ದೇಶ-ವಿದೇಶ

ನರ್ಸ್ ನಿಮಿಷ ಪ್ರಿಯಾ ಗಲ್ಲು ರದ್ದುಗೊಳಿಸಿದ‌ ಯೆಮನ್| ಅಧಿಕೃತ ಸುದ್ದಿ‌ ಹಂಚಿಕೊಂಡ ಕಾಂತಪುರಂ ಮುಸ್ಲಿಯಾರ್

ಸಮಗ್ರ ನ್ಯೂಸ್: ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಈಗ ಅಧಿಕೃತವಾಗಿ ರದ್ದುಪಡಿಸಲಾಗಿದೆ. ಈ ಶುಭ ಸುದ್ದಿಯನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ಕಚೇರಿ ಹಂಚಿಕೊಂಡಿದೆ. “ಈ ಹಿಂದೆ ಅಮಾನತುಗೊಂಡಿದ್ದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಈಗ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ” ಎಂದು ಗ್ರ್ಯಾಂಡ್ ಮುಫ್ತಿ ಕಚೇರಿಯ ಹೇಳಿಕೆ ತಿಳಿಸಿದೆ. ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲೈಯರ್ ಮಧ್ಯಪ್ರವೇಶಿಸಿ ಮರುಪರಿಶೀಲಿಸುವಂತೆ ಯೆಮೆನ್ ಅಧಿಕಾರಿಗಳನ್ನು ವಿನಂತಿಸಿದ […]

ನರ್ಸ್ ನಿಮಿಷ ಪ್ರಿಯಾ ಗಲ್ಲು ರದ್ದುಗೊಳಿಸಿದ‌ ಯೆಮನ್| ಅಧಿಕೃತ ಸುದ್ದಿ‌ ಹಂಚಿಕೊಂಡ ಕಾಂತಪುರಂ ಮುಸ್ಲಿಯಾರ್ Read More »

ಇಂದು ಕಾರ್ಗಿಲ್ ವಿಜಯ ದಿವಸ್| ತ್ಯಾಗ ಬಲಿದಾನದ ಒಂದು ಮೆಲುಕು

ಸಮಗ್ರ ಸ್ಪೆಷಲ್: ದೇಶದ ಗಡಿ ಭಾಗದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ನಮ್ಮಗಾಗಿ ಬಿಸಿಲು, ಚಳಿ ಹಾಗೂ ಮಳೆ ಎನ್ನದೇ ಸೈನಿಕರು ಹಗಲು-ರಾತ್ರಿ ಶ್ರಮಿಸುತ್ತಿರುತ್ತಾರೆ. ಇಂದು ಕಾರ್ಗಿಲ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಒಂದು ಕಟುವಾದ ಅಧ್ಯಾಯವಾಗಿ ನಿಂತಿದೆ. ರಾಷ್ಟ್ರದ ಸಾಮೂಹಿಕ ಸ್ಮರಣೆಯಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ಆಪರೇಷನ್ ವಿಜಯ್ ಅನ್ನು ಮುನ್ನಡೆಸಿದ ಕಾರ್ಗಿಲ್ ಯುದ್ಧ ವೀರರ ಶೌರ್ಯ ಮತ್ತು ಶೌರ್ಯಕ್ಕೆ ಇದು ಗೌರವ ಸಲ್ಲಿಸುತ್ತದೆ. ಭಾರೀ ವೆಚ್ಚದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ವಿಜಯದಲ್ಲಿ ಕೊನೆಗೊಂಡಿತು. ಪ್ರತಿ ವರ್ಷ, ಜುಲೈ

ಇಂದು ಕಾರ್ಗಿಲ್ ವಿಜಯ ದಿವಸ್| ತ್ಯಾಗ ಬಲಿದಾನದ ಒಂದು ಮೆಲುಕು Read More »

