ಕ್ರೈಂ

ಚಿಕ್ಕಮಗಳೂರು: ಗಾಂಜಾ ಮಾರಾಟ|ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು: ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರೆಸಿರುವ ಚಿಕ್ಕಮಗಳೂರು ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಾಲೂಕಿನ ಕೊಂಬುಗತ್ತಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸಿ.ಇ.ಎನ್. ಅಪರಾಧ ಪೊಲೀಸರು 1.26 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಫಿನಾಡಿನಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸರು ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐಸ್.ಐ ರಘುನಾಥ ಎಸ್. ವಿ ಮತ್ತು ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಖಾನ್, ಹರೀಶ ಟಿ. ಕೆ, ಧರ್ಮರಾಜ, ಹರಿಪ್ರಸಾದ, […]

ಚಿಕ್ಕಮಗಳೂರು: ಗಾಂಜಾ ಮಾರಾಟ|ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ Read More »

ಅಪ್ಪಾ.. ಅಪ್ಪಾ.. ಮೊಬೈಲ್ ಕೊಡಿಸಪ್ಪಾ ಎಂದು ಕೇಳಿದ 14 ವರ್ಷದ ಮಗನ ಕಥೆಯನ್ನೇ ಮುಗಿಸಿದ ಅಪ್ಪ!

ಸಮಗ್ರ ನ್ಯೂಸ್:ಅಪ್ಪಾ.. ಅಪ್ಪ.. ನಂಗೆ ನೀನು ಹೊಸ ಮೊಬೈಲ್ ಕೊಡಿಸಪ್ಪಾ.. ಇಲ್ಲ, ಮನೆಯಲ್ಲಿರುವ ಹಳೆಯ ಮೊಬೈಲ್ ಅನ್ನೇ ರಿಪೇರಿ ಮಾಡಿಸು ಅಪ್ಪಾ.. ಎಂದು ಕೇಳಿದ 14 ವರ್ಷದ ಮಗನನ್ನು ನಿಷ್ಕರುಣಿ ತಂದೆ, ಮಗನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ನಿನ್ನೆ ತಡರಾತ್ರಿ ವೇಳೆ ಈ ನಡೆದಿದೆ. ತೇಜಸ್ (14) ತಂದೆಯಿಂದಲೇ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಮಗ ಆಗಿದ್ದಾನೆ. ಈ ಘಟನೆ ಕುರಿತಂತೆ ಕುಮಾರಸ್ವಾಮಿ

ಅಪ್ಪಾ.. ಅಪ್ಪಾ.. ಮೊಬೈಲ್ ಕೊಡಿಸಪ್ಪಾ ಎಂದು ಕೇಳಿದ 14 ವರ್ಷದ ಮಗನ ಕಥೆಯನ್ನೇ ಮುಗಿಸಿದ ಅಪ್ಪ! Read More »

ಹೃದಯಾಘಾತದಿಂದ 12 ವರ್ಷದ ಬಾಲಕಿ ಸಾವು

ಸಮಗ್ರ ನ್ಯೂಸ್: 12 ವರ್ಷದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತೆಲಂಗಾಣ ಚೆನ್ನೂರು ಪಟ್ಟಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಚೆನ್ನೂರಿನ ಪದ್ಮನಗರ ಬಡಾವಣೆಯ ಶ್ರೀನಿವಾಸ್-ರಾಮ ದಂಪತಿ ಪುತ್ರಿ ನಿವೃತ್ತಿ(12) ಎಂದು ಗುರುತಿಸಲಾಗಿದೆ. ‌ ಈಕೆ ಚೆನ್ನೂರು ಪಟ್ಟಣದ ಸ್ಥಳೀಯ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಕಾರ್ತಿಕ ಹುಣ್ಣಿಮೆ ಇದ್ದ ಕಾರಣ ಶಾಲೆಗೆ ರಜೆ ನೀಡಲಾಗಿತ್ತು. ಹಬ್ಬದ ಚಟುವಟಿಕೆಯಲ್ಲಿ ನಿರತರಾಗಿದ್ದ ಮಗುವೊಂದು ದಿಢೀರ್ ಕುಸಿದು ಬಿದ್ದು, ಇದನ್ನು ಗಮನಿಸಿದ ಮನೆಯವರು ನಿವೃತಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವನ್ನು

