ಕ್ರೈಂ

ಯೋಗಿ ಆದಿತ್ಯನಾಥ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ| ಯುಪಿ ಸಿಎಂ ನಿವಾಸದಲ್ಲಿ ಬಿಗಿ ಭದ್ರತೆ

ಸಮಗ್ರ ನ್ಯೂಸ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನಿವಾಸಕ್ಕೆ ಬಾಂಬ್‌ ದಾಳಿ ಮಾಡುವ ಕುರಿತು ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳಿಗೆ ಬೆದರಿಕೆ ಕರೆ ಬಂದಿದ್ದು, ಲಖನೌನಲ್ಲಿರುವ ಸಿಎಂ ಯೋಗಿ ನಿವಾಸದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬ ಸಿಎಂ ಯೋಗಿ ನಿವಾಸದ ಸುತ್ತ ಬಾಂಬ್‌ ಇರಿಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾನೆ. ಇದರಿಂದಾಗಿ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯು ನಿವಾಸದ ಸುತ್ತ ಭಾರಿ ತಪಾಸಣೆ ನಡೆಸಿದ್ದಾರೆ. ಇದಾದ ಬಳಿಕ ಯಾವುದೇ ಬಾಂಬ್‌

ಯೋಗಿ ಆದಿತ್ಯನಾಥ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ| ಯುಪಿ ಸಿಎಂ ನಿವಾಸದಲ್ಲಿ ಬಿಗಿ ಭದ್ರತೆ Read More »

ಮಕ್ಕಳಾಗದ ಕೊರಗು; ಆತ್ಮಹತ್ಯೆ ಮಾಡಿಕೊಂಡ ಯುವಕ

ಸಮಗ್ರ ನ್ಯೂಸ್: ಎಲ್ಲರೂ ಮದುವೆಯಾದ ಮೇಲೆ ಮಕ್ಕಳನ್ನು ಬಯಸುವುದು ಸಹಜ. ಆದರೆ ಕೆಲವರಿಗೆ ಅವರ ಬಯಕೆ ಈಡೇರುವುದಿಲ್ಲ. ಇಲ್ಲೊಬ್ಬ ಯುವಕನಿಗೂ ಹಾಗೆಯೇ ಆಗಿದ್ದು ಮದುವೆಯಾಗಿ ಐದು ವರ್ಷಗಳಾಗಿದ್ದು ಮಕ್ಕಳಾಗಿಲ್ಲ. ಈತನಿಗೆ ಮಕ್ಕಳಿಲ್ಲದ ಕೊರಗು ಬಾಧಿಸಿದ್ದು ಪತ್ನಿ ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಧರ್ಮರಾಜು(28) ಎಂದು ಗುರುತಿಸಲಾಗಿದ್ದು ಈತ ಜಂಗಲ್ ರೆಸಾರ್ಟ್ ನ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್​ನಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಐದು ವರ್ಷಗಳಿಂದ

ಮಕ್ಕಳಾಗದ ಕೊರಗು; ಆತ್ಮಹತ್ಯೆ ಮಾಡಿಕೊಂಡ ಯುವಕ Read More »

ಪ್ರೇಮಿಗಳ ದಿನದಂದು ಮನೆ ಟೆರೇಸ್ ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ದ ಮಗಳು| ತಾಯಿಯಿಂದ ಸಿಕ್ತು ಬಿಸಿಬಿಸಿ ಕಜ್ಜಾಯ! ಇಲ್ಲಿದೆ ವಿಡಿಯೋ

ಪ್ರೇಮಿಗಳ ದಿನ ಎಲ್ಲೆಡೆ ಲವ್ ಬರ್ಡ್‌ಗಳು ಓಡಾಡುವುದನ್ನು ನೋಡಬಹುದು. ತಮ್ಮ ಪ್ರೀತಿಪಾತ್ರರನ್ನು ಈ ದಿನ ಭೇಟಿ ಮಾಡಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಿರುವಾಗ ಆಕೆಯೂ ಹಾಗೆ ಮಾಡಿದಳು. ಮನೆಯವರ ಒಪ್ಪಿಗೆಯಿಲ್ಲದೆ ಮನೆಯಿಂದ ಹೊರ ಹೋಗುವುದು ಅಸಾಧ್ಯವೆಂದು ತಿಳಿದು ಮನೆಯ ಟೆರೇಸ್‌ನಲ್ಲಿ ಲವರ್‌ನ್ನು ಭೇಟಿಯಾದಳು. ಆದರೆ ಅಷ್ಟರಲ್ಲೇ ತನ್ನ ತಾಯಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಉತ್ತರಭಾರತದಲ್ಲಿ ಈ ಘಟನೆ ನಡೆದಿದೆ. ಮುಂದೆ ನಡೆದದ್ದು ಮಾರಿಹಬ್ಬ… ತಾಯಿಯು ತನ್ನ ಚಪ್ಪಲಿ (Slippers)ಗಳನ್ನು ಎತ್ತಿಕೊಂಡು ಇಬ್ಬರನ್ನು ಹೊಡೆಯಲು ಹಿಂಜರಿಯಲಿಲ್ಲ, ಬಳಕೆದಾರರು ಇಡೀ ಘಟನೆಯ ವೀಡಿಯೊವನ್ನು