ಭಾರೀ ಮಳೆ ಹಿನ್ನೆಲೆ| ಕೊಡಗು ಹಾಗೂ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ಜು.26ರ ಶನಿವಾರ ರಜೆ ಘೋಷಿಸಿ ಬೆಳ್ತಂಗಡಿ ತಹಶೀಲ್ದಾರ್‌ ಆದೇಶಿಸಿದ್ದಾರೆ. ಕೊಡಗಿನಲ್ಲೂ ಮಳೆಯ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜು.26ರ‌ ಇಂದು ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ‌ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ| ಕೊಡಗು ಹಾಗೂ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ Read More »

ನರ್ಸ್ ನಿಮಿಷ ಪ್ರಿಯಾ ಗಲ್ಲು ಶಿಕ್ಷೆ‌ ರದ್ದು| ಶೀಘ್ರದಲ್ಲೇ ಭಾರತಕ್ಕೆ ವಾಪಾಸ್

ಸಮಗ್ರ ನ್ಯೂಸ್: ಯೆಮೆನ್ ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾಗೆ ಬಿಗ್ ರಿಲೀಫ್ ಸಿಕ್ಕಿದ್ದು, ಯೆಮೆನ್ ಗಲ್ಲು ಶಿಕ್ಷೆ ರದ್ದುಗೊಳಿಸಿದೆ.ಹಾಗೂ ಶೀಘ್ರವೇ ಅವರನ್ನ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿದೆ. ಯೆಮೆನ್ನಲ್ಲಿ ಜೈಲಿನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಕ್ರಿಶ್ಚಿಯನ್ ಧರ್ಮಪ್ರಚಾರಕ ಕೆಎ ಪಾಲ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಕೆಎ ಪಾಲ್ ಪ್ರಧಾನಿ ಮೋದಿಗೂ ಧನ್ಯವಾದ ಹೇಳಿದ್ದಾರೆ. ಯೆಮೆನ್ ರಾಜಧಾನಿ ಸನಾದಲ್ಲಿ ಜೈಲಿನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ

ನರ್ಸ್ ನಿಮಿಷ ಪ್ರಿಯಾ ಗಲ್ಲು ಶಿಕ್ಷೆ‌ ರದ್ದು| ಶೀಘ್ರದಲ್ಲೇ ಭಾರತಕ್ಕೆ ವಾಪಾಸ್ Read More »

ಬ್ಲಡ್ ಮನಿ ನಿರಾಕರಿಸಿದ ಮೃತನ ಸಹೋದರ| ನಿಮಿಷಾ ಪ್ರಿಯಾ ಗಲ್ಲು ಬಹುತೇಕ ಖಚಿತ

ಸಮಗ್ರ ನ್ಯೂಸ್: ಭಾರತದ ಕೇರಳದ ನರ್ಸ್ ನಿಮಿಷಾ ಪ್ರಿಯಾ ಯೆಮೆನ್​​ನಲ್ಲಿ ತನ್ನ ಬ್ಯುಸಿನೆಸ್ ಪಾರ್ಟನರ್ ಕೊಲೆಯ ಅಪರಾಧದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ, ಆ ಪ್ರಕರಣದಲ್ಲಿ ಜುಲೈ 16 ಅಂದರೆ ಇಂದು ಗಲ್ಲಿಗೇರಬೇಕಾಗಿದ್ದ ಆಕೆಯ ಮರಣದಂಡನೆಯನ್ನು ಮುಂದೂಡಲಾಗಿತ್ತು. ಬ್ಲಡ್ ಮನಿ ಮೂಲಕ ಈ ಸಮಸ್ಯೆ ಇತ್ಯರ್ಥ ಮಾಡಿಕೊಂಡರೆ ಆಕೆಗೆ ಗಲ್ಲು ಶಿಕ್ಷೆಯನ್ನು ತಪ್ಪಿಸಲು ಕಾನೂನಿನಲ್ಲಿ ಅವಕಾಶವಿತ್ತು. ಆದರೆ, ಆ ಆಯ್ಕೆಯೂ ನಿಮಿಷಾಳಿಗೆ ಇಲ್ಲದಂತಾಗಿದೆ. ಏಕೆಂದರೆ ಮೃತ ವ್ಯಕ್ತಿ ತಲಾಲ್ ಅವರ ಸೋದರ ಬ್ಲಡ್ ಮನಿಗೆ ತಮ್ಮ ಒಪ್ಪಿಗೆಯಿಲ್ಲ

