ದೇಶ-ವಿದೇಶ

ಸೌದಿ: ಭೀಕರ ಅಪಘಾತಕ್ಕೆ ವಿಟ್ಲದ ಯುವಕ ಬಲಿ

ಸಮಗ್ರ ನ್ಯೂಸ್: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ವಿಟ್ಲದ ಯುವಕ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮೃತಪಟ್ಟ ಯುವಕನನ್ನು ವಿಟ್ಲದ ಉಕ್ಕುಡ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಎಂಬವರ ಪುತ್ರ ಹಬೀಬ್ ಉಕ್ಕುಡ ಎಂದು ಗುರುತಿಸಲಾಗಿದೆ. ಹಬೀಬ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಪಲ್ಟಿಯಾಗಿದ್ದು, ಹಬೀಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಬೀಬ್ ಉದ್ಯೋಗ ನಿಮಿತ್ತ ಮೂರು ತಿಂಗಳ ಹಿಂದೆಯಷ್ಟೇ ಸೌದಿ ಅರೇಬಿಯಾಗೆ ತೆರಳಿದ್ದರು.

ಸೌದಿ: ಭೀಕರ ಅಪಘಾತಕ್ಕೆ ವಿಟ್ಲದ ಯುವಕ ಬಲಿ Read More »

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಬಿಸಿಯ ನಡುವೆ ವಿದ್ಯಾರ್ಥಿಗಳ ಭವ್ಯ ಭವಿಷ್ಯದ ಮಹತ್ತರ ಘಟ್ಟ ಪಿಯುಸಿ ಫಲಿತಾಂಶ ಇವತ್ತು ಪ್ರಕಟ ಆಗುತ್ತಿದೆ. 11 ಗಂಟೆಗೆ ವೆಬ್​ಸೈಟ್​ನ ಪರದೆ ಮೇಲೆ ಭವಿಷ್ಯ ಕಾಣಲಿದೆ. ಪರೀಕ್ಷೆ ಬರೆದ 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಫಲಿತಾಂಶ ಬೆಳಗ್ಗೆ 11 ಗಂಟೆಗೆ ವೆಬ್​ಸೈಟ್​ನಲ್ಲಿ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಲಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ. ಬೆಳಗ್ಗೆ 10 ಗಂಟೆಗೆ ಕರ್ನಾಟಕ‌ ಶಾಲಾ ಪರೀಕ್ಷೆ

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ಇಲ್ಲಿದೆ ಫುಲ್ ಡೀಟೈಲ್ಸ್ Read More »

ಜಮ್ಮು: ಸೇನಾವಾಹನಕ್ಕೆ ಬೆಂಕಿ| ಹಲವು ಯೋಧರು ಹುತಾತ್ಮರಾಗಿರುವ ಶಂಕೆ

ಸಮಗ್ರ ನ್ಯೂಸ್: ಪೂಂಚ್-ಜಮ್ಮು ಹೆದ್ದಾರಿಯಲ್ಲಿ ಘೋರ ದುರಂತ ಸಂಭವಿಸಿದೆ. ಸೇನಾ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹಲವು ಯೋಧರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೂರು-ನಾಲ್ಕು ಸೈನಿಕರು ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ ಎಂದು ಸೇನಾ ಮೂಲಗಳು ಎಬಿಪಿಗೆ ತಿಳಿಸಿವೆ. ಸ್ಥಳಕ್ಕೆ ಸೇನಾ ಪಡೆ ಧಾವಿಸಿದ್ದು ಬೆಂಕಿ ನಂದಿಸಿದೆ. ಪ್ರಕರಣ ದಾಖಲಿಸಿಕೊಂಡು ಇದೀಗ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸಿಡಿಲಿನ ಹೊಡೆತಕ್ಕೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ

ಜಮ್ಮು: ಸೇನಾವಾಹನಕ್ಕೆ ಬೆಂಕಿ| ಹಲವು ಯೋಧರು ಹುತಾತ್ಮರಾಗಿರುವ ಶಂಕೆ Read More »

