ಮಂಗಳೂರು: ಪ್ರಿಯತಮೆಗಾಗಿ ಮೊಬೈಲ್ ಟವರ್ ಏರಿದ ಭಗ್ನಪ್ರೇಮಿ| ಪೊಲೀಸರು ಬಂದರೂ ಇಳಿಯದ ಆತ ಆಕೆಯ ಕರೆಗೆ ಕೆಳಗಿಳಿದ!
ಸಮಗ್ರ ನ್ಯೂಸ್: ಟವರ್ ಏರಿ ಭಗ್ನ ಪ್ರೇಮಿಯೋರ್ವ ಅವಾಂತರ ಸೃಷ್ಟಿಸಿದ ಘಟನೆ ಮಂಗಳೂರು ನಗರ ಹೊರವಲಯದ ಅಡ್ಯಾರುಕಟ್ಟೆ ಬಳಿ ನಡೆದಿದೆ. ಪ್ರೀತಿಸುತ್ತಿದ್ದ ಯುವತಿ ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ವಾಪಸ್ ಪಡೆಯುವಂತೆ ಒತ್ತಾಯಿಸಿ ಟವರ್ ಏರಿದ್ದ. ಅಡ್ಯಾರ್ ಬಳಿಯ ನಿವಾಸಿ ಸುಧೀರ್ ಎಂಬಾತ ಬಸ್ ಕ್ಲಿನರ್. ಈತ ಪರಂಗಿಪೇಟೆಯ ಮಾರಿಪಳ್ಳದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ನಿರ್ಲಕ್ಷ್ಯ ತೋರಿದರೂ ಸುಧೀರ್ ಪದೇ-ಪದೇ ಪ್ರೀತಿಸುವಂತೆ ಪೀಡಿಸುತ್ತಿದ್ದ. ಸುಧೀರ್ ಕಿರುಕುಳ ಸಹಿಸದ ಯುವತಿ ಬಂಟ್ವಾಳ ಪೊಲೀಸ್