ಹೃದಯಾಘಾತದಿಂದ 12 ವರ್ಷದ ಬಾಲಕಿ ಸಾವು Read More »

ಅಪ್ರಾಪ್ತ ನವಜಾತ ಶಿಶುವಿಗೆ ಜನ್ಮನೀಡಿ, ಹತ್ಯೆ ಕೇಸ್: ತಾಯಿ, ಅಜ್ಜ, ಅಜ್ಜಿ ಅರೆಸ್ಟ್

ಸಮಗ್ರ ನ್ಯೂಸ್:ಅ.17 ರಂದು ಮಡಿಕೇರಿ ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ರಹಸ್ಯವಾಗಿ ಮಗುವಿಗೆ ಜನ್ಮ ನೀಡಿದ್ದಳು.ಮಗುವನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ನವಜಾತ ಶಿಶುವಿನ ತಾಯಿ, ಅಜ್ಜಿ ಹಾಗೂ ಅಜ್ಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಸೂತಿಯಾಗಿ 4 ದಿನ ಕಳೆದರೂ ನವಜಾತ ಶಿಶು ಕಂಡುಬಂದಿರಲಿಲ್ಲ. ಆಸ್ಪತ್ರೆಯಿಂದ ಆ ಶಿಶು ನಾಪತ್ತೆಯಾಗಿತ್ತು. ಮತ್ತೇ ಶಿಶುವಿನ ಮೃತದೇಹ ಗುಂಡಿಯಲ್ಲಿ ಪತ್ತೆಯಾಗಿತ್ತು.ಮೊದಲಿಗೆ ಹೆತ್ತಾಕೆಯೇ ಮಗುವನ್ನು ನಾಪತ್ತೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ನಂತರ ಅಜ್ಜಿಯೇ ಹೂತಿಟ್ಟಿದ್ದು

ಅಪ್ರಾಪ್ತ ನವಜಾತ ಶಿಶುವಿಗೆ ಜನ್ಮನೀಡಿ, ಹತ್ಯೆ ಕೇಸ್: ತಾಯಿ, ಅಜ್ಜ, ಅಜ್ಜಿ ಅರೆಸ್ಟ್ Read More »

ಇದು ತಪ್ಪು ಎಂದಿದ್ದೇ ಜೀವಕ್ಕೆ ತಂದಿತು ಆಪತ್ತು! ಗಂಡ-ಹೆಂಡತಿ ಜಗಳದಲ್ಲಿ ಪಕ್ಕದ ಮನೆ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ತನ್ನ ಪತ್ನಿಯ ಜತೆ ಕೌಟುಂಬಿಕ ಕಲಹದಲ್ಲಿ ತೊಡಗಿದ್ದ ಪತಿಗೆ ಹೀಗೆಲ್ಲಾ ಮಾಡಬೇಡ, ಆಕೆ ಹೆಣ್ಣು ಜೀವ ಎಂದು ಬುದ್ದಿ ಮಾತನ್ನು ಹೇಳಿದ ಪಕ್ಕದ ಮನೆಯ ರಾನ್ ಸಿಂಗ್ ಎಂಬ ವ್ಯಕ್ತಿಯನ್ನು ರಾಡ್‌ನಿಂದ ಹತ್ಯೆಗೈದ ಘಟನೆ ಉತ್ತರ ದೆಹಲಿಯಲ್ಲಿ ವರದಿಯಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಧೀರಜ್ ತನ್ನ ಹೆಂಡತಿಯನ್ನು ನಿಂದಿಸಿ, ಅಮಾನುಷವಾಗಿ ಹಲ್ಲೆ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರೋಪಿ ತನ್ನ ಪತ್ನಿಯನ್ನು ದೈಹಿಕವಾಗಿ ಹಲ್ಲೆ ಮಾಡುವುದಲ್ಲದೆ, ವಿಪರೀತ ಅವಾಚ್ಯ ಪದಗಳಿಂದ

