ಕರಾವಳಿ

ಉಪ್ಪಿನಂಗಡಿ: ಕರ್ತವ್ಯನಿರತ ಮೆಸ್ಕಾಂ ಸಿಬ್ಬಂದಿ ಮೇಲೆ ಗ್ರಾ.ಪಂ ಉಪಾಧ್ಯಕ್ಷ ಮತ್ತು ಸದಸ್ಯನಿಂದ ಹಲ್ಲೆ

ನೆಲ್ಯಾಡಿ : ಉಪ್ಪಿನಂಗಡಿ ಬಳಿ ವಿದ್ಯುತ್ ಸಂಪರ್ಕ ತನಿಖೆ ನಡೆಸಲು ತೆರಳಿದ ಸಂದರ್ಭದಲ್ಲಿ ಕರ್ತವ್ಯ ನಿರತ ಮೆಸ್ಕಾಂ ಜೆಇಇ ಮೇಲೆ ಗ್ರಾ.ಪಂ ಉಪಾಧ್ಯಕ್ಷ ಹಾಗೂ ಸದಸ್ಯ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೆಲ್ಯಾಡಿ ಮೆಸ್ಕಾಂ ಶಾಖಾ ಇಂಜಿನಿಯರ್ ರಮೇಶ್.ಬಿ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ. ಕಾರ್ತಿಕೇಯನ್ ಹಾಗೂ ಎಂ.ಕೆ ಪೌಲೋಸ್ ಹಲ್ಲೆ ನಡೆಸಿದವರು ಎನ್ನಲಾಗಿದೆ. ಗುಂಡ್ಯ ಎಂಬಲ್ಲಿ ವಿದ್ಯುತ್ ಸಂಪರ್ಕ ಪರಿಶೀಲನೆ ವೇಳೆ ಈ ಘಟನೆ ನಡೆದಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ

ಉಪ್ಪಿನಂಗಡಿ: ಕರ್ತವ್ಯನಿರತ ಮೆಸ್ಕಾಂ ಸಿಬ್ಬಂದಿ ಮೇಲೆ ಗ್ರಾ.ಪಂ ಉಪಾಧ್ಯಕ್ಷ ಮತ್ತು ಸದಸ್ಯನಿಂದ ಹಲ್ಲೆ Read More »

ಹೂವು ಕೊಯ್ಯಲು ಹೋದ ಯುವತಿ ಕೆರೆಗೆ ಬಿದ್ದು ಸಾವು

ಬಂಟ್ವಾಳ: ಯುವತಿಯೋರ್ವಳು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕಾರಾಜೆ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಾಜೆ ನಿವಾಸಿ ಲಿಂಗಪ್ಪ ಮೂಲ್ಯರ ಪುತ್ರಿ ರಶ್ಮಿತ (24) ಮೃತ ಪಟ್ಟ ಯುವತಿ. ರಶ್ಮಿತ ಬೆಳಿಗ್ಗೆ ದೇವರಿಗೆ ಪೂಜೆ ಗಾಗಿ ಹೂ ಕೊಯ್ಯಲು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೂವು ಕೊಯ್ಯಲು ಹೋದ ಯುವತಿ ಕೆರೆಗೆ ಬಿದ್ದು ಸಾವು Read More »

ಪುತ್ತೂರು: ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ : ನಾಲ್ವರನ್ನು ಪೊಲೀಸ್ ವಶಕ್ಕೆ ಪಡೆದ ಆರೋಪ| ಠಾಣೆಯೆದುರು ಜಾಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು|

ಪುತ್ತೂರು: ನಗರದ ಕೊಂಬೆಟ್ಟು ಸರ್ಕಾರಿ ಜ್ಯೂನಿಯರ್ ಕಾಲೇಜ್ ನಲ್ಲಿ ಭಿನ್ನ ಕೋಮಿಗೆ ಸೇರಿದ ಎರಡು ವಿದ್ಯಾರ್ಥಿಗಳ ತಂಡದ ನಡುವೆ ಎರಡು ಬಾರಿ ಹೊಡೆದಾಟ ಹಾಗೂ ಒಂದು ಬಾರಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕೋಮಿಗೆ ಸೇರಿದ ನಾಲ್ವರು ವಿದ್ಯಾರ್ಥಿಗಳನ್ನು ಪುತ್ತೂರು ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನ 26 ರಂದು ಸಂಜೆ ನಡೆದಿದೆ. ಹಿಂದೂ ವಿದ್ಯಾರ್ಥಿನಿಯ ಜೊತೆ ಅನ್ಯ ಧರ್ಮೀಯ

