ಕರಾವಳಿ

ಮಂಗಳೂರು: ಖಾಸಗಿ ಟಿವಿ ವರದಿಗಾರನಿಗೆ ಹಲ್ಲೆ, ಕೊಲೆಯತ್ನ| ಆರೋಪಿಯ ಬಂಧನ

ಮಂಗಳೂರು : ಖಾಸಗಿ ಟಿವಿ ವಾಹಿನಿ ವರದಿಗಾರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಖಾಸಗಿ ಟಿವಿ ವರದಿಗಾರರಾಗಿರುವ ಸುಖ್ ಪಾಲ್ ಪೊಳಲಿ ಅವರ ಮೇಲೆ ಯದುನಂದನ್ ಎನ್ನುವವರು ಸೋಮವಾರ ಸಂಜೆ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತಲೆಗೆ ಪೆಟ್ಟು ಬಿದ್ದ ಸುಖ್ ಪಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಯದುನಂದನ್ ಮೇಲೆ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಖಾಸಗಿ ಟಿವಿ ವರದಿಗಾರನಿಗೆ ಹಲ್ಲೆ, ಕೊಲೆಯತ್ನ| ಆರೋಪಿಯ ಬಂಧನ Read More »

ಪುತ್ತೂರು: ಸ್ವಂತ ಮೈದುನನಿಂದ ಅತ್ತಿಗೆ ಮೇಲೆ ಗುಂಡಿನ ದಾಳಿ| ಆರೋಪಿ ಪರಾರಿ|

ಪುತ್ತೂರು: ಜಾಗದ ತಕರಾರಿನಲ್ಲಿ ಮಾತಿನ ಚಕಮಕಿ ನಡೆದು, ಮೈದುನನೇ ಮಹಿಳೆಯ ಮೇಲೆ ನಾಡ ಬಂದೂಕಿನಲ್ಲಿ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಕೊಯಕುಡೆ ಎಂಬಲ್ಲಿ ಘಟನೆ ನಡೆದಿದೆ. ದರ್ನಮ್ಮ(54), ಆಕೆಯ ಗಂಡ ಬಾಬು ಗೌಡ ಮತ್ತು ಅವರ ಮಗ ರವಿ ತಮ್ಮ ಮನೆಯ ಬಳಿಯ ಜಮೀನಿನಲ್ಲಿ ತೊಂಡೆಕಾಯಿ ಬಳ್ಳಿಗೆ ಚಪ್ಪರ ಹಾಕುತ್ತಿದ್ದಾಗ, ಮಹಿಳೆಯ ಮೈದುನನಾಗಿರುವ ದೇವಪ್ಪ ಗೌಡ ತನ್ನ ಬಂದೂಕು ಹಿಡಿದು ತಂದಿದ್ದು

ಪುತ್ತೂರು: ಸ್ವಂತ ಮೈದುನನಿಂದ ಅತ್ತಿಗೆ ಮೇಲೆ ಗುಂಡಿನ ದಾಳಿ| ಆರೋಪಿ ಪರಾರಿ| Read More »

ಕಾನೂನು ಮಧ್ಯಪ್ರವೇಶ| ಬೀಸೋ ಕೊಡಲಿಯಿಂದ ತಪ್ಪಿಸಿಕೊಂಡ “ಶ್ರೀತಾಳೆ”

ಬೆಳ್ತಂಗಡಿ: ಅಳಿವಿನಂಚಿನಲ್ಲಿರುವ ಶ್ರೀ ತಾಳೆ ಮರ ಹೂ ಬಿಟ್ಟರೆ ಊರಿಗೆ ಅನಿಷ್ಠ ಎಂಬ ಕಾರಣಕ್ಕಾಗಿ ಹೂ ಬಿಟ್ಟ ತಾಳೆ ಮರವನ್ನು ಕಡಿಯಲು ಮುಂದಾಗಿದ್ದ ಗ್ರಾಮಸ್ಥರನ್ನು ಅರಣ್ಯ ಇಲಾಖೆ ತಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದ ದೇಲಂಪುರಿ ಎಂಬಲ್ಲಿ ಚಂದ್ರಶೇಖರ್ ಮತ್ತು ಗಿರಿಜಮ್ಮ ಎಂಬುವವರ ಜಾಗದಲ್ಲಿ 80 ವರ್ಷದ ಹಳೆಯದಾದ ತಾಳೆ ಮರ ಹೂ ಬಿಟ್ಟಿದ್ದು, ಈ ಮರ ಹೂ ಬಿಟ್ಟಿರೋದು ಊರಿಗೆ ಅನಿಷ್ಠ ಎಂಬ ಭಾವನೆ ಮನೆಯವರು ಮತ್ತು ಊರವರಿಗೆ ಕಾಡಿದೆ. ಈ

