ಕ್ರೈಂ

ORS ಚಿಕಿತ್ಸಾ ಸಂಶೋಧಕ ಡಾ. ದಿಲೀಪ್ ಮಹಲ್ ಇನ್ನಿಲ್ಲ

ಸಮಗ್ರ ನ್ಯೂಸ್: ಅತಿಸಾರ ಅಥವಾ ಇತರೆ ಯಾವುದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್‌ (ORS) ಚಿಕಿತ್ಸೆ ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳನ್ನು ಕಾಪಾಡಿದ್ದ ಖ್ಯಾತ ವೈದ್ಯ ಡಾ.ದಿಲೀಪ್‌ ಮಹಲ್‌ ನಬೀಸ್‌ (87) ಭಾನುವಾರ ಕೋಲ್ಕತ್ತದಲ್ಲಿ (Kolkata) ನಿಧನರಾದರು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ದಿಲೀಪ್‌ ಅವರನ್ನು 2 ವಾರಗಳ ಹಿಂದೆ ಪಶ್ಚಿಮ ಬಂಗಾಳ ರಾಜಧಾನಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ರಾತ್ರಿ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪ್ರತಿಷ್ಠಿತ

ORS ಚಿಕಿತ್ಸಾ ಸಂಶೋಧಕ ಡಾ. ದಿಲೀಪ್ ಮಹಲ್ ಇನ್ನಿಲ್ಲ Read More »

ಅಸ್ವಸ್ಥ ವೃದ್ದೆಯನ್ನು ಜೀವಂತ ತಿಂದ ನಾಯಿಗಳು| ವೃದ್ದೆಯ ಗುರುತು ಪತ್ತೆಗಾಗಿ ಪೋಲೀಸರ ಶೋದ|

ಸಮಗ್ರ ನ್ಯೂಸ್: ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ಬೀದಿನಾಯಿಗಳು ತಿಂದ ಬೀಭತ್ಸ ಘಟನೆ ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ದೇವಲ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಅಪರಿಚಿತ ವಾಹನವೊಂದು ವೃದ್ಧೆಯನ್ನು ಡಿಕ್ಕಿ ಹೊಡೆದಿತ್ತು. ಈ ವೇಳೆ ವಾಹನ ಚಾಲಕ ವೃದ್ಧೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮತ್ತೆ ರಸ್ತೆ ಪಕ್ಕದಲ್ಲಿ ಬಿಸಾಡಿ ಪರಾರಿಯಾಗಿದ್ದಾನೆ. ಅಸ್ವಸ್ಥಗೊಂಡ ವೃದ್ದೆಯನ್ನು 4 5 ಬೀದಿನಾಯಿಗಳು ಸೇರಿಕೊಂಡು ಸಂಪೂರ್ಣವಾಗಿ ತಿಂದುಹಾಕಿ ಅಸ್ತಿಪಂಜರ ರೂಪದಲ್ಲಿ ವೃದ್ದೆಯ ಶವ ಪತ್ತೆಯಾಗಿದೆ. ವೃದ್ಧೆಯ ಶವವನ್ನು

ಅಸ್ವಸ್ಥ ವೃದ್ದೆಯನ್ನು ಜೀವಂತ ತಿಂದ ನಾಯಿಗಳು| ವೃದ್ದೆಯ ಗುರುತು ಪತ್ತೆಗಾಗಿ ಪೋಲೀಸರ ಶೋದ| Read More »