ಇದು ತಪ್ಪು ಎಂದಿದ್ದೇ ಜೀವಕ್ಕೆ ತಂದಿತು ಆಪತ್ತು! ಗಂಡ-ಹೆಂಡತಿ ಜಗಳದಲ್ಲಿ ಪಕ್ಕದ ಮನೆ ವ್ಯಕ್ತಿ ಸಾವು Read More »

ರಾತ್ರಿ ಪಾರ್ಟಿ ಮುಗಿಸಿ ಕಾರಿನಲ್ಲಿ ಹೊರಟ ವಿಧ್ಯಾರ್ಥಿಗಳು ಸೇರಿದ್ದು ಮಸಣಕ್ಕೆ|ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ 6 ಮಂದಿಯ ದೇಹ

ಸಮಗ್ರ ನ್ಯೂಸ್: ನ.15 ರಂದು ಕಾರು ಹಾಗೂ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸಾವನಪ್ಪಿದ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ.ಮೃತರನ್ನು ಡೆಹ್ರಾಡೂನ್‌ ನಿವಾಸಿಗಳಾದ ಗುನೀತ್ ಸಿಂಗ್, ಕಾಮಾಕ್ಷಿ ಸಿಂಘಾಲ್, ನವ್ಯಾ ಗೋಯಲ್, ರಿಷಭ್ ಜೈನ್ ಮತ್ತು ಅತುಲ್ ಅಗರವಾಲ್ ಮತ್ತು ಹಿಮಾಚಲ ಪ್ರದೇಶದ ಚಂಬಾದಿಂದ ಕುನಾಲ್ ಕುಕ್ರೇಜಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಸಿದ್ದೇಶ್ ಅಗರವಾಲ್ ಸ್ಥಿತಿ ಗಂಭೀರವಾಗಿದೆ.ಸಿದ್ದೇಶ್‌ ಆಯೋಜಿಸಿದ್ದ ಪಾರ್ಟಿ ಮುಗಿಸಿ 6 ಮಂದಿ ಕಾರಿನಲ್ಲಿ ತೆರಳುತ್ತಿದ್ದರು.

ರಾತ್ರಿ ಪಾರ್ಟಿ ಮುಗಿಸಿ ಕಾರಿನಲ್ಲಿ ಹೊರಟ ವಿಧ್ಯಾರ್ಥಿಗಳು ಸೇರಿದ್ದು ಮಸಣಕ್ಕೆ|ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ 6 ಮಂದಿಯ ದೇಹ Read More »

ಮಡಿಕೇರಿ: ರಿಯಲ್ ಎಸ್ಟೇಟ್ ‌ಮಾಫಿಯಾ ಕಿರುಕುಳ| ಆತ್ಮಹತ್ಯೆಗೆ ಶರಣಾದ ಉದ್ಯಮಿ ದಂಪತಿ

ಸಮಗ್ರ ನ್ಯೂಸ್: ರಿಯಲ್ ಎಸ್ಟೇಟ್ ಮಾಫಿಯಾದಿಂದ ಮನನೊಂದು ಉದ್ಯಮಿಯೊಬ್ಬರು ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಿರಿಯಾಪಟ್ಟಣದ ಬೈಲಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಡಗಿನ ಕುಶಾಲನಗರದಲ್ಲಿ ಉದ್ಯಮ ನಡೆಸುತ್ತಿದ್ದ ಕೊಪ್ಪ ನಿವಾಸಿ ಸುರೇಶ್ (40) ಹಾಗೂ ಪತ್ನಿ ಪಲ್ಲವಿ (28) ಆತ್ಮಹತ್ಯೆಗೆ ಶರಣಾದವರು. ಸುರೇಶ್ ತನ್ನ ಪತ್ನಿಯನ್ನು ಬುಧವಾರ ದೇವಸ್ಥಾನಕ್ಕೆಂದು ಕರೆದೊಯ್ದಿದ್ದರು. ಆದರೆ ಕಾವಲ್ ನ ಜಮೀನಿನ ಹಳೇಯ ಖಾಲಿ ಮನೆಯಲ್ಲಿ ಪತಿ-ಪತ್ನಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾ ಕಿರುಕುಳದಿಂದ ನೊಂದು

