ಕರಾವಳಿ

ಮಂಗಳೂರು: ಬಸ್ ಚಾಲಕನಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಸಮಗ್ರ ನ್ಯೂಸ್ ಡೆಸ್ಕ್: ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಬಸ್ ಚಾಲಕನೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ ದಯಾನಂದ(32) ಎಲ ಬಂಧಿತ ಆರೋಪಿ. ನಗರದಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ದಯಾನಂದ 13 ವರ್ಷದ ಬಾಲಕಿಯನ್ನು ಪುಸಲಾಯಿಸಿ ನಿರ್ಜನ‌ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಬಾಲಕಿಯ ಪೋಷಕರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ಪೋಕ್ಸೊ ಪ್ರಕರಣದಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಂಗಳೂರು: ಬಸ್ ಚಾಲಕನಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ Read More »

ಉಪ್ಪಿನಂಗಡಿ: ಪಿಡಿಓ ಕರ್ತವ್ಯಕ್ಕೆ ಅಡ್ಡಿ ಆರೋಪ| 6 ಮಂದಿ ವಿರುದ್ಧ ಕೇಸ್ ದಾಖಲು

ಸಮಗ್ರ ನ್ಯೂಸ್ ಡೆಸ್ಕ್: ಪಿಡಿಒಗೆ ಕರ್ತವ್ಯಕ್ಕೆ ಅಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಉಪ್ಪಿನಂಗಡಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಜಾಗದಲ್ಲಿ ಅನಧಿಕೃತ ಅಂಗಡಿಗಳನ್ನು ತೆರವು ಮಾಡುವ ಸಲುವಾಗಿ ಸ್ಥಳಕ್ಕೆ ತೆರಳಿದಾಗ ಸ್ಥಳೀಯ 6 ಮಂದಿ ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಉಪ್ಪಿನಂಗಡಿ ಪಿಡಿಒ ಪೊಲೀಸರಿಗೆ ದೂರು ನೀಡಿದ್ದಾರೆ. ಪಿಡಿಒ ನೀಡಿರುವ ದೂರಿನ ಆಧಾರದಲ್ಲಿ ಯೋಗೀಶ್ ಪ್ರಭು, ಅವರ ಪತ್ನಿ, ರಾಜೇಶ್ ಪ್ರಭು, ಗೋಕುಲದಾಸ್ ಭಟ್, ಉತ್ತಮ ಭಟ್, ಉದಯ ಭಟ್

ಉಪ್ಪಿನಂಗಡಿ: ಪಿಡಿಓ ಕರ್ತವ್ಯಕ್ಕೆ ಅಡ್ಡಿ ಆರೋಪ| 6 ಮಂದಿ ವಿರುದ್ಧ ಕೇಸ್ ದಾಖಲು Read More »

ಮಂಗಳೂರು: 19ರ ವಯಸ್ಸಿನಲ್ಲೆ ಸಾವನಪ್ಪಿದ ಯುವಕ| ನೇತ್ರದಾನದ ಮೂಲಕ ಇತರರ ಬಾಳಿಗೆ ಬೆಳಕು

ಮಂಗಳೂರು: ಅದೆಷ್ಟೋ ವರ್ಷಗಳ ಕಾಲ ಬಾಳಿ ಬದುಕಿ ಮನೆ ಮಂದಿಯನ್ನು ನೋಡಬೇಕಿದ್ದ ಯುವಕ ಸಣ್ಣ ವಯಸ್ಸಿನಲ್ಲೇ ಇಹಲೋಕದ ಪಯಣ ಮುಗಿಸಿದ್ದಾನೆ. ಆದರೆ ತೆರಳುವ ಮುನ್ನ ಇತರರ ಬಾಳಿಗೆ ಬೆಳಕಾಗಿದ್ದಾನೆ. ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಆದರ್ಶ ನಗರ ನಿವಾಸಿ ಶಶಾಂಕ್ ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದ. 10ನೇ ತರಗತಿ ಕಲಿತ ಬಳಿಕ ಶಿಕ್ಷಣ ಮೊಟಕುಗೊಳಿಸಿ ಮನೆಯ ಆರ್ಥಿಕ ಸಮಸ್ಯೆಗಾಗಿ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡ್ತಾ ಇದ್ದ. ಶಶಾಂಕ್‌ಗೆ ಎರಡು ಜನ ಅಕ್ಕಂದಿರು. ದುಡಿದು ಮನೆ

ಮಂಗಳೂರು: 19ರ ವಯಸ್ಸಿನಲ್ಲೆ ಸಾವನಪ್ಪಿದ ಯುವಕ| ನೇತ್ರದಾನದ ಮೂಲಕ ಇತರರ ಬಾಳಿಗೆ ಬೆಳಕು Read More »