ಕಾನೂನು ಮಧ್ಯಪ್ರವೇಶ| ಬೀಸೋ ಕೊಡಲಿಯಿಂದ ತಪ್ಪಿಸಿಕೊಂಡ “ಶ್ರೀತಾಳೆ” Read More »

ಕಡಬ: ಹಾಡುಹಗಲು ಮನೆಯಂಗಳದಲ್ಲೇ ಓಡಾಡಿದ ಕಾಡಾನೆ ಹಿಂಡು

ಕಡಬ. ಹಾಡುಹಗಲೇ ಕಾಡಾನೆ ಹಿಂಡೊಂದು ಮನೆ ಅಂಗಳ ಹಾಗೂ ತೋಟಕ್ಕೆ ಲಗ್ಗೆಯಿಟ್ಟು ಜನರನ್ನು ಭಯಬೀತಿ ಗೊಳಿಸುತ್ತಿರುವ ಘಟನೆ ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕೊಣಾಜೆ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಹಾಗೂ ಹಾಡು ಹಗಲಲ್ಲೂ ತೋಟಕ್ಕೆ ನುಗ್ಗಿ ಕೃಷಿ ನಾಶ ಪಡಿಸುತ್ತಿರುವ ದೂರು ಕೇಳಿಬಂದಿದೆ. ಹಲವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ನೂರಾರು ಅಡಿಕೆ ಗಿಡ, ಬಾಳೆ ಸೇರಿದಂತೆ ಇತರೆ ಕೃಷಿಗಳನ್ನು ನಾಶ ಪಡಿಸಿದೆ. ಕಾಡಾನೆ ದಾಳಿಯಿಂದ ಜನತೆ

ಕಡಬ: ಹಾಡುಹಗಲು ಮನೆಯಂಗಳದಲ್ಲೇ ಓಡಾಡಿದ ಕಾಡಾನೆ ಹಿಂಡು Read More »

ವಿಟ್ಲ: ಕಾರು – ಬೈಕ್‌ ಢಿಕ್ಕಿ – ಸವಾರ ಮೃತ್ಯು

ವಿಟ್ಲ: ಬೈಕ್‌ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ಫರಂಗಿಪೇಟೆ ಸಮೀಪದ ಅರ್ಕುಳದಲ್ಲಿ ಇಂದು ನಡೆದಿದೆ. ಮೃತ ಸವಾರನನ್ನು ಕೇಪು ಗ್ರಾಮದ ನೀರ್ಕಜೆ ನಿವಾಸಿ ಬಾಬು ನಾಯ್ಕ ಅವರ ಪುತ್ರ ಪ್ರಜ್ವಲ್‌ (26) ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ಎನ್‌ಎಂಪಿಟಿ ಉದ್ಯೋಗಿಯಾಗಿದ್ದರು. ಹಾಗಾಗಿ ಕಂಪೆನಿಗೆ ಬೈಕ್‌‌ನಲ್ಲಿ ಹೋಗುತ್ತಿದ್ದ ಸಂದರ್ಭ ಬೈಕ್‌ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆ ಪರಿಣಾಮ ಪ್ರಜ್ವಲ್‌ ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಿಟ್ಲ: ಕಾರು – ಬೈಕ್‌ ಢಿಕ್ಕಿ – ಸವಾರ ಮೃತ್ಯು Read More »

