ಕ್ರೈಂ

ಕನಕಪುರ: ಮಹಿಳೆಯರು ಸೇರಿದಂತೆ ಏಳು ಜನರ ಮೇಲೆ‌ ಮಾರಕಾಸ್ತ್ರಗಳಿಂದ ಹಲ್ಲೆ

ಸಮಗ್ರ ನ್ಯೂಸ್: ಮಾರಕಾಸ್ತ್ರಗಳಿಂದ ಮಹಿಳೆಯರು ಸೇರಿದಂತೆ‌ 7 ಜನರ ಮೇಲೆ ಹಲ್ಲೆ ನಡೆದಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಮಾಳಗಾಳು ಗ್ರಾಮದ ಎನ್.ಕೆ.ಕಾಲೋನಿಯಲ್ಲಿ ನಡೆದಿದೆ. ಗಡಿಪಾರು ರೌಡಿಶೀಟರ್ ಹರ್ಷ ಗ್ಯಾಂಗ್​ನಿಂದ ಕೃತ್ಯ ಆರೋಪ ಮಾಡಲಾಗಿದೆ. ದಾರಿಗೆ ಅಡ್ಡವಾಗಿ ನಿಂತಿದ್ದಕ್ಕೆ 2 ಗುಂಪುಗಳ ನಡುವೆ ಗಲಾಟೆ ನಡೆದಿದೆ. ಘಟನೆ ಸಂಬಂಧ ಕೆಲವರನ್ನ ವಶಕ್ಕೆ ಪಡೆಯಲಾಗಿದ್ದು, ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗಲಾಟೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷನ ಕೈ ಕಟ್ ಆಗಿದೆ. ಘಟನಾ ಸ್ಥಳಕ್ಕೆ ರಾಮನಗರ […]

ಕನಕಪುರ: ಮಹಿಳೆಯರು ಸೇರಿದಂತೆ ಏಳು ಜನರ ಮೇಲೆ‌ ಮಾರಕಾಸ್ತ್ರಗಳಿಂದ ಹಲ್ಲೆ Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ| ಈ ಭಯಾನಕ ಕೃತ್ಯ ಐಫೋನ್ ನಲ್ಲಿ ಸೆರೆ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕೊಲೆ ಮಾಡಿದ ಆರೋಪಿಗಳು ಹಲ್ಲೆ ಮಾಡಿದ ಬಳಿಕ ಐ ಫೋನ್‌ನಲ್ಲಿ ರೆಕಾರ್ಡ್‌ ಕೂಡ ಮಾಡಿರುವುದು ತಿಳಿದು ಬಂದಿದೆ. ಹಲ್ಲೆ ಬಳಿಕ ಹೊಡೆದ ಜಾಗದಲ್ಲಿ ರೇಣುಕಾಸ್ವಾಮಿ ಕುಸಿದು ಬಿದ್ದಿದ್ದರಂತೆ. ಸ್ಯಾಕ್ಷಿ ನಾಶ ಮಾಡಬೇಕು ಎಂದು ಪ್ಲ್ಯಾನ್‌ ಕೂಡ ಆಗಿತ್ತು. ಅದರಲ್ಲಿಯೇ ಒಬ್ಬ ಆರೋಪಿ ಹಲ್ಲೆ ನಡೆದ ಬಳಿಕ ಐಫೋನ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರಂತೆ. ಐವರು ಆರೋಪಿಗಳಿಗೆ ಸಿಮ್ ಕಾರ್ಡ್ ಕೊಟ್ಟಿದ್ದವರ ವಿಚಾರಣೆಯನ್ನು ಕಾಮಾಕ್ಷಿಪಾಳ್ಯ ಪೊಲೀಸರು

ರೇಣುಕಾಸ್ವಾಮಿ ಕೊಲೆ ಪ್ರಕರಣ| ಈ ಭಯಾನಕ ಕೃತ್ಯ ಐಫೋನ್ ನಲ್ಲಿ ಸೆರೆ Read More »

