ಕರಾವಳಿ

ಜೈ ತುಳುನಾಡ್ ಸಂಘಟನೆಯಿಂದ ತುಳು ಭಾಷೆಯನ್ನು ಅಧಿಕೃತ ಮಾಡುವಂತೆ ಕೇರಳ ಸರ್ಕಾರಕ್ಕೆ ಮನವಿ

ಕಾಸರಗೋಡು: ತುಳುನಾಡಿನ ಆಚಾರ ವಿಚಾರ ಲಿಪಿ ಸಂಸ್ಕ್ರತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯುತ ಕೆಲಸ ಕಾರ‍್ಯಗಳನ್ನು ನಿಸ್ವರ‍್ಥವಾಗಿ ಮಾಡಲು ಯುವಕರು ಹಾಗೂ ಹಿರಿಯರು ಒಗ್ಗೂಡಿಕೊಂಡು ಒಂದಾಗಿರುವ ಸಂಘಟನೆ ‘ಜೈ ತುಳುನಾಡ್ ಸಂಘಟನೆ’ ಇದರ ಕಾಸರಗೋಡು ಘಟಕದಿಂದ ಘಟಕದ ಅಧ್ಯಕ್ಷ ಹರಿಕಾಂತ್ ಕಾಸರಗೋಡು ಇವರ ಮುಂದಾಳುತ್ವದಲ್ಲಿ, ಕೇರಳ ರಾಜ್ಯದಲ್ಲಿ ತುಳು ಬಾಷೆ ಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಶಾಸಕರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ದಾಖಲೆಯ ಜೊತೆಗಿರುವ ಮನವಿಯನ್ನು […]

ಜೈ ತುಳುನಾಡ್ ಸಂಘಟನೆಯಿಂದ ತುಳು ಭಾಷೆಯನ್ನು ಅಧಿಕೃತ ಮಾಡುವಂತೆ ಕೇರಳ ಸರ್ಕಾರಕ್ಕೆ ಮನವಿ Read More »

ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ | 23 ಗೋವುಗಳ ರಕ್ಷಣೆ

ಕುಂದಾಪುರ: ಮೇಯಲು ಬಿಟ್ಟ ದನಗಳನ್ನು ಕದ್ದು ಮಾಂಸಕ್ಕಾಗಿ ಕೂಡಿಟ್ಟಿದ್ದ 23 ದನಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಕುಂದಾಪುರ ಪೊಲೀಸರು ರಕ್ಷಣೆ ಮಾಡಿದ್ದಾರೆ. ತಾಲೂಕಿನಲ್ಲಿ ಮೇಯಲು ಬಿಟ್ಟ ದನಗಳ ಸರಣಿ ಕಳ್ಳತನವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಗೋ ಕಳ್ಳತನವಾಗುತ್ತಿರುವುದರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಭಾನುವಾರ ದನ ಕಳ್ಳನ ಬಗ್ಗೆ ಮಾಹಿತಿ ಪಡೆದ ಕಾರ್ಯಕರ್ತರು ಕುಂದಾಪುರ ಗ್ರಾಮಾಂತರ ಠಾಣೆಗೆ ತಿಳಿಸಿದ್ದಾರೆ. ನಂತರ ಪೋಲೀಸರ ನೆರವಿನಿಂದ ಗುಳ್ವಾಡಿ ನಿವಾಸಿ ಅಬೂಬಕ್ಕರ್ ಎಂಬವರ ಮನೆಗೆ ದಾಳಿ ಮಾಡಿದ್ದಾರೆ. ಈ

ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ | 23 ಗೋವುಗಳ ರಕ್ಷಣೆ Read More »

ಮಂಗಳೂರು: ಪೊಲೀಸ್ ದಾಳಿ ವೇಳೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ‌ ಭಿನ್ನ ಕೋಮಿನ 4 ಜೋಡಿ ವಶಕ್ಕೆ