ಮುಸ್ಲಿಂ ಹುಡುಗನ ಜೊತೆ ಮದುವೆಗೆ ರೆಡಿಯಾಗಿದ್ದ ಹಿಂದೂ ಹುಡುಗಿ| ಮಠಾಧೀಶರ ಮನವೊಲಿಕೆ ಬಳಿಕ ನಿರ್ಧಾರದಿಂದ ಹಿಂದೆ ಸರಿದ ಯುವತಿ|

ಮಂಗಳೂರು: ಕಳೆದ ಎರಡು ದಿನಗಳಿಂದ ವೈರಲ್ ಆಗಿದ್ದ ಹಿಂದು ಯುವತಿ ಮತ್ತು ಮುಸ್ಲಿಂ ಯುವಕನ ಮದುವೆ ವಿಚಾರದಲ್ಲಿ ಹಿಂದು ಸಂಘಟನೆಗಳ ನಾಯಕರು ಎಂಟ್ರಿ ಆಗಿದ್ದು, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರ ಮನವೊಲಿಕೆ ಬಳಿಕ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾಳೆ. ಪಾಂಡೇಶ್ವರದ ಯುವತಿಯ ಮನೆಗೆ ತೆರಳಿದ ಸ್ವಾಮೀಜಿ, ಯುವತಿ ಮತ್ತು ಆಕೆಯ ಹೆತ್ತವರಲ್ಲಿ ಮಾತನಾಡಿದ್ದಾರೆ. ಇತ್ತೀಚಿಗೆ ಸುಳ್ಯದಲ್ಲಿ ‌ನಡೆದ ಆಸಿಯಾ ಪ್ರಕರಣ ಸೇರಿದಂತೆ ಹತ್ತಾರು ಪ್ರಕರಣದಲ್ಲಿ ಹಿಂದು ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ, ಮತಾಂತರ ಮಾಡಿರುವ

ಮುಸ್ಲಿಂ ಹುಡುಗನ ಜೊತೆ ಮದುವೆಗೆ ರೆಡಿಯಾಗಿದ್ದ ಹಿಂದೂ ಹುಡುಗಿ| ಮಠಾಧೀಶರ ಮನವೊಲಿಕೆ ಬಳಿಕ ನಿರ್ಧಾರದಿಂದ ಹಿಂದೆ ಸರಿದ ಯುವತಿ| Read More »

ಬಂಟ್ವಾಳ: ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಮಹಿಳೆ

ಬಂಟ್ವಾಳ: ಮಹಿಳೆಯೋರ್ವರು ಪಾಣೆಮಂಗಳೂರು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಹಿಳೆಯೋರ್ವರು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ್ದನ್ನು ವಾಹನ ಸವಾರರು ನೋಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿದ ತಕ್ಷಣವೇ ಮುಳುಗಾರರು ದೋಣಿಯ ಮೂಲಕ ನೇತ್ರಾವತಿ ಸೇತುವೆ ಬಳಿ ಧಾವಿಸಿದ್ದು, ಮಹಿಳೆ ಅದಾಗಲೇ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನೂ ನದಿಗೆ ಹಾರಿದ ಮಹಿಳೆ ಯಾರು ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಬಂಟ್ವಾಳ: ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಮಹಿಳೆ Read More »

ಸಹಕಾರ ಸಚಿವರ ಗುಡುಗಿದ ಬೆದರಿದರಾ ಡಾ. ಎಂ.ಎನ್ ರಾಜೇಂದ್ರ ಕುಮಾರ್| ಎಂಎಲ್ಸಿ ಚುನಾವಣೆಯಿಂದ ದಿಢೀರ್ ಹಿಂದಕ್ಕೆ ಸರಿದ ಎಸ್ಸಿಡಿಸಿಸಿ‌ ಬ್ಯಾಂಕ್ ಅಧ್ಯಕ್ಷ

