ಕರಾವಳಿ

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಪಿಂಡಪ್ರದಾನ ಮಾಡಿದ ಜಿಲ್ಲಾಡಳಿತ

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಮೋಕ್ಷಕ್ಕೆ ದ.ಕ. ಜಿಲ್ಲಾಡಳಿತದ ವತಿಯಿಂದ ತಿಲಹೋಮ ಮತ್ತು ಪಿಂಡ ಪ್ರದಾನ ಕಾರ್ಯಕ್ರಮ ಸೋಮೇಶ್ವರದ ಸೋಮನಾಥೇಶ್ವರ ದೇವಾಲಯದಲ್ಲಿ ನಡೆಯಿತು. ಸ್ಥಳೀಯ ಅರ್ಚಕರಾದ ಶಂಕರ್ ಅಡಿಗ ಅವರ ಮಾರ್ಗದರ್ಶನದಲ್ಲಿ ಮೃತರ ಪರವಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ರವಿಶಂಕರ್ ಸೋಮೇಶ್ವರ ವಿಧಿವಿಧಾನಗಳನ್ನು ನೆರವೇರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಸೋಮೇಶ್ವರ ಸಮುದ್ರಕಿನಾರೆಯಲ್ಲಿ ಪಿಂಡಪ್ರದಾನ ಮಾಡಿದರು. ದ ಕ ಜಿಲ್ಲಾಸ್ಪತ್ರೆಯಲ್ಲಿ 12 ಜನ ಅನಾಥರು ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಅವರೆಲ್ಲರ ಅಂತ್ಯಸಂಸ್ಕಾರ […]

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಪಿಂಡಪ್ರದಾನ ಮಾಡಿದ ಜಿಲ್ಲಾಡಳಿತ Read More »

ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಲಾರಿ |ಚಾಲಕರಿಬ್ಬರು ಸಾವು ಶಂಕೆ

ಮಂಗಳೂರು: ನವಮಂಗಳೂರು ಬಂದರಿನಲ್ಲಿ ನಿನ್ನೆ ರಾತ್ರಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಇಳಿದಿದ್ದು ಚಾಲಕರಿಬ್ಬರು ಲಾರಿ ಸಹಿತ ಕಣ್ಮರೆಯಾಗಿದ್ದಾರೆ. ಎನ್ಎಂಪಿಟಿ ಯ 14ನೇ ಬರ್ತ್ ನಲ್ಲಿ ನಿನ್ನೆ ಮಧ್ಯರಾತ್ರಿ ಘಟನೆ ಸಂಭವಿಸಿದೆ. ಕಣ್ಮರೆಯಾದ ವರನ್ನು ಚಾಲಕ ರಾಜೇಶಾಬ್ (25) ಮತ್ತು ಬದಲಿ ಚಾಲಕ ಮಾಲಕಪ್ಪ (35) ಎಂದು ಗುರುತಿಸಲಾಗಿದೆ. ಇಬ್ಬರೂ ಚಾಲಕರು ಸಾವವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಲಾರಿಗೆ ಹಡಗಿನಿಂದ ಸರಕು ತುಂಬಿಸಲು ತರುತ್ತಿದ್ದಾಗ ಆಕಸ್ಮಿಕವಾಗಿ ಲಾರಿ ನೀರಿಗೆ ಬಿದ್ದಿದೆ. ಸ್ಥಳದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಲಾರಿ |ಚಾಲಕರಿಬ್ಬರು ಸಾವು ಶಂಕೆ Read More »

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು ಉಪ್ಪಿನಂಗಡಿ : ಇಲಿ ವಿಷ ತಿಂದು 2ವರ್ಷದ ಮಗು ಮೃತಪಟ್ಟಿರುವ ಘಟನೆ ನೆಲ್ಯಾಡಿಯ ಬಜತ್ತೂರಿನಲ್ಲಿ ನಡೆದಿದೆ. ಬಜತ್ತೂರಿನ ಕೆಮ್ಮಾರದ ನಿವೃತ್ತ ಸೈನಿಕ ಸೈಜು ಎಂಬವರು ಪುತ್ರಿ ಶ್ರೇಯಾ (2) ಮೃತಪಟ್ಟ ಮಗು. ಶ್ರೇಯಾ ತಂದೆ-ತಾಯಿ ಮನೆಯಲ್ಲಿ ಹಳೇ ವಸ್ತುಗಳನ್ನು ಕ್ಲೀನ್ ಮಾಡುತ್ತಿದ್ದರು. ಪಕ್ಕದಲ್ಲೇ ಇದ್ದ ಶ್ರೇಯಾ ಇಲಿ ವಿಷ ತೆಗೆದು ತಿಂದಿದ್ದಾಳೆ. ಇದು ಪೋಷಕರ ಗಮನಕ್ಕೆ ಬರುವುದು ಕೊಂಚ ತಡವಾಗಿದ್ದು, ಮಗು ವಿಷ ತಿಂದಿರುವುದನ್ನು ತಿಳಿದ ತಕ್ಷಣ