ಬಾಕ್ಸ್ ಚರಂಡಿ ಕಾಮಗಾರಿ: ಗ್ರಾ.ಪಂ ಸದಸ್ಯರಿಂದ ಆರೋಪ ಪ್ರತ್ಯಾರೋಪ

ಸಮಗ್ರ ನ್ಯೂಸ್: ಗ್ರಾ.ಪಂ ವ್ಯಾಪ್ತಿಯಲ್ಲಿನ ನರೇಗಾ ಯೋಜನೆಯಲ್ಲಿನ ಬಾಕ್ಸ್ ಚರಂಡಿ ಕಾಮಗಾರಿಯ ಬಗ್ಗೆ ಗ್ರಾ.ಪಂ ಸದಸ್ಯರಿಬ್ಬರು ಪ್ರತ್ಯೇಕವಾಗಿ ಪತ್ರಿಕಾ ಹೇಳಿಕೆ ನೀಡಿ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಕೊಟ್ಟಿಗೆಹಾರ‌ದ ಬಿ ಹೊಸಹಳ್ಳಿ ಗ್ರಾ.ಪಂ ಸದಸ್ಯರಾದ ಶಿವಪ್ರಸಾದ್ ಬಿ.ಇ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ, ಬಿ.ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿನ ನರೇಗಾ ಯೋಜನೆಯಲ್ಲಿನ ಬಾಕ್ಸ್ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದ್ದು, ನಿರ್ಮಾಣಗೊಂಡ ಕೆಲವೇ ದಿನದಲ್ಲಿ ಕುಸಿದು ಬಿದ್ದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಂಬಂಧಿಸಿದ ಅಭಿವೃದ್ಧಿ ಅಧಿಕಾರಿಗಳಿಗೆ ಕೇಳಿಕೊಂಡರು ಯಾವುದೇ

ಬಾಕ್ಸ್ ಚರಂಡಿ ಕಾಮಗಾರಿ: ಗ್ರಾ.ಪಂ ಸದಸ್ಯರಿಂದ ಆರೋಪ ಪ್ರತ್ಯಾರೋಪ Read More »

ಮಂಗಳೂರು: ಬಸ್- ಸ್ಕೂಟಿ ಡಿಕ್ಕಿ| 12ರ ಬಾಲಕ ದುರ್ಮರಣ

ಸಮಗ್ರ ನ್ಯೂಸ್: ಅತೀ ವೇಗದಿಂದ ಬಂದ ಬಸ್ಸೊಂದು ದ್ವಿಚಕ್ರ ವಾಹನ ಸವಾರರಿಗೆ ಬಡಿದು 12 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ಮಂಗಳೂರಿನ ಲಾಲ್‌ಭಾಗ್‌ ಬಳಿ ನಡೆದಿದೆ. ಮಂಗಳೂರು – ಕಿನ್ನಿಗೋಳಿ – ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್ಸು ಇನ್ನೊಂದು ಬಸ್ಸನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಬಂದು ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದೆ.ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೆ, ಸಹಸವಾರ 12ರ ಹರೆಯದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಘಟನಾ

ಮಂಗಳೂರು: ಬಸ್- ಸ್ಕೂಟಿ ಡಿಕ್ಕಿ| 12ರ ಬಾಲಕ ದುರ್ಮರಣ Read More »

ಸಿದ್ದಾರೂಢ ಮಠದ ಗೇಟಿಗೆ ನೇಣು ಬಿಗಿದುಕೊಂಡು ವ್ಯಕ್ತಿ‌ ಆತ್ಮಹತ್ಯೆ

ಸಮಗ್ರ ನ್ಯೂಸ್: ಸಿದ್ಧಾರೂಢ ಮಠದ ಗೇಟಿಗೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಖಂಡೆರಾಯನಹಳ್ಳಿ ತಾಂಡಾದಲ್ಲಿ ಘಟನೆ ನಡೆದಿದೆ. ಮಂಜಪ್ಪ ಲಮಾಣಿ (50) ಮೃತ ವ್ಯಕ್ತಿ. ಮಠದ ಟ್ರಸ್ಟ್ ಮತ್ತು ಮಂಜಪ್ಪ ಲಮಾಣಿ ನಡುವೆ ಜಾಗದ ವಿಚಾರವಾಗಿ ಹಲವು ವರ್ಷಗಳಿಂದ ತಗಾದೆ ಇತ್ತು. ಸಿದ್ಧಾರೂಢ ಮಠದ ಟ್ರಸ್ಟ್‌ನವರು ಮಂಜಪ್ಪ ಅವರ ಭೂಮಿಯನ್ನು ಬಳಸಿಕೊಂಡಿದ್ದಾರೆ ಎನ್ನುವ ಆರೋಪವಿತ್ತು. ಈ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಾಣೆಬೇನ್ನೂರು ಗ್ರಾಮೀಣ ಪೊಲೀಸ್