ಕನ್ನಡ ಕಿರುತೆರೆ ನಿರ್ದೇಶಕ‌ ವಿನೋದ್ ದೊಂಡಾಲೆ‌ ಆತ್ಮಹತ್ಯೆ

ಸಮಗ್ರ ನ್ಯೂಸ್:;ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ನಾಗರಬಾವಿಯಲ್ಲಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿಗೀಡಾಗಿದ್ದಾರೆ. ಅತಿಥಿ, ಬೇರು, ತುತ್ತೂರಿ, ವಿಮುಕ್ತಿ ಸೇರಿದಂತೆ ಹಲವು ಚಿತ್ರಗಳಲ್ಲಿ ವಿನೋದ್ ಅವರ ಕೆಲಸ ಕಾಣಬಹುದು. ಕರಿಮಣಿ,‌ ಶಾಂತಂ ಪಾಪಂ ಸೇರಿದಂತೆ ಅನೇಕ ಧಾರವಾಹಿಗಳಿಗೆ ವಿನೋದ್ ನಿರ್ದೇಶನ ಮಾಡಿದ್ದಾರೆ. ನಿನಾಸಂ ಸತೀಶ್ ನಟನೆಯ ‘ಅಶೋಕ ಬ್ಲೇಡ್’ ಚಿತ್ರ ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ ಶುರು ಮಾಡಬೇಕಿತ್ತು. ಅಷ್ಟೊರಳಗೆ ಈ

ಕನ್ನಡ ಕಿರುತೆರೆ ನಿರ್ದೇಶಕ‌ ವಿನೋದ್ ದೊಂಡಾಲೆ‌ ಆತ್ಮಹತ್ಯೆ Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ| ಅಶ್ಲೀಲ ಮೆಸೇಜ್ ಗಳ‌ ಡಾಟಾ ಸಂಗ್ರಹಿಸಿದ ತನಿಖಾ ತಂಡ

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು, ಇದೀಗ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ತನ್ನ ಮೊಬೈಲ್ ನಿಂದ ಕಳುಹಿಸಿದ್ದಂತ ಅಶ್ಲೀಲ ಮೆಸೇಜ್ ಗಳ ಡೇಟಾವನ್ನು ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ. ಮೃತದೇಹ ಪತ್ತೆಯಾದ ನಂತ್ರ, ರೇಣುಕಾಸ್ವಾಮಿ ಕೊಲೆ ಹಿಂದಿನ ಅಸಲಿ ಕಾರಣ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದದ್ದು ಎಂಬುದಾಗಿ ಪೊಲೀಸರಿಗೆ ತಿಳಿದು ಬಂದಿತ್ತು. ಹೀಗಾಗಿ ಆತನ ಮೊಬೈಲ್ ಸಂಖ್ಯೆಯ ಮೂಲಕ ಆತ ಬಳಸುತ್ತಿದ್ದ ಸಾಮಾಜಿಕ ಜಾಲತಾಣಗಳಲ್ಲಿನ ಡೇಟಾ ಮಾಹಿತಿ ಸಂಗ್ರಹಿಸೋದಕ್ಕೆ ಎಸ್‌ಐಟಿ ಪೊಲೀಸರು ಮುಂದಾಗಿದ್ದರು. ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣ| ಅಶ್ಲೀಲ ಮೆಸೇಜ್ ಗಳ‌ ಡಾಟಾ ಸಂಗ್ರಹಿಸಿದ ತನಿಖಾ ತಂಡ Read More »

ಅಂಕೋಲಾ ಹೆದ್ದಾರಿಯಲ್ಲಿ ಭೂಕುಸಿತ ಪ್ರಕರಣ| ಮೃತರ ಸಂಖ್ಯೆ 10ಕ್ಕೆ ಏರಿಕೆ| ಮುಂದುವರಿದ ರಕ್ಷಣಾ ಕಾರ್ಯ

ಸಮಗ್ರ ನ್ಯೂಸ್: ಕಾರವಾರ-ಕುಮಟಾ ರಸ್ತೆಯ ಅಂಕೋಲಾ ಸಮೀಪದ ಶಿರೂರು ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 10 ಮಂದಿಯ ಪೈಕಿ ಐವರು ಒಂದೇ ಕುಟುಂಬದ ಸದಸ್ಯರಿದ್ದಾರೆಂದು ಹೇಳಲಾಗಿದ್ದು, ಇವರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಟೆಲ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಸಂಪೂರ್ಣ ಗುಡ್ಡ ಅಂಗಡಿಯ ಮೇಲೆ ಕುಸಿದು ಬಿದ್ದಿದ್ದು, ಪರಿಣಾಮ ಸ್ಥಳದಲ್ಲಿದ್ದ 15ಕ್ಕೂ ಹೆಚ್ಚು ಮಂದಿ ಹಾಗೂ ಹಲವು ವಾಹನಗಳು ಕೂಡ ಮಣ್ಣಿನಡಿ ಸಿಲುಕಿಕೊಂಡಿದೆ. ಗುಡ್ಡ ಕುಸಿತದ ಪರಿಣಾಮ ರಸ್ತೆಯಲ್ಲಿ ವಾಹನ