ಉಪ್ಪಿನಂಗಡಿ : ಆಕಸ್ಮಿಕವಾಗಿ ವಿಷ ತಿಂದು 2 ವರ್ಷದ ಮಗು ಸಾವು Read More »

ಮಂಗಳಾದೇವಿ ದೇವಸ್ಥಾನದಲ್ಲಿ ಅದ್ದೂರಿ ಮದುವೆ | ಪ್ರಕರಣ ದಾಖಲು

ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆ ಏರ್ಪಡಿಸಲಾಗಿತ್ತು. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆಯಾದರೂ ಅದ್ದೂರಿ ಮದುವೆ ಇನ್ನಿತರ ಸಮಾರಂಭಗಳಿಗೆ ಅವಕಾಶವಿಲ್ಲ. ಮನೆಯಲ್ಲಿ ಮದುವೆಗೆ ಅವಕಾಶವಿದ್ದು ನಿಗದಿತ ಜನ ಸೇರಿಸಬಹುದಾಗಿದೆ. ದೇವಸ್ಥಾನದಲ್ಲಿ ನಡೆದ ಮದುವೆಯಲ್ಲಿ ನಿಯಮ ಮೀರಿ ಜನ ಸೇರಿಸಲಾಗಿದೆ. ಪಾಲಿಕೆಯ ನಾಮನಿರ್ದೇಶಿತ ಸದಸ್ಯರೊಬ್ಬರ ಮಗಳು ಸೇರಿದಂತೆ ಐದಾರು ಜೋಡಿ ಮದುವೆ ನಡೆಯುತ್ತಿತ್ತು. ಸುಮಾರು 40ಕ್ಕೂ ಹೆಚ್ಚು ವಾಹನಗಳಲ್ಲಿ

ಮಂಗಳಾದೇವಿ ದೇವಸ್ಥಾನದಲ್ಲಿ ಅದ್ದೂರಿ ಮದುವೆ | ಪ್ರಕರಣ ದಾಖಲು Read More »

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್

ಸುಬ್ರಹ್ಮಣ್ಯ: ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ನಿರ್ಬಂಧವಿದ್ದರೂ ಹೊರಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಭಕ್ತರನ್ನು ಗುಂಡ್ಯ ಚೆಕ್’ಪೋಸ್ಟ್ ನಿಂದಲೇ ವಾಪಸ್ ಕಳುಹಿಸುವ ಕಾರ್ಯ ನಡೆಯುತ್ತಿದೆ. ಅಗತ್ಯ ದಾಖಲೆಗಳನ್ನು ಹೊಂದಿದವವರನ್ನು ಮಾತ್ರ ಜಿಲ್ಲೆಯ ಒಳಬರಲು ಬಿಡಲಾಗುತ್ತಿದೆ. ಶಿರಾಡಿ ಘಾಟ್ ಮೂಲಕ ಜಿಲ್ಲೆಯ ಧರ್ಮಸ್ಥಳ ಮತ್ತು ಸುಬ್ರಮಣ್ಯ ಪುಣ್ಯಕ್ಷೇತ್ರಗಳಿಗೆ ಭಕ್ತರು ಆಗಮಿಸುತ್ತಿದ್ದಾರೆ. ನಿನ್ನೆ ಒಂದೇ ದಿನ ತೀರ್ಥಯಾತ್ರೆ ಆಗಮಿಸಿದ್ದ ಬರೋಬ್ಬರಿ 69 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಮುಂದಿನ ಎರಡು ವಾರಗಳ ಕಾಲ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ಕರೆಯಲಾಗುವುದಿಲ್ಲ. ಅಂತರ್ ಜಿಲ್ಲಾ ಗಡಿಗಳಲ್ಲಿ