ಪ್ರೇಮಿಗಳ ದಿನದಂದು ಮನೆ ಟೆರೇಸ್ ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ದ ಮಗಳು| ತಾಯಿಯಿಂದ ಸಿಕ್ತು ಬಿಸಿಬಿಸಿ ಕಜ್ಜಾಯ! ಇಲ್ಲಿದೆ ವಿಡಿಯೋ Read More »

ಅಥಣಿ: ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಬನಜವಾಡ ಗ್ರಾಮದ ಶ್ರೀದೇವಿ ಮಾಂಗ ಹಾಗೂ ಆಗ್ರಾಣಿ ಇಂಗಳಗಾಂವ್ ಗ್ರಾಮದ ಕಲ್ಪನಾ ಮಾದರ್ ಗಂಭೀರವಾಗಿ ಗಾಯಗೊಂಡಿದ್ದು, ಅಥಣಿ ಪಟ್ಟಣದ ಹಲ್ಯಾಳ ರಸ್ತೆಯಲ್ಲಿ ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪರಿಣಾಮ ಪಾದಚಾರಿಗಳ ಮೇಲೆ ಬಿದ್ದಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಬ್ಬರನ್ನು ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕಬ್ಬಿನಡಿ ಸಿಲುಕಿದ

ಅಥಣಿ: ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ; ಇಬ್ಬರು ಗಂಭೀರ Read More »

ಕೊಡಗು: ಕಳಚಿ ಬಿದ್ದ ಪಿಕಪ್ ವಾಹನದ ಟಯರ್| ಭಾರೀ ಅನಾಹುತದಿಂದ ಪಾರಾದ ಕಾರ್ಮಿಕರು

ಸಮಗ್ರ ನ್ಯೂಸ್: ತೋಟದ ಕೆಲಸಕ್ಕೆಂದು ಕಾರ್ಮಿಕರನ್ನು ಕರೆದೊಯ್ಯುವಾಗ ಪಿಕ್ ಅಪ್ ವಾಹನದ ಚಕ್ರ ಕಳಚಿದ ಘಟನೆ ಬೆಳಕಿಗೆ ಬಂದಿದೆ. ವಾಹನದ ಚಕ್ರ ಕಳಚಿದ ಪರಿಣಾಮ ಭಾರಿ ಅಪಘಾತದಿಂದ ಕಾರ್ಮಿಕರು ಪಾರಾಗಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಪಾರಾಣೆ ಮುಖ್ಯ ರಸ್ತೆಯ ಬೇತು ಗ್ರಾಮದ ತಿರುವಿನಲ್ಲಿ ಈ ಘಟನೆ ನಡೆದಿದೆ. ನಾಪೋಕ್ಲು ಸಮೀಪದ ಎಮ್ಮೆಮಾಡು ಕೂರುಳಿ ಗ್ರಾಮದಿಂದ ತೋಟದ ಮಾಲೀಕರೊಬ್ಬರು ಕೆಲಸಕ್ಕೆಂದು ಕಾರ್ಮಿಕರನ್ನು ಪಿಕ್ಅಪ್ ವಾಹನದಲ್ಲಿ ಸಾಗಿಸುತ್ತಿದ್ದಾಗ ವಾಹನದ ಆಕ್ಸಲ್ ತುಂಡಾದ ಪರಿಣಾಮ ಚಕ್ರ ಕಳಚಿಕೊಂಡು ಅವಘಡ

ಕೊಡಗು: ಕಳಚಿ ಬಿದ್ದ ಪಿಕಪ್ ವಾಹನದ ಟಯರ್| ಭಾರೀ ಅನಾಹುತದಿಂದ ಪಾರಾದ ಕಾರ್ಮಿಕರು Read More »