ಮಡಿಕೇರಿ: ರಿಯಲ್ ಎಸ್ಟೇಟ್ ‌ಮಾಫಿಯಾ ಕಿರುಕುಳ| ಆತ್ಮಹತ್ಯೆಗೆ ಶರಣಾದ ಉದ್ಯಮಿ ದಂಪತಿ Read More »

ಬೆಳ್ಳಾರೆ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕಾಣಿಯೂರು ಸಮೀಪದ ಜ್ಯೋತಿಷಿ ಪ್ರಸಾದ್‌ ಪಾಂಗಣ್ಣಾಯಗೆ ಜಾಮೀನು ಮಂಜೂರು ಆಗಿದೆ. ಪ್ರಸಾದ್ ಪಾಂಗಣ್ಣಾಯರನ್ನು ಸೆ.19 ರಂದು ಪೋಕ್ಸೋ ಪ್ರಕರಣದಲ್ಲಿ ಬೆಳ್ಳಾರೆ ಠಾಣೆಯ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದ ಆರೋಪಿಯಾಗಿರುವ ಪ್ರಸಾದ್ ಪಾಂಗಣ್ಣಾಯ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಘೋಷಣೆ ಮಾಡಿದೆ. ಆರೋಪಿಯ ಪರವಾಗಿ ಪುತ್ತೂರಿನ ಖ್ಯಾತ ವಕೀಲ ನರಸಿಂಹ

ಬೆಳ್ಳಾರೆ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯಗೆ ಜಾಮೀನು ಮಂಜೂರು Read More »

ಬ್ರೇಕ್ ಫೇಲ್ ಆಗಿ ಉರುಳಿ ಬಿದ್ದ ಕಾರು, 8 ವಿದ್ಯಾರ್ಥಿಗಳಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

ಸಮಗ್ರ ನ್ಯೂಸ್:ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ 8 ಮಕ್ಕಳು ಹಾಗೂ ಚಾಲಕ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಮುಚ್ಚಿಲಪದವು ಎಂಬಲ್ಲಿ ನಡೆದಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಮತ್ತು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಎಂಟು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಗಾಯಾಳುಗಳನ್ನು ಮಂಗಳೂರು ಮತ್ತು ಬಂಟ್ವಾಳದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರಿನ ಚಾಲಕ ಮುಳಿಯ ರಾಮಣ್ಣ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ತೀವ್ರ

ಬ್ರೇಕ್ ಫೇಲ್ ಆಗಿ ಉರುಳಿ ಬಿದ್ದ ಕಾರು, 8 ವಿದ್ಯಾರ್ಥಿಗಳಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ Read More »

ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾವು

ಸಮಗ್ರ ನ್ಯೂಸ್:ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ, ಕಳೆದ ಶುಕ್ರವಾರ ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್(23) ನ.13 ರಂದು ಮೃತಪಟ್ಟಿದ್ದಾರೆ. ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು.ಅವರನ್ನು ಕೂಡಲೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು.ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಗ್ಲೋರಿಯಾ ಅವರಿಗೆ ಫುಡ್ ಅಲರ್ಜಿ (ಅನಾಫಿಲ್ಯಾಕ್ಟಿಕ್ ರಿಯಾಕ್ಷನ್)

ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾವು Read More »