ಕರಾವಳಿ

ಕಾಸರಗೋಡು: ಮಧೂರು ಮಲ್ಲ ಸೇರಿದಂತೆ ಜಿಲ್ಲೆಯ ಹಲವು ಊರುಗಳ ಹೆಸರು ಮಲಯಾಳಂಗೆ | ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಹಲವು ಕನ್ನಡ ಊರುಗಳ ಹೆಸರುಗಳನ್ನು ಕೇರಳ ಸರಕಾರ ಮಲಯಾಳಮ್ ಗೆ ಬದಲಾಯಿಸಿದೆ. ಇದೀಗ ಪಿಣರಾಯಿ ಸರಕಾರದ ವಿರುದ್ಧ ಆಕ್ರೋಶಿತರಾಗಿರುವ ಜನ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿದ್ದರೂ ಬಹುವಾಗಿ ಕನ್ನಡ ಮತ್ತು ತುಳು ಭಾಷಿಗರಿರುವ ಕಾಸರಗೋಡು ಜಿಲ್ಲೆಯಲ್ಲಿರುವ ಹಲವು ಊರುಗಳ ಹೆಸರು ಈಗ ಮಳಯಾಳಂಗೆ ಬದಲಾಗಿದೆ. ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಮಧೂರು ಮತ್ತು ಮಲ್ಲ ಊರುಗಳ ಹೆಸರನ್ನೂ ಕೂಡ ಬದಲಾಯಿಸಲಾಗಿದೆ. ಜಿಲ್ಲೆಯ ಕನ್ನಡ ಮಾತನಾಡುವ ಬಹುಸಂಖ್ಯಾತ ಕನ್ನಡಿಗರ ಅಭಿಪ್ರಾಯ ಕೇಳದೆ ಸರಕಾರ […]

ಕಾಸರಗೋಡು: ಮಧೂರು ಮಲ್ಲ ಸೇರಿದಂತೆ ಜಿಲ್ಲೆಯ ಹಲವು ಊರುಗಳ ಹೆಸರು ಮಲಯಾಳಂಗೆ | ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ Read More »

ಕಮರಿದ ಭರವಸೆಗಳ‌ ನಡುವೆ ಮೂಡಿದ ಆಶಾಕಿರಣ | ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸೆಡ್ಡು ಹೊಡೆದ ಮೊಗ್ರ ಗ್ರಾಮಸ್ಥರು | ತಲೆ ಎತ್ತಿ ನಿಂತಿದೆ ‘ಗ್ರಾಮಸೇತು’

ಸುಳ್ಯ: ಮೊಗ್ರ, ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಪುಟ್ಟ ಹಳ್ಳಿ. ಸುಮಾರು 2 ರಿಂದ 3 ಸಾವಿರ ಜನ ಈ ಹಳ್ಳಿಯಲ್ಲಿ ವಾಸವಿರುವ ಜನ. ಏರಣಗುಡ್ಡೆ, ಮಲ್ಕಜೆ, ಮೊಗ್ರ, ಕಮಿಲ ಈ ಹಳ್ಳಿಯ ವ್ಯಾಪ್ತಿಗೆ ಬರುವ ಪ್ರದೇಶಗಳು. ಶಾಲೆ, ಮತದಾನ ಕೇಂದ್ರ, ಅಂಗನವಾಡಿ, ಆರೋಗ್ಯ ಉಪಕೇಂದ್ರ, ದೈವಸ್ಥಾನ ಮೊದಲಾದವುಗಳ ಒಂದು ಕಂಪ್ಲೀಟ್ ಪ್ಯಾಕೇಜ್ ಈ ಹಳ್ಳಿಯದ್ದು. ಆದರೆ ಇವುಗಳೆಲ್ಲದರ ಸಂಪರ್ಕಕ್ಕೆ ಅಡ್ಡಿಯಾಗಿತ್ತು ಆ ಸೇತುವೆ ಇಲ್ಲದ ಹೊಳೆ.ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಗೆ ಅಡಿಕೆ ಮರದ

ಕಮರಿದ ಭರವಸೆಗಳ‌ ನಡುವೆ ಮೂಡಿದ ಆಶಾಕಿರಣ | ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸೆಡ್ಡು ಹೊಡೆದ ಮೊಗ್ರ ಗ್ರಾಮಸ್ಥರು | ತಲೆ ಎತ್ತಿ ನಿಂತಿದೆ ‘ಗ್ರಾಮಸೇತು’ Read More »