ಪಂಜಾಬ್ ನಲ್ಲಿ ಜಾಫರ್ ಎಕ್ಸ್ ಪ್ರೆಸ್ ನಲ್ಲಿ ಸ್ಪೋಟ| ಇಬ್ಬರು ಸಾವು; ಹಲವರಿಗೆ ಗಾಯ

ಸಮಗ್ರ ನ್ಯೂಸ್: ಪಂಜಾಬ್‌ನ ಚಿಚಾವಟ್ನಿಯಲ್ಲಿ ಗುರುವಾರ ಬೆಳಗ್ಗೆ ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್ ಚಿಚಾವಟ್ನಿ ರೈಲು ನಿಲ್ದಾಣದಿಂದ ಹಾದು ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಜಾಫರ್ ಎಕ್ಸ್‌ಪ್ರೆಸ್, ಪೇಶಾವರದಿಂದ ಬರುತ್ತಿತ್ತು. ಫೋನ್‌ನಲ್ಲಿ ಡಾನ್‌ನೊಂದಿಗೆ ಮಾತನಾಡಿದ ಪಾಕಿಸ್ತಾನ ರೈಲ್ವೇಸ್ ವಕ್ತಾರ ಬಾಬರ್ ಅಲಿಗೆ ಸಣ್ಣ ಪುಟ್ಟ ಗಾಯ ಸಂಭವಿಸಿದೆ ಎಂದು ವರದಿಯಾಗಿದೆ.

ಪಂಜಾಬ್ ನಲ್ಲಿ ಜಾಫರ್ ಎಕ್ಸ್ ಪ್ರೆಸ್ ನಲ್ಲಿ ಸ್ಪೋಟ| ಇಬ್ಬರು ಸಾವು; ಹಲವರಿಗೆ ಗಾಯ Read More »

ಪೇಸ್ ಬುಕ್ ನಲ್ಲಿ ಸೋನಿಯಾ ಗಾಂಧಿ ಜೊತೆ‌ ನಗ್ನ ಬಾಲಿಕೆಯ‌ ನೆರಳಿನ ಪೋಟೋ ಹಂಚಿಕೊಂಡ ಸಂಬರಗಿ| ವ್ಯಾಪಕ ಟೀಕೆಗೊಳಗಾದ ಸಾಮಾಜಿಕ ಕಾರ್ಯಕರ್ತ

ಸಮಗ್ರ ನ್ಯೂಸ್: ಬಿಗ್​ಬಾಸ್​ ಖ್ಯಾತಿಯ ಪ್ರಶಾಂತ್​ ಸಂಬರಗಿ ಸುದ್ದಿಯಲ್ಲಿದ್ದು, ತಾನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ನಿಂದ ವೈರಲ್​ ಆಗಿದ್ದಾರೆ. ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿಯವರ ಬಗ್ಗೆ ಹಂಚಿಕೊಂಡಿರುವ ಫೋಟೊದಿಂದ ಈಗ ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ಪೋಸ್ಟ್​ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ಇನ್ನು ಕೆಲವರು ಬೈಗುಳದ ಸುರಿಮಳೆಯನ್ನೇ ಸುರಿಸಿದ್ದಾರೆ. ಅಂದ ಹಾಗೆಯೇ ಸಂಬರಗಿ ಹಂಚಿಕೊಂಡಿರುವ ಪೋಸ್ಟ್​ನಲ್ಲೇನಿದೆ? ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆಯಕ್ಟೀವ್​ ಆಗಿ ಇದ್ದಾರೆ. ಫೇಸ್​ಬುಕ್​ನಲ್ಲಿ ಸದಾ ಏನಾದರೊಂದು ಪೋಸ್ಟ್​ ಹಂಚಿಕೊಳ್ಳುತ್ತಿರುತ್ತಾರೆ.

ಪೇಸ್ ಬುಕ್ ನಲ್ಲಿ ಸೋನಿಯಾ ಗಾಂಧಿ ಜೊತೆ‌ ನಗ್ನ ಬಾಲಿಕೆಯ‌ ನೆರಳಿನ ಪೋಟೋ ಹಂಚಿಕೊಂಡ ಸಂಬರಗಿ| ವ್ಯಾಪಕ ಟೀಕೆಗೊಳಗಾದ ಸಾಮಾಜಿಕ ಕಾರ್ಯಕರ್ತ Read More »