ಸಿದ್ದಾರೂಢ ಮಠದ ಗೇಟಿಗೆ ನೇಣು ಬಿಗಿದುಕೊಂಡು ವ್ಯಕ್ತಿ‌ ಆತ್ಮಹತ್ಯೆ Read More »

ಪರಿಸರ ಸಂರಕ್ಷಕ ಕಲ್ಮನೆ ಕಾಮೇ ಗೌಡ ಇನ್ನಿಲ್ಲ

ಸಮಗ್ರ ನ್ಯೂಸ್: ಬೆಟ್ಟದ ಮೇಲೆ 15ಕಟ್ಟೆಗಳನ್ನು ಕಟ್ಟುವ ಮೂಲಕ ಪ್ರಸಿದ್ದಿ ಪಡೆದಿದ್ದ ಪರಿಸರ ಸಂರಕ್ಷಕ ಕಲ್ಮನೆ ಕಾಮೇಗೌಡ(83) ಸೋಮವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಮೃತರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ನಿವಾಸಿಗಳಾಗಿದ್ದರು. ವೃತ್ತಿಯಲ್ಲಿ ಕುರಿಗಾಹಿ ಆಗಿದ್ದ ಇವರು ಕುರಿ ಮಾರಿ ಸಂಪಾದಿಸಿದ ಹಣದಲ್ಲಿ ಬೆಟ್ಟದ ಮೇಲೆ ಕಟ್ಟೆಗಳನ್ನು ಕಟ್ಟಿಸಿ ಪ್ರತಿ ಕಟ್ಟೆಗೂ ದೇವರ ಹಾಗೂ ತಮ್ಮ ಮೊಮ್ಮಕ್ಕಳ ಹೆಸರನ್ನು ಇಟ್ಟಿದ್ದರು. ಪರಿಸರ ಸಂರಕ್ಷಣೆಗಾಗಿ ಪಣ ತೊಟ್ಟಿದ ಇವರು ಬೆಟ್ಟದ ಮೇಲಿನ ಕಟ್ಟೆಗಳನ್ನು ಸಂರಕ್ಷಿಸುತ ಬೆಟ್ಟದ

ಪರಿಸರ ಸಂರಕ್ಷಕ ಕಲ್ಮನೆ ಕಾಮೇ ಗೌಡ ಇನ್ನಿಲ್ಲ Read More »

ಪರೇಶ್ ಮೇಸ್ತಾ ಕೊಲೆ ಪ್ರಕರಣ| ಮರು ತನಿಖೆಗೆ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ

ಸಮಗ್ರ‌ ನ್ಯೂಸ್: ಹೊನ್ನಾವರದ ಪರೇಶ್ ಮೇಸ್ತಾ ಕೊಲೆಯಾಗಿಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ವರದಿ ಬೆನ್ನಲ್ಲೇ ಇದೀಗ ಪರೇಶ್ ಮೆಸ್ತಾ ಹತ್ಯೆ ಪ್ರಕರಣವನ್ನು ಮರು ತನಿಖೆಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ. ಸಿಬಿಐ ವರದಿಗೆ ಪರೇಶ್ ಮೆಸ್ತಾ ತಂದೆ ಕಮಲಾಕರ ಮೇಸ್ತಾ ಕೂಡಾ ಅಸಮಾಧಾನ ವ್ಯಕ್ತಪಡಿಸಿ, ಕೇಸ್‍ನ ಮರು ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಬಿಐ ವರದಿ ಬಂದು ಈಗಾಗಲೇ ಎರಡು ವಾರಕ್ಕೂ ಹೆಚ್ಚು ಕಾಲವಾಗಿದ್ದು, ಮರು ತನಿಖೆ ಆದೇಶ ಮಾಡಬೇಕೆಂದು ಒತ್ತಡ ಜೋರಾಗಿದೆ. ಹೊನ್ನಾವರದಲ್ಲಿ

ಪರೇಶ್ ಮೇಸ್ತಾ ಕೊಲೆ ಪ್ರಕರಣ| ಮರು ತನಿಖೆಗೆ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ Read More »