ಮಂಗಳೂರು: ನಗರ ಪ್ರತಿಷ್ಟಿತ ಹೊಟೇಲ್ ಮೇಲೆ ಬಂದರು ಪೊಲೀಸರು ‌ದಾಳಿ ಮಾಡಿ ಭಿನ್ನಕೋಮಿನ ನಾಲ್ಕು ಯುವ ಜೋಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಂಚಾಡಿಯ ಸಾಯಿ ಪ್ಯಾಲೇಸ್ ಹೊಟೇಲ್ ನಲ್ಲಿ ಯುವ ಜೋಡಿಗಳು ತಂಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಾಹಿತಿ ಕಲೆ‌ಹಾಕಿ ನಗರದ ಬಂದರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಿಂಜಾವೇ ಕಾರ್ಯಕರ್ತರ ದೂರಿನ ಮೇರೆಗೆ ಪೊಲೀಸರು ಇಂದು ಲಾಡ್ಜ್ ಮೇಲೆ ದಾಳಿ ನಡೆಸಿ ನಾಲ್ಕು ಮಂದಿ ಮುಸ್ಲಿಂ ಯುವಕರು ಹಾಗೂ

ಮಂಗಳೂರು: ಪೊಲೀಸ್ ದಾಳಿ ವೇಳೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ‌ ಭಿನ್ನ ಕೋಮಿನ 4 ಜೋಡಿ ವಶಕ್ಕೆ Read More »

ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಅಪಘಾತಗೊಂಡು ಆಸ್ಪತ್ರೆಗೆ ದಾಖಲು | ಮುನಿದಳೇ‌ ಮಂತ್ರದೇವತೆ ಕಲ್ಲುರ್ಟಿ…? | ಆರೋಪಿ ರಕ್ಷಣೆಗೆ ರಾಜಕೀಯ ಶಕ್ತಿಗಳ ಕೈವಾಡ

ಬಂಟ್ವಾಳ : ಚಿಕ್ಕಪ್ಪನೇ ನಿರಂತರ ಅತ್ಯಾಚಾರ ಎಸಗಿ ಸಂತ್ರಸ್ತಳಾಗಿದ್ದ ಯುವತಿಯ ಪೋಷಕರು ಪನೋಲಿಬೈಲು ಕಲ್ಲುರ್ಟಿ‌ ಮೊರೆ ಹೋಗಿದ್ದು, ಆಕೆ ಧರ್ಮ ರಕ್ಷಿಸಿದ್ದಾಳೆ ಎಂಬ ಮಾತೀಗ ತುಳುನಾಡಿನಲ್ಲಿ ಕೇಳಿಬಂದಿದ್ದು, ತಾಯಿಯ ಸತ್ಯ ಮತ್ತೆ‌ ಗೋಚರಿಸಿದೆ. ಮಗಳ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಚಿಕ್ಕಪ್ಪ, ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮನಿಗೆ ಕಳೆದ ಶುಕ್ರವಾರ ಬೆಳಿಗ್ಗೆ ಆಕ್ಸಿಡೆಂಟ್ ಆಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಮುಕ ಚಿಕ್ಕಪ್ಪನಿಂದಲೇ ನಿರಂತರ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿಯಿಂದ

ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಅಪಘಾತಗೊಂಡು ಆಸ್ಪತ್ರೆಗೆ ದಾಖಲು | ಮುನಿದಳೇ‌ ಮಂತ್ರದೇವತೆ ಕಲ್ಲುರ್ಟಿ…? | ಆರೋಪಿ ರಕ್ಷಣೆಗೆ ರಾಜಕೀಯ ಶಕ್ತಿಗಳ ಕೈವಾಡ Read More »

ಪುತ್ತೂರು: ಎರಡು ತಿಂಗಳ ಬಾಣಂತಿ ಮೃತ್ಯು

ಪುತ್ತೂರು: ಎರಡು ತಿಂಗಳ ಬಾಣಂತಿ ಒಬ್ಬರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಇಂದು ನಡೆದಿದೆ. ಪುತ್ತೂರಿನ ಕೃಷ್ಣ ನಗರ ನಿವಾಸಿ ದಿಲೀಪ್ ಎಂಬವರ ಪತ್ನಿ ಅಕ್ಷತಾ (26) ಮೃತಪಟ್ಟವರು. ಅಕ್ಷತಾ 2 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಷತಾ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪುತ್ತೂರು: ಎರಡು ತಿಂಗಳ ಬಾಣಂತಿ ಮೃತ್ಯು Read More »

