ಕರಾವಳಿ

ಉಡುಪಿ: ಟೈಮಿಂಗ್ಸ್ ವಿಚಾರ – ಸಿಟಿ ಬಸ್ ಕಂಡಕ್ಟರ್‌ಗಳ ನಡುವೆ ಮಾರಾಮಾರಿ

ಸಮಗ್ಎ ನ್ಯೂಸ್: ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ಟೈಮಿಂಗ್ ವಿಷಯದಲ್ಲಿ ಖಾಸಗಿ ಬಸ್ ನಿರ್ವಾಹಕರು ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ನಡೆದಿದೆ. ಖಾಸಗಿ ಬಸ್ ನಿರ್ವಾಹಕರ ನಡುವೆ ಟೈಮಿಂಗ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಸಿಟಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ. ಇನ್ನು ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್‌ಗಳ ಕಂಡಕ್ಟರ್‌ಗಳು ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಉಡುಪಿ: ಟೈಮಿಂಗ್ಸ್ ವಿಚಾರ – ಸಿಟಿ ಬಸ್ ಕಂಡಕ್ಟರ್‌ಗಳ ನಡುವೆ ಮಾರಾಮಾರಿ Read More »

ಮಂಗಳೂರು: ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾದ ಕಡಲ ನಗರಿ| ಕುವೆಂಪು ಆಶಯದಂತೆ ಹಸೆಮಣೆ ಏರಿದ ನವಜೋಡಿ

ಸಮಗ್ರ ನ್ಯೂಸ್: ಮದುವೆಯೆಂದರೆ ಅದೊಂದು ಗೌಜಿ. ಅದ್ಧೂರಿಯಾಗಿ ಎಲ್ಲರ ಗಮನ ಸೆಳೆಯಬೇಕು, ವಿಐಪಿಗಳು ಬರಬೇಕು, ಎಂದು ಬಯಸುವವರೇ ಅಧಿಕ. ಆದರೆ, ಮಂಗಳೂರಿನಲ್ಲಿ ನಡೆದ ಸರಳ ಮದುವೆಯೊಂದು ಮೆಚ್ಚುಗೆಗೆ ಪಾತ್ರವಾಗಿದೆ. ಅರ್ಚಕರ ಪೂಜೆ, ಮಂತ್ರಘೋಷಗಳಿಲ್ಲದೇ ಮಂತ್ರಮಾಂಗಲ್ಯದ ಮೂಲಕ ವಿವಾಹವಾಗಿ ಕಡಲತಡಿಯ ಜೋಡಿಯೊಂದು ಗಮನ ಸೆಳೆದಿದೆ. ಸುರತ್ಕಲ್​ನ ಹೋಂ ಸ್ಟೇಯಲ್ಲಿ ವಿವೇಕ ಗೌಡ ಮತ್ತು ಶಿವಾನಿ ಶೆಟ್ಟಿ ಎಂಬುವವರು ನಾಡಗೀತೆ, ಪರಿಸರ ಸ್ನೇಹಿ ಆದರ್ಶಗಳ ಜೊತೆ ಹೊಸಜೀವನ ಆರಂಭಿಸಿದರು. ಲ್ಯಾಂಡ್ ಲಿಂಕ್ಸ್​ನ ಉದ್ಯಮಿಯಾಗಿರುವ ವಿವೇಕಗೌಡ ಛಾಯಾಗ್ರಹಣ ಮತ್ತು ವಿಡಿಯೋ ಎಡಿಟಿಂಗ್

ಮಂಗಳೂರು: ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾದ ಕಡಲ ನಗರಿ| ಕುವೆಂಪು ಆಶಯದಂತೆ ಹಸೆಮಣೆ ಏರಿದ ನವಜೋಡಿ Read More »

ಸುಳ್ಯ ವಕೀಲರ ಸಂಘ ಚುನಾವಣೆ| ಪ್ರ. ಕಾರ್ಯದರ್ಶಿ ಆಯ್ಕೆ ಪ್ರಶ್ನಿಸಿ ಭಿನ್ನಮತ| ಹಾಲಿ-ಮಾಜಿ ಅಧ್ಯಕ್ಷರ ಮಧ್ಯೆ ಚಕಮಕಿ

