ಕ್ರೈಂ

ಸುಳ್ಯ: ನಗರ ಪಂಚಾಯತ್ ಮಾಜಿ ಅಧ್ಯಕ್ಷರ ಮನೆಯಿಂದ ಚಿನ್ನಾಭರಣ ದರೋಡೆ ಪ್ರಕರಣ|ಬೆಂಗಳೂರಿನಲ್ಲಿ ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್ ರವರ ಮನೆಗೆ ಮೇ. 3 ರಂದು ರಾತ್ರಿ ಕಳ್ಳರು ನುಗ್ಗಿ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬೆಂಗಳೂರು ಗೋವಿಂದರಾಜನಗರ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ ಚಿನ್ನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ, ಸಂಶಯಗೊಂಡ ಚಿನ್ನದಂಗಡಿಯವರು ಪೋಲೀಸರಿಗೆ ಮಾಹಿತಿ ನೀಡಿದರೆನ್ನಲಾಗಿದೆ. ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಮೈಸೂರಿನ ಇಬ್ಬರು ವ್ಯಕ್ತಿಗಳ ಹೆಸರು ಹೇಳಿದ.

ಸುಳ್ಯ: ನಗರ ಪಂಚಾಯತ್ ಮಾಜಿ ಅಧ್ಯಕ್ಷರ ಮನೆಯಿಂದ ಚಿನ್ನಾಭರಣ ದರೋಡೆ ಪ್ರಕರಣ|ಬೆಂಗಳೂರಿನಲ್ಲಿ ಆರೋಪಿಗಳ ಬಂಧನ Read More »

ಸುಳ್ಯ: ಮಾಜಿ ಜಿ.ಪಂ ಸದಸ್ಯ ನವೀನ್ ರೈ ಮೇನಾಲ ಹೊಳೆಗೆ ಬಿದ್ದು ಸಾವು

ಸಮಗ್ರ ನ್ಯೂಸ್: ಮಾಜಿ‌ ಜಿ.ಪಂ ಸದಸ್ಯ, ಸುಳ್ಯದ ಪ್ರಭಾವಿ ನಾಯಕ, ಬಿಜೆಪಿ ಮುಖಂಡ ನವೀನ್ ರೈ ಮೇನಾಲ ಹೊಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ಇಂದು (ಮೇ. 18) ನಡೆದಿದೆ. ತುದಿಯಡ್ಕ ಬಳಿ ನದಿಯಲ್ಲಿ ಪಂಪ್ ವಾಲ್ ಪಿಟ್ ಸರಿಪಡಿಸುವ ಸಂದರ್ಭದಲ್ಲಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸುಳ್ಯ: ಮಾಜಿ ಜಿ.ಪಂ ಸದಸ್ಯ ನವೀನ್ ರೈ ಮೇನಾಲ ಹೊಳೆಗೆ ಬಿದ್ದು ಸಾವು Read More »

ಲೇಡಿ ಸಿಂಗಂ ಎಂದು ಖ್ಯಾತಿ ಪಡೆದ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಮೃತ್ಯು

ಸಮಗ್ರ ನ್ಯೂಸ್: ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದ ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ(30) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ವ್ಯಕ್ತಿ ‘ದಬಾಂಗ್ ಕ್ಯಾಪ್’ ಎಂದೂ ಪ್ರಖ್ಯಾತಿ ಪಡೆದಿದ್ದರು. ಇವರು ನಾಗಾವ್ ಜಿಲ್ಲೆಯಲ್ಲಿ ಹಾದು ಹೋದ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರಿಗೆ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ರಾಬಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ವೇಳೆ ಜುನ್ಮೋನಿ ರಾಭಾ ತನ್ನ ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಮತ್ತು

ಲೇಡಿ ಸಿಂಗಂ ಎಂದು ಖ್ಯಾತಿ ಪಡೆದ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಮೃತ್ಯು Read More »

