ಉಡುಪಿ: ರಸ್ತೆಯಲ್ಲಿ ಚೆಲ್ಲಿದ ಡೀಸೆಲ್|ಇಪ್ಪತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನ ಸ್ಕಿಡ್!

ಸಮಗ್ರ ನ್ಯೂಸ್:ರಸ್ತೆಯಲ್ಲಿ ಡೀಸೆಲ್ ಚೆಲ್ಲಿದ ಪರಿಣಾಮ ವಾಹನಗಳು ಸ್ಕಿಡ್ ಆದ ಘಟನೆ ಉಡುಪಿ ನಗರದ ಸಿಟಿ ಬಸ್ ತಂಗುದಾಣದ ಬಳಿ ಜೂನ್ 28ರಂದು ರಾತ್ರಿ ಸಂಭವಿಸಿದೆ.

. Ad Widget . Ad Widget . Ad Widget

ಕಲ್ಸಂಕದಿಂದ ಉಡುಪಿಯತ್ತ ತೆರಳುತ್ತಿದ್ದ ಟ್ರಕ್ ವೊಂದರಿಂದ ಡೀಸೆಲ್ ಚೆಲ್ಲಲ್ಪಟ್ಟಿದೆ. ಈ ವೇಳೆ ಉಡುಪಿಯತ್ತ ತೆರಳುತ್ತಿದ್ದ ದ್ವಿಚಕ್ರ ವಾಹನಗಳು ಸ್ಕಿಡ್ ಆದ ಘಟನೆ ನಡೆದಿದೆ. ಸುಮಾರು 15 ರಿಂದ 20 ಹೆಚ್ಚಿನ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಟ್ರಾಫಿಕ್ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು, ಡೀಸೆಲ್ ಚೆಲ್ಲಿದ ಜಾಗದಲ್ಲಿ ಎಚ್ಚರಿಕೆ ಪಟ್ಟಿ ಹಾಕಲಾಯಿತು. ಅಗ್ನಿಶಾಮಕ ದಳದ ಸಹಕಾರದಲ್ಲಿ ಬ್ಲೀಚಿಂಗ್ ಪೌಡರ್ ಬಳಿದು ನೀರು ಹಾಕಿ ಕ್ಲೀನ್ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

. Ad Widget .

Leave a Comment

Your email address will not be published. Required fields are marked *