ಅಂಕೋಲಾ ಹೆದ್ದಾರಿಯಲ್ಲಿ ಭೂಕುಸಿತ ಪ್ರಕರಣ| ಮೃತರ ಸಂಖ್ಯೆ 10ಕ್ಕೆ ಏರಿಕೆ| ಮುಂದುವರಿದ ರಕ್ಷಣಾ ಕಾರ್ಯ Read More »

ಉಡುಪಿ ಅಗ್ನಿ ಅವಘಡ ಪ್ರಕರಣ| ಉದ್ಯಮಿ ಪತ್ನಿ ಸೋಶಿಯಲ್ ಮೀಡಿಯಾ ಖ್ಯಾತಿಯ ಅಶ್ವಿನಿ ಶೆಟ್ಟಿ ಸಾವು

ಸಮಗ್ರ ನ್ಯೂಸ್: ಉಡುಪಿಯ ಅಂಬಲಪಾಡಿಯಲ್ಲಿ ಸೋಮವಾರ ಬೆಳಗಿನ ಜಾವ ಬಾರ್ & ರೆಸ್ಟೋರೆಂಟ್ ಉದ್ಯಮಿ ಮನೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಅಶ್ವಿನಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಸೋಮವಾರ ನಗರದ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ನ ಮಾಲಕರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಸಿಲುಕಿದ ಬಾರ್ ಮಾಲಕ ರಮಾನಂದ ಹಾಗು ಪತ್ನಿ ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ರಮಾನಂದ ಅವರು

ಉಡುಪಿ ಅಗ್ನಿ ಅವಘಡ ಪ್ರಕರಣ| ಉದ್ಯಮಿ ಪತ್ನಿ ಸೋಶಿಯಲ್ ಮೀಡಿಯಾ ಖ್ಯಾತಿಯ ಅಶ್ವಿನಿ ಶೆಟ್ಟಿ ಸಾವು Read More »

ಅಪ್ರಾಪ್ತ ಬಾಲಕಿಗೆ ಬಸ್ಸಿನಲ್ಲಿ ಕಿರುಕುಳ: ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಗೆ ಬಸ್ಸಿನಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೋರ್ವನಿಗೆ ಮಹಿಳೆಯರು ಸೇರಿಕೊಂಡು ಬಸ್ನಲ್ಲೇ ಗೂಸಾ ಕೊಟ್ಟ ಘಟನೆ ಬೆಂಗಳೂರಿನಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ನಡೆದಿದೆ. KSRTC ಬಸ್ನಲ್ಲಿ ಈತ ಪ್ರಯಾಣ ಮಾಡುತ್ತಿದ್ದ. ಈ ವೇಳೆ ಅಪ್ರಾಪ್ತ ಬಾಲಕಿಯನ್ನು ಪಕ್ಕದಲ್ಲಿ ಕೂರಲು ಹೇಳಿದ ಕಾಮುಕ. ಮೈ ಕೈಗೆಲ್ಲ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನಂತೆ. ಈ ಹಿನ್ನಲೆ ರೊಚ್ಚಿಗೆದ್ದ ಬಾಲಕಿಯ ತಾಯಿ ಹಾಗೂ ಸಾರ್ವಜನಿಕರು ಸರಿಯಾಗಿ ಗೂಸಾ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ

ಅಪ್ರಾಪ್ತ ಬಾಲಕಿಗೆ ಬಸ್ಸಿನಲ್ಲಿ ಕಿರುಕುಳ: ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು Read More »

ಮಾನಸಿಕವಾಗಿ ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ

ಸಮಗ್ರ ನ್ಯೂಸ್: ಬೆಂಗಳೂರಿನ ಯಲಹಂಕದ ಆರ್‌ಎನ್‌ಜೆಡ್ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಭಾರ್ಗವ್ ಪುಲಿವರ್ತ (13), ತಾಯಿ ರಮ್ಯಾ (40) ಮೃತ ದುರ್ದೈವಿಗಳು. ಆಂಧ್ರ ಪ್ರದೇಶದ ರಮ್ಯಾ ಶ್ರೀಧರ್ ಎಂಬುವವರನ್ನು ಪ್ರೀತಿಸಿ, ಅಂತರ್ಜಾತಿ ವಿವಾಹವಾಗಿದ್ದರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಶ್ರೀಧರ್ ಪುಲಿವರ್ತ ಮೂರು ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಇವರಿದ್ದ ಫ್ಲ್ಯಾಟ್ ಬಾಡಿಗೆ 45 ಸಾವಿರ, ಮಕ್ಕಳಿಬ್ಬರ ಶಾಲೆ ಫೀಸ್, ಮನೆ ನಿರ್ವಹಣೆ

