ಕರಾವಳಿ

ದ. ಕ ಜಿಲ್ಲೆಯ 9, ಉಡುಪಿಯ ಇಬ್ಬರು ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

ಸಮಗ್ರ ನ್ಯೂಸ್ : ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಎಂಟು ಮಂದಿ ಪೊಲೀಸರು ಮತ್ತು ಉಡುಪಿ ಜಿಲ್ಲೆಯ ಇಬ್ಬರು ಪೊಲೀಸರಿಗೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಟರಾಜ್ (ಎಸಿಪಿ, ಸಂಚಾರ), ಪ್ರದೀಪ್ ಟಿ.ಆರ್ (ಪಿಎಸ್‌ಐ, ಸಿಸಿಬಿ), ಶೋಭಾ (ಪಿಎಸ್‌ಐ, ಬರ್ಕೆ ಠಾಣೆ), ವನಜಾಕ್ಷಿ (ಸಿಸಿಆರ್‌‌ಬಿ, ಪಿಎಸ್‌‌ಐ), ಕುಶಾಲ್ ಮಣಿಯಾಣಿ (ಎಎಸ್‌ಐ ಬಜಪೆ ಠಾಣೆ), ಇಸಾಕ್ ಕೆ (ಸಿಎಚ್‌ಸಿ ಪಣಂಬೂರು ಠಾಣೆ) ಹಾಗೂ ಎಸಿಬಿ ಹೆಡ್ ಕಾನ್ ಸ್ಟೆಬಲ್ ಹರಿಪ್ರಸಾದ್, ಗೃಹ ರಕ್ಷಕ ದಳದ ದ.ಕ

ದ. ಕ ಜಿಲ್ಲೆಯ 9, ಉಡುಪಿಯ ಇಬ್ಬರು ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ Read More »

ಪಯಸ್ವಿನಿ ಹೊಳೆಯಲ್ಲಿ ಅತೀ ದೊಡ್ಡ ಆಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಅತೀ ದೊಡ್ಡ ಆಮೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಕಾಸರಗೋಡಿನ ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಗಿದೆ. ಬಾವಿಕ್ಕರೆ ಸಮೀಪದ ಅಣೆಕಟ್ಟಿನ ಬದಿಯಲ್ಲಿ ಆಮೆ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆಮೆಯು ಒಂದು ಮೀಟರ್ ಉದ್ದ 62 ಸೆ. ಮೀ. ಅಗಲ ಹೊಂದಿದೆ. ಈ ಹೆಣ್ಣು ಆಮೆ 40 ಕಿಲೋ ಭಾರ ಹೊಂದಿದೆ. ಹತ್ತು ವರ್ಷ ಪ್ರಾಯವನ್ನು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಸಿಹಿ ನೀರಿನಲ್ಲಿ ಈ ಆಮೆ ಕಂಡು ಬರುತ್ತಿದ್ದು, 2010ರಲ್ಲಿ ಕೋಜಿಕ್ಕೋಡ್ ಕುಟ್ಯಾಡಿ ಹೊಳೆಯಲ್ಲಿ ಇಂತಹ

ಪಯಸ್ವಿನಿ ಹೊಳೆಯಲ್ಲಿ ಅತೀ ದೊಡ್ಡ ಆಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ Read More »

ಉಡುಪಿ: ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ, ಆಮೇಲೆ ಸೌಹಾರ್ದದ ಮಾತಾಡೋಣ- ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ತಾಕೀತು

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಪ್ರಾರಂಭಗೊಂಡು ಮುಸ್ಲಿಮರೊಂದಿಗಿನ ವ್ಯಾಪಾರಗಳನ್ನು ನಿರ್ಬಂಧಿಸುವವರೆಗೆ ಸಮಾಜದಲ್ಲಿ ಉಂಟಾಗಿರುವ ಕಂದಕಕ್ಕೆ ಪರಿಹಾರ ಕಂಡುಕೊಳ್ಳಲು ಸಹಕರಿಸಬೇಕೆಂದು ಮುಸ್ಲಿಂ ನಿಯೋಗ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮನವಿ ಮಾಡಿತು. ನಿಯೋಗವನ್ನು ಭೇಟಿ ಮಾಡಿದ ಶ್ರೀಗಳು, ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗ ಉಂಟಾಗಿರುವ ಸಮಸ್ಯೆಗಳ ಹಿಂದೆ ಅನೇಕ ವರ್ಷಗಳ ನೋವು ಇದೆ. ಅದಕ್ಕೆ ಕಾರಣ ಯಾರು? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಸಮಾಜದಲ್ಲಿ ಕಾನೂನು

