ಯುವಕನ ಪ್ರಾಣ ಬಲಿ ಪಡೆದ ನವಿಲು
ಉಡುಪಿ: ದ್ವಿಚಕ್ರ ವಾಹನವೊಂದಕ್ಕೆ ನವಿಲು ಡಿಕ್ಕಿಯಾಗಿ ಬೈಕ್ ಸವಾರ ಮತ್ತು ನವಿಲು ಮೃತಪಟ್ಟಿರುವ ಘಟನೆ ಕಾಪು ತಾಲೂಕಿನ ಎರ್ಮಾಳ್ ನಲ್ಲಿ ನಡೆದಿದೆ. ಬೆಳಪು ಗ್ರಾಮದ ಅಬ್ದುಲ್ಲಾ (25) ಮೃತ ದುರ್ದೈವಿ. ಪಡುಬಿದ್ರೆಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ರಾ.ಹೆ 66 ರ ಎರ್ಮಾಳ್ ಬಳಿ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದಾಗ ನವಿಲೊಂದು ಢಿಕ್ಕಿಯಾಗಿದೆ.ನವಿಲು ಡಿಕ್ಕಿಯಾದ ರಭಸಕ್ಕೆ ರಸ್ತೆಯ ಡಿವೈಡರ್ ಗೆ ಸ್ಕೂಟಿ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ವೇಳೆ ಸ್ಕೂಟಿ ಚಲಾಯಿಸುತ್ತಿದ್ದ ಅಬ್ದುಲ್ಲಾ ಬೆಳಪು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಡಿಕ್ಕಿಯಾದ […]
ಯುವಕನ ಪ್ರಾಣ ಬಲಿ ಪಡೆದ ನವಿಲು Read More »










