ಕರಾವಳಿ

ಶಾಕಿಂಗ್ ಸಮಾಚಾರ | ತಂದೆಯೊಂದಿಗೆ ಚಿತೆಗೇರಿದ ಪುತ್ರ: ಬಂಟ್ವಾಳದಲ್ಲೊಂದು ಹೃದಯ ವಿದ್ರಾವಕ ಘಟನೆ

ಪುತ್ತೂರು : ಜೂ 2 : ಕೊವೀಡ್ ನಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ ನಡೆಸುತ್ತಿರುವಾಗ ಅರೋಗ್ಯ ವ್ಯತ್ಯಾಸವಾಗಿ ಮಗನೂ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ಜೂ 2 ರಂದು ನಡೆದಿದೆ. ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ಪ್ರೊಪೆಸರ್ ಭುಜಂಗ ಶೆಟ್ಟಿ ಹಾಗೂ ಅವರ ಪುತ್ರ ಶೈಲೇಶ್ ಒಂದೇ ದಿನ ಅನಾರೋಗ್ಯ ತುತ್ತಾಗಿ ಮೃತ ಪಟ್ಟವರು. ಭುಜಂಗ ಶೆಟ್ಟಿಯವರಿಗೆ ಇತ್ತೀಚಿಗೆ ಕೊರೊನಾ ಸೋಂಕು ತಗುಲಿತ್ತು, ಆದರೇ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ […]

ಶಾಕಿಂಗ್ ಸಮಾಚಾರ | ತಂದೆಯೊಂದಿಗೆ ಚಿತೆಗೇರಿದ ಪುತ್ರ: ಬಂಟ್ವಾಳದಲ್ಲೊಂದು ಹೃದಯ ವಿದ್ರಾವಕ ಘಟನೆ Read More »

ಪುತ್ತೂರು:ಅನ್ಯಕೋಮಿನ ಯುವಕನಿಂದ ಅತ್ಯಾಚಾರಕ್ಕೆ ಯತ್ನ

ಪುತ್ತೂರು: ಭಿನ್ನ ಕೋಮಿನ ಯುವಕನೋರ್ವ ಮೆಡಿಕಲ್‌ನ ಒಳಗೆ ನುಗ್ಗಿ ಮಹಿಳಾ ಸಿಬ್ಬಂದಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಜೂ.1ರಂದು ಈಶ್ವರಮಂಗಲದಲ್ಲಿ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯಲ್ಲಿರುವ ಮೆಡಿಕಲ್‌ಗೆ ಔಷಧಿ ಖರೀದಿಸಲು ಬಂದಿರುವ ಯುವಕ ಮೆಡಿಕಲ್‌ನಲ್ಲಿ ಯುವತಿಯೋರ್ವಳೆ ಇರುವುದನ್ನು ಗಮನಿಸಿ ಮೆಡಿಕಲ್ ಒಳನುಗ್ಗಿದ್ದು ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಯುವತಿ ಕೂಗಿಕೊಂಡಾಗ ಅಲ್ಲಿನ ಸ್ಥಳೀಯರು ಜಮಾಯಿಸಿ, ಆರೋಪಿ ಯುವಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಪುತ್ತೂರು:ಅನ್ಯಕೋಮಿನ ಯುವಕನಿಂದ ಅತ್ಯಾಚಾರಕ್ಕೆ ಯತ್ನ Read More »

ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು “ಗಾನಸುಧೆ” ಕಾರ್ಯಕ್ರಮ

ಮಂಗಳೂರು: ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು ಕೋವಿಡ್ ವಾರಿಯರ್ಸ್ ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಗಾನಸುಧೆ’ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಮಧ್ಯಾಹ್ನ ಫೇಸ್ ಬುಕ್ ಲೈವ್ ನಲ್ಲಿ ಮಂಗಳೂರು ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿಕೊಡುವ ಸಂಗೀತ ಕಾರ್ಯಕ್ರಮ ಪ್ರಸಾರವಾಗಲಿದೆ. ಕೇಳಲಿಚ್ಚಿಸುವವರು Arvind Vivek’s ಫೇಸ್ಬುಕ್ ಪೇಜ್ ಅನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. “ಗಾನಸುಧೆ”ಯನ್ನು ರಾಜ್ಯದ ಎಲ್ಲಾ ಕೋವಿಡ್ ವಾರಿಯರ್ಸ್ ಗಳಿಗೆ ಸಮರ್ಪಿಸಲಾಗುತ್ತಿದೆ ಎಂದು ಮಂಗಳೂರು ನಗರ

