ಕ್ರೈಂ

ನೀವು ಆನ್ ಲೈನ್ ಆ್ಯಪ್ ಗಳಲ್ಲಿ ಖರೀದಿದಾರರೆ? ವಂಚನೆಗೆ ಒಳಗಾಗುತ್ತೀರಿ ಎಚ್ಚರ…!

ಸಮಗ್ರ ನ್ಯೂಸ್: ಆನ್ ಲೈನ್ ಆ್ಯಪ್ ಗಳ ಮೂಲಕ ತುಂಬಾ ಜನ ಬಹಳಷ್ಟು ಜನ ವಿವಿಧ ಉಡುಪು, ಗ್ರಹೋಪಯೋಗಿ ವಸ್ತುಗಳನ್ನು , ಸೌಂದರ್ಯ ವರ್ಧಕ, ಪಾದರಕ್ಷೆ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ಖರೀದಿಸುವವರು ಸಂತುಷ್ಟ ಗ್ರಾಹಕರೋ ಇಲ್ಲವೋ ಅದು ಅವರವರ ಭಾವಕ್ಕೆ. ಆದರೆ ಇಲ್ಲಿ ಇದನ್ನೆ ಬಂಡವಾಳವಾಗಿಸಿ ಖದೀಮರ ತಂಡವೊಂದು ಸದ್ದಿಲ್ಲದೆ ವಂಚನಾ ಜಾಲ ವ್ಯಾಪಿಸಿದೆ. ಹೌದು, ಒಂದು ಜಿ.ಕೆ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ಆನ್ ಲೈನ್ ಗ್ರಾಹಕರಿಗೆ ಸ್ಪೀಡ್ ಪೋಸ್ಟ್ ಮೂಲಕ ಕೂಪನ್ […]

ನೀವು ಆನ್ ಲೈನ್ ಆ್ಯಪ್ ಗಳಲ್ಲಿ ಖರೀದಿದಾರರೆ? ವಂಚನೆಗೆ ಒಳಗಾಗುತ್ತೀರಿ ಎಚ್ಚರ…! Read More »

ದೇಹದ ”ಹೀಟ್” ಕಡಿಮೆಗೊಳಿಸಲು ಮಡಿಕೇರಿಗೆ ತೆರಳಿದ ಕರಾವಳಿಯ ಭಿನ್ನ ಜೋಡಿಗಳು| ಹಿಂದೂ ಕಾರ್ಯಕರ್ತರಿಂದ ಸಿಕ್ತು ಸರಿಯಾದ ಆತಿಥ್ಯ!

ಸಮಗ್ರ ನ್ಯೂಸ್: ಕರಾವಳಿಯ ಮಂಗಳೂರು ಭಾಗದಿಂದ ಮಡಿಕೇರಿಗೆ ಅನ್ಯಧರ್ಮದ ಯುವತಿಯರನ್ನು ಕರೆದುಕೊಂಡು ಹೋದ ಯುವಕರಿಬ್ಬರಿಗೆ ಅಲ್ಲಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಇಬ್ಬರು ಯುವತಿಯರನ್ನು ಕರೆದುಕೊಂಡು ಹೋದ ಅನ್ಯಧರ್ಮದ ಯುವಕರು ಮಡಿಕೇರಿ ಆಸುಪಾಸಿನಲ್ಲಿ ತಿರುಗಾಡುತ್ತಿದ್ದಾಗ ಧರ್ಮದೇಟು ನೀಡಿದ್ದಾರೆ. ಇದರಲ್ಲಿ ಹಿಂದೂ ಧರ್ಮದ ಯುವಕನು ಕೂಡಾ ಸಹಕರಿಸಿದ್ದ ಎಂದು ತಿಳಿದು ಬಂದಿದೆ. ಕೆಎ 20 ರಿಜಿಸ್ಟ್ರೇಷನ್ ಹೊಂದಿದ್ದ ಹುಂಡೈ ಐ 20 ಕಾರಿನಲ್ಲಿ ಮುಸ್ಲಿಂ ಯುವಕರ ಜೊತೆ ಗೆಳತಿಯರಾದ ಮಂಗಳೂರಿನ ಯುವತಿಯರು