ಕುಂದಾಪುರ: ಮತ್ತೇರಿಸಿದ ಮದ್ಯ|ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ

ಸಮಗ್ರ ನ್ಯೂಸ್: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿನಮಕ್ಕಿ ಎಂಬಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಸಂಗಪ್ಪ ಅಲಿಯಾಸ್ ಸಂಗಮೇಶ (42) ಹತ್ಯೆಗೀಡಾದ ವ್ಯಕ್ತಿ. ಈತನೊಂದಿಗೆ ಇದ್ದ ಇನ್ನೋರ್ವ ವಲಸೆ ಕಾರ್ಮಿಕ ಮಂಡ್ಯ ಮೂಲದ ರಾಜಾ (36) ಕೊಲೆ ಮಾಡಿದ್ದಾನೆ. ಸಂಗಪ್ಪ ಹಾಗೂ ರಾಜಾ ಕುಂದಾಪುರದಲ್ಲಿ ವಲಸೆ ಕಾರ್ಮಿಕರಾಗಿದ್ದು, ಕೆಲಸವಿದ್ದಾಗ ಕುಂದಾಪುರಕ್ಕೆ ಬಂದು ಅಲ್ಲಿ ಉಳಿಯುತ್ತಿದ್ದರು. ವಿಪರೀತ ಮದ್ಯಪಾನ ಮಾಡಿದ್ದ ರಾಜಾ ಹಾಗೂ ಸಂಗಪ್ಪ

ಕುಂದಾಪುರ: ಮತ್ತೇರಿಸಿದ ಮದ್ಯ|ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ Read More »

ಕಾಸರಗೋಡು: ಪ್ರೇಯಸಿಯನ್ನು ಹತ್ಯೆಗೈದು ಪೊಲೀಸರಿಗೆ ಶರಣಾದ ಪ್ರಿಯಕರ

ಸಮಗ್ರ ನ್ಯೂಸ್: ಪ್ರೇಯಸಿಯನ್ನು ಹತ್ಯೆಗೈದು ಪ್ರಿಯಕರ ಪೊಲೀಸರಿಗೆ ಶರಣಾದ ದಾರುಣ ಘಟನೆ ಮಂಗಳವಾರ ಸಂಜೆ ಕಾಞ೦ಗಾಡ್’ನಲ್ಲಿ ನಡೆದಿದೆ. ಬ್ಯೂಟಿಶಿಯನ್ ಆಗಿ ಕೆಲಸ ಮಾಡುತ್ತಿದ್ದಉದುಮ ಮಾಂಗಾಡ್ ನ ದೇವಿಕಾ(34) ಹತ್ಯೆಗೀಡಾದವರು. ಬೋವಿಕ್ಕಾನ ದ ಸತೀಶ್ ಭಾಸ್ಕರ್(36)ಕೊಲೆಗೈದ ಆರೋಪಿ. ಈತ ಕಾಞ೦ಗಾಡ್ ನ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಪರಸ್ಪರ ಉಂಟಾದ ವೈಮನಸ್ಸು ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಕೊಲೆ ಬಳಿಕ ಆರೋಪಿ ಕೊನೆಗೆ ಹೊರಗಿನಿಂದ ಬೀಗ ಜಡಿದು ಪೊಲೀಸ್ ಠಾಣೆ ಗೆ ಶರಣಾಗಿದ್ದಾನೆ.