Karnataka PUC result| ನಾಳೆಯೇ(ಎ. 21) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ಈ ಜಾಲತಾಣಗಳಲ್ಲಿ ಸಿಗಲಿದೆ ರಿಸಲ್ಟ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯಗೊಂಡಿದ್ದು, ಇದೀಗ ಉತ್ತರ ಪತ್ರಿಕೆ ಮೌಲ್ಯಮಾಪನ ಕೂಡ ಮುಕ್ತಾಯಗೊಂಡಿದೆ. ಹೀಗಾಗಿ ಏಪ್ರಿಲ್ 21ರ ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದ್ದು, ಮಾರ್ಚ್ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 09-03-2023ರಿಂದ 29-03-2023ರವರೆಗೆ ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ

Karnataka PUC result| ನಾಳೆಯೇ(ಎ. 21) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ| ಈ ಜಾಲತಾಣಗಳಲ್ಲಿ ಸಿಗಲಿದೆ ರಿಸಲ್ಟ್ Read More »

ಚೀನಾವನ್ನೇ ಹಿಂದಿಕ್ಕಿದ ಭಾರತ| ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಇಂಡಿಯಾ ನಂ.1

ಸಮಗ್ರ ನ್ಯೂಸ್: ವಿಶ್ವ ಜನಸಂಖ್ಯಾ ರಿವ್ಯೂ ಪ್ರಕಾರ ಭಾರತ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆನಿಸಿಕೊಂಡಿದ್ದ ಚೀನಾವನ್ನು ಈಗಾಗ್ಲೇ ಹಿಂದಿಕ್ಕಿದೆ. ಈ ಗಣತಿಯ ಪ್ರಕಾರ 2022ರ ಅಂತ್ಯದ ವೇಳೆಗೆ ಭಾರತದ ಜನಸಂಖ್ಯೆ 140 ಕೋಟಿ ದಾಟಿತ್ತು. ಇದು ಚೀನಾದ ಜನಸಂಖ್ಯೆಗಿಂತ 50 ಲಕ್ಷದಷ್ಟು ಹೆಚ್ಚಾಗಿದೆ. ಪ್ರಸ್ತುತ ದೇಶದ ಜನಸಂಖ್ಯೆ 1.412 ಬಿಲಿಯನ್‌ ಎಂದು ಚೀನಾ ಹೇಳಿಕೊಂಡಿದೆ. 1961ರ ಬಳಿಕ ಅಂದರೆ ಚೀನಾ ಸ್ವಾತಂತ್ರ್ಯ ಪಡೆದ ನಂತರ ಇದೇ ಮೊದಲ ಬಾರಿಗೆ ಅಲ್ಲಿನ ಜನಸಂಖ್ಯೆಯಲ್ಲಿ ಕುಸಿತ ದಾಖಲಾಗಿದೆ. ತಜ್ಞರ ಪ್ರಕಾರ

ಚೀನಾವನ್ನೇ ಹಿಂದಿಕ್ಕಿದ ಭಾರತ| ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಇಂಡಿಯಾ ನಂ.1 Read More »

ಎ.24 ಅಥವಾ 25ಕ್ಕೆ ದ್ವಿತೀಯ ಪಿಯುಸಿ ರಿಸಲ್ಟ್

ಸಮಗ್ರ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಅಂಕಗಳ ಕೂಡಿಕೆ ಕಾರ್ಯ ಪೂರ್ಣಗೊಂಡಿದ್ದು ಏಪ್ರಿಲ್‌ 24 ಅಥವಾ 25ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಮೂಲಗಳು ತಿಳಿಸಿವೆ. ರಾಜ್ಯದ 1,109 ಕೇಂದ್ರಗಳಲ್ಲಿ ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆಗಳು ನಡೆದಿದ್ದವು. ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೇ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಂಡು ಮೌಲ್ಯಮಾಪನ ಕಾರ್ಯವನ್ನು ಮಂಡಳಿ ಸುಸೂತ್ರವಾಗಿಪೂರ್ಣಗೊಳಿಸಿದೆ. ಪ್ರತಿ ವಿಷಯದಲ್ಲಿ ಬಹು ಆಯ್ಕೆ ಸೇರಿದಂತೆ ಒಂದು ಅಂಕದ

