ಕ್ರೈಂ

ಆರ್ಡರ್ ಮಾಡದೇ‌ ಪಾರ್ಸೆಲ್ ಬಂದ್ರೆ ತಗೊಳ್ಬೇಡಿ; ಇದೊಂದು ಪಕ್ಕಾ ಸ್ಕ್ಯಾಮ್ ಅಂತೆ!

ಸಮಗ್ರ ನ್ಯೂಸ್: ನಿಮ್ಮ ಹೆಸ್ರು, ಅಡ್ರೆಸ್, ಫೋನ್ ನಂಬರ್ ಎಲ್ಲಾ ಪಕ್ಕಾ ಇರುತ್ತೆ. ಆದ್ರೆ ನೀವ್ ಆ ಐಟಂ ಆರ್ಡರ್ ಮಾಡಿರಲ್ಲ. ಆದ್ರೂ ಅದು ನಿಮ್ಮ ಮನೆಗೇ ಬರುತ್ತೆ ಅಂದ್ರೆ ನೀವು ತಗೊಳ್ಳೋ‌ ಮೊದ್ಲು ಹುಷಾರಾಗಿರ್ಬೇಕು. ಯಾಕೆ ಗೊತ್ತಾ? ಈ ವಿಥೌಟ್ ಆರ್ಡರ್ ನಿಮಗೆ ಪಾರ್ಸೆಲ್ ಬಂದಿದೆ ಅಂದ್ರೆ ನೀವು ಹರಕೆಯ ಕುರಿಯಾಗ್ತೀರಿ ಹುಷಾರ್! ಹೌದು, ಇಂತದ್ದೊಂದು ಜಾಲ ಈಗ ದೇಶದಲ್ಲಿ ಸಕ್ರಿಯವಾಗಿದೆ. ಹೈದರಾಬಾದ್ ನ ಸೈಬರಾಬಾದ್ ಪೊಲೀಸರ ಸೈಬರ್ ಅಪರಾಧ ವಿಭಾಗವು ಮಂಗಳವಾರ ಇಂತಹ ಡೆಲಿವರಿಗಳ […]

ಆರ್ಡರ್ ಮಾಡದೇ‌ ಪಾರ್ಸೆಲ್ ಬಂದ್ರೆ ತಗೊಳ್ಬೇಡಿ; ಇದೊಂದು ಪಕ್ಕಾ ಸ್ಕ್ಯಾಮ್ ಅಂತೆ! Read More »

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಮಗುಚಿ ಬಿದ್ದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ರಾಷ್ಟ್ರೀಯ ಹೆದ್ದಾರಿಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು ಕಾರಿನಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ Read More »

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದು ಕೇರಳಿಗರಲ್ಲ; ಸ್ಥಳೀಯರೇ ಹತ್ಯೆ‌ ಮಾಡಿದ್ದಾರೆ – ಗೃಹ ಸಚಿವ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರುವಿನಲ್ಲಿ ನಡೆದಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಕುರಿತಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪೋಟಕ ಮಾಹಿತಿ ನೀಡಿದ್ದಾರೆ. ಈವರೆಗೆ ಕೇರಳದಿಂದ ಬಂದ ಹಂತಕರು ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಮಾಡಿದ್ದು, ಅವರಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ ಎಂದು ಭಾವಿಸಲಾಗಿತ್ತಾದರೂ ಆದರೆ ಹತ್ಯೆ ಮಾಡಿದ್ದು ಸ್ಥಳೀಯರೇ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ. ಕನ್ನಡದ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದು ಕೇರಳಿಗರಲ್ಲ; ಸ್ಥಳೀಯರೇ ಹತ್ಯೆ‌ ಮಾಡಿದ್ದಾರೆ – ಗೃಹ ಸಚಿವ Read More »

ಚಲಿಸುತ್ತಿದ್ದ ಸಾರಿಗೆ ಬಸ್ ನಿಂದ ಬಿದ್ದು ಮಹಿಳೆ ಸಾವು

ಬಳ್ಳಾರಿ: ಚಲಿಸುತ್ತಿದ್ದ ಸಾರಿಗೆ ಬಸ್‌ನಿಂದ ಬಿದ್ದು ಮಹಿಳೆ ಸಾವನಪ್ಪಿದ ಘಟನೆಯೊಂದು ತಾಲೂಕಿನ ವೇಣಿ ವೀರಾಪುರದ ಹೆದ್ದಾರಿಯಲ್ಲಿ ನಡೆದಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಮಹಿಳೆ ಬಾಗಿಲು ಬಳಿ ನಿಂತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ದುರಂತ ಸಂಭವಿಸಿದೆ ಎನ್ನಲಾಗಿದೆ. ಬಳ್ಳಾರಿಯಿಂದ ಹೊಸಪೇಟೆಗೆ ತೆರಳುತ್ತಿದ್ದ KA 34, F-1228 ನಂಬರ್‌ನ ಸಾರಿಗೆ ಬಸ್​​ನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದರು. ಬಸ್ ಚಲಿಸುತ್ತಿರುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕುಡುತಿನಿ ಠಾಣೆ ಪೊಲೀಸರು ಭೇಟಿ ನೀಡಿ

