ಕ್ರೈಂ

ಸುಳ್ಯ: ಪಾದಾಚಾರಿಗೆ ಡಿಕ್ಕಿ ಹೊಡೆದ ಪಿಕಪ್, ವ್ಯಕ್ತಿ ಸಾವು

ಸುಳ್ಯ: ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಪಿಕಪ್ ಡಿಕ್ಕಿಯಾದ ಪರಿಣಾಮ ಗಂಭಿರ ಗಾಯಗೊಂಡು ವ್ಯಕ್ತಿ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟವರನ್ನು ಪೈಚಾರಿನ ನವೀನ್ ಕುಮಾರ್ (60) ಎಂದು ಗುರುತಿಸಲಾಗಿದೆ. ಇವರು ಅಡ್ಕಾರಿನಲ್ಲಿ ರೇಷನ್ ಪಡೆಯಲು ತೆರಳಿದ್ದು ಬಸ್ ನಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ರಸ್ತೆಯಲ್ಲಿ ಬಂದ ಪಿಕಪ್ ಢಿಕ್ಕಿಯಾಯಿತು. ಪರಿಣಾಮ ನವೀನರು ರಸ್ತೆಗೆ ಎಸೆಯಲ್ಪಟ್ಟು ಗಂಭಿರ ಗಾಯಗೊಂಡರು. ಪಿಕಪ್ ನವರೇ ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಅದಾಗಲೇ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಸುಳ್ಯ: ಪಾದಾಚಾರಿಗೆ ಡಿಕ್ಕಿ ಹೊಡೆದ ಪಿಕಪ್, ವ್ಯಕ್ತಿ ಸಾವು Read More »

ಮಂಗಳೂರು: ಆಸ್ಪತ್ರೆಯಲ್ಲಿ ‌ಮೃತಪಟ್ಟ ವ್ಯಕ್ತಿ ದಾರಿ ಮಧ್ಯೆ ಉಸಿರಾಡಿದ! | ಸಾವಿನ ಬಾಯಿಂದ ಬದುಕಿ ಬಂದವ ಮರಳಿ ಆಸ್ಪತ್ರೆಗೆ ದಾಖಲು|

ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆಂದು ಬಿಟ್ಟುಕೊಟ್ಟಿದ್ದ ಬದಿಯಡ್ಕದ ವ್ಯಕ್ತಿಯು ಮಾರ್ಗಮಧ್ಯೆ ಜೀವಂತವಾಗಿ ಉಸಿರಾಡಿದ ಘಟನೆ ಇಂದು ನಡೆದಿದೆ. ಬದಿಯಡ್ಕದ ಕೂಲಿಕಾಮಿರ್ಕ ಗುರುವ(60) ಎಂಬವರನ್ನು ಅಸೌಖ್ಯದ ಹಿನ್ನೆಲೆ ಸೋಮವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ತಪಾಸಣೆ ನಡೆಸಿದ ವೈದ್ಯರು, ರೋಗಿ ಆಕ್ಸಿಜನ್​ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದು, ಆಕ್ಸಿಜನ್ ಇಲ್ಲದೇ ಹೋದರೆ ಪ್ರಾಣ ಹೋಗುತ್ತದೆ ಎಂದು ಹೇಳಿದ್ದರು. ಅದರಂತೆ ಆಕ್ಸಿಜನ್​ ತೆರವುಗೊಳಿಸಲಾಗಿತ್ತು. ಬಳಿಕ ರೋಗಿಯ ಸಂಬಂಧಿಕರ ಮನೆಗೆ ಫೋನ್​

ಮಂಗಳೂರು: ಆಸ್ಪತ್ರೆಯಲ್ಲಿ ‌ಮೃತಪಟ್ಟ ವ್ಯಕ್ತಿ ದಾರಿ ಮಧ್ಯೆ ಉಸಿರಾಡಿದ! | ಸಾವಿನ ಬಾಯಿಂದ ಬದುಕಿ ಬಂದವ ಮರಳಿ ಆಸ್ಪತ್ರೆಗೆ ದಾಖಲು| Read More »

