ಕ್ರೈಂ

ಮಂಗಳೂರು: ನಾಗನ ಕಲ್ಲುಗಳನ್ನು ಬೇರೆಡೆ ಎಸೆದು ವಿಕೃತಿ

ಸಮಗ್ರ ನ್ಯೂಸ್: ನಾಗಬನದಲ್ಲಿದ್ದ 6 ನಾಗನ ಕಲ್ಲುಗಳನ್ನು ಬೇರೆ ಬೇರೆ ಜಾಗದಲ್ಲಿ ಎಸೆದು ವಿಕೃತಿ ಮೆರೆದ ಘಟನೆ ಕಟೀಲು ಸಮೀಪದ ಮಲ್ಲಿಗೆಯಂಗಡಿಯಲ್ಲಿ ರವಿವಾರ ನಡೆದಿದೆ. ಕಟೀಲು ಮಲ್ಲಿಗೆಯಂಗಡಿಯ ಪಡುಸಾಂತ್ಯ ಭಂಡಾರಿ ಮನೆತನದ ನಾಗಬನದಲ್ಲಿದ್ದ ನಾಗನ ಕಲ್ಲುಗಳನ್ನು ದುಷ್ಕರ್ಮಿಗಳು ಬೇರೆ ಜಾಗದಲ್ಲಿ ಎಸೆದಿದ್ದಾರೆ. ರವಿವಾರ ಬೆಳಗ್ಗೆ ಮನೆತನದ ವ್ಯಕ್ತಿಯಾಬ್ಬರು ಈ ಜಾಗದಲ್ಲಿ ತೆರಳುತ್ತಿದ್ದ ವೇಳೆ ನಾಗನ ಕಲ್ಲು ಆವರಣದಿಂದ ಹೊರಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ ನಾಗಬನದಲ್ಲಿ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಎಸೆದು ಬೇರೆ ಬೇರೆ

ಮಂಗಳೂರು: ನಾಗನ ಕಲ್ಲುಗಳನ್ನು ಬೇರೆಡೆ ಎಸೆದು ವಿಕೃತಿ Read More »

ಕಡಬ: ತಲೆ ಕಡಿದ ದನ ಮತ್ತು ಮಾಂಸಕ್ಕಾಗಿ ತಂದ ಜಾನುವಾರು ವಶ; ಆರೋಪಿಗಳು ಪರಾರಿ

ಸಮಗ್ರ ನ್ಯೂಸ್: ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿರುವ ಕಡಬ ಪೊಲೀಸರು ತಲೆ ಕಡಿದ ದನ ಹಾಗೂ ಮಾಂಸಕ್ಕಾಗಿ ತಂದಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ಕಡಬದಲ್ಲಿ ನಡೆದಿದೆ. ಕಡಬ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಜಾನುವಾರುಗಳನ್ನು ಮಾಂಸ ಮಾಡಲಾಗುತ್ತಿದೆ ಎಂಬ ದೂರಿ‌ನ ಮೇರೆಗೆ ದಾಳಿ ನಡೆಸಿರುವ ಕಡಬ ಎಸ್‌ಐ ಆಂಜನೇಯ ರೆಡ್ಡಿ, ಎಎಸ್‌ಐ ಸುರೇಶ್ ಹಾಗೂ ಸಿಬ್ಬಂದಿಗಳು ಕೊಲ್ಲಲ್ಪಟ್ಟ ಒಂದು ದನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಫಾರೂಕ್ ಹಾಗೂ ಇನ್ನಿತರರು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ

ಕಡಬ: ತಲೆ ಕಡಿದ ದನ ಮತ್ತು ಮಾಂಸಕ್ಕಾಗಿ ತಂದ ಜಾನುವಾರು ವಶ; ಆರೋಪಿಗಳು ಪರಾರಿ Read More »

ಉಪ್ಪಿನಂಗಡಿ: ಮಹಿಳೆ ಮೇಲೆ ಕೈ ಮಾಡಿದ ನಾಲ್ವರ ವಿರುದ್ದ ದೂರು ದಾಖಲು

ಸಮಗ್ರ ನ್ಯೂಸ್: ಮನೆ ಕೆಲಸಗಾರನ ಮೇಲೆ ಹಲ್ಲೆ ನಡೆಸಿದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ಕೈ ಮಾಡಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕಡಬ ತಾಲೂಕಿನ ಕೌಕ್ರಾಡಿ ಮಣ್ಣಗುಂಡಿ ನಿವಾಸಿ ಬಿಜಿ ಎಂ. ಅವರ ಮನೆ ಕೆಲಸಗಾರ ಕುಮಾರ್ ಅವರು ಏಪ್ರಿಲ್ 27ರಂದು ಬಿಜಿ ಅವರ ಮನೆಯಿಂದ ಸಾಕು ದನವನ್ನು ಕೊಂಡೊಯ್ಯುವಾಗ ಮಹೇಶ್ ಮತ್ತು ಇತರ ಮೂವರು ಕುಮಾರ್‍ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಇದನ್ನು ನೋಡಿದ ಮೋಹನ್ ಎಂಬವರು

