ಬೆಳ್ತಂಗಡಿ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ‌ ಸಾವು

ಸಮಗ್ರ ನ್ಯೂಸ್: ನಾಲ್ಕು ದಿನಗಳ ಹಿಂದೆ ನಡೆದ ಟಿಪ್ಪರ್ ಮತ್ತು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಫೆ.7ರಂದು ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಕೊಕ್ಕಡ ಸೌತಡ್ಕ ನಿವಾಸಿ ಸಿರಾಜ್ ಎಂದು ಗುರುತಿಸಲಾಗಿದೆ.

. Ad Widget . Ad Widget . Ad Widget .

ಟಿಪ್ಪರ್ ಮತ್ತು ಸಿರಾಜ್ ಸಂಚರಿಸುತ್ತಿದ್ದ ಬೈಕ್ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಕೆಂಪಕೋಡಿ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿ ಸಿರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಪಘಾತದ ತೀವ್ರತೆಗೆ‌ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿರಾಜ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಸಿರಾಜ್ SKSSF ಕೊಕ್ಕಡ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜ ಮುಖಿ ಸೇವೆ ಗೈಯುತ್ತಿದ್ದರು. ಮೃತ ಸಿರಾಜ್ ನ ಅಗಲುವಿಕೆಯಿಂದ ಆತನ ಬಂಧುಬಳಗದ‌ ಆಕ್ರಂದನ ಹೇಳತೀರದಾಗಿದೆ.

Leave a Comment

Your email address will not be published. Required fields are marked *