ಸೋಂಕಿತರಿಗೆ ಕೇರ್ ಸೆಂಟರ್’ನಲ್ಲಿ ಚಿಕಿತ್ಸೆ ಉತ್ತಮ: ಸಚಿವ ಎಸ್ ಅಂಗಾರ

ಸುಬ್ರಹ್ಮಣ್ಯ: ಕೋವಿಡ್ ಸೋಂಕಿತರು ಕೇರ್ ಸೆಂಟರ್ ನಲ್ಲಿ ಇದ್ದುಕೊಂಡೆ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಸಚಿವ ಅಂಗಾರ ಹೇಳಿದ್ದಾರೆ. ಅವರು ನಿನ್ನೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೋವಿಡ್ ಪಾಸಿಟಿವ್ ವರದಿ ಬಂದವರು ಮನೆಯಲ್ಲಿ ಇರುವುದಕ್ಕಿಂತ ಆರೈಕೆ ಕೇಂದ್ರಗಳಲ್ಲಿ ಉಳಿಯುವುದು ಸೂಕ್ತ. ಮನೆಯಲ್ಲಿದ್ದರೆ ನೆರೆಹೊರೆಯವರಿಗೆ ಸೋಂಕು ಹರಡುವ ಸಂಭವ ಹೆಚ್ಚು. ಅದಕ್ಕಾಗಿ ಸಾರ್ವಜನಿಕರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯಬೇಕು. ಆರೈಕೆ ಕೇಂದ್ರದಲ್ಲಿ ಆಹಾರ ಮತ್ತು ಔಷಧ ವಿತರಣೆ ವ್ಯವಸ್ಥಿತವಾಗಿ

ಸೋಂಕಿತರಿಗೆ ಕೇರ್ ಸೆಂಟರ್’ನಲ್ಲಿ ಚಿಕಿತ್ಸೆ ಉತ್ತಮ: ಸಚಿವ ಎಸ್ ಅಂಗಾರ Read More »

ದ ಕ: ಕಾಲೇಜು ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಮತ್ತು ಸಿಬ್ಬಂದಿಗಳಿಗೆ ನಾಳೆಯಿಂದ ವ್ಯಾಕ್ಸಿನೇಷನ್

ಮಂಗಳೂರು: ಜಿಲ್ಲೆಯ ಪದವಿ ಕಾಲೇಜಿನ ಎಲ್ಲಾ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ, ಬೋಧಕ ವೃಂದದವರಿಗೆ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ನಾಳೆಯಿಂದ ವ್ಯಾಕ್ಸಿನೇಷನ್ ಕಾರ್ಯಕ್ರಮ ಆರಂಭಿಸಲಾಗುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ. ಜುಲೈ ತಿಂಗಳಿನಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳು, ಸ್ನಾತಕೋತ್ತರ ಪದವಿ ಕಾಲೇಜುಗಳು, ಐಐಟಿ, ಡಿಪ್ಲೋಮಾ ಕಾಲೇಜುಗಳು, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು

ದ ಕ: ಕಾಲೇಜು ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಮತ್ತು ಸಿಬ್ಬಂದಿಗಳಿಗೆ ನಾಳೆಯಿಂದ ವ್ಯಾಕ್ಸಿನೇಷನ್ Read More »

ಕರಾವಳಿಗರೇ ಎಚ್ಚರ… ‘ದುಶ್ಮನ್ ಬಗಲ್ ಮೆ’,ಹೆಚ್ಚುತ್ತಿವೆ ‘ಡೆಲ್ಟಾ’ ಪ್ಲಸ್ ಕೇಸ್‌

ಮಂಗಳೂರು: ಕೇರಳದ ಕರಾವಳಿ ಭಾಗಗಳಲ್ಲಿ ಕೊರೊನಾ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನೆರೆಯ ದಕ್ಷಿಣಕನ್ನಡ ಜಿಲ್ಲೆಗೂ ಭೀತಿ ಹೆಚ್ಚಾಗಿದೆ. ಕೇರಳದಿಂದ ಪ್ರತಿನಿತ್ಯ ಸಾವಿರಾರು ಮಂದಿ ದಕ್ಷಿಣ ಕನ್ನಡ ಜಿಲ್ಲೆಗೆ ವ್ಯಾಪಾರ, ಉದ್ಯೋಗಕ್ಕಾಗಿ ಬಂದು ಹೋಗುತ್ತಾರೆ. ಹೀಗಾಗಿ ಜಿಲ್ಲೆಯ ಜನತೆಗೆ ಭೀತಿ ಹೆಚ್ಚಾಗಿದ್ದು, ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ವಾರದ ವೀಕೆಂಡ್ ಕರ್ಪ್ಯೂ ಜಾರಿ ಇದ್ದ ಕಾರಣ ಗಡಿ ಭಾಗದಲ್ಲಿ ಹೆಚ್ಚಿನ ವಾಹನ ಓಡಾಟ ಇರಲಿಲ್ಲ. ಆದರೂ ಯಾವೊಂದು ತಪಾಸಣೆಯೂ