ಉಪ್ಪಿನಂಗಡಿ: ಮಹಿಳೆ ಮೇಲೆ ಕೈ ಮಾಡಿದ ನಾಲ್ವರ ವಿರುದ್ದ ದೂರು ದಾಖಲು Read More »

ಮಂಗಳೂರು: ಮಸೀದಿಗೆ ನುಗ್ಗಿ ಮಹಿಳೆಯರಿಗೆ ಗುಪ್ತಾಂಗ ತೋರಿದ ಯುವಕ- ಆರೋಪಿಯ ಬಂಧನ

ಸಮಗ್ರ ನ್ಯೂಸ್: ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ನುಗ್ಗಿ ಮಹಿಳೆಯರ ಕೈಹಿಡಿದು ಎಳೆದು, ಗುಪ್ತಾಂಗ ತೋರಿಸಿ‌‌ ಅಸಭ್ಯವಾಗಿ ವರ್ತಿಸಿರುವ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎಂದು‌ ಗುರುತಿಸಲಾಗಿದೆ. ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಕಳೆದ 28 ರಂದು ಏರ್ಪಡಿಸಲಾಗಿದ್ದು, ಈ ವೇಳೆ ಆರೋಪಿ ಸುಜಿತ್ ಶೆಟ್ಟಿಯು ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌

ಮಂಗಳೂರು: ಮಸೀದಿಗೆ ನುಗ್ಗಿ ಮಹಿಳೆಯರಿಗೆ ಗುಪ್ತಾಂಗ ತೋರಿದ ಯುವಕ- ಆರೋಪಿಯ ಬಂಧನ Read More »

ಭೀಕರ ಅಪಘಾತ; ಗುಜರಾತ್ ಹಾಗೂ ಕೇರಳ ಮೂಲದ ನಾಲ್ವರು ಸಾವು

ಸಮಗ್ರ ನ್ಯೂಸ್: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಕಾರಿನ ಟೈರ್ ಸಿಡಿದು ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗುಜರಾತ್ ಹಾಗೂ ಕೇರಳ ಮೂಲದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುಜರಾತ್ ಮೂಲದ ಕಾರು ದಾವಣಗೆರೆ ಕಡೆಯಿಂದ ಹುಬ್ಬಳ್ಳಿಗೆ ಹೊರಟಿದ್ದ ವೇಳೆ ಕಾರಿನ ಟೈರ್ ಬ್ಲಾಸ್ಟ್

ಭೀಕರ ಅಪಘಾತ; ಗುಜರಾತ್ ಹಾಗೂ ಕೇರಳ ಮೂಲದ ನಾಲ್ವರು ಸಾವು Read More »

ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ| ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಪ್ರಾಮಾಣಿಕ ಅಭ್ಯರ್ಥಿಗಳು

ಸಮಗ್ರ ನ್ಯೂಸ್: ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ಮರು ಪರೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿರುವ ಪ್ರಾಮಾಣಿಕ ಪಿಎಸ್​ಐ ಅಭ್ಯರ್ಥಿಗಳು ನಮಗೆ ನ್ಯಾಯಬೇಕು ಯಾರೋ ಮಾಡಿರುವ ತಪ್ಪಿಗೆ, ನಮಗೆ ಈ ರೀತಿ ಯಾಕೆ ಅನ್ಯಾಯ? ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತಂತೆ ಇಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್​ ಬಳಿ ಉಪವಾಸ ಕೈಗೊಳ್ಳಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಪಿಎಸ್‌ಐ ಎಕ್ಸಾಂನಲ್ಲಿ ನಡೆದಿದೆ ಎನ್ನಲಾಗಿರುವ

ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ| ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಪ್ರಾಮಾಣಿಕ ಅಭ್ಯರ್ಥಿಗಳು Read More »

ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ಸಮಗ್ರ ನ್ಯೂಸ್: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ‌ ಕೆಳಗೆ ಬಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಮೃತರನ್ನು ವಗ್ಗ ಸಮೀಪದ ಕಾಡಬೆಟ್ಟು‌ನಿವಾಸಿ ಯೋಗೀಶ್ ಎಂದು ಗುರುತಿಸಲಾಗಿದೆ ಇವರು ಎ.28 ರಂದು ಸಂಜೆ ವೇಳೆ‌ ಮನೆಯ‌ ಅಂಗಳದಲ್ಲಿದ್ದ ತೆಂಗಿನ ಮರದಿಂದ ಕಾಯಿ ಕೊಯ್ಯಲೆಂದು ಮರ ಏರಿದ್ದವರು, ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ತಕ್ಷಣ‌ ಅವರನ್ನು ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ‌ಪ್ರಕರಣ ದಾಖಲಾಗಿದೆ.

ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು Read More »

ತುಮಕೂರು: ಭೀಕರ ಅಪಘಾತದಲ್ಲಿ ನವವಿವಾಹಿತ ಸೇರಿ ಮೂವರು ಸಾವು| ನವವಧು ಗಂಭೀರ

ಸಮಗ್ರ ನ್ಯೂಸ್: ಲಾರಿ ಹಾಗೂ ಇವೋವಾ ಕಾರಿನ ನಡುವೆ ತುಮಕೂರಿನ ಚಿಕ್ಕ ಶೆಟ್ಟಿ ಕೆರೆ ಬಳಿ ಡಿಕ್ಕಿ ಸಂಭವಿಸಿದ್ದು, ದುರ್ಘಟನೆಯಲ್ಲಿ ನವ ವರ ಸೇರಿ ಮೂವರು ದರ್ಮರಣವನ್ನಪ್ಪಿದ್ದಾರೆ. ಮೃತರನ್ನು ಅರಸೀಕೆರೆ ತಾಲೂಕಿನ ಕಮಲಾಪುರ ವಾಸಿ ನಂಜುಂಡಪ್ಪ ಅವರ ಮಗ ಪ್ರಸನ್ನಕುಮಾರ್ (30), ಸಂತೋಷ್ (29), ಚಾಲಕ ಚಿನ್ನಪ್ಪ (30) ಎಂದು ಗುರ್ತಿಸಲಾಗಿದೆ. ವಾರದ ಹಿಂದೆಯಷ್ಟೇ ಅರಸೀಕೆರೆ ತಾಲೂಕಿನ ಕಮಲಾಪುರ ಗ್ರಾಮದ ಪ್ರಸನ್ನಕುಮಾರ್​ ಅವರಿಗೆ ಅದೇ ಗ್ರಾಮದ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ ಎಂಬುವವರ ಜೊತೆ ವಿವಾಹವಾಗಿತ್ತು. ಮನೆಗೆ

ತುಮಕೂರು: ಭೀಕರ ಅಪಘಾತದಲ್ಲಿ ನವವಿವಾಹಿತ ಸೇರಿ ಮೂವರು ಸಾವು| ನವವಧು ಗಂಭೀರ Read More »

ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ಮುಖಾಮುಖಿ – ಬೈಕ್ ಸವಾರನಿಗೆ ಗಾಯ

ಸಮಗ್ರ ನ್ಯೂಸ್: ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ತಾಯಿ, ಮಗ ಗಾಯಗೊಂಡಿರುವ ಘಟನೆ ಪುತ್ತೂರಿನ ನೆಹರೂನಗರ ಬಳಿ ನಡೆದಿದೆ. ನೆಹರೂ ನಗರ ವಿವೇಕಾನಂದ ಕಾಲೇಜು ಕ್ಯಾಂಪಸ್ ಬಳಿಯ ಸರ್ವಿಸ್ ಸ್ಟೇಷನ್ ಎದುರು ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ದಾರಂದಕುಕ್ಕು ನಿವಾಸಿ ಅಭಿಷೇಕ್ ಕೆ.ಎಸ್(24ವ)ಮತ್ತು ಹಿಂಬದಿ ಸವಾರೆಯಾಗಿದ್ದ ಅವರ ತಾಯಿ ಭಾರತಿ ಕೆ. ಎಸ್. (49)ರವರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ

ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ಮುಖಾಮುಖಿ – ಬೈಕ್ ಸವಾರನಿಗೆ ಗಾಯ Read More »

ಭಾರತ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಿಧಿವಶ

ಸಮಗ್ರ ನ್ಯೂಸ್: ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಯೋಸಹಜ ಖಾಯಿಲೆಗಳಿಂದಾಗಿ ಮಂಗಳವಾರ(ಎ.26) ಬೆಳಿಗ್ಗೆ ನಿಧನರಾಗಿದ್ದಾರೆ. 81 ವರ್ಷದ ಎಲ್ವೆರಾ, 60ರ ದಶಕದ ಭಾರತ ಹಾಕಿ ವಲಯದಲ್ಲಿ ಬ್ರಿಟ್ಟೊ ಸಹೋದರಿಯರೆಂದೇ (ರೀತಾ ಮತ್ತು ಮೇ) ಪ್ರಸಿದ್ಧಿಯಾಗಿದ್ದ ಮೂವರು ಸಹೋದರಿಯರಲ್ಲಿ ಹಿರಿಯವರು. ಈ ಮೂವರು 1960-67ರವರೆಗ ದೇಶಿ ಟೂರ್ನಿಗಳಲ್ಲಿ ತಮ್ಮದೇ ಪ್ರಾಬಲ್ಯ ಸಾಧಿಸಿ ಕರ್ನಾಟಕ ತಂಡಕ್ಕೆ 7 ರಾಷ್ಟ್ರೀಯ ಚಾಂಪಿಯನ್​ಶಿಪ್ ತಂದುಕೊಟ್ಟಿದ್ದರು. ಎಲ್ವಿರಾ ಭಾರತ ತಂಡವನ್ನು ಪ್ರತಿನಿಧಿಸಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಆಡಿದ್ದಾರೆ.

ಭಾರತ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಿಧಿವಶ Read More »