ಕ್ರೈಂ

ಉಪ್ಪಿನಂಗಡಿ ಠಾಣಾ ಮುಂಭಾಗದಲ್ಲಿ ಹೈಡ್ರಾಮಾ ನಡೆಸಿದ ಪಿಎಫ್ಐ| ಪೊಲೀಸರು ಲಾಠಿ ಚಾರ್ಜ್ ಮಾಡಿದ್ದೇಕೆ? ಕಂಪ್ಲೀಟ್ ಸ್ಟೋರಿ

ನಾಲ್ಕು ತಾಲೂಕುಗಳಲ್ಲಿ ನಿಷೇದಾಜ್ಞೆ ಜಾರಿ: ಪುತ್ತೂರು ಉಪ ವಿಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಸೆಕ್ಷನ್‌ 144ರನ್ವಯ ನಿಷೇದಾಜ್ಞೆ ಜಾರಿಗೊಳಿಸಿ ಪುತ್ತೂರು ಸಹಾಯಕ ಆಯುಕ್ತರಾದ ಡಾ. ಯತೀಶ್‌ ಉಳ್ಳಾಲರವರು ಆದೇಶ ಹೊರಡಿಸಿದ್ದಾರೆ. ಪುತ್ತೂರು,ಬೆಳ್ತಂಗಡಿ,ಸುಳ್ಯ,ಕಡಬ ತಾಲೂಕಿನಾದ್ಯಂತ ನಿಷೇದಾಜ್ಙೆ ಜಾರಿಗೊಳಿಸಲಾಗಿದೆ. ಉಪ್ಪಿನಂಗಡಿಯಲ್ಲಿ ಡಿ 14 ರಂದು ರಾತ್ರಿ ನಡೆದ ಅಹಿತಕರ ಘಟನೆಯ ಹಿನ್ನಲೆಯಲ್ಲಿ ಸಹಾಯಕ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪುತ್ತೂರು ಉಪವಿಭಾಗಾಯಾದ್ಯಂತ ಅಂದರೆ […]

ಉಪ್ಪಿನಂಗಡಿ ಠಾಣಾ ಮುಂಭಾಗದಲ್ಲಿ ಹೈಡ್ರಾಮಾ ನಡೆಸಿದ ಪಿಎಫ್ಐ| ಪೊಲೀಸರು ಲಾಠಿ ಚಾರ್ಜ್ ಮಾಡಿದ್ದೇಕೆ? ಕಂಪ್ಲೀಟ್ ಸ್ಟೋರಿ Read More »

ಮನೆಗೆ ನುಗ್ಗಿ ವ್ಯಾಪಾರಿಯ ವಿವಸ್ತ್ರಗೊಳಿಸಿ ದರೋಡೆ| ಮೂರು ಮಹಿಳೆಯರು ಸೇರಿದಂತೆ 6 ಮಂದಿ ಅರೆಸ್ಟ್|

ಬೆಂಗಳೂರು: ಬಟ್ಟೆ ಹಾಗೂ ಸೌಂದರ್ಯ ವರ್ಧಕ ವಸ್ತುಗಳ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರ ಮನೆಗೆ ಸಂಘಟನೆಯೊಂದರ ಸದಸ್ಯರು ಎಂದು ಹೇಳಿಕೊಂಡು ನುಗ್ಗಿ ಜೀವ ಬೆದರಿಕೆ ಹಾಕಿ ಚಿನ್ನಾಭರಣ ದರೋಡೆ ಮಾಡಿದ್ದ ಮೂರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಜ್ಞಾನ ಭಾರತಿಯ ನಿವಾಸಿ ದೀಪಾ, ಅನಿತಾ, ಪೀಣ್ಯದ ವಿಜಯಾ, ನವೀನ್‌, ಚಂದ್ರಶೇಖರ್‌, ಮಾಹಾಲಿಂಗಯ್ಯ ಬಂಧಿತರಾಗಿದ್ದು, ಆರೋಪಿಗಳಿಂದ 152 ಗ್ರಾಂ ಚಿನ್ನಾಭರಣ, .63 ಸಾವಿರ ನಗದು ಹಾಗೂ ಒಂದು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಈ

ಮನೆಗೆ ನುಗ್ಗಿ ವ್ಯಾಪಾರಿಯ ವಿವಸ್ತ್ರಗೊಳಿಸಿ ದರೋಡೆ| ಮೂರು ಮಹಿಳೆಯರು ಸೇರಿದಂತೆ 6 ಮಂದಿ ಅರೆಸ್ಟ್| Read More »