ಧರ್ಮಸ್ಥಳ-ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಗುಂಡ್ಯದಿಂದ ವಾಪಸ್ Read More »

ಅಗತ್ಯ ವಸ್ತು ಖರೀದಿಗೆ ಮದ್ಯಾಹ್ನ 1 ರವರೆಗೆ ಅವಕಾಶ: ದಕ ಜಿಲ್ಲಾಧಿಕಾರಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಲಾಕ್‌ ಡೌನ್ ಜೂ.21 ರಿಂದ ಜೂ.28 ರವರೆಗೆ ಸೆಮಿ ಲಾಕ್‌ಡೌನ್ ಮಾದರಿಯಲ್ಲಿ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಶನಿವಾರ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಲಾಕ್‌ ಡೌನ್ ತೆರವು ಕುರಿತಂತೆ ರಾಜ್ಯ ಸರಕಾರ ಶನಿವಾರ ಹೊರಡಿಸಿದೆ ಆದೇಶದಂತೆ ಜೂ.11ರಂದು ಹೊರಡಿಸಿದ ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಲಾಗಿದೆ. ಹಾಗಾಗಿ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಲಾಗಿದೆ. ಆದಾಗ್ಯೂ

ಅಗತ್ಯ ವಸ್ತು ಖರೀದಿಗೆ ಮದ್ಯಾಹ್ನ 1 ರವರೆಗೆ ಅವಕಾಶ: ದಕ ಜಿಲ್ಲಾಧಿಕಾರಿ Read More »

ಬಂಟ್ವಾಳ: ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾದ ಘಟನೆ ಇಂದು ನಡೆದಿದೆ. ಸಿಮೆಂಟ್ ಮಿಕ್ಸರ್ ಯಂತ್ರವನ್ನು ಸಾಗಾಟ ಮಾಡುತ್ತಿದ್ದ ಲಾರಿಯಾಗಿದ್ದು ಉಪ್ಪಿನಂಗಡಿ ಕಡೆಯಿಂದ ಮಂಗಳೂರಿನ ಬೈಕಂಪಾಡಿಗೆ ತೆರಳುತ್ತಿತ್ತು. ಮಾಣಿ ಸಮೀಪ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿದೆ. ಚಾಲಕ ಲಾರಿ, ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.ಇನ್ನು ಘಟನೆಯಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದು, ಲಾರಿ ಹಾಗೂ ಯಂತ್ರಗಳಿಗೆ

ಬಂಟ್ವಾಳ: ನಿಯಂತ್ರಣ ತಪ್ಪಿ ಲಾರಿ ಪಲ್ಟಿ Read More »

ಸುಳ್ಯದ ವ್ಯಕ್ತಿ ನ್ಯೂಜಿಲೆಂಡ್‌ನಲ್ಲಿ ಅನಾರೋಗ್ಯದಿಂದ ನಿಧನ

ಸುಳ್ಯ: ನ್ಯೂಜಿಲೆಂಡ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ತಾಲೂಕಿನ ಅರಂತೋಡು ಮೇರ್ಕಜೆಯ ಮೂಲದ ಜಯಪ್ರಕಾಶ್(45) ಅವರು ಜೂನ್ 15 ರ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಸೌಖ್ಯದ ಕಾರಣದಿಂದ ಮೂರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಬ್ರೈನ್ ಟ್ಯೂಮರ್ ಇರುವುದು 3 ವಾರದ ಹಿಂದೆ ಗೊತ್ತಾಗಿತ್ತು. ಅದಕ್ಕಾಗಿ ಆಪರೇಶನ್ ಮಾಡಲು ಸಿದ್ಧತೆ ನಡೆಸಿದಾಗ ಅವರು ಅಸೌಖ್ಯ ತೀವ್ರಗೊಂಡು ಕೋಮಕ್ಕೆ ಜಾರಿದರೆನ್ನಲಾಗಿದೆ. ಶುಕ್ರವಾರ ರಾತ್ರಿ 2.30 ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಜಯಪ್ರಕಾಶ್ ಅವರ ಪತ್ನಿ ಪುಷ್ಪಾ ಇವರೂ ನ್ಯೂಝಿಲೆಂಡ್‌ನಲ್ಲಿದ್ದು,