ದ.ಕ.ದಲ್ಲಿ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿ : ವಾಹನಗಳನ್ನು ಸೀಝ್ ಮಾಡಲು ಪೊಲೀಸರಿಗೆ ಸಂಪೂರ್ಣ ಅಧಿಕಾರ -ಡಿಸಿಪಿ ಹರಿರಾಂ ಶಂಕರ್ ಹೇಳಿದ್ದೇನು? ಇಲ್ಲಿದೆ ವಿಡಿಯೋ

ಮಂಗಳೂರು: ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸುವ ಹಿನ್ನೆಲೆಯ ಶನಿವಾರ ಹಾಗೂ ರವಿವಾರದಂದು ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಅನಗತ್ಯವಾಗಿ ಓಡಾಡಿದಲ್ಲಿ ವಾಹನಗಳನ್ನು ಸೀಝ್ ಮಾಡಲು ಪೊಲೀಸರಿಗೆ ಸಂಪೂರ್ಣ ಅಧಿಕಾರವೆಂದು ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಆರೋಗ್ಯ ಸೇವೆ ಹೊರತು ಪಡಿಸಿ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ತಭವಾಗಿರಲಿದೆ. ಸಾರ್ವಜನಿಕರ ವಾಹನಗಳು ಸಂಚಾರ ನಡೆಸುವಂತಿಲ್ಲ. ಖಾಸಗಿ ವಾಹನಗಳು ರಸ್ತೆಗಿಳಿದ್ದಲ್ಲಿ ಮುಲಾಜಿಲ್ಲದೆ ಸೀಝ್ ಮಾಡಲು ಕಾನೂನು ಹಾಗೂ ಸುವ್ಯವಸ್ಥೆಯ ಡಿಸಿಪಿ ಹರಿರಾಂ ಶಂಕರ್ ಆದೇಶ ನೀಡಿದ್ದಾರೆ. ತುರ್ತು ಸಂದರ್ಭ

ದ.ಕ.ದಲ್ಲಿ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿ : ವಾಹನಗಳನ್ನು ಸೀಝ್ ಮಾಡಲು ಪೊಲೀಸರಿಗೆ ಸಂಪೂರ್ಣ ಅಧಿಕಾರ -ಡಿಸಿಪಿ ಹರಿರಾಂ ಶಂಕರ್ ಹೇಳಿದ್ದೇನು? ಇಲ್ಲಿದೆ ವಿಡಿಯೋ Read More »

ಕಡಬ: ಕಾರುಗಳ ನಡುವೆ ಅಪಘಾತ | ಇಬ್ಬರು ಗಂಭೀರ

ಕಡಬ: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಗೋಳಿತ್ತಡಿ ಕುಂಡಾಜೆ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಕಾರುಗಳೆರಡು ಜಖಂಗೊಂಡಿದೆ. ಗಾಯಗೊಂಡವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬ: ಕಾರುಗಳ ನಡುವೆ ಅಪಘಾತ | ಇಬ್ಬರು ಗಂಭೀರ Read More »

ಮನೆ ಗೋಡೆ ಕುಸಿದು ಓರ್ವ ಸಾವು | ಇನ್ನೋರ್ವ ಗಂಭೀರ

ಕಾರವಾರ: ಮನೆ ದುರಸ್ತಿ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸದಾಶಿವಘಡದ ವೈಶ್ಯವಾಡದಲ್ಲಿ ನಡೆದಿದೆ. ಹುಚ್ಚಪ್ಪ (35) ಸ್ಥಳದಲ್ಲೇ ಸಾವು ಕಂಡ ಕಾರ್ಮಿಕನಾಗಿದ್ದು, ಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಕಾರ್ಮಿಕನನ್ನು ಅಗ್ನಿಶಾಮ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಇಂದು ಸದಾಶಿವಘಡದ ತುಳಸಿ ಬಾಯಿ ಅವರ ಮನೆಯ ದುರಸ್ತಿ ಕಾರ್ಯ ಮಾಡಲು ಕಾರ್ಮಿಕರು ತೆರಳಿದ್ದರು. ಈ ವೇಳೆ ಗೋಡೆ ಕೆಡವುವಾಗ ಘಟನೆ ನಡೆದಿದೆ. ಈ

ಮನೆ ಗೋಡೆ ಕುಸಿದು ಓರ್ವ ಸಾವು | ಇನ್ನೋರ್ವ ಗಂಭೀರ Read More »

