾಗಿತ್ತು. ಹೀಗಾಗಿ, ಅಲ್ಟ್ರಾಸೌಂಡ್ ಸಹಾಯದಿಂದ, ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಸೂಜಿಯನ್ನು ಸೇರಿಸುವ ಮೂಲಕ, ಕೇವಲ 90 ಸೆಕೆಂಡುಗಳಲ್ಲಿ, ಭ್ರೂಣದ ಹೃದಯವನ್ನು ಸಂಸ್ಕರಿಸಲಾಯಿತು ಮತ್ತು ಅದರ ಕವಾಟದ ಅಡಚಣೆಯನ್ನು ತೆರೆಯಲಾಯಿತು ಎಂದು ಏಮ್ಸ್‌ನ ಕಾರ್ಡಿಯಾಕ್ ಸೆಂಟರ್‌ನ ಹಿರಿಯ ವೈದ್ಯರು ಹೇಳಿದ್ದಾರೆ.

ತಾಯಿ ಗರ್ಭದಲ್ಲಿನ ಭ್ರೂಣಕ್ಕೆ ನಡೆಯಿತು ಹೃದಯದ ಶಸ್ತ್ರಚಿಕಿತ್ಸೆ| ದೇಶದಲ್ಲೇ ಮೊದಲ ಪ್ರಯೋಗ ಯಶಸ್ವಿ Read More »

ರೌಡಿ ಶೀಟರ್ ಮುಂದೆ ಕೈಮುಗಿದು ನಿಂತ ಪ್ರಧಾನಿ ಮೋದಿ| ಕಾಂಗ್ರೆಸ್ ನಿಂದ ತೀವ್ರ ವಾಗ್ದಾಳಿ

ಸಮಗ್ರ ನ್ಯೂಸ್: ನಿನ್ನೆ ಅಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಗೆ ಭೇಟಿ ನೀಡಿ ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ವೇ ಉದ್ಘಾಟಿಸಿ ಹೋಗಿದ್ದಾರೆ. ಆದರೆ, ಮೋದಿ ಓರ್ವ ರೌಡಿ ಶೀಟರ್​ಗೆ ಕೈಮುಗಿದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೋದಿ ಮಂಡ್ಯ ಹೆಲಿಪ್ಯಾಡ್‍ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಸ್ವಾಗತ ಕೋರಿದ್ದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ರೌಡಿ ಶೀಟರ್ ಫೈಟರ್ ರವಿ ಸಹ ಕಾಣಿಸಿಕೊಂಡಿದ್ದು, ಮೋದಿಗೆ ಕೈ ಮುಗಿದು ಸ್ವಾಗತ ಕೋರಿದ್ದಾರೆ. ಇದಕ್ಕೆ ಮೋದಿ ಸಹ ಫೈಟರ್ ರವಿ

ರೌಡಿ ಶೀಟರ್ ಮುಂದೆ ಕೈಮುಗಿದು ನಿಂತ ಪ್ರಧಾನಿ ಮೋದಿ| ಕಾಂಗ್ರೆಸ್ ನಿಂದ ತೀವ್ರ ವಾಗ್ದಾಳಿ Read More »