ಕ್ರೈಂ

ಉಳ್ಳಾಲ: ರೌಡಿ ಶೀಟರ್ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯ ಅಟ್ಟಾಡಿಸಿ ಕೊಲೆ| ತಾಯಿ ಜೊತೆ ಇದ್ದಾಗಲೇ ಹಂತಕರ ಮಚ್ಚಿಗೆ ಬಲಿಯಾದ ಸಮೀರ್

ಸಮಗ್ರ ನ್ಯೂಸ್: ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಅಟ್ಟಾಡಿಸಿ ತಲವಾರಿನಿಂದ ಕಡಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪುವಿನಲ್ಲಿ ರಾ.ಹೆ.66ರ ಪಕ್ಕದಲ್ಲಿರುವ ವಿ.ಕೆ.ಫರ್ನಿಚರ್ ಕಟ್ಟಡದ ಹಿಂಭಾಗದಲ್ಲಿ ಭಾನುವಾರ ಮಧ್ಯರಾತ್ರಿ ವೇಳೆ ನಡೆದಿದೆ. ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (35) ಹತ್ಯೆಯಾದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಾಯಿ ಜೊತೆಗೆ ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆಂದು ಬಂದ ಸಂದರ್ಭ ಕಾರಿನಲ್ಲಿ ಹಿಂಬಾಲಿಸಿದ್ದ ತಂಡ ಸಮೀರ್ ಇಳಿಯುತ್ತಿದ್ದಂತೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ. […]

ಉಳ್ಳಾಲ: ರೌಡಿ ಶೀಟರ್ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯ ಅಟ್ಟಾಡಿಸಿ ಕೊಲೆ| ತಾಯಿ ಜೊತೆ ಇದ್ದಾಗಲೇ ಹಂತಕರ ಮಚ್ಚಿಗೆ ಬಲಿಯಾದ ಸಮೀರ್ Read More »

ಕ್ಯಾಂಟರ್ – ಟೆಂಪೋ ಭೀಕರ ಅಪಘಾತ: ಮೂವರು ದುರ್ಮರಣ

ಸಮಗ್ರ ನ್ಯೂಸ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಬಳಿ ಕ್ಯಾಂಟರ್ – ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೊದಲ್ಲಿದ್ದ ಮೂವರು ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ಸಂಭವಿಸಿದೆ. ಯಾದಗಿರಿ ಮೂಲದ ಕಟ್ಟಡ ಕಾರ್ಮಿಕಾರದ ನರಸಪ್ಪ(35), ಹುಸೇನಪ್ಪ(34), ಪಾದಚಾರಿ ತುಮಕೂರು ತಾಲೂಕಿನ ಸೀತಕಲ್ಲು ನಿವಾಸಿ ಶಿವಗಂಗಪ್ಪ(55) ಮೃತರು. ಐವರ ಸ್ಥಿತಿ ಚಿಂತಾಜನಕವಾಗಿದೆ. ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಅಸ್ತವ್ಯಸ್ತ

ಕ್ಯಾಂಟರ್ – ಟೆಂಪೋ ಭೀಕರ ಅಪಘಾತ: ಮೂವರು ದುರ್ಮರಣ Read More »

ನಿರ್ಮಾಣ ಹಂತದ ಕಟ್ಟಡ ಕುಸಿತ : ಇಬ್ಬರು ಸಾವು ಓರ್ವ ಗಂಭೀರ

ಸಮಗ್ರ ನ್ಯೂಸ್: ಕಟ್ಟಡ ನಿರ್ಮಾಣ ವೇಳೆ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರ ಪೈಕಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಪೀಣ್ಯದ ಎನ್ಟಿಟಿಎಫ್ ರಸ್ತೆಯಲ್ಲಿ ನಡೆದಿದೆ. ದುರಂತದಲ್ಲಿ ಕಾರ್ಮಿಕ ಹಿಮಾಂಶು (28), ಆಸ್ಪತ್ರೆಗೆ ಸಾಗಿಸುವಾಗ ಪ್ರಕಾಶ್ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಾರ್ಮಿಕರು ಏಷಿಯನ್ ಪೈಂಟ್ಸ್ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಕಟ್ಟಡದ ನಾಲ್ಕನೇ ಮಹಡಿಗೆ ಕಾಂಕ್ರೀಟ್ ಹಾಕುತ್ತಿದ್ದಾಗ, ಏಕಾಏಕಿ ಸೆಂಟ್ರಿಂಗ್

