ದೇಶ-ವಿದೇಶ

ಇಂದು‌ ಯುಜಿಸಿ ನೆಟ್ ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: ಇಂದು(ಎ.13) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್(UGC NET) ಫಲಿತಾಂಶ ಪ್ರಕಟವಾಗಲಿದೆ ಎಂದು UGC ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ. 83 ವಿಷಯಗಳಿಗೆ ಐದು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. 8.34 ಲಕ್ಷ ಅಭ್ಯರ್ಥಿಗಳು ಈ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಅಭ್ಯರ್ಥಿಗಳು ರಾಷ್ಟ್ರೀಯ ಪರೀಕ್ಷಾ ಏಜನ್ಸಿ (NTA) ಅಧಿಕೃತ ವೆಬ್‌ಸೈಟ್ ugcntet.nta.nic.in ಅಥವಾ ntaresults.nic.in ಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದಾಗಿದೆ.

ಇಂದು‌ ಯುಜಿಸಿ ನೆಟ್ ಫಲಿತಾಂಶ ಪ್ರಕಟ Read More »

ಸೌದಿಯಲ್ಲಿ ಅಪಘಾತಕ್ಕೆ ಕಾಪುವಿನ ಯುವಕ ಬಲಿ

ಸಮಗ್ರ ನ್ಯೂಸ್: ಎರಡು ವಾರದ ಹಿಂದೆ ಸೌದಿ ಅರೇಬಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉಡುಪಿ ಜಿಲ್ಲೆಯ ಕಾಪು ನಿವಾಸಿಯೊಬ್ಬರು ಅಲ್ಲಿನ ಜುಬೈಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಾಪು ಸಮೀಪದ ಮಜೂರು ಕೊಂಬಗುಡ್ಡೆ ನಿವಾಸಿ ಮುಹಮ್ಮದ್ ರಿಯಾಝ್(27) ಮೃತಪಟ್ಟ ದುರ್ದೈವಿ. ಮಾರ್ಚ್ 25ರಂದು ಜುಬೈಲ್‌ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಜುಬೈಲ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರವಿವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು

ಸೌದಿಯಲ್ಲಿ ಅಪಘಾತಕ್ಕೆ ಕಾಪುವಿನ ಯುವಕ ಬಲಿ Read More »

ನೆಟ್ ಪ್ಲಿಕ್ಸ್ ಸೀರೀಸ್ ನಟಿ ಜಂಗ್ ಚೇ-ಯುಲ್ ಸಾವು| 26ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ ವೆಬ್ ಸೀರೀಸ್ ತಾರೆ

ಸಮಗ್ರ ನ್ಯೂಸ್: ದಕ್ಷಿಣ ಕೊರಿಯಾದ ಸಿರೀಸ್‌ಗಳಲ್ಲಿ ನಟಿಸಲು ಹೆಸರುವಾಸಿಯಾಗಿದ್ದ ನಟಿ ಜಂಗ್ ಚೇ-ಯುಲ್ ಅವರು 26 ನೇ ವಯಸ್ಸಿಗೇ ನಿಧನರಾದರು ಎಂದು ವರದಿಯಾಗಿದೆ. ಜಂಗ್ ಚೇ-ಯುಲ್ ಏಪ್ರಿಲ್ 11 ರಂದು ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಅಲ್ಲಿನ ಮಾದ್ಯಮಗಳು ವರದಿ ಮಾಡಿವೆ. ನಟಿ ಚೇ-ಯುಲ್ ಏಪ್ರಿಲ್ 11 ರಂದು ಅಗಲಿದ್ದು, ಅವರ ಅಂತ್ಯಕ್ರಿಯೆಯು ಅವರ ಕುಟುಂಬದವರ ಆಶಯಕ್ಕೆ ಅನುಗುಣವಾಗಿ ಖಾಸಗಿಯಾಗಿ ನಡೆಯಲಿದೆ. ತನ್ನ ನಟನೆಯಲ್ಲಿ ಪ್ರಾಮಾಣಿಕವಾಗಿದ್ದ ಮೃತ ಚೇ-ಯುಲ್ ಗೆ ಅಲ್ಲಿನ ಮಾಧ್ಯಮಗಳು ಶ್ರದ್ಧಾಂಜಲಿ ಸಲ್ಲಿಸಿವೆ.