ಸುಳ್ಯದ ವ್ಯಕ್ತಿ ನ್ಯೂಜಿಲೆಂಡ್‌ನಲ್ಲಿ ಅನಾರೋಗ್ಯದಿಂದ ನಿಧನ Read More »

ಧರ್ಮಸ್ಥಳ:ಬಿ ಎಸ್ ವೈ ಚುನಾವಣೆ ವೇಳೆ ಹಣ ಹಂಚಲು ಈತನಲ್ಲೇ ನೀಡೋದಂತೆ….! | ಈತನ ಒಂದು ಕರೆಯಿಂದ ಸಿಎಂ ಏನ್ ಬೇಕಾದ್ರು ಮಾಡ್ತಾರಂತೆ | ನಂಬಿದ ಕೆಎಸ್ಆರ್ಟಿಸಿ ಚಾಲಕನಿಗೆ ಲಕ್ಷ ರೂ ಪಂಗನಾಮ

ಧರ್ಮಸ್ಥಳ: ನಾನು ಸಿಎಂ ಯಡಿಯೂರಪ್ಪ ಅವರ ಪಿಎ ಎಂದು ಹೇಳಿ ಯುವಕನೊಬ್ಬ ಕೆಎಸ್ಆರ್ಟಿಸಿ ಚಾಲಕರೊಬ್ಬರಿಗೆ ಲಕ್ಷ ರೂ. ವಂಚಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳ ಡಿಪೋದ ಬಸ್ ಚಾಲಕ ಪುರುಷೋತ್ತಮ್ ವಂಚಗೊಳಗಾದವರು. ಅವರಿಗೆ ಧರ್ಮಸ್ಥಳದ ಹೋಟೆಲೊಂದರಲ್ಲಿ ಶೈಲೇಶ್ ಎಂಬ ಯುವಕನ ಪರಿಚಯವಾಗಿತ್ತು. ಆತ ಸಿಎಂ ಯಡಿಯೂರಪ್ಪ ನನಗೆ ತುಂಬಾ ಆತ್ಮೀಯರು ಎಂದು ನಂಬಿಸಿದ್ದಾನೆ. ಮೊಬೈಲ್ನಲ್ಲಿ ಹಲವಾರು ಫೋಟೋಗಳನ್ನು ತೋರಿಸಿದ್ದಾನೆ. ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಹಣ ಹಂಚಲು ನನ್ನಲ್ಲಿ ನೀಡುತ್ತಾರೆ ಎಂದು ಸುಳ್ಳು ಬಿಟ್ಟಿದ್ದಾನೆ. ಯುವಕ ನಾನು

ಧರ್ಮಸ್ಥಳ:ಬಿ ಎಸ್ ವೈ ಚುನಾವಣೆ ವೇಳೆ ಹಣ ಹಂಚಲು ಈತನಲ್ಲೇ ನೀಡೋದಂತೆ….! | ಈತನ ಒಂದು ಕರೆಯಿಂದ ಸಿಎಂ ಏನ್ ಬೇಕಾದ್ರು ಮಾಡ್ತಾರಂತೆ | ನಂಬಿದ ಕೆಎಸ್ಆರ್ಟಿಸಿ ಚಾಲಕನಿಗೆ ಲಕ್ಷ ರೂ ಪಂಗನಾಮ Read More »

ಸೋಮವಾರದಿಂದ ದ.ಕ. ಆನ್’ಲಾಕ್…?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಜೂ.21ರಿಂದ ಅನ್ಲಾಕ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ. ಜೂ. 21 ರ ವರೆಗೆ ದಕ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಲು ರಾಜ್ಯ ಸರ್ಕಾರ ತಿಳಿಸಿತ್ತು. ಜೂ.21 ರಿಂದ ನಿರ್ಬಂಧ ಸಡಿಲಿಸಲು ದಕ ಜಿಲ್ಲಾಡಳಿತ ಚಿಂತಿಸಿದೆ. ಇನ್ನು ಅದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪಟ್ಟಿ ಮಾಡಲಾಗಿದೆ. ಎಲ್ಲಾ ಅಂಗಡಿಗಳನ್ನು ವಾರದ

ಸೋಮವಾರದಿಂದ ದ.ಕ. ಆನ್’ಲಾಕ್…? Read More »