ಉಪ್ಪಿನಂಗಡಿ: ಕೊಲೆ ಪ್ರಕರಣದ ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿ ಪಿಎಫ್ಐ ಪ್ರತಿಭಟನೆ| ಕಾನೂನು ಉಲ್ಲಂಘಿಸಿ ದಾಂಧಲೆ ನಡೆಸಿ ಪುಂಡಾಟ| ಪೊಲೀಸರಿಂದ ಲಾಠಿಚಾರ್ಜ್, ಪರಿಸ್ಥಿತಿ ಉದ್ವಿಗ್ನ|

ಪುತ್ತೂರು: ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ನಿರತ ಪಿಎಫ್‌ಐ ಕಾರ್ಯಕರ್ತರ ಮೇಲೆ ಪೋಲಿಸರು ಲಾಠಿ ಚಾರ್ಜ್ ಮಾಡಿದ್ದಾರೆ. ಘಟನೆಯಲ್ಲಿ 20 ಕ್ಕೂ ಅಧಿಕ ಕಾರ್ಯಕರ್ತರು ಗಾಯಗೊಂಡಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಲೆಯತ್ನ ಆರೋಪದ ಪ್ರಕರಣದಲ್ಲಿ ಬಂಧಿತರಾದವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪಿಎಫ್‌ಐ ಕಾರ್ಯಕರ್ತರು ಉಪ್ಪಿನಂಗಡಿ ಠಾಣೆಯ ಎದುರು ಬೆಳಗಿನಿಂದಲೇ ಪ್ರತಿಭಟನೆ ನಡೆಯುತ್ತಿದ್ದು ಸಂಜೆಯಾಗುತ್ತಲೇ ಉಗ್ರ ಸ್ವರೂಪ ಪಡೆದಿತ್ತು. ಸಂಜೆ ಠಾಣೆಯ ಮುಂದೆ ಸಾಮೂಹಿಕ ನಮಾಜ್‌ ಮಾಡಲು ಮುಂದಾದಾಗ ಅದನ್ನು ತಡೆಯಲು ಹೋದ ಪೊಲೀಸ್‌ ಮತ್ತು ಪಿಎಫ್‌ಐ ಕಾರ್ಯಕರ್ತರ ನಡುವೆ ತೀವ್ರ

ಉಪ್ಪಿನಂಗಡಿ: ಕೊಲೆ ಪ್ರಕರಣದ ಆರೋಪಿಗಳ ಬಿಡುಗಡೆಗೆ ಒತ್ತಾಯಿಸಿ ಪಿಎಫ್ಐ ಪ್ರತಿಭಟನೆ| ಕಾನೂನು ಉಲ್ಲಂಘಿಸಿ ದಾಂಧಲೆ ನಡೆಸಿ ಪುಂಡಾಟ| ಪೊಲೀಸರಿಂದ ಲಾಠಿಚಾರ್ಜ್, ಪರಿಸ್ಥಿತಿ ಉದ್ವಿಗ್ನ| Read More »

ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿ ವಿಧಿವಶ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕನ್ನಡದ ಪ್ರಖ್ಯಾತ ಬರಹಗಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿಯವರು (84) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಜಲಕ್ಷ್ಮಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತೇಜಸ್ವಿಯವರ ನಿಧನದ ಬಳಿಕ ರಾಜೇಶ್ವರಿಯವರು ಮೂಡಿಗೆರೆಯಲ್ಲೇ ನೆಲೆಸಿದ್ದರು. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಮಗಳ ಮನೆಗೆ ಬಂದಿದ್ದರು. ರಾಜೇಶ್ವರಿ ತೇಜಸ್ವಿ- 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ

ಪೂರ್ಣಚಂದ್ರ ತೇಜಸ್ವಿ ಪತ್ನಿ ರಾಜೇಶ್ವರಿ ವಿಧಿವಶ Read More »