ಮೂಡುಬಿದಿರೆ: ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ವಾಮನ ಕುಮಾರ್ ಸಾವು

ಮೂಡುಬಿದಿರೆ: ಇಲ್ಲಿನ ಗಂಟಾಲ್ಕಟ್ಟೆಯ ಸಮೀಪ ಜ.20 ರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಮೃತಪಟ್ಟಿದ್ದಾರೆ. ವಾಮನ ಕುಮಾರ್ ವೇಣೂರು (47) ಮೃತರು. ಗಂಟಾಲ್ಕಟ್ಟೆಯ ಸಮೀಪ ಓಮ್ನಿ ಕಾರು ಬೈಕ್ ಢಿಕ್ಕಿಯಾಗಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ವಾಮನ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧರ್ಮಸ್ಥಳ ಮೇಳದ , ಕದ್ರಿ ಮೇಳ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಹಿರಿಯಡ್ಕ ಮೇಳದಲ್ಲಿ ಕಲಾವಿದರಾಗಿದ್ದರು. ಕುಂದಾಪುರದ ಕೊಂಕಿ ಎಂಬಲ್ಲಿ ರಾತ್ರಿ ಯಕ್ಷಗಾನವನ್ನು ಮುಗಿಸಿ ಮನೆಗೆ ಹಿಂತಿರುಗುವಾಗ ಬೆಳಗಿನ ಜಾವ ಈ

ಮೂಡುಬಿದಿರೆ: ರಸ್ತೆ ಅಪಘಾತದಲ್ಲಿ ಯಕ್ಷಗಾನ ಕಲಾವಿದ ವಾಮನ ಕುಮಾರ್ ಸಾವು Read More »

ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ ಕೊರೊನಾ ಗೆ ಬಲಿ

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಪ್ರದೀಪ್ ರಾಜ್(46) ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿನಿಂದ ಪ್ರದೀಪ್ ರಾಜ್ ನಿಧನರಾಗಿದ್ದಾರೆ. ‘ಕಿರಾತಕ’, ‘ಅಂಜದಗಂಡು’, ‘ಬೆಂಗಳೂರು 23’ ಸೇರಿದಂತೆ ಹಲವು ಸಿನಿಮಾಗಳನ್ನು ಪ್ರದೀಪ್ ರಾಜ್ ನಿರ್ದೇಶಿಸಿದ್ದರು. ಇಂದು ಬೆಳಗಿನಜಾವ 3 ಗಂಟೆ ಸುಮಾರಿಗೆ ಪ್ರದೀಪ್ ರಾಜ್ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ

ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ ಕೊರೊನಾ ಗೆ ಬಲಿ Read More »

ಸ್ವಾಮೀ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಫೋಸ್ಟ್| ಶಿಕ್ಷಣ ಇಲಾಖೆ ಅಧಿಕಾರಿ ಸಸ್ಪೆಂಡ್

ರಾಯಚೂರು: ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ‌ ಪೋಸ್ಟ್ ಹಾಕಿದ ರಾಯಚೂರು ಜಿಲ್ಲೆಯ ಲಿಂಗಸುಗೂರು ಶಿಕ್ಷಣ ಇಲಾಖೆ ಅಧಿಕಾರಿ ಸನಾವುಲ್ಲಾರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ. ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ‌ ಲೇಖನ ಬರೆದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಾಟ್ಸಾಪ್ ಗ್ರೂಪ್​ನಲ್ಲಿ ಪೋಸ್ಟ್​ ಮಾಡಿದಕ್ಕೆ ಸನಾವುಲ್ಲಾರನ್ನು ಅಮಾನತ್ತು ಮಾಡಿ ರಾಯಚೂರು ಡಿಡಿಪಿಐ ವೃಷಭೇಂದ್ರಯ್ಯ ಆದೇಶ ನೀಡಿದ್ದಾರೆ. ಕಳೆದ ಜನವರಿ‌ 12ರ ವಿವೇಕಾನಂದರ 150 ನೇ ಜಯಂತಿಯಂದು ಸನಾವುಲ್ಲಾ ಪೋಸ್ಟ್ ಮಾಡಿದ್ದರು. ಸ್ವಾಮಿ ವಿವೇಕಾನಂದರ ಬಾಲ್ಯ ಜೀವನ, ಬದುಕಿನ ಬಗ್ಗೆ