ದೇಹದ ”ಹೀಟ್” ಕಡಿಮೆಗೊಳಿಸಲು ಮಡಿಕೇರಿಗೆ ತೆರಳಿದ ಕರಾವಳಿಯ ಭಿನ್ನ ಜೋಡಿಗಳು| ಹಿಂದೂ ಕಾರ್ಯಕರ್ತರಿಂದ ಸಿಕ್ತು ಸರಿಯಾದ ಆತಿಥ್ಯ! Read More »

ಕೆರೆಗೆ ಹಾರಿ ಪ್ರಾಣಬಿಟ್ಟ ಭಗ್ನಪ್ರೇಮಿಗಳು

ಸಮಗ್ರ ನ್ಯೂಸ್: ಕೆರೆಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ಬೆಂಕಿಕೆರೆ ಗ್ರಾಮದಲ್ಲಿ ನಡದಿದೆ. ಚರಣ್‌ ಹಾಗೂ ನಾಗವೇಣಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇಬ್ಬರೂ ಬೆಂಗಳೂರು ಮೂಲದವರಾಗಿದ್ದು, ಇವರ ಪ್ರೀತಿಗೆ ಮನೆಯವರು ಒಪ್ಪದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಬುಧವಾರ ಚರಣ್‌ ಮತ್ತು ನಾಗವೇಣಿ ಇಬ್ಬರೂ ಬೈಕ್‌ನಲ್ಲಿ ಬೆಂಕಿಕೆರೆ ಬಳಿಯ ಕೆರೆ ಬಳಿ ಬಂದಿದ್ದರು. ಅಲ್ಲಿಂದ ಬೆಂಗಳೂರಿನಲ್ಲಿರುವ ತಂದೆ ಹಾಗೂ ಸ್ನೇಹಿತರಿಗೆ ಚರಣ್‌ ಕರೆ ಮಾಡಿದ್ದ. ತಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ಕೂಡಲೇ

ಕೆರೆಗೆ ಹಾರಿ ಪ್ರಾಣಬಿಟ್ಟ ಭಗ್ನಪ್ರೇಮಿಗಳು Read More »

ವಿದ್ಯಾರ್ಥಿನಿಗೆ ಬಿಯರ್ ಕುಡಿಸಿ ಲೈಂಗಿಕ ದೌರ್ಜನ್ಯ| ಕೃತ್ಯಕ್ಕೆ‌ ಸಹಕರಿಸಿದ ಪ್ರಿನ್ಸಿಪಾಲ್ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ವಿದ್ಯಾಕಾಶಿಯೆಂದೇ ಹೆಸರು ವಾಸಿಯಾದ ಧಾರವಾಡದ ಜಯನಗರದಲ್ಲಿನ ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ. ವಿದ್ಯಾರ್ಜನೆ ಮಾಡುವ ಜಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಖುದ್ದು ಈ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಅದಕ್ಕೆ ಪ್ರಿನ್ಸಿಪಾಲ್ ಸಾಥ್ ನೀಡುತ್ತಾರೆ ಅನ್ನೋ ಆರೋಪವೂ ಜೋರಾಗಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ

ವಿದ್ಯಾರ್ಥಿನಿಗೆ ಬಿಯರ್ ಕುಡಿಸಿ ಲೈಂಗಿಕ ದೌರ್ಜನ್ಯ| ಕೃತ್ಯಕ್ಕೆ‌ ಸಹಕರಿಸಿದ ಪ್ರಿನ್ಸಿಪಾಲ್ ಪೊಲೀಸ್ ವಶಕ್ಕೆ Read More »

ಮಂಗಳೂರು; ವ್ಯಕ್ತಿಗೆ ರಾಡ್ ನಿಂದ ಹಲ್ಲೆ, ಸ್ಥಿತಿ ಗಂಭೀರ

ಮಂಗಳೂರು: ನಿನ್ನೆ ಸಂಜೆ ವ್ಯಕ್ತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ನಡೆಸಿದ್ದು, ಹಲ್ಲೆಯಿಂದಾಗಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಳಿಯ ಬೋಳೂರಿನಲ್ಲಿ ನಿನ್ನೆ ಸಂಜೆ ನವೀನ್ ಸಾಲ್ಯಾನ್ ಎಂಬಾತನ ಮೇಲೆ ದೇವದಾಸ್ ಬೋಳೂರು ಮತ್ತು ಪುತ್ರ ಸಾಯಿ ಕಿರಣ್ ಎಂಬವರು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ನವೀನ್ ಅನ್ನು ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ರಾಡ್ ನಿಂದ ಹಲ್ಲೆಗೊಳಗಾದ ವ್ಯಕ್ತಿ