ಎ.24 ಅಥವಾ 25ಕ್ಕೆ ದ್ವಿತೀಯ ಪಿಯುಸಿ ರಿಸಲ್ಟ್ Read More »

ವೇಶ್ಯಾವಾಟಿಕೆ ದಂಧೆ| ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ಕಿರುತೆರೆ ನಟಿ

ಸಮಗ್ರ ನ್ಯೂಸ್: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಕಾಸ್ಟಿಂಗ್ ನಿರ್ದೇಶಕಿ ಮತ್ತು ಕಿರುತೆರೆಯ ಖ್ಯಾತ ನಟಿ ಆರತಿ ಮಿತ್ತಲ್ ಅವರನ್ನು ಮುಂಬೈ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. ವೇಶ್ಯಾವಾಟಿಕೆ ದಂಧೆಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಆರತಿ ಸೇರಿದಂತೆ 2 ಮಾಡೆಲ್ಸ್ ರೆಡ್ ಹ್ಯಾಂಡ್​ ಆಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮಾಡೆಲ್​​ಗಳನ್ನು ಬಳಕೆ ಮಾಡಿಕೊಂಡು ಈ ದಂಧೆಯನ್ನು ನಡೆಸುತ್ತಿದ್ದರು ಎಂಬುದನ್ನು ಪೊಲೀಸರು ಹೇಳಿದ್ದಾರೆ. ಆರತಿ ಬಂಧನ ಬಾಲಿವುಡ್ ಬಣ್ಣದ ಲೋಕದಲ್ಲಿ ಸಂಚಲನ ಮೂಡಿಸಿದೆ.

ವೇಶ್ಯಾವಾಟಿಕೆ ದಂಧೆ| ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ಕಿರುತೆರೆ ನಟಿ Read More »

ಅಮುಲ್ ಬಳಿಕ ಮೆಣಸಿನಕಾಯಿ ಮಸಾಲೆ ಅರೆಯುತ್ತಿರುವ ಗುಜರಾತ್| ಬ್ಯಾಡಗಿ ಮೆಣಸಿನ ಮಾರುಕಟ್ಟೆ ಆವರಿಸಿಕೊಳ್ಳುತ್ತಿದೆ ‘ಲಾಲ್ ಮಿರ್ಚಿ’

ಸಮಗ್ರ ನ್ಯೂಸ್: ಅಮುಲ್ ಹಾಲಿನ ವಿವಾದದ ಬಳಿಕ ಈಗ ಗುಜರಾತ್ ಮೆಣಸು ಮಾರುಕಟ್ಟೆಯಲ್ಲಿ ಗದ್ದಲ ಸೃಷ್ಟಿಸಿದೆ. ಬೆಂಗಳೂರು ಮಾರುಕಟ್ಟೆಗೆ ಅಮುಲ್ ಪ್ರವೇಶದ ಪ್ರಸ್ತಾವನೆ ಸಿಕ್ಕಾಪಟ್ಟೆ ರಾಜಕೀಯ ಗದ್ದಲ ಸೃಷ್ಟಿಸಿತ್ತು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚುತ್ತಿರುವ ಸಮಯದಲ್ಲಿ ಗುಜರಾತ್ ಮೂಲದ ಅಮುಲ್ ಸಂಸ್ಥೆ ಬೆಂಗಳೂರು ಮಾರುಕಟ್ಟೆಯಲ್ಲಿ ಆನ್‌ಲೈನ್‌ ಮೂಲಕ ಹಾಲು ಮತ್ತು ಮೊಸರು ವಿತರಣೆಗೆ ಸಜ್ಜಾಗಿರೋದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ‘ಬಾಯ್ಕಾಟ್‌ ಅಮುಲ್‌, ಸೇವ್‌ ನಂದಿನಿ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಅಭಿಯಾನ ಪ್ರಾರಂಭಿಸಿದ್ದರು. ಈಗ