ಪುತ್ತೂರು: ರೈಲಿನಡಿಗೆ ಬಿದ್ದು ಯುವಕ ಸಾವು

ಸಮಗ್ರ ನ್ಯೂಸ್: ರೈಲಿನಡಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಅ.16 ರಂದು ಸಂಜೆ ಮಿತ್ತೂರಿನಲ್ಲಿ ನಡೆದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಕಬಕ-ಪುತ್ತೂರು ರೈಲ್ವೆ ನಿಲ್ದಾಣಕ್ಕೆ ತರಲಾಗಿದ್ದು, ರೈಲಿನಡಿ ಬಿದ್ದಿದ್ದರಿಂದ ಮೃತದೇಹವು ಛಿದ್ರಗೊಂಡಿದೆ. ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ರೈಲಿನ ಪೈಲೆಟ್ ಚಲಿಸುತ್ತಿರುವ ರೈಲನ್ನು ನಿಲ್ಲಿಸಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆ ತಂದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆ ನಡೆದ ಸಂದರ್ಭ ರೈಲ್ವೇ

ಪುತ್ತೂರು: ರೈಲಿನಡಿಗೆ ಬಿದ್ದು ಯುವಕ ಸಾವು Read More »

ಸೀರಿಯಲ್ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ

ಸಮಗ್ರ ನ್ಯೂಸ್: ಜನಪ್ರಿಯ ಟಿವಿ ಸೀರಿಯಲ್ ನಟಿ ವೈಶಾಲಿ ಟಕ್ಕರ್ ಇಂದೋರ್’ನ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತೇಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಹಿಂದಿಯ ʼಸಸುರಾಲ್ ಸಿಮರ್ ಕಾʼ, ʼಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ಧಾರಾವಾಹಿಯಲ್ಲಿ ನಟಿಸಿ, ಬಳಿಕ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ವೈಶಾಲಿ ಕಳೆದ ವರ್ಷದಿಂದ ಇಂದೋರ್‌ ನಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸೀರಿಯಲ್ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ Read More »

ಹಾಸನ: ಯಮಸ್ವರೂಪಿಯಾದ ಹಾಲಿನ ಟ್ಯಾಂಕರ್| ಮಕ್ಕಳ ಶವದ ಮುಂದೆ ಕುಟುಂಬಸ್ಥರ ಆಕ್ರಂದನ| ರಾಂಗ್ ರೂಟ್ ಡ್ರೈವಿಂಗ್ ನಿಂದಾಯಿತೇ ಅವಘಡ

ಸಮಗ್ರ ನ್ಯೂಸ್: ಅರಸೀಕೆರೆ ತಾಲ್ಲೂಕಿನ ಗಾಂಧಿನಗರ ಬಳಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟ ಪ್ರಕರಣದಲ್ಲಿ ರಾಂಗ್​ ರೂಟ್​ನಲ್ಲಿ ಬಂದ ಹಾಲಿನ ಲಾರಿಯೇ ಮುಖ್ಯ ದೋಷಿ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಲಾರಿ ಚಾಲಕ ಮಿಲ್ಕ್​ ಟ್ಯಾಂಕರ್ ಅನ್ನು ರಾಂಗ್​ ರೂಟ್​ನಲ್ಲಿ ತಂದಿದ್ದರಿಂದ ಟೆಂಪೊ ಹಾಲಿನ ಲಾರಿ, ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆಯಿತು. ಜಿಗ್​-ಜಾಗ್ ರೀತಿಯಲ್ಲಿ ಟೆಂಪೊದ ಹಿಂದೆ ಮತ್ತು ಮುಂದೆ ಹಾನಿಯಾಯಿತು. ಹೀಗಾಗಿಯೇ ಸಾವಿನ ಸಂಖ್ಯೆ ಹೆಚ್ಚಾಯಿತು. ಬಸ್​ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಹಾಗೂ ಟೆಂಪೊ

ಹಾಸನ: ಯಮಸ್ವರೂಪಿಯಾದ ಹಾಲಿನ ಟ್ಯಾಂಕರ್| ಮಕ್ಕಳ ಶವದ ಮುಂದೆ ಕುಟುಂಬಸ್ಥರ ಆಕ್ರಂದನ| ರಾಂಗ್ ರೂಟ್ ಡ್ರೈವಿಂಗ್ ನಿಂದಾಯಿತೇ ಅವಘಡ Read More »