ಉಡುಪಿ: ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ, ಆಮೇಲೆ ಸೌಹಾರ್ದದ ಮಾತಾಡೋಣ- ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ತಾಕೀತು Read More »

ಮಂಗಳೂರು: ನಿಲ್ಲಿಸಿದ್ದ ಕಾರು ನಿಂತಲ್ಲೇ ದಗದಗ|

ಮಂಗಳೂರು: ನಿಲ್ಲಿಸಿದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾದ ಘಟನೆ ಶಕ್ತಿನಗರದ ಬಳಿ ಮಾ.28ರ ಮಂಗಳವಾರ ರಾತ್ರಿ ನಡೆದಿದೆ. ಮಹಿಳೆಯೊಬ್ಬರು ಶಕ್ತಿನಗರದಲ್ಲಿ ತನ್ನ ಸ್ವಿಫ್ಟ್ ಕಾರು ನಿಲ್ಲಿಸಿ ತನ್ನ ಮೊಬೈಲನ್ನು ಕಾರಿನೊಳಗಿಟ್ಟು ವಿಹಾರಕ್ಕೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಸ್ಥಳದಲ್ಲಿ ಬೆಂಕಿ ಕಾಣಿಸಿತು. ತಕ್ಷಣ ಅವರು ಸ್ಥಳೀಯರಿಗೆ ತಿಳಿಸಿದ್ದು, ಮಾಹಿತಿ ಪಡೆದ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.

ಮಂಗಳೂರು: ನಿಲ್ಲಿಸಿದ್ದ ಕಾರು ನಿಂತಲ್ಲೇ ದಗದಗ| Read More »

ಪುತ್ತೂರು: ಮುಸ್ಲಿಂ ಯುವಕನಿಂದ ಮಾನಭಂಗಕ್ಕೆ ಯತ್ನ

ಸಮಗ್ರ ನ್ಯೂಸ್ : ಆಟೋ ಚಾಲಕನೊಬ್ಬ ತನ್ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕುಪಿನೋಪಿನಡ್ಕ ನಿವಾಸಿ ಮಹಮ್ಮದ್ ಸಫ್ಘಾನ್ ಅವರು ಪರಿಚಯದ ಮಹಿಳೆಯೊಬ್ಬರನ್ನು ಮಾತನಾಡಲು ಇದೆ ಎಂದು ಹೇಳಿ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾನೆ. ದರ್ಬೆ ಹರ್ಷ ಇಲೆಕ್ಟ್ರಾನಿಕ್ಸ್ ಬಳಿ ತಲುಪುತ್ತಿದ್ದಂತೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು,ಜೀವ ಬೆದರಿಕೆಯೊಡ್ಡಿದ್ದಾನೆ. ಈ ಘಟನೆ ಕುರಿತು ನೊಂದ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರು: ಮುಸ್ಲಿಂ ಯುವಕನಿಂದ ಮಾನಭಂಗಕ್ಕೆ ಯತ್ನ Read More »