ಬೆಳ್ತಂಗಡಿ: ಭೀಕರ ಅಪಘಾತಕ್ಕೆ ಯುವಕ ಬಲಿ| ಯಮ ಸ್ವರೂಪಿಯಾದ ಕಾರು ಬೈಕ್ ಗೆ ಢಿಕ್ಕಿ|

ಬೆಳ್ತಂಗಡಿಯ ಸಂತೆಕಟ್ಟೆ ಬಳಿ ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಮಡಂತ್ಯಾರಿನ ಬಂಗೇರ ಕಟ್ಟೆ ನಿವಾಸಿ ಯತಿನ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಇನ್ನೋರ್ವ ಸವಾರ ಪ್ರದೀಪ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಯತಿನ್ ಗುರುವಾಯನಕೆರೆಯಲ್ಲಿ ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಬೆಳ್ತಂಗಡಿ: ಭೀಕರ ಅಪಘಾತಕ್ಕೆ ಯುವಕ ಬಲಿ| ಯಮ ಸ್ವರೂಪಿಯಾದ ಕಾರು ಬೈಕ್ ಗೆ ಢಿಕ್ಕಿ| Read More »

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ| ಆರೋಪಿ ಬಂಧನ

ಬೆಳ್ತಂಗಡಿ: ನಾಲ್ಕನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಯುವಕನೋರ್ವ ಅತ್ಯಾಚಾರ ನಡೆಸಿದ್ದು, ಆರೋಪಿಯನ್ನು ಬಂಧಿಸಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಆರೋಪಿ ಜಯಾನಂದ ಎಂಬಾತ ಬಾಲಕಿಯನ್ನು ನಿರ್ಮಾಣ ಹಂತದಲ್ಲಿರುವ ಮನೆಗೆ ಕರೆದೊಯ್ದು ಬೆದರಿಸಿ ಅತ್ಯಾಚಾರವೆಸಗಿದ್ದು, ಬಳಿಕ ಬಾಲಕಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿಯ ಪೋಷಕರು ಅರೋಪಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಜಯಾನಂದ ಎಂಬಾತನನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ| ಆರೋಪಿ ಬಂಧನ Read More »

ಶ್ರೀನಗರ; ಪೊಲೀಸ್ ಬಸ್ ಮೇಲೆ ಭಯೋತ್ಪಾದಕರ ದಾಳಿ| 12 ಯೋಧರಿಗೆ ಗಾಯ, 3 ಮಂದಿ ಗಂಭೀರ

ಶ್ರೀನಗರ: ಶ್ರೀನಗರದ ಹೊರವಲಯದ ಝೈವಾನ್ʼನ ಪೊಲೀಸ್ ಶಿಬಿರದ ಬಳಿ ಭಯೋತ್ಪಾದಕರು ಪೊಲೀಸ್ ಬಸ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಶಸ್ತ್ರ ಪೊಲೀಸ್ ಬೆಟಾಲಿಯನ್ ಬಳಿ ಭಯೋತ್ಪಾದಕರು ಬಸ್ ಮೇಲೆ ಭಾರಿ ಗುಂಡಿನ ದಾಳಿ ನಡೆಸಿದ್ದು, ಇದ್ರಲ್ಲಿ 12 ಯೋಧರಿಗೆ ಗಾಯಗೊಂಡಿದ್ದು, ಮೂವರು ಯೋಧರು ಸ್ಥಿತಿ ಗಂಭೀರವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಘಟನೆಯ ನಂತರ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಘಟನೆಯ ನಡೆದ ಇಡೀ ಪ್ರದೇಶವನ್ನ ಪೊಲೀಸರು ಸುತ್ತುವರೆದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಶ್ರೀನಗರ; ಪೊಲೀಸ್ ಬಸ್ ಮೇಲೆ ಭಯೋತ್ಪಾದಕರ ದಾಳಿ| 12 ಯೋಧರಿಗೆ ಗಾಯ, 3 ಮಂದಿ ಗಂಭೀರ Read More »