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿ ನಿರ್ಲಕ್ಷಿಸಿ ವಿಡಿಯೋಗೇಮ್ ಆಡುತ್ತಿದ್ದ ವೈದ್ಯ ವಿದ್ಯಾರ್ಥಿ ಅಮಾನತು

ಸಮಗ್ರ ನ್ಯೂಸ್ ಡೆಸ್ಕ್: ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಯನ್ನು ನಿರ್ಲಕ್ಷಿಸಿ ವಿಡಿಯೋ ಗೇಮ್ ಆಡಿದ ಕ್ಲಿನಿಕಲ್‌ಗೆ ನಿಯೋಜನೆಗೊಂಡಿದ್ದ ಖಾಸಗಿ ಕಾಲೇಜಿನ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯನ್ನು ಶನಿವಾರ ಅಮಾನತುಗೊಳಿಸಲಾಗಿದೆ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಸರ್ಜನ್ ಡಾ.ಸದಾಶಿವ, ವೈದ್ಯ ವಿದ್ಯಾರ್ಥಿಯು ಜನವರಿ 24ರಂದು ವೆನ್ಲಾಕ್ ಆಸ್ಪತ್ರೆಯ ಕ್ಯಾಶುವಾಲಿಟಿ ಬ್ಲಾಕ್‌ನಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವಿಡಿಯೋ ಗೇಮ್ ಆಡುತ್ತಿರುವುದು ಕ್ಯಾಮರಾದಲ್ಲಿ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿ ನಿರ್ಲಕ್ಷಿಸಿ ವಿಡಿಯೋಗೇಮ್ ಆಡುತ್ತಿದ್ದ ವೈದ್ಯ ವಿದ್ಯಾರ್ಥಿ ಅಮಾನತು Read More »

ಉಡುಪಿ: ಯಕ್ಷಗಾನ ವೇಷಧಾರಿ ಮೈ ಮೇಲೆ ದೈವ ಆವೇಷ

ಉಡುಪಿ: ಯಕ್ಷಗಾನದ ವೇಳೆ ವೇಷಧಾರಿಗೆ, ಮೈ ಮೇಲೆ ದೈವ ಆವೇಷವಾಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ. ಹೆಬ್ರಿ ಸಮೀಪದ ಬೆಪ್ದೆ ಎಂಬಲ್ಲಿ ಮಡಮಕ್ಕಿ ಮೇಳದವರಿಂದ ಮಡಮಕ್ಕಿ ಕ್ಷೇತ್ರ ಮಹಾತ್ಮೆ ನಡೆಯುತ್ತಿತ್ತು. ಈ ವೇಳೆ ಮೇಳದ ಕಲಾವಿದ ವೀರಭದ್ರ ಸ್ವಾಮಿ ಎಂಬುವವರು ಕೋಟೆರಾಯನ ವೇಷ ಧರಿಸಿ, ರಂಗಸ್ಥಳ ಪ್ರವೇಶ ಆಗುತ್ತಿದ್ದಂತೆ, ದೈವಆಗಿದೆ. ಹತ್ತು ನಿಮಿಷ ವರೆಗೆ ಪ್ರೇಕ್ಷಕರು ಪಾತ್ರದಾರಿಯನ್ನು ಹಿಡಿದುಕೊಂಡರೂ ಆವೇಶ ನಿಲ್ಲಲಿಲ್ಲ.‌ ಕೊನೆಗೆ ಚೌಕಿಯಿಂದ ದೇವರ ತೀರ್ಥ ಹಾಕಿದ ಬಳಿಕ ಕಲಾವಿದ

ಉಡುಪಿ: ಯಕ್ಷಗಾನ ವೇಷಧಾರಿ ಮೈ ಮೇಲೆ ದೈವ ಆವೇಷ Read More »

ಸುಬ್ರಹ್ಮಣ್ಯ: ದೇವಸ್ಥಾನದ ಹುಂಡಿ ಎಣಿಕೆಯ ವೇಳೆ ಮಹಿಳೆಯಿಂದ ಹಣ ಕಳ್ಳತನ

ಸುಬ್ರಹ್ಮಣ್ಯ: ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿ ಎಣಿಕೆಯ ವೇಳೆ ಸಿಬ್ಬಂದಿ ಮಹಿಳೆಯೋರ್ವರು ಹಣ ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆ ಗುರುವಾರದಂದು ನಡೆದಿದೆ. ದೇವಸ್ಥಾನದ ಹುಂಡಿ ಎಣಿಕೆ ಮಾಡುತ್ತಿದ್ದ ವೇಳೆ ಬಾಲಕಿ ಎಂಬ ಮಹಿಳೆಯೋರ್ವರು ಹಣವನ್ನು ಕದ್ದು ಬಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಕುರಿತು ಕುಕ್ಕೇ ಶ್ರೀ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು, ಮಂಗಳೂರಿನ ರಿಮಾಂಡ್ ಹೋಂನಲ್ಲಿ ಇರಿಸಿದ್ದು, ಇಂದು