ಮಂಗಳೂರು; ವ್ಯಕ್ತಿಗೆ ರಾಡ್ ನಿಂದ ಹಲ್ಲೆ, ಸ್ಥಿತಿ ಗಂಭೀರ Read More »

ಸ್ಟಂಟ್ ಮಾಡಲು ಹೋಗಿ ಕಬಡ್ಡಿ ಆಟಗಾರ ಕುಸಿದು ಬಿದ್ದು, ಚಿಕಿತ್ಸೆ ಫಲಿಸದೇ ಮೃತ್ಯು

ತಮಿಳುನಾಡು: ಇತ್ತೀಚೆಗೆ ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿ ಕಬಡ್ಡಿ ಆಟಗಾರ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಪಟ್ಟಣದಲ್ಲಿರುವ ಮಾರಿಯಮ್ಮನ್ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಆಗಸ್ಟ್ 8 ರಂದು ಈ ಘಟನೆ ನಡೆದಿದೆ. 34 ವರ್ಷದ ವಿನೋದ್ ಕುಮಾರ್ ಕಬಡ್ಡಿ ಆಟಗಾರ ತನ್ನ ತಂಡದೊಂದಿಗೆ ಉತ್ಸವದಲ್ಲಿ ಭಾಗವಹಿಸಿದ್ದರು. ವಿನೋದ್ ಕುಮಾರ್ ಪಲ್ಟಿ ಹೊಡೆಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಪಲ್ಟಿ ಹೊಡೆಯುವಾಗ

ಸ್ಟಂಟ್ ಮಾಡಲು ಹೋಗಿ ಕಬಡ್ಡಿ ಆಟಗಾರ ಕುಸಿದು ಬಿದ್ದು, ಚಿಕಿತ್ಸೆ ಫಲಿಸದೇ ಮೃತ್ಯು Read More »

ಅನೈತಿಕ ಸಂಬಂಧ ಶಂಕೆ; ಪತ್ನಿಯ ಕೊಲೆಗೈದ ಪತಿ

ಸಮಗ್ರ ನ್ಯೂಸ್: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯನ್ನೇ ಪತಿ ಕೊಡಲಿಯಿಂದ ಬರ್ಬರವಾಗಿ ಕೊಲೆಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುಡದಾಳದಲ್ಲಿ ನಡೆದಿದೆ. ರೇಣುಕಾ(26) ಕೊಲೆಯಾದ ಮಹಿಳೆ. ಆರೋಪಿ ಜೆಟ್ಟೆಪ್ಪ ಪತ್ನಿಯನ್ನು ಕೊಲೆಗೈದು ಮಕ್ಕಳ ಸಮೇತ ಪೊಲೀಸರಿಗೆ ಶರಣಾಗಿದ್ದಾನೆ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ರೇಣುಕಾ ಸ್ವಗ್ರಾಮದ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಆರೋಪ ಕೇಳಿಬಂದಿತ್ತು. ಈ ಆಗಾಗ ಪತಿ-ಪತ್ನಿ ನಡುವೆ ಕಲಹ ಉಂಟಾಗುತ್ತಿತ್ತು. ಇಂದು ಬೆಳಗ್ಗೆ ಕೂಡ ಇದೇ ವಿಚಾರಕ್ಕೆ ಗಲಾಟೆ

ಅನೈತಿಕ ಸಂಬಂಧ ಶಂಕೆ; ಪತ್ನಿಯ ಕೊಲೆಗೈದ ಪತಿ Read More »