ಚಲಿಸುತ್ತಿದ್ದ ಸಾರಿಗೆ ಬಸ್ ನಿಂದ ಬಿದ್ದು ಮಹಿಳೆ ಸಾವು Read More »

ಹಬ್ಬದ ದಿನವೇ ಭೀಕರ ರಸ್ತೆ ಅಪಘಾತ; 7 ಜನ ಸಾವು

ಯಾದಗಿರಿ: ಭೀಕರ ರಸ್ತೆ ಅಪಘಾತದಲ್ಲಿ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ಯಾದಗಿರಿ ಜಿಲ್ಲೆಯ ಗುರುಮಟ್ಕಲ್ ಸಮೀಪ ನಡೆದಿದೆ. ಟ್ಯಾಂಕರ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ರಾಯಚೂರು ಜಿಲ್ಲೆ ಲಿಂಗಸುಗೂರು ಹಟ್ಟಿ ಪಟ್ಟಣದ ಒಂದೇ ಕುಟುಂಬದ 7 ಜನರು ಸಾವನ್ನಪ್ಪಿದ್ದಾರೆ. ತೆಲಂಗಾಣದ ಕೋಡಂಗಲ್ ಗೆ ಕಾರ್ಯಕ್ಕೆ ಹೋಗಿದ್ದರು. ಹಟ್ಟಿಗೆ ವಾಪಸ್ ಬರುವಾಗ ಭೀಕರ ಅಪಘಾತ ಸಂಭವಿಸಿದೆ. ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗುರುಮಠಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಹಬ್ಬದ ದಿನವೇ ಭೀಕರ ರಸ್ತೆ ಅಪಘಾತ; 7 ಜನ ಸಾವು Read More »

ಮಂಗಳೂರು: ಪ್ರವೀಣ್ ನೆಟ್ಟಾರ್ ಪ್ರಕರಣ ಎನ್ ಐಎ’ಗೆ ಹಸ್ತಾಂತರವಾಗಿಲ್ಲ-ಎಡಿಜಿಪಿ

ಸಮಗ್ರ ನ್ಯೂಸ್: ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ ಎನ್ ಐ ಎ ತನಿಖೆಗೆ ಸೂಚಿಸಿದೆ. ಆದರೆ, ಸದ್ಯ ಪ್ರಕರಣವನ್ನು ಪೊಲೀಸ್ ಇಲಾಖೆ ಎನ್ಐಎ’ಗೆ ಹಸ್ತಾಂತರ ಮಾಡಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಬೆಳ್ಳಾರೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಎನ್ಐಎ ತನಿಖಾ ತಂಡಕ್ಕೆ ಟ್ರಾನ್ಸ್ ಫರ್ ಆರ್ಡರ್ ಆದಾಗ ಅವರು ಇಲ್ಲಿಗೆ ಆಗಮಿಸುತ್ತಾರೆ. ಎನ್ಐಎ ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಪ್ರಕರಣದ ಎಲ್ಲಾ ಮಾಹಿತಿಗಳನ್ನು ಅವರಿಗೆ ನೀಡುತ್ತಿದ್ದೇವೆ. ಬೇರೆ

ಮಂಗಳೂರು: ಪ್ರವೀಣ್ ನೆಟ್ಟಾರ್ ಪ್ರಕರಣ ಎನ್ ಐಎ’ಗೆ ಹಸ್ತಾಂತರವಾಗಿಲ್ಲ-ಎಡಿಜಿಪಿ Read More »

ಭೀಕರ ಅಪಘಾತ; ಒಂದೇ ಕುಟುಂಬದ 6 ಮಂದಿ ಸಾವು

ಸಮಗ್ರ ನ್ಯೂಸ್: ಭೀಕರ ರಸ್ತೆ ಅಪಘಾತದಲ್ಲಿ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಗುರುಮಟ್ಕಲ್ ಸಮೀಪ ನಡೆದಿದೆ. ಟ್ಯಾಂಕರ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ರಾಯಚೂರು ಜಿಲ್ಲೆ ಲಿಂಗಸುಗೂರು ಹಟ್ಟಿ ಪಟ್ಟಣದ ಒಂದೇ ಕುಟುಂಬದ 6 ಜನರು ಸಾವನ್ನಪ್ಪಿದ್ದಾರೆ. ತೆಲಂಗಾಣದ ಕೋಡಂಗಲ್ ಗೆ ಹೋಗಿ ಹಟ್ಟಿಗೆ ವಾಪಸ್ ಬರುವಾಗ ಭೀಕರ ಅಪಘಾತ ಸಂಭವಿಸಿದೆ. ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗುರುಮಠಕಲ್ ಠಾಣೆ ಪೊಲೀಸರು ಭೇಟಿ

ಭೀಕರ ಅಪಘಾತ; ಒಂದೇ ಕುಟುಂಬದ 6 ಮಂದಿ ಸಾವು Read More »