ಪುತ್ತೂರು: ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ : ನಾಲ್ವರನ್ನು ಪೊಲೀಸ್ ವಶಕ್ಕೆ ಪಡೆದ ಆರೋಪ| ಠಾಣೆಯೆದುರು ಜಾಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು| Read More »

ಆರೋಗ್ಯ‌ ಸಿಬ್ಬಂದಿಯ ಕಾಮಪುರಾಣ| ಆರೋಪಿಯ ಮತ್ತೊಂದು ಮುಖವಾಡ ಬಯಲು|

ಮಂಗಳೂರು: ಆರೋಗ್ಯ ಇಲಾಖೆ ಅಧಿಕಾರಿಯ ಕಾಮಪುರಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೈದ್ಯ ಡಾ. ರತ್ನಾಕರ್​ನ ಮತ್ತೊಂದು ಮುಖವಾಡ ಇದೀಗ ಬಯಲಾಗಿದೆ. ಆಯುಷ್ಮಾನ್ ನೋಡೆಲ್ ಆಫೀಸರ್ ಹಾಗೂ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್ ವಿರುದ್ಧ ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ಭ್ರಷ್ಟಾಚಾರದ ಆರೋಪ ಸಹ ಮಾಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಜಿಲ್ಲಾ‌ ಕಾರ್ಯಕ್ರಮದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ರತ್ನಾಕರ್, ಕಾರ್ಯಕ್ರಮ ಆಯೋಜನೆ ಹೆಸರಿನಲ್ಲಿಯೂ

ಆರೋಗ್ಯ‌ ಸಿಬ್ಬಂದಿಯ ಕಾಮಪುರಾಣ| ಆರೋಪಿಯ ಮತ್ತೊಂದು ಮುಖವಾಡ ಬಯಲು| Read More »

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯನ ಕಾಮಪುರಾಣ| ‘ಆತ ಆಸ್ಪತ್ರೆ ಸಿಬ್ಬಂದಿಯಲ್ಲ..!’ಸ್ಪಷ್ಟನೆ ನೀಡಿದ ಆಸ್ಪತ್ರೆ ಅಧೀಕ್ಷಕರು

ಮಂಗಳೂರು: ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯ ವೈದ್ಯನೊಬ್ಬನ ಕಾಮಪುರಾಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಅಧೀಕ್ಷಕರು ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯನೊರ್ವ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟ ಆಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತಂತೆ ಮಾಧ್ಯಮಗಳು ವರದಿ‌ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ‌ ಅದೀಕ್ಷಕರು ಸ್ಪಷ್ಟನೆ ನೀಡಿದ್ದಾರೆ. ಇಂದು ಮಾದ್ಯಮಗಳಲ್ಲಿ ಡಾ. ರತ್ನಾಕರ್, ಜಿಲ್ಲಾ ಕಾರ್ಯಕ್ರಮಾಧಿಕಾರಿ ಇವರ ಕುರಿತು ವರದಿಗಳು ಪ್ರಚಾರವಾಗುತ್ತಿದ್ದು, ಸದ್ರಿ ಅಧಿಕಾರಿ ಹಾಗೂ ಮಹಿಳಾ ಸಿಬ್ಬಂದಿಗಳು,

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯನ ಕಾಮಪುರಾಣ| ‘ಆತ ಆಸ್ಪತ್ರೆ ಸಿಬ್ಬಂದಿಯಲ್ಲ..!’ಸ್ಪಷ್ಟನೆ ನೀಡಿದ ಆಸ್ಪತ್ರೆ ಅಧೀಕ್ಷಕರು Read More »

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲೊಬ್ಬ ರಸಿಕ ಡಾಕ್ಟರ್| ಸಹೋದ್ಯೋಗಿಗಳನ್ನೇ ಸರಸಕ್ಕೆ ಕರೆಯುತ್ತಿದ್ದವ ಈಗ ಸಸ್ಪೆಂಡ್|

ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಕುಷ್ಠ ರೋಗ ವಿಭಾಗದ ವೈದ್ಯನೊಬ್ಬ ಸಹೋದ್ಯೋಗಿ ಯುವತಿಯರ ಜೊತೆ ಚಕ್ಕಂದ ಆಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ವೈದ್ಯನನ್ನು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ಸಸ್ಪೆಂಡ್ ಮಾಡಿದ್ದಾರೆ. ವೆನ್ಲಾಕ್ ಕುಷ್ಠ ರೋಗ ವಿಭಾಗದ ವೈದ್ಯ ಡಾ. ರತ್ನಾಕರ್ ಕರ್ತವ್ಯದಿಂದ ಅಮಾನತಾಗಿರುವ ವೈದ್ಯಾಧಿಕಾರಿ.‌ ಕಳೆದ ಹಲವು ಸಮಯದಿಂದ ಈತ ತನ್ನ ವಿಭಾಗದ ಕೆಲವು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ವಿಚಾರ ಅಲ್ಲಿನ ಇತರ ಸಿಬಂದಿಗೂ ತಿಳಿದಿತ್ತು.‌ ಆತನ ಜೊತೆ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲೊಬ್ಬ ರಸಿಕ ಡಾಕ್ಟರ್| ಸಹೋದ್ಯೋಗಿಗಳನ್ನೇ ಸರಸಕ್ಕೆ ಕರೆಯುತ್ತಿದ್ದವ ಈಗ ಸಸ್ಪೆಂಡ್| Read More »

ಕುಕ್ಕೆ: ಡಿ.1ರಿಂದ ಜಾತ್ರಾರಂಭ| ಡಿ.3 ಲಕ್ಷ ದೀಪೋತ್ಸವ, ಡಿ.9ರಂದು ವೈಭವದ ಚಂಪಾಷಷ್ಠಿ ಮಹೋತ್ಸವ|

ಮಂಗಳೂರು: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ವೈಭವಕ್ಕೆ ದಿನಗಣನೆ ಆರಂಭವಾಗಿದೆ. ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವ ಆರಂಭವಾದರೆ, ಡಿ.15 ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರಾ ಉತ್ಸವ ಸಮಾಪನಗೊಳ್ಳಲಿದೆ. ಡಿ.9ರಂದು ಚಂಪಾಷಷ್ಠಿಯ ವೈಭವದ ಬ್ರಹ್ಮ ರಥೋತ್ಸವ ಕ್ಷೇತ್ರದಲ್ಲಿ ಜರುಗಲಿದೆ. ಉದ್ಯಮಿ ದಿ.ಮುತ್ತಪ್ಪ ರೈ ಸೇವಾ ರೂಪದಲ್ಲಿ ನೀಡಿದ ಬ್ರಹ್ಮರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರು ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ಭಾಗ್ಯ ನೀಡಲಿದೆ. ಚಂಪಾಷಷ್ಠಿಯ ಈ ವೈಭವ ಕಾಣಲು,

ಕುಕ್ಕೆ: ಡಿ.1ರಿಂದ ಜಾತ್ರಾರಂಭ| ಡಿ.3 ಲಕ್ಷ ದೀಪೋತ್ಸವ, ಡಿ.9ರಂದು ವೈಭವದ ಚಂಪಾಷಷ್ಠಿ ಮಹೋತ್ಸವ| Read More »

ದೇವಸ್ಥಾನದ ಭಗವಧ್ವಜ ತೆಗೆಸಲು ಎಸ್ಐ ಸೂಚನೆ| ಖಡಕ್ ವಾರ್ನಿಂಗ್ ನೀಡಿದ ಹಿಂಜಾವೇ|

ಮಂಗಳೂರು: ‘ಕಾರಿಂಜ ಕ್ಷೇತ್ರದ ಸಮೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಿರುವ ಹಿಂದೂ ಜಾಗರಣ ವೇದಿಕೆ ಮತ್ತು ಜಿಲ್ಲಾಧಿಕಾರಿ ನಡುವಿನ ಜಟಾಪಟಿ ಮುಂದುವರೆದಿದೆ. ಈ ವಿಚಾರವಾಗಿ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ ವಿರುದ್ಧ ದೂರು ದಾಖಲಿಸುವ ಮೂಲಕ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ, ಹಿಂದೂಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಕಾರಿಂಜ ಕ್ಷೇತ್ರದಲ್ಲಿ ಹಾಕಲಾದ ಭಗವಧ್ವಜವನ್ನು ತೆಗೆಯಬೇಕು ಎಂದು ಪುಂಜಾಲಕಟ್ಟೆ ಠಾಣೆಯ

ದೇವಸ್ಥಾನದ ಭಗವಧ್ವಜ ತೆಗೆಸಲು ಎಸ್ಐ ಸೂಚನೆ| ಖಡಕ್ ವಾರ್ನಿಂಗ್ ನೀಡಿದ ಹಿಂಜಾವೇ| Read More »