ಸ್ವಾಮೀ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಫೋಸ್ಟ್| ಶಿಕ್ಷಣ ಇಲಾಖೆ ಅಧಿಕಾರಿ ಸಸ್ಪೆಂಡ್ Read More »

ದೂರು ಕೊಡಲು ಹೋದ ಮಹಿಳೆಯ ಮಂಚಕ್ಕೆ ಕರೆದ ಪೋಲಿ ಪೊಲೀಸ್| ಸಂತ್ರಸ್ತೆಯಿಂದ ಪೊಲೀಸ್ ಆಯುಕ್ತರಿಗೆ ದೂರು

ಬೆಂಗಳೂರು, (ಜ.19): ದೂರು ನೀಡಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕೇಳಿ ಬಂದಿದೆ. ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಮಹಿಳೆಯೊಬ್ಬರು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗಲಾಟೆ ವಿಷಯಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆ ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದ್ದು ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ

ದೂರು ಕೊಡಲು ಹೋದ ಮಹಿಳೆಯ ಮಂಚಕ್ಕೆ ಕರೆದ ಪೋಲಿ ಪೊಲೀಸ್| ಸಂತ್ರಸ್ತೆಯಿಂದ ಪೊಲೀಸ್ ಆಯುಕ್ತರಿಗೆ ದೂರು Read More »

ಅಂತರ ಜಿಲ್ಲಾ ಖದೀಮರ ಬಂಧನ: ಎಂಟು ಲಕ್ಷ ರೂ. ಮೌಲ್ಯದ ವಶ

ಮೈಸೂರು: ಇಬ್ಬರು ಅಂತರ ಜಿಲ್ಲಾ ಖದೀಮರನ್ನು ಬಂಧಿಸಿರುವ ಪೊಲೀಸರು ಅವರಿಂದ ಎಂಟು ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಪಟ್ಟಣದ ನಿವಾಸಿಗಳಾದ ಅರುಣ(29) ಮತ್ತು ಗುರುಪ್ರಸಾದ್ ಬಂಧಿತ ಆರೋಪಿಗಳು. ವೃತ್ತಿಯಲ್ಲಿ ಆಟೋ ಚಾಲಕರಾದ ಇಬ್ಬರು ಬೇರೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದರು.ಆರೋಪಿಗಳು ಮೈಸೂರು ನಗರ, ಮದ್ದೂರು, ಕೊಳ್ಳೇಗಾಲದಲ್ಲಿ ವಾಹನಗಳನ್ನು ಕಳವು ಮಾಡುತ್ತಿದ್ದರು. ಇವರಿಂದ ಕಳವು ಮಾಲು ಖರೀದಿಸಿದ್ದ ಪಟ್ಟಣದ ನಿವಾಸಿಗಳಾದ ನಹೀಮ್ತಾಜ್ ಅಜರ್ ಪಾಷ ಮತ್ತು ಮನು ಅಲಿಯಾಸ್ ಕಳ್ಳಮನು ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ

ಅಂತರ ಜಿಲ್ಲಾ ಖದೀಮರ ಬಂಧನ: ಎಂಟು ಲಕ್ಷ ರೂ. ಮೌಲ್ಯದ ವಶ Read More »

ದೂರು ಕೊಡಲು ಹೋದ ಮಹಿಳೆಯ ಮಂಚಕ್ಕೆ ಕರೆದ ಪೋಲಿ ಇನ್ಸ್ ಪೆಕ್ಟರ್| ಸಂತ್ರಸ್ತೆಯಿಂದ ಪೊಲೀಸ್ ಆಯುಕ್ತರಿಗೆ ದೂರು

ಬೆಂಗಳೂರು: ದೂರು ನೀಡಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕೇಳಿ ಬಂದಿದೆ. ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಮಹಿಳೆಯೊಬ್ಬರು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗಲಾಟೆ ವಿಷಯಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆ ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿದ್ದು ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು,