ಕಾರಿನಲ್ಲೇ ಸಹೋದ್ಯೋಗಿ ಜೊತೆ ಸೆಕ್ಸ್| ಗಂಡನ ವಿರುದ್ದ ದೂರು ನೀಡಿದ ಮಹಿಳೆ|

ಬೆಂಗಳೂರು: ‘ಸಹೋದ್ಯೋಗಿ ಯುವತಿ ಜೊತೆ ಸಲುಗೆ ಬೆಳೆಸಿದ್ದ ಪತಿಯು, ಆ ಯುವತಿ ಜೊತೆ ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದಾರೆ’ ಎಂದು ಮಹಿಳೆಯೊಬ್ಬರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವತಿ ಸಹ ದೂರು ಕೊಟ್ಟಿದ್ದಾರೆ. ‘ಕೌಟುಂಬಿಕ ಹಾಗೂ ಅಕ್ರಮ ಸಂಬಂಧದ ವಿಚಾರವಾಗಿ ರಾಜಭವನ ರಸ್ತೆಯಲ್ಲಿ ಮಹಿಳೆ, ಆಕೆಯ ಪತಿ ಹಾಗೂ ಯುವತಿ ನಡುವೆ ಡಿ. 6ರಂದು ರಾತ್ರಿ ಗಲಾಟೆ ನಡೆದಿದೆ. ಈ ಬಗ್ಗೆ ಎರಡು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಎರಡೂ ಕಡೆಯ ದೂರುದಾರರಿಂದ ಹೇಳಿಕೆ ಪಡೆಯಲಾಗಿದೆ.

ಕಾರಿನಲ್ಲೇ ಸಹೋದ್ಯೋಗಿ ಜೊತೆ ಸೆಕ್ಸ್| ಗಂಡನ ವಿರುದ್ದ ದೂರು ನೀಡಿದ ಮಹಿಳೆ| Read More »

ಸರಣಿ ಅಪಘಾತಕ್ಕೆ ನಾಲ್ಕು ಬಲಿ| ಲಾರಿ ಟಯರ್ ಸ್ಫೋಟದಿಂದ ನಡೆದ ದುರ್ಘಟನೆ

ಚಿತ್ರದುರ್ಗ: ಇಲ್ಲಿನ ಹಿರಿಯೂರು ತಾಲ್ಲೂಕಿನ ಆಲೂರು ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ ಸಂಭವಿಸಿ, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗದಗ ಮೂಲದ ಹನುಮಪ್ಪ(30), ಪ್ರಶಾಂತ(28), ಗುರಪ್ಪ(30), ರಮೇಶ(30) ಮೃತಪಟ್ಟವರು ಎಂದು ಹೇಳಲಾಗಿದೆ. ಸರಣಿ ಅಪಘಾತದಲ್ಲಿ 10 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 4ರ ಆಲೂರು ಬಳಿ ಟೈಯರ್ ಸ್ಪೋಟಗೊಂಡ ಲಾರಿ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಲಾರಿ ಪಲ್ಟಿ ಆಗಿದ್ದರಿಂದ ಒಂದು ಕಾರು ಮತ್ತು 6 ಲಾರಿ ನಡುವೆ ಡಿಕ್ಕಿಯಾಗಿ

ಸರಣಿ ಅಪಘಾತಕ್ಕೆ ನಾಲ್ಕು ಬಲಿ| ಲಾರಿ ಟಯರ್ ಸ್ಫೋಟದಿಂದ ನಡೆದ ದುರ್ಘಟನೆ Read More »

ಮಂಗಳೂರು: ಜ.ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿ ವಿಕೃತಿ| ಆರೋಪಗಳ ವಿರುದ್ಧ ಕ್ರಮ ಕೈಗೊಳ್ಳಲು ಗೃಹಸಚಿವರ ಸೂಚನೆ|

ಮಂಗಳೂರು: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ ಆರೋಪದಲ್ಲಿ ಮೂರು ಫೇಸ್‌ಬುಕ್ ಖಾತೆಗಳು ಹಾಗೂ ಅದನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳ ಮೇಲೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಸ್ಥಳೀಯ ನಿವಾಸಿ ಸುಶಾಂತ್ ಪೂಜಾರಿ ಎಂಬುವರು ನೀಡಿದ ದೂರಿನ ಮೇಲೆ ಬೆಂಗಳೂರು ಮೂಲದ ವಸಂತ ಕುಮಾರ್ ಟಿ.ಕೆ ಹಾಗೂ ಶ್ರೀನಿವಾಸ ಕಾರ್ಕಳ ಎಂಬುವರ ಫೇಸ್‌ಬುಕ್ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದು ಖಾತೆ ಅಪರಿಚಿತ ವ್ಯಕ್ತಿಗೆ ಸೇರಿದ್ದಾಗಿದೆ

ಮಂಗಳೂರು: ಜ.ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿ ವಿಕೃತಿ| ಆರೋಪಗಳ ವಿರುದ್ಧ ಕ್ರಮ ಕೈಗೊಳ್ಳಲು ಗೃಹಸಚಿವರ ಸೂಚನೆ| Read More »