ಅಮುಲ್ ಬಳಿಕ ಮೆಣಸಿನಕಾಯಿ ಮಸಾಲೆ ಅರೆಯುತ್ತಿರುವ ಗುಜರಾತ್| ಬ್ಯಾಡಗಿ ಮೆಣಸಿನ ಮಾರುಕಟ್ಟೆ ಆವರಿಸಿಕೊಳ್ಳುತ್ತಿದೆ ‘ಲಾಲ್ ಮಿರ್ಚಿ’ Read More »

ಭಾರತದಲ್ಲಿ ವಾಟ್ಸಪ್ ಸರ್ವರ್ ಡೌನ್; ಪರದಾಡುತ್ತಿರುವ ಬಳಕೆದಾರರು

ಸಮಗ್ರ ನ್ಯೂಸ್: ಭಾರತದಲ್ಲಿ ಕೆಲವು ಬಳಕೆದಾರರಿಗೆ WhatsApp ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ. Downdetector ಪ್ರಕಾರ, ಅಪ್ಲಿಕೇಶನ್ ಕಳೆದ ರಾತ್ರಿಯಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂದು ಕೂಡ ಮುಂದುವರೆದಿದೆ ಎಂದು ತಿಳಿದುಬಂದಿದೆ. ಈ ಸಮಸ್ಯೆ ಎದುರಿಸಿದ ಬಗ್ಗೆ ಬಳಕೆದಾರರು Twitter ನಲ್ಲಿ ಸ್ಥಗಿತದ ಬಗ್ಗೆ ದೂರು ನೀಡಿದ್ದಾರೆ. ಈ ಮೂಲಕ ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಸ್ವೀಕರಿಸಿದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಆದಾಗ್ಯೂ, ಆಂಡ್ರಾಯ್ಡ್ ಬೀಟಾ ಬಳಕೆದಾರರಲ್ಲಿ ಈ ಸಮಸ್ಯೆಯು ಹೆಚ್ಚು ಪ್ರಚಲಿತವಾಗಿದೆ.

ಭಾರತದಲ್ಲಿ ವಾಟ್ಸಪ್ ಸರ್ವರ್ ಡೌನ್; ಪರದಾಡುತ್ತಿರುವ ಬಳಕೆದಾರರು Read More »

ಮುಂಬೈ: ಬಿಸಿಲ‌ ಝಳಕ್ಕೆ 11 ಮಂದಿ ಸಾವು| ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಡೆದ ದುರ್ಘಟನೆ

ಸಮಗ್ರ ನ್ಯೂಸ್: ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ 11 ಮಂದಿ ಬಿಸಿಲಿನ ತಾಪದಿಂದ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಬಿಸಿಲಿನ ಝಳದಿಂದ ಹಲವರು ಅಸ್ವಸ್ಥರಾಗಿದ್ದು, ಸುಮಾರು 50 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಸ್ಥಾಪಿಸಿದ ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಗೃಹ ಸಚಿವ ಅಮಿತ್ ಶಾ ಪ್ರದಾನ ಮಾಡಿದರು. ಬೆಳಗ್ಗೆ 11.30ಕ್ಕೆ ಆರಂಭವಾದ ಪ್ರಶಸ್ತಿ ಪ್ರದಾನ ಸಮಾರಂಭ ಮಧ್ಯಾಹ್ನ 1ರವರೆಗೆ ನಡೆದಿತ್ತು. ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಇದ್ದರೂ ನೆರಳಿಗಾಗಿ ಶಾಮಿಯಾನ

ಮುಂಬೈ: ಬಿಸಿಲ‌ ಝಳಕ್ಕೆ 11 ಮಂದಿ ಸಾವು| ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಡೆದ ದುರ್ಘಟನೆ Read More »