ಮಂಗಳೂರು : ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿದ್ದ ಸಹಕಾರಿ ಧುರೀಣ ಎಸ್‌ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್.‌ ರಾಜೇಂದ್ರ ಕುಮಾರ್‌ ಚುನಾವಣಾ ಕಣದಿಂದ ದೂರ ಉಳಿಯುವ ಅಚ್ಚರಿಯ ನಿರ್ಧಾರ ಮಾಡಿದ್ದಾರೆ. ದ.ಕ, ಉಡುಪಿ ಉಭಯ ಜಿಲ್ಲೆಗಳ ಸಹಕಾರಿಗಳು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಡಾ.ಎಂ.ಎನ್.‌ ರಾಜೇಂದ್ರ ಕುಮಾರ್‌ ಚುನಾವಣೆಗೆ ಸ್ಪರ್ಧಿಸುವ ಮನ ಮಾಡಿದ್ದರು . ಅ. 23 ರಂದು ಈ ಬಗ್ಗೆ ನಾಮಪತ್ರ ಸಲ್ಲಿಸುವುದಾಗಿಯೂ

ಸಹಕಾರ ಸಚಿವರ ಗುಡುಗಿದ ಬೆದರಿದರಾ ಡಾ. ಎಂ.ಎನ್ ರಾಜೇಂದ್ರ ಕುಮಾರ್| ಎಂಎಲ್ಸಿ ಚುನಾವಣೆಯಿಂದ ದಿಢೀರ್ ಹಿಂದಕ್ಕೆ ಸರಿದ ಎಸ್ಸಿಡಿಸಿಸಿ‌ ಬ್ಯಾಂಕ್ ಅಧ್ಯಕ್ಷ Read More »

ಸಂಪಾಜೆ: ಮೇಯಲು ಬಿಟ್ಟ ದನಗಳು ನಿಗೂಢ ಕಣ್ಮರೆ| ಭಯ ಮತ್ತು ಅನುಮಾನದಲ್ಲಿ ಮಾಲೀಕರು|

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಮೇಯಲು ಬಿಟ್ಟ ಕೆಲವು ಹಸುಗಳು ನಿಗೂಢವಾಗಿ ಕಣ್ಮರೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಬೆಳಿಗ್ಗೆ ಮೇಯಲು ಬಿಟ್ಟ ಹಸುಗಳು ಇದ್ದಕ್ಕಿದ್ದಂತೆ ಕಾಣೆಯಾಗುತ್ತಿರುವ ಪ್ರಕರಣ ‌ಮಾಲಿಕರಿಗೆ ಭಯ ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ. ಕೆಲವು ಮಾಲೀಕರು ತಮ್ಮ ಅದಾಯದ ಮೂಲಗಳಾದ ಹಸುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ ಎನ್ನಲಾಗಿದೆ. ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಯಥೇಚ್ಛವಾಗಿ ನಡೆಯುತ್ತಿದ್ದು, ಖದೀಮರು ಗೋವುಗಳನ್ನು ಕದ್ದು ಸಾಗಿಸುತ್ತಿರುವ ಬಗ್ಗೆ ಶಂಕೆ

ಸಂಪಾಜೆ: ಮೇಯಲು ಬಿಟ್ಟ ದನಗಳು ನಿಗೂಢ ಕಣ್ಮರೆ| ಭಯ ಮತ್ತು ಅನುಮಾನದಲ್ಲಿ ಮಾಲೀಕರು| Read More »

ನ.29ರಿಂದ ಡಿ.4ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ| ಧರ್ಮನೆಲೆಯಲ್ಲಿ ಸಕಲ ಸಿದ್ದತೆಗಳು ಪೂರ್ಣ|

ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನ.29ರಿಂದ ಡಿ.4ರವರೆಗೆ ಲಕ್ಷ ದೀಪೋತ್ಸವ ನಡೆಯಲಿದೆ. ಡಿ.3ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಡಿ.2ರಂದು ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಉದ್ಘಾಟಿಸಲಿದ್ದು, ಬೆಂಗಳೂರಿನ ಎಸ್‌.ವ್ಯಾಸಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ರಾಮಚಂದ್ರ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ನ.3ರಂದು ಸಾಹಿತ್ಯ ಸಮ್ಮೇಳನದ 89ನೇ ಅಧಿವೇಶನವನ್ನು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಉದ್ಘಾಟಿಸಲಿದ್ದು, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ

ನ.29ರಿಂದ ಡಿ.4ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ| ಧರ್ಮನೆಲೆಯಲ್ಲಿ ಸಕಲ ಸಿದ್ದತೆಗಳು ಪೂರ್ಣ| Read More »