ಮೌಡ್ಯಕ್ಕೆ ಬಲಿಯಾಯ್ತು ‘ಶ್ರೀತಾಳೆ’ | ಸತತ ಪ್ರಯತ್ನದ ಬಳಿಕವೂ ಮರಕ್ಕೆ ಬಿತ್ತು ಕೊಡಲಿಯೇಟು|

ಉಡುಪಿ: ಪರಿಸರ ಪ್ರೇಮಿಗಳ ಅವಿರತ ಪ್ರಯತ್ನಗಳ ಹೊರತಾಗಿಯೂ ಬೆಳ್ತಂಗಡಿ ತಾಲೂಕು ವೇಣೂರು ಬಳಿಯ ಕರಿಮಣೇಲು ಗ್ರಾಮದಲ್ಲಿದ್ದ ಶ್ರೀತಾಳೆಮರ ಕೊನೆಗೂ ಮೌಢ್ಯಕ್ಕೆ ಬಲಿಯಾಗಿದೆ ಎಂದು ಮರವನ್ನು ಉಳಿಸಲು ಹೋರಾಡಿದ ಉಡುಪಿಯ ಪ್ರೊ.ಎಸ್.ಎ.ಕೃಷ್ಣಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್‌ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ. ತಮ್ಮ ಸತತ ಪ್ರಯತ್ನದಿಂದ ಉಡುಪಿ ಸಮೀಪದ ಆತ್ರಾಡಿಯಲ್ಲಿದ್ದ ಶ್ರೀತಾಳೆ ಮರವನ್ನು ಮನೆಯವರ ಜೊತೆ ಮಾತನಾಡಿ ಉಳಿಸುವಲ್ಲಿ ನಾವು ಯಶಸ್ವಿಯಾಗಿದ್ದೆವು. ಆ ಮನೆಯ ಯಜಮಾನರು ಇಂದಿಗೂ ಜೀವಂತವಾಗಿದ್ದಾರೆ. ಕರಿಮಣೇಲು ಮನೆಯವರಿಗೂ ಮನವರಿಕೆ ಮಾಡುವ ಎಲ್ಲಾ ಪ್ರಯತ್ನಗಳನ್ನು ನಾವು

ಮೌಡ್ಯಕ್ಕೆ ಬಲಿಯಾಯ್ತು ‘ಶ್ರೀತಾಳೆ’ | ಸತತ ಪ್ರಯತ್ನದ ಬಳಿಕವೂ ಮರಕ್ಕೆ ಬಿತ್ತು ಕೊಡಲಿಯೇಟು| Read More »

ಕೃಷಿಭೂಮಿಯನ್ನು ನೋಡಲು ಬಂದ ಯಜಮಾನನನ್ನು ಭೂಮಿಯೊಳಗೆ ಹೂತಿಟ್ಟ ಕಿರಾತಕರು| ಆಸ್ತಿ ಆಸೆಗೆ ಸಂಬಂಧಿಕರೇ ಕೊಲೆಗೈದು ಬೃಹನ್ನಾಟಕ|

ಪುತ್ತೂರು: ಆತ ತಾನು ಖರೀದಿಸಿಸ ಪ್ರೀತಿಯ ಕೃಷಿ ಭೂಮಿಯನ್ನು ನೋಡಲು ಬಂದಿದ್ದ. ಆದರೆ ವಿಧಿಯಾಟ ಬೇರೆ ಆಗಿತ್ತು. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಆತನನ್ನು ಸಂಬಂಧಿಕರೇ ಫೋಟೋ ಫ್ರೇಮ್ ನೊಳಗೆ ಆಗುವಂತೆ ಮಾಡಿದ್ದಾರೆ. ಜಮೀನು ನೋಡಲು ಬಂದವನನ್ನು ಸಂಬಂಧಿಕರೇ ಕೊಲೆಮಾಡಿ ಕಾಡಿನ ಮಧ್ಯೆ ಹೂತು ಹಾಕಿದ್ದಾರೆ. ಈ ಘಟನೆ ನಡೆದದ್ದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಗುಳಿ ಎಂಬಲ್ಲಿ. ಮೈಸೂರಿನ ಸುಬ್ರಹ್ಮಣ್ಯ ನಗರದ ಜಗದೀಶ್ (58) ಎಂಬವರೇ ಕೊಲೆಯಾದ ದುರ್ದೈವಿ. ತನ್ನ ಕೃಷಿ ಭೂಮಿಯನ್ನು ಮುಗುಳಿ

ಕೃಷಿಭೂಮಿಯನ್ನು ನೋಡಲು ಬಂದ ಯಜಮಾನನನ್ನು ಭೂಮಿಯೊಳಗೆ ಹೂತಿಟ್ಟ ಕಿರಾತಕರು| ಆಸ್ತಿ ಆಸೆಗೆ ಸಂಬಂಧಿಕರೇ ಕೊಲೆಗೈದು ಬೃಹನ್ನಾಟಕ| Read More »