ಪ್ರವೀಣ್ ಹಂತಕರನ್ನು ಟ್ರೇಸ್ ಮಾಡ್ತಿದ್ದೇವೆ, ಅಮಾಯಕರನ್ನು ಬಂಧಿಸಲ್ಲ – ಎಡಿಜಿಪಿ ಅಲೋಕ್ ಕುಮಾರ್

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಹತ್ಯೆ ನಡೆಸಿದವರು ಯಾರೆಂದು ಗೊತ್ತಾಗಿದೆ. ಅವರನ್ನು ಹಿಡಿದೇ ಹಿಡಿಯುತ್ತೇವೆ. ಜೊತೆಗೆ ಅದರ ಹಿಂದಿರುವ ತಂಡದ ಬಗ್ಗೆಯೂ ಮಾಹಿತಿ ಇದೆ, ನಾವು ಟ್ರೇಸ್ ಮಾಡ್ತೀವಿ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಾವು ಮೂವರನ್ನು ವಿಚಾರಣೆ ನಡೆಸುತ್ತಿದ್ದೇವೆ. ಪ್ರಮುಖ ಮಾಹಿತಿಗಳು ಸಿಕ್ಕಿವೆ. ಅಮಾಯಕರನ್ನು ನಾವು ಬಂಧನ ಮಾಡಲ್ಲ. ಯಾರು ಶಾಮೀಲಾತಿ ಹೊಂದಿದ್ದಾರೋ ಅವರನ್ನು ಬಂಧಿಸುತ್ತೇವೆ. ಸಂಚುಕೋರರು ಯಾರು ಅನ್ನೋದು ಗೊತ್ತಾಗಿದೆ. ಯಾರು

ಪ್ರವೀಣ್ ಹಂತಕರನ್ನು ಟ್ರೇಸ್ ಮಾಡ್ತಿದ್ದೇವೆ, ಅಮಾಯಕರನ್ನು ಬಂಧಿಸಲ್ಲ – ಎಡಿಜಿಪಿ ಅಲೋಕ್ ಕುಮಾರ್ Read More »

ಬೈಕ್ ಮತ್ತು ಲಾರಿ ನಡುವೆ ಅಪಘಾತ; ಮೂವರು ಸಾವು

ಮೈಸೂರು:  ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆಯೊಂದು ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿ ಬಳಿ ಮಂಗಳವಾರ ನಡೆದಿದೆ. ಮೃತರನ್ನು ಚಿಕ್ಕಲೇಗೋವಡಪುರ ನಿವಾಸಿಗಳಾದ ಸಣ್ಣಸ್ವಾಮಿ, ಪ್ರಭು, ಮಹೇಶ ಎಂದು ಗುರುತಿಸಲಾಗಿದೆ. ಹುಣಸೂರಿನಿಂದ ಎಚ್.ಡಿ.ಕೋಟೆ ಕಡೆಗೆ ಬೈಕಿನಲ್ಲಿ ಮೂವರು ಬರುತ್ತಿದ್ದರು ಎಂದು ಹೇಳಲಾಗುತ್ತಿದೆ. ಬೈಕ್ ನಲ್ಲಿದ್ದ ಮೂವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಗಳನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

ಬೈಕ್ ಮತ್ತು ಲಾರಿ ನಡುವೆ ಅಪಘಾತ; ಮೂವರು ಸಾವು Read More »

ಸ್ಕೇಟಿಂಗ್ ಮೂಲಕ ಕಾಶ್ಮೀರ ಕ್ಕೆ ತೆರಳುತ್ತಿದ್ದ ಕೇರಳದ ಯುವಕ ರಸ್ತೆ ಅಪಘಾತ ದಲ್ಲಿ ಬಲಿ

ಬೆಂಗಳೂರು: ಸ್ಕೇಟಿಂಗ್ ಬಗ್ಗೆ ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟಿಂಗ್ ಮೂಲಕ ತೆರಳುತ್ತಿದ್ದ ಕೇರಳದ ಯುವಕ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಕೇರಳದ ಅನಾಸ್ ಹಜಾಸ್(31) ಮೇ 29ರಂದು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದರು. ಸ್ಕೇಟಿಂಗ್ ಮೂಲಕವೇ 3,700 ಕಿ.ಮೀ. ದೂರ ಕ್ರಮಿಸುವುದು ಅವರ ಗುರಿಯಾಗಿತ್ತು. ಹರಿಯಾಣ ತಲುಪಿದ್ದ ಅನಾಸ್, ಅಲ್ಲಿನ ಕಾಲ್ಕಾದಲ್ಲಿ ನಡೆದ ಟ್ರಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸ್ಕೇಟಿಂಗ್ ಮೂಲಕ ತೆರಳುತ್ತಿದ್ದ ಅವರಿಗೆ ಟ್ರಕ್ ಬಡಿದಿತ್ತು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸ್ಕೇಟಿಂಗ್ ಮೂಲಕ ಕಾಶ್ಮೀರ ಕ್ಕೆ ತೆರಳುತ್ತಿದ್ದ ಕೇರಳದ ಯುವಕ ರಸ್ತೆ ಅಪಘಾತ ದಲ್ಲಿ ಬಲಿ Read More »