ನೆಟ್ ಪ್ಲಿಕ್ಸ್ ಸೀರೀಸ್ ನಟಿ ಜಂಗ್ ಚೇ-ಯುಲ್ ಸಾವು| 26ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದ ವೆಬ್ ಸೀರೀಸ್ ತಾರೆ Read More »

ಸೇನೆಯಿಂದ ಏಕಾಏಕಿ ಏರ್ ಸ್ಟ್ರೈಕ್| ಮಹಿಳೆಯರು, ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಬಲಿ

ಸಮಗ್ರ ನ್ಯೂಸ್: ಮಯನ್ಮಾರ್ ಸೇನಾ ಪಡೆ ಹಠಾತ್ ಏರ್ ಸ್ಟ್ರೈಕ್ ನಡೆಸಿದ ಪರಿಣಾಮ ಮಹಿಳೆಯರು, ಮಕ್ಕಳು ಸೇರಿದಂತೆ 100 ಜನರು ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮಯನ್ಮಾರ್​ ಸೇನಾ ಪಡೆ ಮುಖ್ಯಸ್ಥ ಜನರಲ್ ಮಿನ್ ಆಂಗ್ ಹ್ಲೈಂಗ್ ತಿಳಿಸಿದ್ದಾರೆ. ಸಾಗಯಿಂಗ್ ಪ್ರದೇಶದ ಕಾನ್ಬಾಲು ನಗರದ ಪಜಿಗಿ ಗ್ರಾಮದ ಹೊರಗೆ ಈ ದಾಳಿ ನಡೆದಿದೆ. ಕಾನ್ಬಾಳು ನಗರದ ಪಜಿಗಿ ಗ್ರಾಮದ ಹೊರಗೆ ಮಯನ್ಮಾರ್​ ವಿರೋಧಿ ಬಣ ಪ್ರತ್ಯೇಕ ಕಚೇರಿ ತೆರೆಯಲು ಪ್ರಾರಂಭಿಸಿತ್ತು. ಇದಕ್ಕಾಗಿ ನಿನ್ನೆ ಅದ್ಧೂರಿ ಸಮಾರಂಭ ಏರ್ಪಡಿಸಿದ್ದರಿಂದ

ಸೇನೆಯಿಂದ ಏಕಾಏಕಿ ಏರ್ ಸ್ಟ್ರೈಕ್| ಮಹಿಳೆಯರು, ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಬಲಿ Read More »

ಕಗ್ಗಂಟಾದ ಬಿಜೆಪಿ ಟಿಕೆಟ್ ಹಂಚಿಕೆ| ನಾಳೆ ಅಥವಾ ನಾಡಿದ್ದು ಪಟ್ಟಿ ರಿಲೀಸ್ ಗೆ ಹೈಕಮಾಂಡ್ ಇಂಗಿತ

ಸಮಗ್ರ ನ್ಯೂಸ್: ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಹಂಚಿಕರ ಬಿಕ್ಕಟ್ಟು ಮುಂದುವರಿದಿದ್ದು, ಈ ನಡುವೆ ಬಿಜೆಪಿ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ನಾಳೆ, ನಾಡಿದ್ದು ಬಿಡುಗಡೆ ಮಾಡಲಾಗುವುದು ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು. ಕೆಲ ಕ್ಷೇತ್ರಗಳ ಬಗ್ಗೆ ಇನ್ನೂ ಚರ್ಚೆ ಅಗತ್ಯವಿದೆ. ನಾಳೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಹೀಗಾಗಿ ನಾಳೆ ಅಥವಾ ನಾಡಿದ್ದು ಬಿಜೆಪಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬಿಜೆಪಿ ಸಭೆ ಮೇಲೆ ಸಭೆ ನಡೆಸುತ್ತಿದ್ದು, ಈ ಬಾರಿಯ

ಕಗ್ಗಂಟಾದ ಬಿಜೆಪಿ ಟಿಕೆಟ್ ಹಂಚಿಕೆ| ನಾಳೆ ಅಥವಾ ನಾಡಿದ್ದು ಪಟ್ಟಿ ರಿಲೀಸ್ ಗೆ ಹೈಕಮಾಂಡ್ ಇಂಗಿತ Read More »

ಟಿಬೆಟ್ ಧರ್ಮಗುರು ದಲೈಲಾಮಾ ಅವರ ವಿಡಿಯೋ ವೈರಲ್| ತನ್ನ ನಾಲಗೆಯನ್ನು ನೆಕ್ಕುವಂತೆ ಬಾಲಕನಿಗೆ ಸೂಚಿಸಿದ ಗುರು