ದೂರು ಕೊಡಲು ಹೋದ ಮಹಿಳೆಯ ಮಂಚಕ್ಕೆ ಕರೆದ ಪೋಲಿ ಇನ್ಸ್ ಪೆಕ್ಟರ್| ಸಂತ್ರಸ್ತೆಯಿಂದ ಪೊಲೀಸ್ ಆಯುಕ್ತರಿಗೆ ದೂರು Read More »

ನಟಿ ರೈಮಾ ಶಿಮು ಕೊಲೆ ಪ್ರಕರಣ| ಕೊಲೆ ಸಂಚಿನ ರೂವಾರಿ ಯಾರು ಗೊತ್ತೇ?

ಸಮಗ್ರ ನ್ಯೂಸ್: ಬಾಂಗ್ಲಾದೇಶಿ ನಟಿ ರೈಮಾ ಇಸ್ಲಾಂ ಶಿಮು ಅವರ ಭೀಕರ ಕೊಲೆಯಲ್ಲಿ ಭಾಗಿಯಾಗಿರುವುದಾಗಿ ಆಕೆಯ ಪತಿ ಶಖಾವತ್ ಅಲಿ ನೊಬೆಲ್ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಸೋಮವಾರ ಢಾಕಾದ ಕಡಮ್ತೋಳಿ ಪ್ರದೇಶದ ಅಲಿಪುರ ಸೇತುವೆ ಬಳಿ ಗೋಣಿಚೀಲದಲ್ಲಿ ರೈಮಾ ಅವರ ಮೃತದೇಹ ಪತ್ತೆಯಾಗಿತ್ತು ನಂತರ ಶಖಾವತ್ ಅಲಿ ನಾಪತ್ತೆಯಾಗಿದ್ದ. ನಟಿಯ ದೇಹದ ಮೇಲೆ ಹಲವಾರು ಗಾಯದ ಗುರುತುಗಳು ಕಂಡುಬಂದ ನಂತರದಲ್ಲಿ ನಾನಾರೀತಿ ಅನುಮಾನ ಶುರುವಾಗಿತ್ತು. ತಕ್ಷಣ ಕಂಡು ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈಗ

ನಟಿ ರೈಮಾ ಶಿಮು ಕೊಲೆ ಪ್ರಕರಣ| ಕೊಲೆ ಸಂಚಿನ ರೂವಾರಿ ಯಾರು ಗೊತ್ತೇ? Read More »

ಬ್ರಹ್ಮಾವರ: ಅಪಘಾದಲ್ಲಿ ಗಂಭೀರ ಗಾಯಗೊಂಡ ಮಹಿಳೆ ಮೃತ್ಯು

ಬ್ರಹ್ಮಾವರ: ರಸ್ತೆ ಅಪಘಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅಸುನೀಗಿದ್ದಾರೆ. ಸರಿತಾ ಪಿಂಟೊ (38) ಮೃತ ಮಹಿಳೆ. ಇವರು ಸೋಮವಾರ ಕೋಟದಲ್ಲಿರುವ ತನ್ನ ತಂದೆ-ತಾಯಿ ಮನೆಗೆ ಕಳೆದ ಕೆಲವು ದಿನಗಳ ಹಿಂದೆ ಕುವೈಟ್ ನಿಂದ ಆಗಮಿಸಿದ ಪತಿ ಅನಿಲ್ ಪಿಂಟೊ ಮತ್ತು 3 ವರ್ಷದ ಮಗುವಿನೊಂದಿಗೆ ದ್ವಿಚಕ್ರದಲ್ಲಿ ತೆರಳುತ್ತಿದ್ದ ವೇಳೆ ಬ್ರಹ್ಮಾವರದ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಅವರು ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಗ ಮತ್ತು ಪತಿ ಸಣ್ಣ ಪುಟ್ಟ ಗಾಯಗಳೊಂದಿಗೆ

ಬ್ರಹ್ಮಾವರ: ಅಪಘಾದಲ್ಲಿ ಗಂಭೀರ ಗಾಯಗೊಂಡ ಮಹಿಳೆ ಮೃತ್ಯು Read More »