ಕ್ರೈಂ

ಹಾಸನದಲ್ಲಿ ಮುಂದುವರಿದ ಹೃದಯಾಘಾತ ಪ್ರಕರಣ| ಒಂದೇ ದಿನ 3 ಮಂದಿ ಸಾವು

ಸಮಗ್ರ ನ್ಯೂಸ್: ಹಾಸನದಲ್ಲಿ ಮಾತ್ರ ಈ ಒಂದು ಹೃದಯಾಘಾತದಿಂದ ಸಾವನಪುತ್ತಿರುವವರ ಪ್ರಕರಣಗಳು ಜನರಲ್ಲಿ ಆತಂಕ ಹೆಚ್ಚಿಸಿದೆ ಏಕೆಂದರೆ ಕಳೆದ 40 ದಿನಗಳಲ್ಲಿ ಇಂದಿನವರೆಗೆ ಒಟ್ಟು 21 ಜನರು ಈ ಒಂದು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಮರಣ ಮೃದಂಗ ಮುಂದುವರೆದಿದ್ದು ಕಳೆದ 40 ದಿನಗಳಲ್ಲಿ ಇದುವರೆಗೂ 21 ಜನರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಇದೀಗ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮಹಿಳೆ ಒಬ್ಬರು ಮನೆಯಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಜೆಪಿ ನಗರದ ಲೇಪಾಕ್ಷಿ […]

ಹಾಸನದಲ್ಲಿ ಮುಂದುವರಿದ ಹೃದಯಾಘಾತ ಪ್ರಕರಣ| ಒಂದೇ ದಿನ 3 ಮಂದಿ ಸಾವು Read More »

ಪುತ್ತೂರು: ಕೂರತ್ ಉರೂಸ್ ನಲ್ಲಿ ನೂಕುನುಗ್ಗಲು| ಹಲವರು ಅಸ್ವಸ್ಥ

ಸಮಗ್ರ ನ್ಯೂಸ್: ಮಸೀದಿಯ ಉರೂಸ್ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ ಹಲವರು ಅಸ್ವಸ್ಥಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರಿನ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮದಲ್ಲಿ ನಡೆದಿದೆ.ಅಸ್ವಸ್ಥಗೊಂಡವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 26ರಿಂದ 29ರವರೆಗೆ ಕಡಬ ತಾಲೂಕಿನ ಕಾಣಿಯೂರಿನ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉರೂಸ್ ಮುಬಾರಕ್‌ನ ಕೊನೆಯ ದಿನವಾದ ಭಾನುವಾರ ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ಇಂದು (ಜೂ.29) ಅನ್ನದಾನ ಕಾರ್ಯಕ್ರಮಕ್ಕೆ ಸುಮಾರು 30-40 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿತ್ತು.

ಪುತ್ತೂರು: ಕೂರತ್ ಉರೂಸ್ ನಲ್ಲಿ ನೂಕುನುಗ್ಗಲು| ಹಲವರು ಅಸ್ವಸ್ಥ Read More »

ಪುತ್ತೂರು: ಸಹಪಾಠಿಯಿಂದ ಗರ್ಭಿಣಿಯಾದ ಪ್ರಕರಣ| ಗಂಡು ಮಗುವಿಗೆ ಜನ್ಮ ನೀಡಿದ ಯುವತಿ

ಸಮಗ್ರ ನ್ಯೂಸ್: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿದ ಪ್ರಕರಣದಲ್ಲಿ ಗರ್ಭಿಣಿ ವಿದ್ಯಾರ್ಥಿನಿ ಶುಕ್ರವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನುವ ಮಾಹಿತಿ ಲಭಿಸಿದೆ. ವಿದ್ಯಾರ್ಥಿನಿ ಗರ್ಭಿಣಿ ಪ್ರಕರಣಕ್ಕೆ ಸಂಬಂಧಿಸಿ ಬಪ್ಪಳಿಗೆ ನಿವಾಸಿ ಕೃಷ್ಣ ಜೆ. ರಾವ್‌ (21) ವಿರುದ್ಧ ಈಗಾಗಲೇ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಲೇ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಸಂತ್ರಸ್ತೆ (21) ಪುತ್ತೂರು ನಗರ ಸಭೆಯ