ಸುಬ್ರಹ್ಮಣ್ಯ: ದೇವಸ್ಥಾನದ ಹುಂಡಿ ಎಣಿಕೆಯ ವೇಳೆ ಮಹಿಳೆಯಿಂದ ಹಣ ಕಳ್ಳತನ Read More »

ಮಂಗಳೂರು: ವೆನ್ಲಾಕ್ ICU ನ ವೈದ್ಯರು ಗೇಮ್ ನಲ್ಲಿ ಬ್ಯುಸಿ – ರೋಗಿಗಳು ಸಾವಿನ ಬಾಗಿಲ ಬಳಿ ರೆಡಿ !!

ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಗೇಮ್ಸ್ ಆಡುತ್ತಿದ್ದು, ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುವ ಕುರಿತು ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕ ಎಂಬಂತ ವಿಡಿಯೋ ಕೂಡ ವೈರಲ್ ಆಗಿದೆ. ವೆನ್ಲಾಕ್ ನ ತೀವ್ರ ನಿಘಾ ಘಟಕ(ICU)ನಲ್ಲಿ ವೈದ್ಯರು ಕಂಪ್ಯೂಟರ್ ನಲ್ಲಿ ಗೇಮ್ ಗಳು ಆಡುತ್ತಿರುವುದು ಕಂಡು ಬಂದಿದೆ. ವೆನ್ಲಾಕ್ ಆಸ್ಪತ್ರೆಗೆ ವಗ್ಗ ಮೂಲದ ವಿಜಯ್ (40) ಗಂಭೀರ ಸ್ಥಿತಿಯಲ್ಲಿ ತೆರಳಿದ್ದರು. ಈ ವೇಳೆ ವೈದ್ಯರು ಚಿಕಿತ್ಸೆ ನೀಡುವ ಬದಲು ಕಂಪ್ಯೂಟರ್ ನಲ್ಲಿ ಗೇಮ್ ಆಡುತ್ತಿದ್ದರು. ರೋಗಿ ಬಂದಿರುವ

ಮಂಗಳೂರು: ವೆನ್ಲಾಕ್ ICU ನ ವೈದ್ಯರು ಗೇಮ್ ನಲ್ಲಿ ಬ್ಯುಸಿ – ರೋಗಿಗಳು ಸಾವಿನ ಬಾಗಿಲ ಬಳಿ ರೆಡಿ !! Read More »

ಪುತ್ತೂರು: ಜೀಪ್-ರಿಕ್ಷಾ ಅಪಘಾತ – ಮೂವರು ಕೂಲಿ ಕಾರ್ಮಿಕರು ಗಂಭೀರ

ಪುತ್ತೂರು: ಜೀಪ್ ಮತ್ತು ರಿಕ್ಷಾ ಅಪಘಾತದಲ್ಲಿ ಮೂವರ ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಕೆಯ್ಯೂರು ಗ್ರಾಮದ ಪೊಯ್ಯೋಳೆ ಎಂಬಲ್ಲಿ ನಡೆದಿದೆ. ಕೆಯ್ಯೂರಿನಿಂದ ದೇರ್ಲ ಕಡೆಗೆ ಹೋಗುತ್ತಿದ್ದ ಜೀಪು, ದೇರ್ಲ ಕಡೆಯಿಂದ ಕೆಯ್ಯೂರು ಕಡೆಗೆ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ರಿಕ್ಷಾ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಕೂಲಿ ಕಾರ್ಮಿಕರಾದ ಪ್ರವೀಣ್, ಗುರು, ಅನೀಶ್ ಎಂಬವರು ತ್ರೀವವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದ್ಯೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ರಿಕ್ಷಾ ಚಾಲಕ ಗಿರಿಧರ ಎಟ್ಯಡ್ಕ,

ಪುತ್ತೂರು: ಜೀಪ್-ರಿಕ್ಷಾ ಅಪಘಾತ – ಮೂವರು ಕೂಲಿ ಕಾರ್ಮಿಕರು ಗಂಭೀರ Read More »