ಕಾಸರಗೋಡು: ಪ್ರೇಯಸಿಯನ್ನು ಹತ್ಯೆಗೈದು ಪೊಲೀಸರಿಗೆ ಶರಣಾದ ಪ್ರಿಯಕರ Read More »

ಕಟ್ಟಡದಿಂದ ಬಿದ್ದು ಪೊಲೀಸ್ ಅಧಿಕಾರಿ ಸಾವು

ಸಮಗ್ರ ನ್ಯೂಸ್ : ಕರ್ತವ್ಯದಲ್ಲಿದ್ದಾಗ ಕಟ್ಟಡದಿಂದ ಬಿದ್ದು ಪೊಲೀಸ್ ಅಧಿಕಾರಿ ಸಾವನ್ನಪ್ಪಿದ ದುರದೃಷ್ಟಕರ ಘಟನೆ ಕೊಟ್ಟಾಯಂನ ಪಾಲಾದಲ್ಲಿ ನಡೆದಿದೆ. ಮೃತರನ್ನು ರಾಮಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕುರವಿಲಂಗಾಡ್ ಮೂಲದ ಜೋಬಿ ಜಾರ್ಜ್ ಎಂದು ಗುರುತಿಸಲಾಗಿದೆ. ರಾಮಪುರಂನ ಬಸ್ ಡಿಪೋ ಬಳಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ಜೂಜಾಟದ ಗ್ಯಾಂಗ್ ಇದೆ ಎಂಬ ಮಾಹಿತಿಯ ಮೇರೆಗೆ ಜಾರ್ಜ್ ಕಟ್ಟಡಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿ ಕಾರಿಡಾರ್ ನಲ್ಲಿ ಜಾರಿದ ಪರಿಣಾಮ ಕಟ್ಟಡದಿಂದ ಕೆಳಗೆ

ಕಟ್ಟಡದಿಂದ ಬಿದ್ದು ಪೊಲೀಸ್ ಅಧಿಕಾರಿ ಸಾವು Read More »

ಪಾಕ್ ಪರ ಸ್ಟೇಟಸ್ – ಯುವಕನ ಬಂಧನ

ಸಮಗ್ರ ನ್ಯೂಸ್: ವಿಜಯಪುರದ ಯುವಕನೊಬ್ಬ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಸ್ಟೇಟಸ್ ಹಾಕಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದ ಯುವಕ ಇಬ್ರಾಹಿಂ ಮುರ್ತುಜಸಾಬ ಮುಲ್ಲಾ ಎಂಬಾತ ಇನ್ಸ್ಟಾಗ್ರಾಂನಲ್ಲಿ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಸ್ಟೋರಿ ಹಾಕಿದ್ದ. ಇನ್ನು ಇಬ್ರಾಹಿಂ ಮುಲ್ಲಾನ ಇನ್ಸ್ಟಾಗ್ರಾಂ ವೀಕ್ಷಿಸಿದ ಸ್ಥಳೀಯರು ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಎಚ್ಚೆತ್ತ ತಾಳಿಕೋಟೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು, ಆರೋಪಿ

ಪಾಕ್ ಪರ ಸ್ಟೇಟಸ್ – ಯುವಕನ ಬಂಧನ Read More »

ಬೆಳ್ತಂಗಡಿ: ಗೃಹಿಣಿಯ ಮಾನಭಂಗಕ್ಕೆ ಯತ್ನ

ಸಮಗ್ರ ನ್ಯೂಸ್: ಕೆಲಸ ಕೊಡಿಸುವ ನೆಪದಲ್ಲಿ ಗೃಹಿಣಿಯೊಬ್ಬರನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ಮೇ 14ರಂದು ಉಜಿರೆಯಲ್ಲಿ ನಡೆದಿದೆ. ಉಜಿರೆಯ ಉದ್ಯಮಿ ಪ್ರಭಾಕರ ಹೆಗ್ಡೆ ಕೃತ್ಯ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ . ಚಿಕ್ಕಮಗಳೂರು ಜಿಲ್ಲೆಯ ಹಂಗರವಳ್ಳಿ ನಿವಾಸಿ ಸುಜಾತಾ ದೂರು ನೀಡಿದವರು.ಸುಜಾತಾ ಮತ್ತು ಅವರ ಪತಿ ಕಿರಣ್‌ ಗೌಡ ಅವರು ಪ್ರಭಾಕರ್‌ ಹೆಗ್ಡೆ ಅವರ ಸಂಸ್ಥೆಗೆ ಕೆಲಸ ಹುಡುಕಿಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಅವರ ಮನೆಯಲ್ಲೇ ಆಶ್ರಯ ನೀಡಿ ಮೇ 14ರಂದು ಪತಿ ಕಿರಣ್‌ ಅವರನ್ನು ತಮ್ಮ ಸಂಸ್ಥೆಯ