ಕರಾವಳಿಗರೇ ಎಚ್ಚರ… ‘ದುಶ್ಮನ್ ಬಗಲ್ ಮೆ’,ಹೆಚ್ಚುತ್ತಿವೆ ‘ಡೆಲ್ಟಾ’ ಪ್ಲಸ್ ಕೇಸ್‌ Read More »

ರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆಗೆ ಯತ್ನಿಸಿದ ಚಾಲಕ

ಕಾರ್ಕಳ: ನಗರದ ಮಂಜುನಾಥ ಪೈ ಸಭಾಂಗಣ ಬಳಿಯ ದೇವರಗದ್ದೆ ರಸ್ತೆಯಲ್ಲಿ ಚಾಲಕನೊಬ್ಬ ರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಸಂಜೆ ನಡೆದಿದೆ. ಚಿಕ್ಕಮಗಳೂರು ಮೂಲದವನಾಗಿದ್ದು, ಹಿರಿಯಂಗಡಿ ನಿವಾಸಿಯಾಗಿರುವ ಮಂಜುನಾಥ (೩೪) ಎಂಬಾತ ವಿಷ ಸೇವನೆಗೈದವರು. ಇದೀಗ ಮಂಜುನಾಥನನ್ನು ಸ್ಥಳೀಯ ನಾಗರಿಕರು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಕ್ಷಾದಲ್ಲಿ ವಿಷ ಸೇವನೆಗೈದು ಆತ್ಮಹತ್ಯೆಗೆ ಯತ್ನಿಸಿದ ಚಾಲಕ Read More »

ಬಂಟ್ವಾಳ | ಶ್ರೀ ಗಂಧ ಮರ ಕಡಿದು ಮಾರಾಟ ಯತ್ನ |ಉಡ ಹಿಡಿದು ಪಾರ್ಟಿ ಮಾಡಲೆತ್ನಿಸಿದಾಗ ಅರಣ್ಯ ಇಲಾಖೆ ಮಿಂಚಿನ ದಾಳಿ

ಬಂಟ್ವಾಳ : ತಾಲೂಕಿನ ವೀರಕಂಬ ರಕ್ಷಿತಾರಣ್ಯ ದಿಂದ ಲಕ್ಷಾಂತರ ರೂ ಮೌಲ್ಯದ ಗಂಧದ ಮರಗಳನ್ನು ಕಡಿದು, ಮಾರಾಟ ಮಾಡಲು ಯತ್ನಿಸಿದ ವೇಳೆ ಬಂಟ್ವಾಳ ವಲಯ ಆರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಬಂಧಿಸಿದ್ದಾರೆ. ಪಾತೂರು ನಿವಾಸಿ ಇಬ್ರಾಹಿಂ ಹಾಗೂ ಇರಾ ಗ್ರಾಮದ ಮೊಯಿದ್ದೀನ್ ಬಂಧಿತ ಆರೋಪಿಗಳು. ಕಾರ್ಯಚರಣೆ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಲಾಗಿದೆ. ಸಿದ್ದೀಕ್ ಹಾಗೂ ಸಿದ್ದೀಕ್ ಯಾನೆ ಕೊರಂಗು ಸಿದ್ದೀಕ್ ತಲೆಮರೆಸಿಕೊಂಡ ಆರೋಪಿಗಳು. ಆರೋಪಿಗಳು ಅಂದಾಜು ಮೂರು ಲಕ್ಷ

ಬಂಟ್ವಾಳ | ಶ್ರೀ ಗಂಧ ಮರ ಕಡಿದು ಮಾರಾಟ ಯತ್ನ |ಉಡ ಹಿಡಿದು ಪಾರ್ಟಿ ಮಾಡಲೆತ್ನಿಸಿದಾಗ ಅರಣ್ಯ ಇಲಾಖೆ ಮಿಂಚಿನ ದಾಳಿ Read More »