ಮಂಗಳೂರು ನಗರ ಪೊಲೀಸ್ ವತಿಯಿಂದ ಇಂದು “ಗಾನಸುಧೆ” ಕಾರ್ಯಕ್ರಮ Read More »

ನೆರಿಯ ಅನಾಥಾಶ್ರಮದಲ್ಲಿ ಕೊರೊನ ರಣಕೇಕೆ: 210 ಮಂದಿಯಲ್ಲಿ ಕಾಣಿಸಿಕೊಂಡ ಮಹಾಮಾರಿ

ಮಂಗಳೂರು.ಮೇ 31: ಇಲ್ಲಿನ ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಮಹಾಸ್ಪೋಟವಾಗಿದೆ. ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿರುವ ಸಿಯೋನ್ ಅನಾಥಾಶ್ರಮದಲ್ಲಿ ಕೊರೊನಾ ಸ್ಫೋಟವಾಗಿದೆ. ಆಶ್ರಮದ 270 ಜನರಲ್ಲಿ 210 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸಾಮೂಹಿಕ ಟೆಸ್ಟ್ ಮಾಡುವಾಗ ಕೊರೊನಾ ಸೋಂಕು ಪತ್ತೆಯಾಗಿದೆ.ಒಟ್ಟು 270 ಜನರಿರುವ ಆಶ್ರಮ ಇದಾಗಿದ್ದು,ಕಳೆದ ಕೆಲ ದಿನಗಳ ಹಿಂದೆ ಕೆಲವು ಮಂದಿಯಲ್ಲಿ ಕಂಡು ಬಂದಿದ್ದ ಸೋಂಕು ಕಂಡುಬಂದಿತ್ತು. ಶನಿವಾರ ನಡೆಸಿದ ಟೆಸ್ಟ್ ನಲ್ಲಿ ಬಹುತೇಕ ಎಲ್ಲರಲ್ಲೂ ಸೋಂಕು ಪತ್ತೆಯಾಗಿದೆ. ಸಿಯೋನ್ ಆಶ್ರಮದಲ್ಲಿ ಬಹುತೇಕ

ನೆರಿಯ ಅನಾಥಾಶ್ರಮದಲ್ಲಿ ಕೊರೊನ ರಣಕೇಕೆ: 210 ಮಂದಿಯಲ್ಲಿ ಕಾಣಿಸಿಕೊಂಡ ಮಹಾಮಾರಿ Read More »

ತುಳು‌ವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಡಿವಿಎಸ್

ಮಂಗಳೂರು: ತುಳು ಭಾಷೆಯು ಸಂಸ್ಕೃತಿ, ಆಚಾರ- ವಿಚಾರ, ಜೀವನ ಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ಭಾಷೆಯೊಂದರ ಅವನತಿ, ದೇಶದ ಸಂಸ್ಕೃತಿಯ ಅವನತಿಯಿದ್ದಂತೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಾನು ಮುಂದೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಆನ್ಲೈನ್ ವೇದಿಕೆ

ತುಳು‌ವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಡಿವಿಎಸ್ Read More »

ಕೋವಿಡ್ ರೂಲ್ಸ್ ಗಿಂತ ಮೋದಿ ಸರ್ಕಾರದ ಏಳನೇ ವರ್ಷಚಾರಣೆಯೇ ಮೇಲಾಯ್ತು ಈ ಸಂಸದರಿಗೆ…! | ತಮ್ಮದೇ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು

ಮಂಗಳೂರು: ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಗಳು, ಸ್ಥಳೀಯ ಆಡಳಿತಗಳು ಅಗತ್ಯ ಸಭೆ ನಡೆಸಲು ಅಗತ್ಯ ಸಚಿವರುಗಳು ಮತ್ತು ಅಧಿಕಾರಿಗಳನ್ನು ಸೇರಿಸಿಕೊಳ್ಳುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದರೆ ಇಲ್ಲೊಬ್ಬ ಸಂಸದರು ತಮ್ಮ ಪಕ್ಷದ ಕಾರ್ಯಕ್ರಮಕ್ಕೆ ತಮ್ಮದೇ ಸರ್ಕಾರದ ನಿಯಮ ಮೀರಿ ಜನ ಸೇರಿಸಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಮಾರಂಭ ನಡೆಸಿರುವ ಘಟನೆ ನಡೆದಿದೆ. ಹೇಳಿ ಕೇಳಿ ಇವ್ರು ಬಿಜೆಪಿ ರಾಜ್ಯಾಧ್ಯಕ್ಷರು, ಜೊತೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್. ಇವ್ರು ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲಿ

ಕೋವಿಡ್ ರೂಲ್ಸ್ ಗಿಂತ ಮೋದಿ ಸರ್ಕಾರದ ಏಳನೇ ವರ್ಷಚಾರಣೆಯೇ ಮೇಲಾಯ್ತು ಈ ಸಂಸದರಿಗೆ…! | ತಮ್ಮದೇ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು Read More »

ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ| ಸಿದ್ದರಾಮಯ್ಯಗೆ ನಳಿನ್ ತಿರುಗೇಟು

ಮಂಗಳೂರು: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಳಿಕ ಸಮರ್ಥ ನಾಯಕನಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, “ಯಡಿಯೂರಪ್ಪ ಸರ್ವ ಸಮ್ಮತಿಯ ನಾಯಕ, ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ” ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮುಂದೆ ಎಲ್ಲಿದ್ರು…?, ಯಾರು ಅವರ ಗುರು ಆಗಿದ್ರು….?, ಕಾಂಗ್ರೆಸ್ ಗೆ ಬೈದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಮುಖ್ಯಮಂತ್ರಿ ಆಗಿದ್ದನ್ನು ಜಗತ್ತು ನೋಡಿದೆ. ಬಿಜೆಪಿಯಲ್ಲಲ್ಲ ಕಾಂಗ್ರೆಸ್ ನಲ್ಲಿ ನಿಜವಾಗಿ ನಾಯಕತ್ವದ ಕೊರತೆ ಇದೆ. ಅವತ್ತು ಸಮ್ಮಿಶ್ರ

ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಮುಖ್ಯಮಂತ್ರಿಯಾಗಿಲ್ಲ| ಸಿದ್ದರಾಮಯ್ಯಗೆ ನಳಿನ್ ತಿರುಗೇಟು Read More »

ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ

ಬೆಳ್ತಂಗಡಿ: ಪಂಪ್ ಸ್ವಿಚ್ ಆನ್ ಮಾಡಲು ತೆರಳಿದ ತಾಯಿ-ಮಗು ಇಬ್ಬರು ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ಪಟ್ರಮೆ ಯಿಂದ ವರದಿಯಾಗಿದೆ. ಪಟ್ರಮೆ ಗ್ರಾಮದ ಕೋಡಂದೂರು ನಿವಾಸಿ ಹರೀಶ್ ಗೌಡ ಎಂಬವರ ಪತ್ನಿ 30 ವರ್ಷದ ಗೀತಾ ಮತ್ತು 4.5 ವರ್ಷದ ಮಗು ಭವಿಷ್ ಮೃತಪಟ್ಟ ದುರ್ದೈವಿಗಳು. ತಾಯಿ ಗೀತಾ ಮಗುವನ್ನು ಎತ್ತಿಕೊಂಡು, ಹೊಸದಾಗಿ ಕರಿಸಿ ಖರೀದಿಸಿದ ಜಾಗದಲ್ಲಿ ಬೋರ್ವೆಲ್ ಗೆ ಅಳವಡಿಸಿದ ಪಂಪ್ ಸ್ವಿಚ್ ಆನ್ ಮಾಡುವಾಗ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ Read More »