ಬ್ಲಡ್ ಮನಿ ನಿರಾಕರಿಸಿದ ಮೃತನ ಸಹೋದರ| ನಿಮಿಷಾ ಪ್ರಿಯಾ ಗಲ್ಲು ಬಹುತೇಕ ಖಚಿತ Read More »

ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆ| ಉಡುಪಿ ಜಿಲ್ಲೆಯ ಶಾಲೆ ಹಾಗೂ ದ.ಕ ಜಿಲ್ಲೆಯ ಪಿಯುವರೆಗಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಕೆಲ ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಬಿಟ್ಟೂಬಿಡದೆ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಹಾಗೂ ಪ್ರೌಢ ಶಾಲೆಗಳಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ತರಗತಿಗಳಿಗೆ ಗುರುವಾರ (ಜು.17) ರಂದು ರಜೆ ಘೋಷಿಸಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಸಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ

ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆ| ಉಡುಪಿ ಜಿಲ್ಲೆಯ ಶಾಲೆ ಹಾಗೂ ದ.ಕ ಜಿಲ್ಲೆಯ ಪಿಯುವರೆಗಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ Read More »

ಕೇರಳದ ಶಾಲೆಗಳಲ್ಲಿ ಲಾಸ್ಟ್ ಬೆಂಚ್ ಮಾದರಿಗೆ ಗೇಟ್ ಪಾಸ್| ಕರ್ನಾಟಕದಲ್ಲೂ U ಮಾದರಿ ಅಳವಡಿಕೆಗೆ ಶಿಕ್ಷಣ ಸಚಿವರಿಗೆ ಪತ್ರ

ಸಮಗ್ರ ನ್ಯೂಸ್: ಇನ್ಮುಂದೆ ಶಾಲೆಗಳಲ್ಲಿ ಲಾಸ್ಟ್ ಬೆಂಚ್, ಫಸ್ಟ್ ಬೆಂಚ್​ ವಿದ್ಯಾರ್ಥಿಗಳು ಎಂಬ ವಿಧಾನಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಸಿನಿಮಾ ಒಂದರ ಪ್ರೇರಣೆ ಪಡೆದು ಈಗಾಗಲೇ ಕೇರಳದಲ್ಲಿನ ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೀಗ ಇದೇ ಮಾದರಿಯನ್ನು ಕರ್ನಾಟಕದ ಶಾಲೆಗಳಲ್ಲಿಯೂ ಜಾರಿ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ಕುರಿತಾಗಿ ಮಕ್ಕಳ ಹಕ್ಕುಗಳ ಹೋರಾಟಗಾರರು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಕೇರಳದಲ್ಲಿನ ಶಾಲೆಗಳಲ್ಲಿ ಲಾಸ್ಟ್ ಬೆಂಚ್ ಹಾಗೂ

ಕೇರಳದ ಶಾಲೆಗಳಲ್ಲಿ ಲಾಸ್ಟ್ ಬೆಂಚ್ ಮಾದರಿಗೆ ಗೇಟ್ ಪಾಸ್| ಕರ್ನಾಟಕದಲ್ಲೂ U ಮಾದರಿ ಅಳವಡಿಕೆಗೆ ಶಿಕ್ಷಣ ಸಚಿವರಿಗೆ ಪತ್ರ Read More »

ಎರಡು ಶತಮಾನ ಭಾರತವನ್ನಾಳಿದ್ದ ಈಸ್ಟ್ ಇಂಡಿಯಾ ಕಂಪನಿಗೆ ಈಗ ಭಾರತೀಯನೇ ಮಾಲೀಕ!!