ಪುತ್ತೂರು: ಸಹಪಾಠಿಯಿಂದ ಗರ್ಭಿಣಿಯಾದ ಪ್ರಕರಣ| ಗಂಡು ಮಗುವಿಗೆ ಜನ್ಮ ನೀಡಿದ ಯುವತಿ Read More »

ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ತೆರೆದು‌ ಲಕ್ಷಾಂತರ ರೂ. ವಂಚಿಸಿದ ಮಹಿಳೆ

ಸಮಗ್ರ ನ್ಯೂಸ್: ಸೌಜನ್ಯ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್​ನ ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬುವರು ನೀಡಿದ ದೂರಿನ‌ ಅನ್ವಯ ಪ್ರಕರಣ ದಾಖಲಾಗಿದೆ. ದೂರುದಾರ ರಾಜೇಶ್ ವೃತ್ತಿಯಲ್ಲಿ ಗಾಯಕರಾಗಿದ್ದು, ಅರವಿಂದ್ ವಿವೇಕ್​ ಎಂಬ ಫೇಸ್​ಬುಕ್​ ಪೇಜ್​​ನಲ್ಲಿ ರಾಜೇಶ್ ಲೈವ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ರಾಜೇಶ್​

ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ತೆರೆದು‌ ಲಕ್ಷಾಂತರ ರೂ. ವಂಚಿಸಿದ ಮಹಿಳೆ Read More »

ಮಂಗಳೂರು: ಎರಡೆರಡು ಬಾರಿ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದಿದ್ದ ಗಣಿ ಇಲಾಖೆ ಡಿಡಿ ಸಸ್ಪೆಂಡ್

ಸಮಗ್ರ ನ್ಯೂಸ್: ಕಚೇರಿಯಲ್ಲಿ ದರ್ಬಾರ್ ಮಾಡುತ್ತಿದ್ದ ಅಧಿಕಾರಿಯನ್ನು ಕೊನೆಗೂ ಅಮಾನತು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಡಿಡಿ ಕೃಷ್ಣವೇಣಿ ಅನ್ನು ಇಲಾಖೆ ತನಿಖೆ ಬಾಕಿ ಇರಿಸಿ ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಮಂಜುನಾಥ್ ಭಾನುವಾರ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್​​ ಶನಿವಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಮೂಲಕ ಕೃಷ್ಣವೇಣಿಯನ್ನು ಸೇವೆಯಿಂದ ಅಮಾನತುಗೊಳಿಸಿ ಮತ್ತು ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಡಿಡಿ ಕೃಷ್ಣವೇಣಿ ಅವರ ಮೇಲೆ

ಮಂಗಳೂರು: ಎರಡೆರಡು ಬಾರಿ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದಿದ್ದ ಗಣಿ ಇಲಾಖೆ ಡಿಡಿ ಸಸ್ಪೆಂಡ್ Read More »

ಬಂಟ್ವಾಳ: ಬೈಕಿನಲ್ಲಿ ತೆರಳುತ್ತಿದ್ದ ಸವಾರರನ್ನು ಬೆನ್ನತ್ತಿದ ವ್ಯಕ್ತಿ| ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಯುವಕನ ಮೇಲೆ ತಲವಾರು ದಾಳಿಯೆಂದು ಸುಳ್ಳುಸುದ್ದಿ ಪ್ರಚಾರ