ಬೆಳ್ತಂಗಡಿ: ಗೃಹಿಣಿಯ ಮಾನಭಂಗಕ್ಕೆ ಯತ್ನ Read More »

ಸುಳ್ಯ: ಅಡ್ತಲೆ – ಮರ್ಕಂಜ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ!!

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ರಸ್ತೆಯು ನೂತನವಾಗಿ ಡಾಮರೀಕರಣಗೊಂಡಿದೆ. ಈ ರಸ್ತೆ ಬದಿ ಅರ್ಧ ಅಡಿ ಸಹ ಜಾಗ ಇಲ್ಲ, ಮತ್ತು ವಿದ್ಯುತ್ ಕಂಬಗಳು ರಸ್ತೆಯಲ್ಲಿಯೇ ಇದ್ದು ಪ್ರಯಾಣಿಕರಿಗೆ ಅಪಾಯ ಮಾಡುವಂತಿದೆ. ರಸ್ತೆ ಬದಿಯೇ ಚರಂಡಿ ಮತ್ತು ವಿದ್ಯುತ್ ಕಂಬಗಳು ಇರುವುದರಿಂದ, ಮುಂದೆ ಅಪಾಯಕಾರಿ ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಲೋಕೋಪಯೋಗಿ ಇಲಾಖೆ ಹಾಗೂ ಮೆಸ್ಕಾಂನಿಂದ ಈ ಬಗ್ಗೆ ಮಳೆಗಾಲ ಆರಂಭಕ್ಕೆ ಮೊದಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಬೇಡಿಕೆ. ಈ ರಸ್ತೆಯ

ಸುಳ್ಯ: ಅಡ್ತಲೆ – ಮರ್ಕಂಜ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ!! Read More »

ಕೊಣಾಜೆ: ವಿವಾಹದ ದಿನದಂದೆ ತಂದೆಯನ್ನುಕಳೆದುಕೊಂಡ ಮಗಳು

ಸಮಗ್ರ ನ್ಯೂಸ್:ಕೋಣಾಜೆಯ ಬೋಳಿಯಾರ್ ನ ಕುಚುಗುಡ್ಡೆಯಲ್ಲಿ ಮಗಳ ಮದುವೆಯ ದಿನದಂದೇ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೇ 15 ರಂದು ಮುಂಜಾನೆ ಸಂಭವಿಸಿದೆ. ಮೃತಪಟ್ಟ‌ ವ್ಯಕ್ತಿ ಬೋಳಿಯಾರ್ ನ ಕುಕ್ಕೋಟ್ಟು ಕುಚುಗುಡ್ಡೆಯ ಹಸನಬ್ಬ(60) ಅವರಾಗಿದ್ದಾರೆ. ಹಸನಬ್ಬ ಅವರ ಮಗಳಿಗೆ ಕಾಸರಗೋಡಿನ ಯುವಕನೊಂದಿಗೆ ಸೋಮವಾರದಂದು ಹೊಸಂಗಡಿಯ ಸಭಾಂಗಣವೊಂದರಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಸೋಮವಾರ ಮುಂಜಾನೆ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗದೆ ಮೃತಪಟ್ಟಿದ್ದಾರೆ. ಇವರು ಕುಕ್ಕೋಟ್ಟು ಜುಮಾ

ಕೊಣಾಜೆ: ವಿವಾಹದ ದಿನದಂದೆ ತಂದೆಯನ್ನುಕಳೆದುಕೊಂಡ ಮಗಳು Read More »