ಸಮಗ್ರ ನ್ಯೂಸ್: ಟಿಬೆಟಿಯನ್ ನಾಯಕ ದಲೈ ಲಾಮಾ ಅವರಿಗೆ ಸಂಬಂಧಪಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಪ್ರಾಪ್ತ ಬಾಲಕನೊಬ್ಬನಿಗೆ ತಮ್ಮ ನಾಲಿಗೆಗೆ ಮುತ್ತಿಟ್ಟು ನೆಕ್ಕುವಂತೆ ಸೂಚಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವೀಡಿಯೋದಲ್ಲಿ ಬಾಲಕನೊಬ್ಬ ದಲೈಲಾಮಾ ಅವರಿಗೆ ಗೌರವ ಸಲ್ಲಿಸಲು ತಲೆ ಬಾಗಿದ್ದಾನೆ. ನಂತರ ದಲೈಲಾಮಾ ಬಾಲಕನಿಗೆ ತನ್ನ ಬಾಯಿಯನ್ನು ತೋರಿಸಿ, ನಾಲಿಗೆಯನ್ನು ಹೊರ ಚಾಚಿದ್ದಾರೆ. ಈ ಸಂದರ್ಭದಲ್ಲಿ ಅವರು ನನ್ನ ನಾಲಿಗೆಯನ್ನು ನೆಕ್ಕುತ್ತೀಯಾ? ಎಂದು ಆತನ ಬಳಿ ಕೇಳಿರುವುದು ಕಂಡು ಬಂದಿದೆ. ಈ ವೀಡಿಯೋ ಸಾಮಾಜಿಕ

ಟಿಬೆಟ್ ಧರ್ಮಗುರು ದಲೈಲಾಮಾ ಅವರ ವಿಡಿಯೋ ವೈರಲ್| ತನ್ನ ನಾಲಗೆಯನ್ನು ನೆಕ್ಕುವಂತೆ ಬಾಲಕನಿಗೆ ಸೂಚಿಸಿದ ಗುರು Read More »

ನಂದಿನಿ – ಅಮುಲ್ ಫೈಟ್ ಚುನಾವಣಾ ದಾಳವೇ? ಕ್ಷೀರ ವಿವಾದದ ನಡುವಿನ ವಾಸ್ತವವೇನು? ಅಮುಲ್ ಗೆ ಕನ್ನಡಿಗರಿಂದ ಯಾಕಿಷ್ಟು ವಿರೋಧ? ಇಲ್ಲಿದೆ ಫುಲ್ ಡೀಟೈಲ್ಸ್…

ಸಮಗ್ರ ನ್ಯೂಸ್: ನಂದಿನಿ-ಅಮುಲ್ ವಿಚಾರ ಇದೀಗ ಪ್ರತಿಪಕ್ಷ ಹಾಗೂ ಆಡಳಿತಾರೂಢ ಬಿಜೆಪಿ ಮಧ್ಯೆ ತೀವ್ರ ‘ಹಾಲಾಹಲ’ಕ್ಕೆ ಕಾರಣವಾಗಿದೆ‌. ಆರೋಪ- ಪ್ರತ್ಯಾರೋಪಗಳ ಮಧ್ಯೆ ಹಾಲಿನ ವಾಸ್ತವತೆ ನೋಡೋಣ. ರಾಜ್ಯದಲ್ಲಿ ಅಮುಲ್ ಹಾಲು ಮಾರಾಟ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಅದರಲ್ಲೂ ಮುಖ್ಯವಾಗಿ ರಾಜಕೀಯವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಚುನಾವಣೆಯ ಹೊಸ್ತಿಲಲ್ಲಿ ಈ ಜಟಾಪಟಿ ಇನ್ನೂ ತಾರಕಕ್ಕೇರಿದೆ. ಅಷ್ಟಕ್ಕೂ ರಾಜ್ಯದ ಹೆಮ್ಮೆಯ ನಂದಿನಿ ಬ್ರಾಂಡ್ ಬುನಾದಿ, ಅಮುಲ್ ಮಾರುಕಟ್ಟೆ, ಸಹಕಾರ ತತ್ವ ಏನಿದೆ ಎಂಬ ಸಮಗ್ರ ವರದಿ ಇಲ್ಲಿದೆ. ಕರ್ನಾಟಕ