ಸಮಗ್ರ ನ್ಯೂಸ್: ಬಂಟ್ವಾಳ ತಾಲೂಕಿನ ಸಜೀಪದ ದೇರಾಜೆಯಲ್ಲಿ‌ ತಲವಾರು ದಾಳಿ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅಲ್ಲಿ ನಿಜವಾಗಿ ಬೈಕಿನಲ್ಲಿ ತೆರಳುತ್ತಿದ್ದ ಸವಾರರನ್ನು ಓರ್ವ ವ್ಯಕ್ತಿ ಓಡಿಸಿಕೊಂಡು ಹೋದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ಮುಕ್ಬುಲ್ ಎಂಬವರು ಬೋಳಿಯಾರು ಕಡೆಯಿಂದ ಮೆಲ್ಕಾರಿಗೆ ಬೈಕಿನಲ್ಲಿ ಸಹಸವಾರರಾಗಿ ಹೋಗುತ್ತಿದ್ದ ಸಂದರ್ಭ ದೇರಾಜೆ ಎಂಬಲ್ಲಿ ಬೈಕಿನಲ್ಲಿ ಕುಳಿತ್ತಿದ್ದ ವ್ಯಕ್ತಿಯೊಬ್ಬ ಇವರ ಬೈಕನ್ನು ಹಿಂಬಾಲಿಸಿ ಓಡಿಸಿಕೊಂಡು ಬಂದಿದ್ದಾರೆ. ಈ ವೇಳೆ ಸವಾರರು ಬೈಕಿನ ವೇಗವನ್ನು ಹೆಚ್ಚಿಸಿ ತಪ್ಪಿಸಿಕೊಂಡು

ಬಂಟ್ವಾಳ: ಬೈಕಿನಲ್ಲಿ ತೆರಳುತ್ತಿದ್ದ ಸವಾರರನ್ನು ಬೆನ್ನತ್ತಿದ ವ್ಯಕ್ತಿ| ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಯುವಕನ ಮೇಲೆ ತಲವಾರು ದಾಳಿಯೆಂದು ಸುಳ್ಳುಸುದ್ದಿ ಪ್ರಚಾರ Read More »

ದ.ಕ‌ ಎಸ್ಪಿ ಅರುಣ್ ಗೆ ನೋಟೀಸ್ ನೀಡಿದ ಹೈಕೋರ್ಟ್| ರಾತ್ರೋರಾತ್ರಿ ಹಿಂದೂ ಮುಖಂಡರ ಮನೆಗೆ ನುಗ್ಗಿ ಫೋಟೋ ತೆಗೆಸಿದ್ದೇ ಮುಳುವಾಯ್ತೇ?

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಹಿಂದೂ ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಜಿಲ್ಲೆಯ ಹಿರಿಯ ಆರ್.ಎಸ್.ಎಸ್ ಮುಖಂಡ ಯು.ಜಿ.ರಾಧಾ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೋಲನೆ ನಡೆಸಿದ್ದರು. ಇದೀಗ ಎಸ್ ಪಿ ಡಾ.ಅರುಣ್ ಕುಮಾರ್ ಅವರಿಗೆ ಕಾರಣ ಕೇಳಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರಕರಣ ಸಂಬಂಧ ಸೂಕ್ತ ದಾಖಲೆ ಸಲ್ಲಿಸಬೇಕು. ಅಲ್ಲದೇ ಕಾನೂನು ಹೊರತಾಗಿ

ದ.ಕ‌ ಎಸ್ಪಿ ಅರುಣ್ ಗೆ ನೋಟೀಸ್ ನೀಡಿದ ಹೈಕೋರ್ಟ್| ರಾತ್ರೋರಾತ್ರಿ ಹಿಂದೂ ಮುಖಂಡರ ಮನೆಗೆ ನುಗ್ಗಿ ಫೋಟೋ ತೆಗೆಸಿದ್ದೇ ಮುಳುವಾಯ್ತೇ? Read More »

ಬಂಟ್ವಾಳ: ಗರ್ಭಿಣಿ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ| 15 ವರ್ಷಗಳ ಬಳಿಕ ಚಿಗುರಿದ ಕರುಳ ಕುಡಿಗೆ ಎಳ್ಳುನೀರು!!