ಸುಳ್ಯ: ಹಟ ಮಾಡುತ್ತಿದ್ದ ಮಗುವಿಗೆ ಬರೆ ಹಾಕಿದ ಪಾಪಿ ತಾಯಿ

ಸಮಗ್ರ ನ್ಯೂಸ್: ಹಟ ಮಾಡುತ್ತಿದ್ದ ಮಗುವಿಗೆ ತಾಯಿಯೇ ಸಟ್ಟುಗ ಕಾಯಿಸಿ ಬರೆ ಹಾಕಿದ ಕ್ರೂರ ಘಟನೆ ಸುಳ್ಯ ನಗರದ ನಾವೂರಿನಿಂದ ವರದಿಯಾಗಿದೆ. ಕೆಲದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸುಳ್ಯ ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆಯವರು ಆ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ವೇಳೆ ಮಗುವಿನ ಮೈತುಂಬಾ ಗಾಯಗಳಾಗಿತ್ತು ಎಂದು ಸಿಡಿಪಿಒ ರಶ್ಮಿಯವರು ತಿಳಿಸಿದ್ದಾರೆ. ಸದ್ಯ ಮಗುವನ್ನು ಸಿ.ಡಿ.ಪಿ.ಒ. ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಗು

ಸುಳ್ಯ: ಹಟ ಮಾಡುತ್ತಿದ್ದ ಮಗುವಿಗೆ ಬರೆ ಹಾಕಿದ ಪಾಪಿ ತಾಯಿ Read More »

ಮಸೂದ್ ಹತ್ಯೆ ಪ್ರಕರಣ; ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ

ಸಮಗ್ರ ನ್ಯೂಸ್: ಗುಂಪಿನಿಂದ ಹಲ್ಲೆಗೊಳಗಾಗಿ ಸಾವಿಗೀಡಾದ ಬೆಳ್ಳಾರೆ ಠಾಣೆ ವ್ಯಾಪ್ತಿಯ ಕಳಂಜದ ಮಸೂದ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಎಲ್ಲಾ ಆರೋಪಿಗಳ ನ್ಯಾಯಾಂಗ ಕಸ್ಟಡಿಯನ್ನು ಆ. 29ರ ವರೆಗೆ ವಿಸ್ತರಿಸಿ ಸುಳ್ಯ ನಾಯಾಲಯ ಆದೇಶ ನೀಡಿದೆ. ಆರೋಪಿಗಳಾದ ಅಭಿಲಾಷ್‌, ಸುನಿಲ್‌ ಕೆ., ಸುಧೀರ್‌, ಶಿವಪ್ರಸಾದ್‌, ರಂಜಿತ್‌ ಬಿ., ಸದಾಶಿವ ಪೂಜಾರಿ, ರಂಜಿತ್‌, ಭಾಸ್ಕರ ಕೆ.ಎಂ. ಅವರ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಕಸ್ಟಡಿಯಲ್ಲಿದ್ದರು. ಮಂಗಳವಾರ ಕಸ್ಟಡಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಮಸೂದ್ ಹತ್ಯೆ ಪ್ರಕರಣ; ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ Read More »

ಸಂಬಂಧಿಕರ ಮನೆಗೆಂದು ಹೊರಟ ಯುವತಿ ನಾಪತ್ತೆ

ಸಮಗ್ರ ನ್ಯೂಸ್: ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರೈತಗಲ್ಲಿಯಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಗ್ರಾಮದ ನಿವಾಸಿ ಜ್ಯೋತಿ ಹಿಕ್ಕಡಿ(20) ನಾಪತ್ತೆಯಾದ ಯುವತಿ ಎಂದು ತಿಳಿದು ಬಂದಿದೆ. ವಿಜಯಪುರ ಜಿಲ್ಲೆಯ ಮಾದಾಪಟ್ಟಣದಲ್ಲಿ ಜ್ಯೋತಿ ಅವರ ತಂದೆ ಶ್ರೀಶೈಲ ಹಿಕ್ಕಡಿ ವಾಸವಾಗಿದ್ದರು. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಬೆಳಗಾವಿ‌ ನಗರದ ರೈತ ಗಲ್ಲಿಯಲ್ಲಿ ತಮ್ಮ ಸಂಬಂಧಿಕರ‌ ಮನೆಗೆ ಬಂದಿದ್ದ ಯುವತಿ, ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ

ಸಂಬಂಧಿಕರ ಮನೆಗೆಂದು ಹೊರಟ ಯುವತಿ ನಾಪತ್ತೆ Read More »