ಮಂಗಳೂರು ಸ್ಪೋಟ ಪ್ರಕರಣದ ಶಂಕಿತನಿಗೆ ಮಲೆನಾಡು ನಂಟು| ತುಂಗಾ ತೀರದಲ್ಲಿ ನಡೆದಿತ್ತು ಬಾಂಬ್ ಸ್ಪೋಟದ ಕಸರತ್ತು
ಸಮಗ್ರ ನ್ಯೂಸ್: ಮಂಗಳೂರಿನ ಪಂಪ್ ವೇಲ್ ನಲ್ಲಿ ಆಟೋದಲ್ಲಿ ಕುಕ್ಕರ್ ಸ್ಫೋಟಗೊಂಡ ಪ್ರಕರಣದ ಆರೋಪಿ ಶಾರೀಖ್ ನನ್ನು ಪೊಲೀಸರು ಬಂಧಿಸಿದ್ದು, ಈತ ಶಿವಮೊಗ್ಗದಲ್ಲಿ ಈ ಹಿಂದೆ ಉಗ್ರರನ್ನು ಬೆಂಬಲಿಸಿ ಪೋಸ್ಟರ್ ಅಂಟಿಸುವುದು ಹಾಗೂ ತುಂಗಾ ನದಿಯಲ್ಲಿ ಬಾಂಬ್ ಸ್ಫೋಟದ ಪ್ರಯೋಗ ನಡೆಸಿದವನು ಎಂಬುದು ತಿಳಿದು ಬಂದಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೂಲದ ಶಾರೀಕ್ ಬಂಧಿತ ಆರೋಪಿಯಾಗಿದ್ದು, ಈತ ಶಿವಮೊಗ್ಗದ ತುಂಗಾ ನದಿಯಲ್ಲಿ ಸ್ಫೋಟದ ಅಭ್ಯಾಸ ನಡೆಸಿದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ. ಇದೀಗ ಮಂಗಳೂರು ಸ್ಫೋಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ತುಂಗಾ ನದಿಯ