ಸಮಗ್ರ ನ್ಯೂಸ್: ಪತಿಯೇ ಗರ್ಭಿಣಿ ಪತ್ನಿಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಬಡಗುಂಡಿ ಸಮೀಪ ನಡೆದಿದೆ. ಮನೆಯೊಂದರಲ್ಲಿ ಸಜೀಪದ ತಿಮ್ಮಪ್ಪ ಮೂಲ್ಯ (52) ಹಾಗೂ ಅವರ ಗರ್ಭಿಣಿ ಪತ್ನಿ ಜಯಂತಿ (45) ಅವರ ಮೃತದೇಹಗಳು ಇಂದು ಪತ್ತೆಯಾಗಿದ್ದವು. ಆದರೆ ಯಾವುದೋ ವಿಷಯಕ್ಕೆ ಪತ್ನಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಮೃತರ ಸಂಬಂಧಿಗಳ ದೂರಿನಂತೆ ಪ್ರಕರಣ ದಾಖಲಾಗಿದೆ. ಜಯಂತಿ ಅವರ ಮೃತದೇಹ ಕೋಣೆಯಲ್ಲಿ

ಬಂಟ್ವಾಳ: ಗರ್ಭಿಣಿ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ| 15 ವರ್ಷಗಳ ಬಳಿಕ ಚಿಗುರಿದ ಕರುಳ ಕುಡಿಗೆ ಎಳ್ಳುನೀರು!! Read More »

ಗಾಯಕಿ‌ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು| ವಿಚ್ಛೇದನಕ್ಕೆ ಅರ್ಜಿ

ಸಮಗ್ರ ನ್ಯೂಸ್: ಪುತ್ತೂರಿನ ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇದೀಗ ವಿಚ್ಚೇಧನಕ್ಕೆ ಪುತ್ತೂರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಅಖಿಲಾ ಪಜಿಮಣ್ಣು ಪುತ್ತೂರಿನ ಪಜಿಮಣ್ಣು ಎನ್ನುವ ಗ್ರಾಮದ ನಿವಾಸಿಯಾಗಿದ್ದು, ಕನ್ನಡ ಕೋಗಿಲೆ 1 ಹಾಗೂ 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿರುವ ಅಖಿಲಾ ಪಜಿಮಣ್ಣು ತಮ್ಮ ಸುಮಧುರ ಕಂಠದಿಂದ ಎಲ್ಲರ ಮನೆ ಮಾತಾಗಿದ್ದಾರೆ. ಇದೀಗ ಅವರ ಬಾಳಲ್ಲಿ ಬಿರುಗಾಳಿ ಎದ್ದಿದ್ದು ಅಖಿಲಾ ಪಜಿಮಣ್ಣು ಮತ್ತು ಆಕೆಯ ಪತಿ ಟಿ.ಆರ್. ಧನರಾಜ್

ಗಾಯಕಿ‌ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು| ವಿಚ್ಛೇದನಕ್ಕೆ ಅರ್ಜಿ Read More »

ಸುಹಾಸ್ ಶೆಟ್ಟಿ, ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ| ಪೊಲೀಸರ ವಿರುದ್ಧ NHRC ತನಿಖೆಗೆ ಆದೇಶ

ಸಮಗ್ರ ನ್ಯೂಸ್: ಕಳೆದ ತಿಂಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಕೊಲೆಯಾಗಿತ್ತು. ಅದಾದ ನಂತರ ಕೆಲವೇ ದಿನಗಳಲ್ಲಿ ರೆಹಿಮಾನ್ ಎನ್ನುವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಹೀಗಾಗಿ ಈ ಪ್ರಕರಣಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮಧ್ಯಪ್ರವೇಶಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪೋಲೀಸರ ವಿರುದ್ಧ ತನಿಖೆ ನಡೆಸಿ 2 ವಾರದಲ್ಲಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತನಿಖಾ ವಿಭಾಗದ ಡಿಜಿಗೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ

ಸುಹಾಸ್ ಶೆಟ್ಟಿ, ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ| ಪೊಲೀಸರ ವಿರುದ್ಧ NHRC ತನಿಖೆಗೆ ಆದೇಶ Read More »