ವಿಟ್ಲ: ಮೇಯಲು ಬಿಟ್ಟಿದ್ದ ದನದ ಕಾಲನ್ನು ಕತ್ತರಿಸಿದ ದುಷ್ಕರ್ಮಿಗಳು

ವಿಟ್ಲ: ಮೇಯಲು ಬಿಟ್ಟಿದ್ದ ಹಸುವಿನ ಕಾಲನ್ನು ಕತ್ತರಿಸಿ ವಿಕೃತಿ ಮೆರೆದ ಘಟನೆ ವಿಟ್ಲ ತಾಲೂಕಿನ ಅಡ್ಯನಡ್ಕ ಎಂಬಲ್ಲಿ ನಡೆದಿದೆ. ಅಡ್ಯನಡ್ಕ ಕೆದುಮೂಲೆ ನಿವಾಸಿ ಕೃಷಿಕರೊಬ್ಬರಿಗೆ ಸೇರಿದ ದನವನ್ನು ನೆಗಳಗುಳಿ ಎಂಬ ಪ್ರದೇಶದಲ್ಲಿ ಎಂದಿನಂತೆ ಮೇಯಲು ಬಿಟ್ಟಿದ್ದರು. ಆದ್ರೆ ಈ ವೇಳೆ ದುಷ್ಕರ್ಮಿಗಳು ದನದ ಕಾಲನ್ನು ಕ್ರೂರವಾಗಿ ಕತ್ತರಿಸುವ ಮೂಲಕ ರಾಕ್ಷಸಿ ಕೃತ್ಯ ಮೆರೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸದ್ಯ ದನಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮೂಕ ಪ್ರಾಣಿಯನ್ನು ಹಿಂಸಿಸುವ ರಾಕ್ಷಸರಿಗೆ

ವಿಟ್ಲ: ಮೇಯಲು ಬಿಟ್ಟಿದ್ದ ದನದ ಕಾಲನ್ನು ಕತ್ತರಿಸಿದ ದುಷ್ಕರ್ಮಿಗಳು Read More »

ಮಂಗಳೂರು: ಸಮುದ್ರಕ್ಕೆ ಹಾರಿದ ಪ್ರೇಯಸಿಯ ರಕ್ಷಿಸಹೋದ ಪ್ರಿಯಕರ ಸಾವು

ಸಮಗ್ರ ವರದಿ: ಸೋಮೇಶ್ವರ ಬೀಚ್ ನ ರುದ್ರಪಾದೆ ಎಂಬಲ್ಲಿ ಜೋಡಿಯೊಂದು ಮಾತನಾಡುತ್ತಿದ್ದಂತೆ ಪ್ರೇಯಸಿ ಸಮುದ್ರಕ್ಕೆ ಹಾರಿದ್ದು ಆಕೆಯನ್ನು ರಕ್ಷಿಸಲು ಹೋಗಿ ಪ್ರಿಯಕರ ಸಾವನ್ನಪ್ಪಿದ ಘಟನೆ ನಡೆದಿದೆ. ಉಳ್ಳಾಲ ರಾಣಿಪುರ ಉಳಿಯಾ ನಿವಾಸಿ ಲಾಯ್ಡ್ ಡಿಸೋಜಾ(28) ತನ್ನ ಪ್ರೇಯಸಿಯೊಂದಿಗೆ ಮಾತನಾಡುತ್ತಿದ್ದಂತೆ ಸಮುದ್ರಕ್ಕೆ ಹಾರಿದ್ದ ಪ್ರೇಯಸಿ ಕೋಟೆಕಾರು ಪಾನೀರು ನಿವಾಸಿ ಅಶ್ವಿತಾ ಫೆರಾವೋ (22) ರಕ್ಷಿಸಲು ಸಮುದ್ರಕ್ಕೆ ಹಾರಿದ್ದ ಸಂದರ್ಭದಲ್ಲಿ ತಲೆಗೆ ಬಂಡೆ ಕಲ್ಲು ತಗುಲಿ ಸಾವನ್ನಾಪ್ಪಿದ್ದಾನೆಂದು ತಿಳಿದು‌ ಬಂದಿದೆ. ಯುವತಿಯನ್ನು ರಕ್ಷಣೆ ಮಾಡಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಂತಾಜನಕ ಸ್ಥಿತಿ‌ಯಲ್ಲಿದ್ದಳೆಂದು

ಮಂಗಳೂರು: ಸಮುದ್ರಕ್ಕೆ ಹಾರಿದ ಪ್ರೇಯಸಿಯ ರಕ್ಷಿಸಹೋದ ಪ್ರಿಯಕರ ಸಾವು Read More »