ಶಬರಿಮಲೆ: ಅಯ್ಯಪ್ಪನ ದರ್ಶನಕ್ಕೆ ಬಂದ ಬಾಲಕಿ ಕುಸಿದು ಬಿದ್ದು ಸಾವು
ಸಮಗ್ರ ನ್ಯೂಸ್: ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಆಗಮಿಸಿದ 12 ವರ್ಷದ ಬಾಲಕಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು ತಮಿಳುನಾಡಿನ ಪದ್ಮಶ್ರೀ ಎಂದು ಗುರುತಿಸಲಾಗಿದ್ದು,ಶಬರಿಮಲೆಯ ದೇವಸ್ಥಾನದ ಅಪ್ಪಾಚಿಮೇಡು ಪ್ರದೇಶದಲ್ಲಿ ಕುಸಿದು ಬಿದ್ದಿದ್ದಾರೆ. ಪದ್ಮಶ್ರೀ ಅವರಿದ್ದ ಗುಂಪು ಮಧ್ಯಾಹ್ನದ ಹೊತ್ತಿಗೆ ಬೆಟ್ಟವನ್ನು ಏರಲು ಪ್ರಾರಂಭಿಸಿತು. ಅಪ್ಪಾಚಿಮೇಡು ತಲುಪಿದಾಗ ಆಕೆ ಅಸ್ವಸ್ಥಳಾಗಿ ಕುಸಿದು ಬಿದ್ದಳು. ಪದ್ಮಶ್ರೀ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆಯನ್ನು ಉಳಿಸಲಾಗಲಿಲ್ಲ. ದೇಹವನ್ನು ಪಂಪಾ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಶಬರಿಮಲೆ: ಅಯ್ಯಪ್ಪನ ದರ್ಶನಕ್ಕೆ ಬಂದ ಬಾಲಕಿ ಕುಸಿದು ಬಿದ್ದು ಸಾವು Read More »