ನಿರ್ಮಾಣ ಹಂತದ ಕಟ್ಟಡ ಕುಸಿತ : ಇಬ್ಬರು ಸಾವು ಓರ್ವ ಗಂಭೀರ Read More »

ಶಿರಾಡಿ ಘಾಟ್: ವಾಂತಿ ಸಮಸ್ಯೆಯಿಂದ ಕಾರಿನಿಂದ ಕೆಳಗಿಳಿದ ಮಂದಿ| ಯಮಸ್ವರೂಪಿ ಕಂಟೇನರ್ ನಿಂದ ಐವರು ಅದೃಷ್ಟವಶಾತ್ ಬಚಾವ್

ಸಮಗ್ರ ನ್ಯೂಸ್: ಕಂಟೈನರ್‌ ಲಾರಿಯೊಂದು ಶನಿವಾರ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ದಾವಣಗೆರೆ ಮೂಲದವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಆದರೆ ಈ ಹೊತ್ತಿನಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ. ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ವಾಂತಿ ಬಂದ ಕಾರಣ ಎಲ್ಲರೂ ಕೆಳಗಿಳಿದಿದ್ದರು. ಆದ್ದರಿಂದಲೇ ಇವರೆಲ್ಲರೂ ಜೀವ ಉಳಿಸಿಕೊಂಡರು. ದಾವಣಗೆರೆಯ ನಿವಾಸಿಗರಾದ ಗಣೇಶ, ಶಿವು, ಕಾವ್ಯಾ, ದಂಡ್ಯಮ್ಮ ಅವರು ಚಾಲಕ ಅಬ್ದುಲ್‌ ರಹಿಮಾನ್‌ ಮುಲ್ಲಾ ಅವರೊಂದಿಗೆ ಶುಕ್ರವಾರ ಧರ್ಮಸ್ಥಳ ಕ್ಷೇತ್ರಕ್ಕೆ ಬಂದವರು ಶನಿವಾರ

ಶಿರಾಡಿ ಘಾಟ್: ವಾಂತಿ ಸಮಸ್ಯೆಯಿಂದ ಕಾರಿನಿಂದ ಕೆಳಗಿಳಿದ ಮಂದಿ| ಯಮಸ್ವರೂಪಿ ಕಂಟೇನರ್ ನಿಂದ ಐವರು ಅದೃಷ್ಟವಶಾತ್ ಬಚಾವ್ Read More »

ಮದುವೆಗೆ ಮನೆಯಲ್ಲಿ ವಿರೋಧ: ನೇಣುಬಿಗಿದುಕೊಂಡ ಪ್ರೇಮಿಗಳು

ಸಮಗ್ರ ನ್ಯೂಸ್: ಮದುವೆಗೆ ಮನೆಯಲ್ಲಿ ಒಪ್ಪಲಿಲ್ಲವೆಂದು ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ನಡೆದಿದೆ. ಸಚಿನ್ ದಳವಾಯಿ(22), ಪ್ರಿಯಾ ಮಡಿವಾಳರ(19) ಮೃತ ಪ್ರೇಮಿಗಳು. ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಹುಡುಗನ ಮನೆಯವರು ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಜೋಡಿ ಸಾವಿನ ಹಾದಿ ಹಿಡಿದಿದೆ. ಸಚಿನ್‌ ದಳವಾಯಿ, ಪ್ರಿಯಾ ಮಡಿವಾಳರ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಪರಸ್ಪರ ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಬೇಕು ಎಂದು ನಿರ್ಧಾರ

ಮದುವೆಗೆ ಮನೆಯಲ್ಲಿ ವಿರೋಧ: ನೇಣುಬಿಗಿದುಕೊಂಡ ಪ್ರೇಮಿಗಳು Read More »