ಮಂಗಳೂರು : ರಾತ್ರೋ ರಾತ್ರಿ ಮುಸ್ಲಿಂ ಯುವತಿ ನಾಪತ್ತೆ

ಮಂಗಳೂರು: ಬಜ್ಪೆ ಸಮೀಪದ ಕೆಂಜಾರಿನಲ್ಲಿ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ನಡೆದಿದೆ. ಹುಸೈನ್ ಶರೀಫ್ ಎಂಬವರ ಪುತ್ರಿ ಫಾತಿಮಾ ಸಾಹಿರಾ (21) ನಾಪತ್ತೆಯಾದ ಯುವತಿ. ಇವರು ಮೇ 26ರಂದು ತಡರಾತ್ರಿ ನಾಪತ್ತೆಯಾಗಿದ್ದಾರೆ. ಹುಸೈನ್ ಶರೀಫ್ ಪತ್ನಿ ಹಾಗೂ ಇಬ್ಬರು ಪುತ್ರಿಯರು ಫಾತಿಮಾ ಸಾಹಿರಾ ಮತ್ತು ಮಿಶ್ರಿಯಾ ಎಂಬವರು ಮೇ. 26ರಂದು ಎಂದಿನಂತೆ ಊಟ ಮಾಡಿ ಮಲಗಿದ್ದರು. ಆದರೆ ಸಾಹಿರಾ ರಾತ್ರೋ ರಾತ್ರಿ ಮನೆಯಲ್ಲಿದ್ದವರು ಮಲಗಿದ್ದಾಗ ನಾಪತ್ತೆಯಾಗಿದ್ದಾರೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪುತ್ರಿಯನ್ನು ಪತ್ತೆ ಹಚ್ಚಿಕೊಡಬೇಕೆಂದು ಹುಸೈನ್

ಮಂಗಳೂರು : ರಾತ್ರೋ ರಾತ್ರಿ ಮುಸ್ಲಿಂ ಯುವತಿ ನಾಪತ್ತೆ Read More »

ಕೊರೋನಾಗೆ ಜೀವತೆತ್ತರೆ 4 ಲಕ್ಷ :ವೈರಲ್ ಆಗುತ್ತಿದೆ ಫೇಕ್ ಪಿಡಿಎಫ್

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ, ಕೊರೋನಾದಿಂದ ಮೃತಪಟ್ಟರೆ 400000 ಪರಿಹಾರ ಧನ ಸಿಗಲಿದೆ ಮಾಹಿತಿಯುಳ್ಳ ಪಿಡಿಎಫ್ ಫೈಲ್ ನ ಅಂಶಗಳು ಸಂಪೂರ್ಣ ಶುದ್ಧ ಸುಳ್ಳು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಕಳೆದೆರಡುದಿನಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಪಿಡಿಎಫ್ ಫೈಲ್ ನಲ್ಲಿ ಕೊರೊನಾದಿಂದ ಮೃತಪಟ್ಟವರಿಗೆ ಕೇಂದ್ರ ಸರ್ಕಾರ ನಾಲ್ಕು ಲಕ್ಷ ಪರಿಹಾರ ಧನ ನೀಡಲಿದೆ ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಭ್ಯವಿದೆ ಎಂಬ ಇನ್ನಿತರ ಮಾಹಿತಿ ಇದ್ದು, ಇದನ್ನು ಎಲ್ಲರಿಗೂ ತಲುಪಿಸಿ

ಕೊರೋನಾಗೆ ಜೀವತೆತ್ತರೆ 4 ಲಕ್ಷ :ವೈರಲ್ ಆಗುತ್ತಿದೆ ಫೇಕ್ ಪಿಡಿಎಫ್ Read More »