ಮಂಗಳೂರು: 2 ಮಕ್ಕಳೊಂದಿಗೆ ತಾಯಿ ನಾಪತ್ತೆ – ದೂರು ದಾಖಲು

ಸಮಗ್ರ ನ್ಯೂಸ್: ನಗರದ ಕಾಟಿಪಳ್ಳ ಗ್ರಾಮದ ಗಣೇಶ ಪುರದಲ್ಲಿ ವಾಸವಿದ್ದ ಭಾರತಿ ಮಾದರ (35) ಮಕ್ಕಳಾದ ಅಮೃತ (11) ಮತ್ತು ಗಣೇಶ್ (9) ಅವರೊಂದಿಗೆ ಮಾ.21ರ ರಾತ್ರಿ ಮನೆಯಿಂದ ತೆರಳಿದವರು ಇದೂವರೆಗೆ ವಾಪಸಾಗಿಲ್ಲ. ಅವರು ಕಾಣೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದವರ ಚಹರೆ ಇಂತಿದೆ:ಭಾರತಿ ಮಾದರ : ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ, 4 ಅಡಿ 6 ಇಂಚು ಎತ್ತರ, ಬಲಗೈಯಲ್ಲಿ ಎಚ್.ಬಿ. ಎಂಬ ಹಚ್ಚೆ ಇದೆ, ಕನ್ನಡ, ಹಿಂದಿ ಮತ್ತು

ಮಂಗಳೂರು: 2 ಮಕ್ಕಳೊಂದಿಗೆ ತಾಯಿ ನಾಪತ್ತೆ – ದೂರು ದಾಖಲು Read More »

ಪುತ್ತೂರು ಬಸ್‌ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು| ತುಳುನಾಡ ವೀರರ ಹೆಸರಲ್ಲಿ ರಾರಾಜಿಸಲಿದೆ ದ.ಕ ಜಿಲ್ಲೆಯ ಅತಿದೊಡ್ಡ ಬಸ್ ನಿಲ್ದಾಣ|

ಸಮಗ್ರ ನ್ಯೂಸ್: ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಜಿಲ್ಲೆಯ ಅತಿದೊಡ್ಡ ಬಸ್ ನಿಲ್ದಾಣವೆಂಬ ಖ್ಯಾತಿಗೆ ಪಾತ್ರವಾಗಿರುವ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಇನ್ನು ಮುಂದೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ರಾರಾಜಿಸಲಿದೆ. ಕೆ.ಎಸ್.ಆರ್.ಟಿ.ಸಿ ಯು ಕೋಟಿ ಚೆನ್ನಯರ ಹೆಸರನ್ನು ಪುತ್ತೂರು ಬಸ್ ನಿಲ್ದಾಣಕ್ಕೆ ಇಡುವ ಸಂಬಂಧ ನಿರ್ಣಯ ಕೈಗೊಂಡಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಬೆಂಬಿಡದ ಪ್ರಯತ್ನದ ಫಲವಾಗಿ ಯೋಜನೆ ಕೈಗೂಡಿದ್ದು, ಬಹುತೇಕ ಮುಂದಿನ ತಿಂಗಳು ನಾಮಕರಣ

ಪುತ್ತೂರು ಬಸ್‌ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು| ತುಳುನಾಡ ವೀರರ ಹೆಸರಲ್ಲಿ ರಾರಾಜಿಸಲಿದೆ ದ.ಕ ಜಿಲ್ಲೆಯ ಅತಿದೊಡ್ಡ ಬಸ್ ನಿಲ್ದಾಣ| Read More »

ಮಂಗಳೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಚುನಾವಣೆ| ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತನ್ ಗೌಡ ಕೊಡಪಾಲ ಆಯ್ಕೆ|

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತನ್ ಕೊಡಪಾಲ ಆಯ್ಕೆಯಾಗಿದ್ದಾರೆ.ಮಾ.26 ರಂದು ಮಂಗಳೂರಿನಲ್ಲಿ ಚುನಾವಣೆ ‌ನಡೆದಿದೆ. ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ಬಿ.ಕಾಂ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಯಾಗಿರುವ ಕೀರ್ತನ್ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ದಿನೇಶ್ ಕೊಡಪಾಲ – ವಸಂತಿ ಕೊಡಪಾಲ ರವರ ಪುತ್ರ.‌ ಸುಳ್ಯ ತಾಲೂಕು ಎನ್.ಎಸ್.ಯು.ಐ. ಅಧ್ಯಕ್ಷ ರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಮಂಗಳೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಚುನಾವಣೆ| ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತನ್ ಗೌಡ ಕೊಡಪಾಲ ಆಯ್ಕೆ| Read More »