ದಕ ದಲ್ಲಿ ವೀಕೆಂಡ್ ಕರ್ಫ್ಯೂ ಆನ್ | ಜಿಲ್ಲೆಯಲ್ಲಿ ಹೇಗಿದೆ ಕೋವಿಡ್ ಪರಿಸ್ಥಿತಿ | ಜಿಲ್ಲಾಧಿಕಾರಿ ನೀಡಿದ ಮಾಹಿತಿಯ ವಿಡಿಯೋ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇನ್ನು ಈ ಅವಧಿಯಲ್ಲಿ ಹಾಲು, ಪತ್ರಿಕೆ, ಮೆಡಿಕಲ್ ಹಾಗೂ ತುರ್ತು ಸೇವೆಗಳಿಗಷ್ಟೇ ಅವಕಾಶವಿದೆ. ವೀಕೆಂಡ್ ಕರ್ಫ್ಯೂವಿನಲ್ಲಿ ದಿನಸಿ ಅಂಗಡಿ, ಮದ್ಯದಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಆಗಲಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ.ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು ಅಗತ್ಯ ಸೇವೆಗಳು ಮತ್ತು ಕೋವಿಡ್

ದಕ ದಲ್ಲಿ ವೀಕೆಂಡ್ ಕರ್ಫ್ಯೂ ಆನ್ | ಜಿಲ್ಲೆಯಲ್ಲಿ ಹೇಗಿದೆ ಕೋವಿಡ್ ಪರಿಸ್ಥಿತಿ | ಜಿಲ್ಲಾಧಿಕಾರಿ ನೀಡಿದ ಮಾಹಿತಿಯ ವಿಡಿಯೋ Read More »

ಉಡುಪಿ : ಚೆಕ್ ದುರ್ಬಳಕೆ | 10 ಲಕ್ಷ ರೂ. ವಂಚನೆ

ಉಡುಪಿ: ಪ್ರೋವಿಶನ್ ಸ್ಟೋರ್ಸ್ ಮಾಲೀಕರ ಸ್ಕೂಟರ್‌ನಲ್ಲಿದ್ದ ಬ್ಯಾಗ್ ಕದ್ದು ಅದರಲ್ಲಿದ್ದ ಚೆಕ್‌ಗಳನ್ನು ದುರ್ಬಳಕೆ ಮಾಡಿ ೧೦ ಲಕ್ಷ ರೂ. ವಂಚಿಸಿದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬ್ರಹ್ಮಾವರ ದೂಪದಕಟ್ಟೆ ನಿವಾಸಿ ಗೋಪಾಲ ಅಮೀನ್ (55) ಎಂದು ಗುರುತಿಸಲಾಗಿದೆ. ಈತ 2019ರ ಜುಲೈ 13ರಂದು ಕರಾವಳಿ ಬೈಪಾಸ್‌ನ ಬಳಿ ಸಂತೆಕಟ್ಟೆಯಲ್ಲಿರುವ ದಶಮಿ ಪ್ರೋವಿಶನ್ ಸ್ಟೋರ್ಸ್ ಮಾಲೀಕರಾದ ಉಡುಪಿಯ ತೋನ್ಸೆ ಗ್ರಾಮದ ನಿವಾಸಿ ಉದಯ ಕುಮಾರ ಎಂಬವರ ಸ್ಕೂಟರ್‌ನ ಬ್ಯಾಗ್‌ನಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲ್ಯಾಣಪುರ ಶಾಖೆಯ

ಉಡುಪಿ : ಚೆಕ್ ದುರ್ಬಳಕೆ | 10 ಲಕ್ಷ ರೂ. ವಂಚನೆ Read More »

ಮಂಗಳೂರು : ಸಮುದ್ರಕ್ಕೆ ಹಾರಿ ಇಂಜಿನಿಯರಿಂಗ್ ಪದವೀಧರ ಯುವಕ ಆತ್ಮಹತ್ಯೆ

ಉಳ್ಳಾಲ: ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆಯಿಂದ ಹಾರಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸೋಮೇಶ್ವರ ಪುರಸಭಾ ಕಚೇರಿ ಬಳಿಯ ನಿವಾಸಿ ಪವನ್ ಭಟ್ (೩೦) ಆತ್ಮಹತ್ಯೆಗೈದ ಯುವಕ. ಗಣೇಶ್ ಪ್ರಸನ್ನ ಮತ್ತು ರಾಜೇಶ್ವರಿ ದಂಪತಿಯ ಹಿರಿಯ ಮಗನಾದ ಪವನ್ ಮೈಸೂರಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಎನ್ನಲಾಗಿದೆ. ಮೈಸೂರಿನಿಂದ ಬಂದ ಬಳಿಕ ನಿತ್ಯವೂ ಸೋಮೇಶ್ವರ ದೇವಸ್ಥಾನಕ್ಕೆ ಪವನ್ ಬಂದು ಹೋಗುತ್ತಿದ್ದರೆನ್ನಲಾಗಿದೆ. ಇಂದು ಸಂಜೆ 4:30ರ ಹೊತ್ತಿಗೆ ಸಮುದ್ರ ಕಿನಾರೆಗೆ ಬಂದಿದ್ದ ಪವನ್, ರುದ್ರಪಾದೆಯ ಮೇಲಿಂದ