ನಾಗರ ಪಂಚಮಿ ದಿನವೇ ಹಾವು ಕಚ್ಚಿ ಬಾಣಂತಿ ಸಾವು

ಸಮಗ್ರ ನ್ಯೂಸ್: ಇಂದು ನಾಗರ ಪಂಚಮಿ ಹಬ್ಬ ಆದರೆ ಈ ಹಬ್ಬದಂದೇ ಹಾವು ಕಚ್ಚಿ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಡೆದಿದೆ. ಗದ್ದೆಯಲ್ಲಿ ಮೇವು ತರಲು ತೆರಳಿದ್ದ ವೇಳೆ ಹಾವು ಕಚ್ಚಿದ್ದರಿಂದ ಈ ದುರಂತ ಸಂಭವಿಸಿದೆ. ರಂಜಿತಾ (22) ಮೃತಪಟ್ಟ ಯುವತಿ. ಮೇವು ತರಲು ಹೋಗಿದ್ದ ವೇಳೆ ಪೊದೆಯಲ್ಲಿದ್ದ ಹಾವು, ಬಾಣಂತಿಗೆ ಕಚ್ಚಿದೆ. ಆದರೆ, ಈ ಬಗ್ಗೆ ಯುವತಿ ಗಮನಕ್ಕೆ ಬಂದಿಲ್ಲ. ಕೆಲಹೊತ್ತಿನ ಬಳಿಕ ಕುಟುಂಬಸ್ಥರು ನೋಡಿದಾಗ ಗದ್ದೆಯಲ್ಲಿ ರಂಜಿತಾ

ನಾಗರ ಪಂಚಮಿ ದಿನವೇ ಹಾವು ಕಚ್ಚಿ ಬಾಣಂತಿ ಸಾವು Read More »

ಸಂಪಾಜೆ: ಡಿವೈಡರ್ ಗೆ ಗುದ್ದಿ ಬೈಕ್ ಪಲ್ಟಿಯಾಗಿರುವ ಶಂಕೆ| ಬೈಕ್ ಸವಾರರಿಬ್ಬರು ದುರ್ಮರಣ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸಂಪಾಜೆ ಸಮೀಪದ ಕೊಯನಾಡು ಎಂಬಲ್ಲಿ ಬೈಕ್ ಭೀಕರವಾಗಿ ಅಪಘಾತಗೊಂಡಿದ್ದು, ದುರ್ಘಟನೆಯಲ್ಲಿ ಬೈಕ್ ಸವಾರ‌ರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು, ಇಂದು (ಜೂ.5) ಮುಂಜಾನೆ ಸ್ಥಳೀಯರ ಗಮನಕ್ಕೆ ಬಂದಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ರಾತ್ರಿ ವೇಗದಿಂದ ಬಂದು ಬೈಕ್ ಡಿವೈಡರ್ ಗೆ ಗುದ್ದಿರಬಹುದು ಎಂದು ಶಂಕಿಸಲಾಗಿದೆ.

ಸಂಪಾಜೆ: ಡಿವೈಡರ್ ಗೆ ಗುದ್ದಿ ಬೈಕ್ ಪಲ್ಟಿಯಾಗಿರುವ ಶಂಕೆ| ಬೈಕ್ ಸವಾರರಿಬ್ಬರು ದುರ್ಮರಣ Read More »

ಕುಂದಾಪುರ: ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಕಡಿದು ನರ್ತಿಸಿದ ಪತಿ| ವಿಕೃತಿ ಮೆರೆದಾತನ ಬಂಧಿಸಲು ಅಶ್ರುವಾಯು ಸಿಡಿಸಿದ ಪೊಲೀಸರು