ಧರ್ಮಸ್ಥಳ: ನೇತ್ರಾವತಿ ಯಾತ್ರಿಕರ ಬ್ಯಾಗ್ ನಿಂದ ಚಿನ್ನಾಭರಣ ಕಳವು| ಅಂತರಾಜ್ಯ ಚೋರನ ಬಂಧನ| 2.5 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಸಮಗ್ರ ನ್ಯೂಸ್ : ಶ್ರೀ ಕ್ಷೇತ್ರ‌ ಧರ್ಮಸ್ಥಳ ದೇವಸ್ಥಾನಕ್ಕೆ ಬರುವ ಯಾತ್ರಿಕರ ಬ್ಯಾಗ್ ನಿಂದ ಚಿನ್ನಾಭರಣ ಹಾಗೂ ಹಣವನ್ನು ಕಳ್ಳತನ ಮಾಡಿದ ಅಂತರಾಜ್ಯ ಚೋರನನ್ನು‌ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಮಾಡಿ ಆರೋಪಿ ಹಾಗೂ ಕಳ್ಳತನ ಮಾಡಿದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಶ್ರೀಧರ‌ ನಾಯರಿ ಎಂಬವರು ಸ್ನಾನ ಮಾಡಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ತಮ್ಮ‌ ಚಿನ್ನಾಭರಣ ಹಾಗೂ ಹಣ ಇದ್ದ ಬ್ಯಾಗ್ ಇಟ್ಟಿದ್ದರು.

ಧರ್ಮಸ್ಥಳ: ನೇತ್ರಾವತಿ ಯಾತ್ರಿಕರ ಬ್ಯಾಗ್ ನಿಂದ ಚಿನ್ನಾಭರಣ ಕಳವು| ಅಂತರಾಜ್ಯ ಚೋರನ ಬಂಧನ| 2.5 ಲಕ್ಷ ಮೌಲ್ಯದ ಚಿನ್ನಾಭರಣ ವಶ Read More »

ಮಂಗಳೂರು: ಮೊಮ್ಮಗಳ ಬರ್ತ್ ಡೇ ಪೂಜೆ ಮುಗಿಸಿ ವಾಪಾಸ್ಸಾಗುತ್ತಿದ್ದ ಅಜ್ಜಿ ಅಪಘಾತದಲ್ಲಿ ಸಾವು

ಸಮಗ್ರ ನ್ಯೂಸ್: ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನಪ್ಪಿರುವ ಘಟನೆ ಕಾಪಿಕಾಡು ಎಂಬಲ್ಲಿ ನಡೆದಿದೆ. ಮೃತರನ್ನು ಎಮಿಲ್ಡಾ ಡಿಸೋಜ (59) ಎಂದು ಗುರುತಿಸಲಾಗಿದೆ. ತನ್ನ ಮೊಮ್ಮಗಳ ಹುಟ್ಟುಹಬ್ಬಕ್ಕೆ ಚರ್ಚ್ ನಲ್ಲಿ ಪೂಜೆ ಮುಗಿಸಿ ಮನೆಗೆ ಬರುತ್ತಿರುವ ಸಂದರ್ಭ ಅವರು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು ಹಿಂಬದಿ ಸವಾರೆ ಎಮಿಲ್ಡ ಅವರು ರಸ್ತೆಗೆಸೆಯಲ್ಪಟ್ಟಿದ್ದಾರೆ. ತಕ್ಷಣ ಅವರನ್ನ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರುಣ ಸಾವನ್ನಪ್ಪಿದ್ದಾರೆ. ಸ್ಕೂಟರ್ ಸವಾರೆ ಪ್ಲೇವಿ ಡಿ ಸೋಜ(47)

ಮಂಗಳೂರು: ಮೊಮ್ಮಗಳ ಬರ್ತ್ ಡೇ ಪೂಜೆ ಮುಗಿಸಿ ವಾಪಾಸ್ಸಾಗುತ್ತಿದ್ದ ಅಜ್ಜಿ ಅಪಘಾತದಲ್ಲಿ ಸಾವು Read More »