ಖಾದ್ಯ ತೈಲಗಳ ಆಮದು ಸುಂಕ ಕಡಿತಕ್ಕೆ ಕೇಂದ್ರ ನಿರ್ಧಾರ| ಅಡುಗೆ ಎಣ್ಣೆ ಬೆಲೆಯಲ್ಲಿ ಇಳಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಪ್ಪಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ವಿವಿಧ ಖಾದ್ಯ ತೈಲಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಗಣನೀಯವಾಗಿ ಇಳಿಕೆ ಮಾಡಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ ಸೆಪ್ಟೆಂಬರ್ 24ರ ಇಂದಿನಿಂದ ಈ ಹೊಸ ದರಗಳು ಜಾರಿಗೆ ಬಂದಿದ್ದು, ಮುಂಬರುವ ದಿನಗಳಲ್ಲಿ ಅಡುಗೆ ಎಣ್ಣೆ ದರಗಳು ಇಳಿಕೆಯಾಗುವ ಸಾಧ್ಯತೆಯಿದೆ.

. Ad Widget . Ad Widget

ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಖಾದ್ಯ ತೈಲಗಳ ಬೆಲೆ ಸರಿಸುಮಾರು ಶೇ. 20ರಷ್ಟು ಹೆಚ್ಚಾಗಿತ್ತು. ಈಗ ಸರ್ಕಾರ ಕೈಗೊಂಡಿರುವ ಪರಿಷ್ಕರಣೆಯ ಅನ್ವಯ, ಕಚ್ಚಾ ಸೋಯಾಬೀನ್ ಮತ್ತು ಕಚ್ಚಾ ಪಾಮ್ ಎಣ್ಣೆಯ ಮೇಲಿನ ಸುಂಕವನ್ನು ಶೇ. 10ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಜೊತೆಗೆ ಇವುಗಳ ಸಂಸ್ಕರಿಸಿದ ಎಣ್ಣೆಯ ಮೇಲಿನ ಸುಂಕವನ್ನು ಶೇ. 32.5ರಿಂದ ಶೇ. 27.5ಕ್ಕೆ ತಗ್ಗಿಸಲಾಗಿದೆ. ಇನ್ನು ಸೂರ್ಯಕಾಂತಿ ಎಣ್ಣೆ ಬಳಸುವವರಿಗೂ ದೊಡ್ಡ ರಿಲೀಫ್ ಸಿಕ್ಕಿದ್ದು, ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿದ್ದ ಶೇ. 10ರಷ್ಟು ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಹಾಗೂ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಸುಂಕವನ್ನು ಶೇ. 32.5ರಿಂದ ಶೇ. 22.5ಕ್ಕೆ ಕಡಿತಗೊಳಿಸಲಾಗಿದೆ.

. Ad Widget . . Ad Widget . Ad Widget

ಭಾರತವು ತನ್ನ ಒಟ್ಟು ಖಾದ್ಯ ತೈಲದ ಬಳಕೆಯ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಮಲೇಷ್ಯಾ, ಇಂಡೋನೇಷ್ಯಾ, ಅರ್ಜೆಂಟೀನಾ, ರಷ್ಯಾ ಮತ್ತು ಉಕ್ರೇನ್‌ಗಳಿಂದ ಆಮದು ಮಾಡಿಕೊಳ್ಳುತ್ತದೆ. ಆಮದು ಸುಂಕ ಇಳಿಕೆಯಾಗಿರುವುದರಿಂದ ದೇಶೀಯ ಮಾರುಕಟ್ಟೆಗೆ ಎಣ್ಣೆ ತರಿಸಿಕೊಳ್ಳುವ ವೆಚ್ಚ ಕಡಿಮೆಯಾಗಲಿದ್ದು, ಇದರ ನೇರ ಲಾಭ ಗ್ರಾಹಕರಿಗೆ ತಲುಪುವ ನಿರೀಕ್ಷೆಯಿದೆ.

ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗಿನ ಹಬ್ಬದ ದಿನಗಳಲ್ಲಿ ತಿಂಡಿ-ತಿನಿಸುಗಳಿಗೆ ಎಣ್ಣೆಯ ಬೇಡಿಕೆ ಹೆಚ್ಚಾಗುವುದರಿಂದ, ಈ ನಿರ್ಧಾರವು ಹಣದುಬ್ಬರ ನಿಯಂತ್ರಣಕ್ಕೆ ನೆರವಾಗುವ ಜತೆಗೆ ಗ್ರಾಹಕರ ಜೇಬಿನ ಮೇಲಿನ ಹೊರೆಯನ್ನು ತಗ್ಗಿಸಲಿದೆ. ಅಲ್ಲದೆ ಭಾರತದಲ್ಲಿ ಬೇಡಿಕೆ ಹೆಚ್ಚಳವಾಗಲಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಮಲೇಷ್ಯಾದ ಪಾಮ್ ಆಯಿಲ್ ಮತ್ತು ಅಮೆರಿಕದ ಸೋಯಾಬೀನ್ ತೈಲ ದರಗಳ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Leave a Comment

Your email address will not be published. Required fields are marked *