ಅರುಣಾಚಲದ ವಿಚಾರದಲ್ಲಿ ಭಾರತದ ಪರ ನಿಂತ ದೊಡ್ಡಣ್ಣ/ ಅರುಣಾಚಲವನ್ನು ಭಾರತದ ಭೂಭಾಗ ಎಂದೇ ಪರಿಗಣಿಸುತ್ತೇವೆ ಎಂದು ಅಮೆರಿಕ
ಸಮಗ್ರ ನ್ಯೂಸ್: ಅರುಣಾಚರ ಪ್ರದೇಶವು ಚೀನಾಗೆ ಸೇರಿದ್ದಲ್ಲ. ಅದನ್ನು ನಾವು ಭಾರತದ ಭೂಭಾಗ ಎಂದೇ ಪರಿಗಣಿಸುತ್ತೇವೆ. ಇಲ್ಲಿನ ಆಕ್ರಮಣ, ಅತಿಕ್ರಮಣ, ಮಿಲಿಟರಿ ಅಥವಾ ನಾಗರಿಕರ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ನಾವು ವಿರೋಧಿಸುತ್ತೇವೆ ಎಂದು ಅಮೆರಿಕ ಹೇಳಿದೆ. ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಚೀನಾಗೆ ತೀವ್ರ ಮುಖಭಂಗ ಉಂಟುಮಾಡಿದೆ. ಈ ಪ್ರದೇಶದ ಹೆಸರನ್ನು ಬದಲಾಯಿಸುವ ಚೀನಾ ಪ್ರಯತ್ನವನ್ನು ಭಾರತ ವಿಫಲಗೊಳಿಸುತ್ತ ಬಂದಿದೆ. ಅರುಣಾಚಲ ಕುರಿತಾಗಿ ಚೀನಾ ರಕ್ಷಣಾ ಸಚಿವಾಲಯದ ವಕ್ತಾರರು ಅಸಂಬದ್ಧ ಹೇಳಿಕೆಗಳನ್ನು […]