ನಂದಿನಿ – ಅಮುಲ್ ಫೈಟ್ ಚುನಾವಣಾ ದಾಳವೇ? ಕ್ಷೀರ ವಿವಾದದ ನಡುವಿನ ವಾಸ್ತವವೇನು? ಅಮುಲ್ ಗೆ ಕನ್ನಡಿಗರಿಂದ ಯಾಕಿಷ್ಟು ವಿರೋಧ? ಇಲ್ಲಿದೆ ಫುಲ್ ಡೀಟೈಲ್ಸ್… Read More »

ಮಹಾರಾಷ್ಟ್ರ: ಭೀಕರ ಗಾಳಿ ಮಳೆ| ಮರ ಬಿದ್ದು‌7 ಮಂದಿ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಅಕೋಲಾ ಜಿಲ್ಲೆಯ ಬಾಲಾಪುರ ತಾಲೂಕಿನ ಪರಾಸ್ ಪ್ರದೇಶದಲ್ಲಿ ಬೃಹತ್ ಮರ ಬಿದ್ದು 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಿಲ್ಲೆಯ ಬಾಲಾಪುರ ತಾಲೂಕಿನ ಪರಾಸ್ ಪ್ರದೇಶದಲ್ಲಿರುವ ಬಾಬೂಜಿ ಮಹಾರಾಜ್ ದೇವಾಲಯದ ಸಂಕೀರ್ಣದ ತಗಡಿನ ಶೆಡ್ ಮೇಲೆ ಬೇವಿನ ಮರ ಬಿದ್ದಿದೆ. ಇದು ಶೆಡ್ ಕುಸಿತಕ್ಕೆ ಕಾರಣವಾಯಿತು. ಇದರ ನಂತರ, ಶೆಡ್ ನಲ್ಲಿದ್ದ 7 ಜನರು ಅಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 33 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಮಳೆ ಮತ್ತು ಚಂಡಮಾರುತದ

ಮಹಾರಾಷ್ಟ್ರ: ಭೀಕರ ಗಾಳಿ ಮಳೆ| ಮರ ಬಿದ್ದು‌7 ಮಂದಿ ಸ್ಥಳದಲ್ಲೇ ಸಾವು Read More »

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎ.11 ಕೊನೆದಿನ| ಈ ದಾಖಲೆಗಳೊಂದಿಗೆ ಇಂದೇ ಬಿಎಲ್ಒ ಗಳನ್ನು ‌ಸಂಪರ್ಕಿಸಿ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎ.11 ಕೊನೆಯ ದಿನವಾಗಿದೆ. 2004ರಲ್ಲಿ ಜನಿಸಿ, 2023ರ ಎ.1ರಂದು 18 ವರ್ಷ ತುಂಬಿದವರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿಯ ಪ್ರಕಟನೆ ತಿಳಿಸಿದೆ. ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 46,967 ಹಿರಿಯ ನಾಗರಿಕರು ಹಾಗೂ

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎ.11 ಕೊನೆದಿನ| ಈ ದಾಖಲೆಗಳೊಂದಿಗೆ ಇಂದೇ ಬಿಎಲ್ಒ ಗಳನ್ನು ‌ಸಂಪರ್ಕಿಸಿ Read More »

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು| 16 ಶಿಕ್ಷಕರು ಸಸ್ಪೆಂಡ್

ಸಮಗ್ರ ನ್ಯೂಸ್: ಕಲಬುರಗಿ, ಕೊಪ್ಪಳ ಜಿಲ್ಲೆಯ ಮೂರು ಪರೀಕ್ಷಾ ಕೇಂದ್ರಗಳ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ 16 ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಏಪ್ರಿಲ್ 3 ರಂದು ಎಸ್.ಎಸ್.ಎಲ್.ಸಿ. ಗಣಿತ ವಿಷಯದ ಪರೀಕ್ಷೆ ನಡೆದಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಇಶಾ ಪಂತ್ ಬಂದೋಬಸ್ತ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳು ಮೈಕ್ರೋ ಜೆರಾಕ್ಸ್ ಪುಸ್ತಕ ಮತ್ತು ಟಿಪ್ಪಣಿ ಚೀಟಿಗಳಿಂದ ಸಾಮೂಹಿಕ ನಕಲು ಮಾಡಿ ಅವುಗಳನ್ನು ಎಸೆದಿರುವುದು ಕಂಡುಬಂದಿತ್ತು. ಪರೀಕ್ಷಾ ಕೇಂದ್ರದಲ್ಲಿ

ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು| 16 ಶಿಕ್ಷಕರು ಸಸ್ಪೆಂಡ್ Read More »