ಕಾಸರಗೋಡು: ರೈಲಿಗೆ ಹತ್ತುತ್ತಿದ್ದಾಗ ಕೆಳಗೆ ಬಿದ್ದ ವಿದ್ಯಾರ್ಥಿ ಗಂಭೀರ

ಸಮಗ್ರ ನ್ಯೂಸ್: ರೈಲಿಗೆ ಹತ್ತು ತ್ತಿದ್ದಾಗ ಕೆಳಗೆ ಬಿದ್ದು ವಿದ್ಯಾರ್ಥಿ ಗಂಭೀರ ಗಾಯ ಗೂಂಡ ಘಟನೆ ಫೆ.15ರಂದು ಕುಂಬಳೆ ಯಲ್ಲಿ ಸಂಭವಿಸಿದೆ. ಮೊಗ್ರಾಲ್ ಚಲಿಯಂಗೋಡಿನ ಅಕ್ಬರ್ ಅಲಿ (18) ಗಾಯ ಗೊಂಡವರು. ಈತ ಕಾಂಞಂಗಾಡ್‌ನ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಬೆಳಿಗ್ಗೆ ಕುಂಬಳೆ ರೈಲು ನಿಲ್ದಾಣಕ್ಕೆ ತಲಪಿದಾಗ ರೈಲು ಮುಂದಕ್ಕೆ ಚಲಿಸುತ್ತಿದ್ದು, ಈ ಸಂದರ್ಭದಲ್ಲಿ ರೈಲಿಗೆ ಹತ್ತಲೆತ್ನಿಸಿದಾಗ ಕೆಳಗೆ ಬಿದ್ದಿದ್ದಾನೆ. ಈ ಪರಿಣಾಮ ರೈಲು ಹಾಗೂ ಫ್ಲಾಟ್ ಫಾಂ ನಡುವೆ ಸಿಲುಕಿ ಗಂಭೀರ ಗಾಯ ಗೊಂಡಿದ್ದು, ಮಂಗಳೂರಿನ ಖಾಸಗಿ

ಕಾಸರಗೋಡು: ರೈಲಿಗೆ ಹತ್ತುತ್ತಿದ್ದಾಗ ಕೆಳಗೆ ಬಿದ್ದ ವಿದ್ಯಾರ್ಥಿ ಗಂಭೀರ Read More »

2 ಲಕ್ಷ ಚಾಕೊಲೇಟ್‌ ಕದ್ದಿದ್ದ ಕಳ್ಳ ಅರೆಸ್ಟ್‌

ಲಂಡನ್: 2 ಲಕ್ಷ ಕ್ಯಾಡ್‌ಬರಿ ಕ್ರೀಮ್‌ ಎಗ್‌ ಚಾಕೊಲೇಟ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಹಿಡಿದು ಪೊಲೀಸರು ಬಂಧಿಸಿದ್ದಾರೆ. ಜೋಬಿ ಪೂಲ್‌ (32) ಜೈಲು ಪಾಲಾದ ಆರೋಪಿ. ಈತ ಟೆಲ್ಫೋರ್ಡ್‌ ಕೈಗಾರಿಕಾ ಘಟಕಕ್ಕೆ ನುಗ್ಗಿ 30.63 ಲಕ್ಷ ರೂ. ಮೌಲ್ಯದ ಚಾಕೊಲೇಟ್‌ಗಳನ್ನು ಕಳ್ಳತನ ಮಾಡಿದ್ದ. ಕಳ್ಳನಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜೋಬಿ ಈ ಮೊದಲೇ ಕಳ್ಳತನ ಮಾಡಿದ್ದ ಲಾರಿ ಕ್ಯಾಬ್‌ ಬಳಸಿ ಮತ್ತೊಂದು ಕಳ್ಳತನ ಮಾಡಿದ್ದಾನೆ. ಇದು ಸಂಘಟಿತ ಅಪರಾಧ

2 ಲಕ್ಷ ಚಾಕೊಲೇಟ್‌ ಕದ್ದಿದ್ದ ಕಳ್ಳ ಅರೆಸ್ಟ್‌ Read More »

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸ್ಕೆಚ್| ಸ್ಪೋಟಕ ‌ಮಾಹಿತಿ ರಿವೀಲ್

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಮತ್ತೊಂದೆಡೆ ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳ ಓಡಾಟ ಜೋರಾಗಿದೆ. ಇಂತಹ ಸಂದರ್ಭದಲ್ಲೇ ಬೆಂಗಳೂರು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೊಲೆಗೆ ಕುಖ್ಯಾತ ರೌಡಿ ಗ್ಯಾಂಗ್‌ ಸ್ಕೆಚ್‌ ಹಾಕಿದ್ದ ಸ್ಫೋಟಕ ವಿಷಯ ಬಹಿರಂಗವಾಗಿದೆ. ಕುಖ್ಯಾತ ರೌಡಿಶೀಟರ್‌ ವಿಲ್ಸನ್ ಗಾರ್ಡನ್ ನಾಗನ ಟೀಮ್‌ ಬೆಂಗಳೂರು ಶಾಸಕರ ಕೊಲೆಗೆ ಸ್ಕೆಚ್ ಹಾಕಿತ್ತು ಎನ್ನಲಾಗಿದೆ. ಶಾಸಕರ ಚಲನವಲನಗಳ ಬಗ್ಗೆ ನಿಗಾವಹಿಸಿದ್ದ ನಾಗ ಮತ್ತವರ ತಂಡ 2 ಕೋಟಿಗೆ ಸುಪಾರಿ ಪಡೆದುಕೊಂಡಿತ್ತು. ಆದರೆ ಈ ಅಟ್ಯಾಕ್‌ಗೂ ಮುಂಚೆ

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸ್ಕೆಚ್| ಸ್ಪೋಟಕ ‌ಮಾಹಿತಿ ರಿವೀಲ್ Read More »