ಮಂಗಳೂರು : ಸಮುದ್ರಕ್ಕೆ ಹಾರಿ ಇಂಜಿನಿಯರಿಂಗ್ ಪದವೀಧರ ಯುವಕ ಆತ್ಮಹತ್ಯೆ Read More »

ದ. ಕ : ಜೂನ್ ಅಂತ್ಯದವರೆಗೂ ಖಾಸಗಿ ಬಸ್ ಗಳು ರಸ್ತೆಗಿಳಿಯಲ್ಲ : ದಿಲ್ ರಾಜ್ ಆಳ್ವ ಸ್ಪಷ್ಟನೆ

ಮಂಗಳೂರು: ಜಿಲ್ಲೆಯಲ್ಲಿ ಬುಧವಾರದಿಂದ ಬೆಳಗ್ಗೆ 7ರಿಂದ ಮಧ್ಯಾಹ್ನ 1 ರವರೆಗೆ ಬಸ್ ಸಂಚಾರಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರೂ, ಖಾಸಗಿ ಬಸ್‌ಗಳು ರಸ್ತೆಗಿಳಿಯವುದಿಲ್ಲ ಎಂದು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ಬಸ್‌ಗಳು ಸ್ಥಗಿತಗೊಂಡು ಎರಡು ತಿಂಗಳು ಕಳೆದಿದೆ. ತಾಂತ್ರಿಕ ಕಾರಣದಿಂದ ಏಕಾಏಕಿ ಬಸ್‌ಗಳನ್ನು ರಸ್ತೆಗಿಳಿಸಲು ಸಾಧ್ಯವಿಲ್ಲ. ಜೂನ್‌ನಲ್ಲಿ ಮುಂದಿನ ಒಂದು ವಾರದ ಅವಧಿಗೆ ಇಡೀ ತಿಂಗಳ ತೆರಿಗೆ ಪಾವತಿ ಸಾಧ್ಯವಿಲ್ಲ. ಶೇ. 50ರಷ್ಟು ಪ್ರಯಾಣಿಕರಿಗೆ ನಾವು ಪೂರ್ತಿ ತೆರಿಗೆ ಪಾವತಿಸಬೇಕು. ಅದು ಕಷ್ಟದ

ದ. ಕ : ಜೂನ್ ಅಂತ್ಯದವರೆಗೂ ಖಾಸಗಿ ಬಸ್ ಗಳು ರಸ್ತೆಗಿಳಿಯಲ್ಲ : ದಿಲ್ ರಾಜ್ ಆಳ್ವ ಸ್ಪಷ್ಟನೆ Read More »

ಗಳಿಗೆಗೊಂದು ರೂಲ್ಸ್, ಜನರು ಫುಲ್ ಕನ್’ಫ್ಯೂಸ್: ಪ್ರಭಾವಿಗಳ ಒತ್ತಡಕ್ಕೆ ಮಣಿಯಿತಾ ದ.ಕ ಜಿಲ್ಲಾಡಳಿತ?

ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಕೊಂಚ ಸಂಪೂರ್ಣ ಕಡಿಮೆಯಾಗದೇ ಲಾಕ್ ಡೌನ್ ವಿನಾಯಿತಿ ನೀಡುವುದಿಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಅವರು ಎರಡೇ ದಿನದಲ್ಲಿ ಎರಡೆರಡು ಬಾರಿ ಮಾರ್ಗಸೂಚಿ ಬದಲಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗಳಿಗೆಗೊಂದು ಆದೇಶ ಹೊರತರುತ್ತಿರುವ ಜಿಲ್ಲಾಡಳಿತದ ಕ್ರಮದಿಂದಾಗಿ ಪ್ರಭಾವಿಗಳ ಒತ್ತಡಕ್ಕೆ ಡಿಸಿ ಮತ್ತು ಸಚಿವರು ಮಣಿಯುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಜೂ.21 ರಂದು ಅಗತ್ಯವಸ್ತುಗಳ ಖರೀದಿಗೆ ಡಿಸಿ ಮಧ್ಯಾಹ್ನ 1 ಗಂಟೆವರೆಗೆ ಸಮಯ ವಿಸ್ತರಿಸಿ ಆದೇಶಿಸಿದ್ದರು‌.

ಗಳಿಗೆಗೊಂದು ರೂಲ್ಸ್, ಜನರು ಫುಲ್ ಕನ್’ಫ್ಯೂಸ್: ಪ್ರಭಾವಿಗಳ ಒತ್ತಡಕ್ಕೆ ಮಣಿಯಿತಾ ದ.ಕ ಜಿಲ್ಲಾಡಳಿತ? Read More »