ಸಮಗ್ರ ನ್ಯೂಸ್: ಪತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪತ್ನಿಯ ಕುತ್ತಿಗೆಗೆ ಕಡಿದು ಕೈಯಲ್ಲಿ ಕತ್ತಿ ಹಿಡಿದು ನರ್ತಿಸಿ ವಿಚಿತ್ರವಾಗಿ ವರ್ತಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ. ಸದ್ಯ ಗಂಭೀರ ಗಾಯಗೊಂಡಿರುವ ಪತ್ನಿಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದವರನ್ನು ಅನಿತಾ (38) ಎಂದು ಗುರುತಿಸಲಾಗಿದೆ. ಅವರ ಪತಿ, ಆರೋಪಿ ಲಕ್ಷ್ಮಣ ಯಾನೆ ರಮೇಶ್‌ನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೊರಬ ತಾಲೂಕು ಮೂಲದ ಲಕ್ಷ್ಮಣ ಮತ್ತು ಅನಿತಾ ದಂಪತಿ ನಾಲ್ಕು ತಿಂಗಳ

ಕುಂದಾಪುರ: ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಕಡಿದು ನರ್ತಿಸಿದ ಪತಿ| ವಿಕೃತಿ ಮೆರೆದಾತನ ಬಂಧಿಸಲು ಅಶ್ರುವಾಯು ಸಿಡಿಸಿದ ಪೊಲೀಸರು Read More »

ಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ| ಗಲಭೆಗಳಲ್ಲಿ ಭಾಗಿಯಾಗಿಲ್ಲವೆಂದು 13 ಮಂದಿ‌ಯಿಂದ ಕಲ್ಕುಡ ದೇವಸ್ಥಾನದಲ್ಲಿ ಪ್ರಾರ್ಥನೆ

ಸಮಗ್ರ ನ್ಯೂಸ್: ಎರಡು ವರ್ಷದ ಹಿಂದೆ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆಯಾದ ಅನಂತರದ ಯಾವುದೇ ಗಲಭೆಗಳಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು 13 ಮಂದಿ ಯುವಕರು ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಜು. 22ರಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ನಂದಕುಮಾರ್‌, ಕಮಲಾಕ್ಷ, ಅರುಣ್‌ ರೈ, ಪದ್ಮನಾಭ ತಡಗಜೆ, ಪ್ರಶಾಂತ್‌, ಆನಂದ ಯು., ಧರ್ಮಪಾಲ, ಚಿದಾನಂದ ಬಾಳಿಲ, ಹರೀಶ್‌ ಬಾಳಿಲ, ಡಿಪಿನ್‌ ಎಡಮಂಗಲ, ಶಿವಾನಂದ, ಹರ್ಷಿತ್‌, ನಿತೀಶ್‌ ಕೆ. ಅವರ ಮೇಲೆ ಕೇಸು ದಾಖಲಿಸಲಾಗಿತ್ತು.

ಸುಳ್ಯ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ| ಗಲಭೆಗಳಲ್ಲಿ ಭಾಗಿಯಾಗಿಲ್ಲವೆಂದು 13 ಮಂದಿ‌ಯಿಂದ ಕಲ್ಕುಡ ದೇವಸ್ಥಾನದಲ್ಲಿ ಪ್ರಾರ್ಥನೆ Read More »

ಬೆಂಗಳೂರು: ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ

ಸಮಗ್ರ ನ್ಯೂಸ್: ಬೆಂಗಳೂರಿನ ಕೋರಮಂಗಲದ ವಿಆರ್ ಲೇಔಟ್ ನ ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ ಮಾಡಲಾಗಿದೆ. ಬಿಹಾರ ಮೂಲದ ಕೃತಿ ಕುಮಾರಿ‌(24) ಕೊಲೆಯಾದ ಯುವತಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃತಿ ಕುಮಾರಿ‌ಯನ್ನು ರಾತ್ರಿ ಸುಮಾರು 11.10 ರಿಂದ 11.30ರ ನಡುವೆ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ಯುವಕನೋರ್ವ ಚಾಕು ಹಿಡಿದುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕೃತಿ ಕುಮಾರಿ‌ ಕತ್ತು ಕೊಯ್ದು

ಬೆಂಗಳೂರು: ಪಿಜಿಯೊಂದರಲ್ಲಿ ಯುವತಿಯ ಕತ್ತು ಕೊಯ್ದು ಬರ್ಬರ ಕೊಲೆ Read More »