ಮಾನಸಿಕವಾಗಿ ಖಿನ್ನತೆಗೊಳಗಾದ ತಾಯಿ ಮತ್ತು ಮಗ ಆತ್ಮಹತ್ಯೆ Read More »

ಅತ್ಯಾಚಾರದಿಂದ ಮಹಿಳೆಯನ್ನು ‌ರಕ್ಷಿಸಿದ ಬೀದಿನಾಯಿ!!

ಸಮಗ್ರ ನ್ಯೂಸ್: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ವಿಶ್ವಾಸಕ್ಕೆ ಅನ್ವರ್ಥವಾಗಿರುವ ಶ್ವಾನಗಳು ತಮ್ಮ ಮಾಲೀಕನಾಗಿ ಎಂತಹ ತ್ಯಾಗಕ್ಕೂ, ಎಂತಹ ಅಪಾಯಗಳನ್ನು ಎದುರಿಸಲು ಕೂಡ ಹಿಂಜರಿಯುವುದಿಲ್ಲ. ಅಷ್ಟೇ ಅಲ್ಲದೆ ಬೀದಿ ನಾಯಿಗಳೂ ಮನುಷ್ಯನ ಸಹಾಯಕ್ಕೆ ಧಾವಿಸಿದ ಅದೆಷ್ಟೋ ನಿದರ್ಶನಗಳಿವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಕಾಮುಕನೊಬ್ಬನಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ ಮಹಿಳೆಯನ್ನು ಬೀದಿ ನಾಯಿಯೊಂದು ಕಾಪಾಡಿದೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಘಟನೆ ಜೂನ್‌ 30 ರಂದು ಮುಂಬೈನ ವಾಸಯಿಯಲ್ಲಿ ನಡೆದಿದ್ದು, ಇಲ್ಲಿನ ಮಾಣಿಕ್‌ಪುರ ಗಲ್ಲಿಯಲ್ಲಿ ನಡೆದುಕೊಂಡು

ಅತ್ಯಾಚಾರದಿಂದ ಮಹಿಳೆಯನ್ನು ‌ರಕ್ಷಿಸಿದ ಬೀದಿನಾಯಿ!! Read More »

ಸುರತ್ಕಲ್: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ| 16 ಜಾನುವಾರುಗಳ ರಕ್ಷಣೆ| ಗೋಮಾಂಸ, ವಾಹನ ವಶ

ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ಕೃಷ್ಣಾಪುರ 8ನೇ ಬ್ಲಾಕ್ ಬಳಿ ಮನೆಯಲ್ಲೇ ಭಾರಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿರುವುದು ಭಾನುವಾರ ಪತ್ತೆಯಾಗಿದೆ. ಸ್ಥಳದಲ್ಲಿದ್ದ 16 ಜಾನುವಾರುಗಳನ್ನು ರಕ್ಷಿಸಿರುವ ಪೊಲೀಸರು, ಗೋಮಾಂಸ ಹಾಗೂ ಅದರ ಸಾಗಣೆಗೆ ಬಳಸುತ್ತಿದ್ದ ಆಟೊರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ. ಸುಸಜ್ಜಿತ ಕಾಂಕ್ರಿಟ್ ಮನೆಯೊಂದರಲ್ಲಿ ಜಾನುವಾರುಗಳನ್ನು ಕಡಿದು ಮಾಂಸ ತಯಾರಿಸಿ ಸ್ಥಳೀಯ ಹೋಟೆಲ್‌ಗಳೂ ಸೇರಿದಂತೆ ವಿವಿಧೆಡೆ ಸರಬರಾಜು ಮಾಡಲಾಗುತ್ತಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪ್ರಮುಖರು ನೀಡಿದ ಮಾಹಿತಿ

ಸುರತ್ಕಲ್: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ| 16 ಜಾನುವಾರುಗಳ ರಕ್ಷಣೆ| ಗೋಮಾಂಸ, ವಾಹನ ವಶ Read More »