ಸಮಗ್ರ ವಿಶೇಷ: ಭಾರತವನ್ನು ಸುಮಾರು 200 ವರ್ಷಗಳ ಕಾಲ ಆಳಿದ್ದ ಈಸ್ಟ್ ಇಂಡಿಯಾ ಕಂಪನಿ ಈಗ ಯಾರ ವಶದಲ್ಲಿದೆ ಎಂಬುದು ಹಲವರಿಗೆ ಕುತೂಹಲ ಮೂಡಿಸುವ ವಿಚಾರ. ಬ್ರಿಟಿಷ್ ಸಾಮ್ರಾಜ್ಯದ ಪತನದ ನಂತರ ಈ ವಿಶ್ವವನ್ನೇ ಆಳಿದ ವ್ಯಾಪಾರ ಕಂಪನಿಗೆ ಏನಾಯಿತು? ಅದರ ಪ್ರಸ್ತುತ ಮಾಲೀಕರು ಯಾರು? ಇಲ್ಲಿದೆ ಈ ಕುತೂಹಲಕಾರಿ ಇತಿಹಾಸ ಮತ್ತು ವರ್ತಮಾನದ ಮಾಹಿತಿ. ಈಸ್ಟ್ ಇಂಡಿಯಾ ಕಂಪನಿಯನ್ನು 1600ರ ಡಿಸೆಂಬರ್ 31 ರಂದು ಇಂಗ್ಲೆಂಡ್‌ನಲ್ಲಿ ಬ್ರಿಟಿಷ್ ಸಾಮ್ರಾಜ್ಞಿಯ ವಿಶೇಷ ಸನ್ನದಿನೊಂದಿಗೆ ವ್ಯಾಪಾರ ಕಂಪನಿಯಾಗಿ ಸ್ಥಾಪಿಸಲಾಯಿತು.

ಎರಡು ಶತಮಾನ ಭಾರತವನ್ನಾಳಿದ್ದ ಈಸ್ಟ್ ಇಂಡಿಯಾ ಕಂಪನಿಗೆ ಈಗ ಭಾರತೀಯನೇ ಮಾಲೀಕ!! Read More »

ಟೇಕಾಪ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ವಿಮಾನ| ಪ್ರಯಾಣಿಕರೆಲ್ಲ ದುರ್ಮರಣ

ಸಮಗ್ರ ನ್ಯೂಸ್: ಅಹ್ಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ನಡೆದು ಜಾಸ್ತಿ ದಿನ ಕಳೆದಿಲ್ಲ, ಆಗಲೇ ಅದೇ ರೀತಿಯ ಮತ್ತೊಂದು ವಿಮಾನ ದುರಂತ ಲಂಡನ್‌ನಲ್ಲಿ ನಡೆದಿದ್ದು, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದಿದೆ. ಲಂಡನ್ ಸೌಥೆಂಡ್‌ವಿಮಾನ ನಿಲ್ದಾಣದಿಂದ ಟೇಕಾಫ್ ಆದ ವಿಮಾನವೂ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದೆ. ಈ ದೃಶ್ಯಗಳು ಕ್ಯಾಮರಾಗಳಲ್ಲಿ ಸೆರೆ ಆಗಿದ್ದು ವೈರಲ್ ಆಗುತ್ತಿದೆ. ಬೀಚ್‌ಕ್ರಾಫ್ಟ್ ಬಿ200 ಎಂಬ ಪ್ರಯಾಣಿಕ ವಿಮಾನವೂ ಪತನಗೊಂಡಿದ್ದು, ಈಸಿ ಜೆಟ್ ಕಂಪನಿಗೆ ಸೇರಿದ

ಟೇಕಾಪ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡ ವಿಮಾನ| ಪ್ರಯಾಣಿಕರೆಲ್ಲ ದುರ್ಮರಣ Read More »

ಸರ್ಕಾರಿ‌ ಶಾಲಾ ಮಕ್ಕಳಿಗೆ ಉಚಿತ ‌ಬಸ್ | ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್’ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೆಪಿಎಸ್ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮಕ್ಕಳೇ ಓದುತ್ತಿದ್ದಾರೆ. ಎಲ್ಕೆಜಿಯಿಂದ ಪಿಯುಸಿ ತನಕ ವಿದ್ಯಾಭ್ಯಾಸ ದೊರೆಯುತ್ತಿದೆ. ಅಲ್ಲಿ

ಸರ್ಕಾರಿ‌ ಶಾಲಾ ಮಕ್ಕಳಿಗೆ ಉಚಿತ ‌ಬಸ್ | ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ Read More »