ಎ.6 ಕ್ಕೆ ಕರ್ನಾಟಕದತ್ತ “ನಮೋ”| ಕರುನಾಡಲ್ಲಿ ಚುನಾವಣಾ ದಂಡಯಾತ್ರೆಗೆ ಸಜ್ಜಾದರಾ ಪ್ರಧಾನಿ?
ಸಮಗ್ರ ನ್ಯೂಸ್: ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದು ಉತ್ಸಾಹದಲ್ಲಿರುವ ಕಮಲ ಪಡೆ 2023ರ ರಾಜ್ಯ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಕರುನಾಡಿನಲ್ಲಿ ರಣಕಹಳೆ ಮೊಳಗಿಸಲು ಮೋದಿಯೂ ಸಜ್ಜಾಗಿದ್ದು, ಪ್ರಧಾನಿ ಕರ್ನಾಟಕ ದಂಡಯಾತ್ರೆಗೆ ಮುಹೂರ್ತ ನಿಗದಿಯಾಗಿದೆ. ಏಪ್ರಿಲ್ 6ಕ್ಕೆ ಪ್ರಧಾನಿಗಳ ರಾಜ್ಯ ಪ್ರವಾಸ ಆರಂಭವಾಗಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆಗೆ ಪ್ಲಾನ್ ರೂಪಿಸಲಾಗಿದೆ. ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಸಿಎಂ ಬೊಮ್ಮಾಯಿಗೆ ಮಾಹಿತಿ ರವಾನೆಯಾಗಿದ್ದು, ಸಿದ್ಧತೆ ಶುರು ಮಾಡಿಕೊಂಡಿದ್ದಾರೆ. ಏಪ್ರಿಲ್ 1ಕ್ಕೆ ರಾಜ್ಯಕ್ಕೆ ಅಮಿತ್ ಶಾ ಭೇಟಿ ಕೊಡಲಿದ್ದಾರೆ.
ಎ.6 ಕ್ಕೆ ಕರ್ನಾಟಕದತ್ತ “ನಮೋ”| ಕರುನಾಡಲ್ಲಿ ಚುನಾವಣಾ ದಂಡಯಾತ್ರೆಗೆ ಸಜ್ಜಾದರಾ ಪ್ರಧಾನಿ? Read More »