ಸಮಗ್ರ ನ್ಯೂಸ್: ತಾಲೂಕು ವಕೀಲರ ಸಂಘದ ಚುನಾವಣೆ ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದು, ನೂತನ ಸಮಿತಿ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಎ 6 ರಂದು ನಡೆಯಲಿತ್ತು. ಆದರೆ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ವಿನಯ ಮುಳುಗಾಡುರವರ ಆಯ್ಕೆ ಸಂಘದ ಬೈಲಾಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ನ್ಯಾಯವಾದಿ ಶ್ರೀಪಾದ ಹೆಗಡೆ ಸಂಘಕ್ಕೆ ಪತ್ರವನ್ನು ಬರೆದಿದ್ದು ಭಿನ್ನಮತ ಸ್ಪೋಟಗೊಂಡಂತಾಗಿದೆ. ಸಂಘದ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಲು ಸಂಘದ ಸದಸ್ಯರಾಗಿ ಎಂಟು ವರ್ಷಗಳಾಗಿರಬೇಕು. ಆದರೆ ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ

ಸುಳ್ಯ ವಕೀಲರ ಸಂಘ ಚುನಾವಣೆ| ಪ್ರ. ಕಾರ್ಯದರ್ಶಿ ಆಯ್ಕೆ ಪ್ರಶ್ನಿಸಿ ಭಿನ್ನಮತ| ಹಾಲಿ-ಮಾಜಿ ಅಧ್ಯಕ್ಷರ ಮಧ್ಯೆ ಚಕಮಕಿ Read More »

ಮೂಡುಬಿದಿರೆ: ಬೈಕ್‌‌ಗಳ ಮುಖಾಮುಖಿ: ಓರ್ವ ಮೃತ್ಯು

ಸಮಗ್ರ ನ್ಯೂಸ್: ಬೈಕ್‌‌ಗಳೆರಡು ಮುಖಾಮುಖಿ ಢಿಕ್ಕಿಯಾದ ಪರಿಣಾಮವಾಗಿ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಕೊಡಂಗಲ್ಲು ಬಳಿ ಇಂದು ನಡೆದಿದೆ. ಹೊಸಂಗಡಿ ಬಳಿಯ ಎದುರುಗುಡ್ಡೆ ನಿವಾಸಿ, ಪೊರಟ ವ್ಯಾಪಾರಿ ರವೀಂದ್ರ (36) ಮೃತಪಟ್ಟ ವ್ಯಕ್ತಿ. ಅವರು ತನ್ನ ಸಹೋದರ ರಾಜೇಂದ್ರ ಪೂಜಾರಿಯೊಂದಿಗೆ ಮಹಾವೀರ ಕಾಲೇಜು ಬಳಿಯಿಂದ ಹೊಸಂಗಡಿ ಕಡೆಗೆ ಹೋಗುತ್ತಿದ್ದಾಗ ಗಂಟಾಲ್ ಕಟ್ಟೆ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಯೆನಪೋಯ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಜಸ್ಟಿನ್ ಮಿನೇಜಸ್ ಅವರು ರವೀಂದ್ರ ಅವರ ಬೈಕ್ ಗೆ ಢಿಕ್ಕಿ ಹೊಡೆದಿದ್ದು ತೀವೃ

ಮೂಡುಬಿದಿರೆ: ಬೈಕ್‌‌ಗಳ ಮುಖಾಮುಖಿ: ಓರ್ವ ಮೃತ್ಯು Read More »

ಬೆಳ್ತಂಗಡಿ: ನೀರಿನ ಟ್ಯಾಂಕ್‌ಗಿಳಿದ ವ್ಯಕ್ತಿ ಸಾವು!

ಸಮಗ್ರ ನ್ಯೂಸ್: ನೆರೆಮನೆಯ ನೀರಿನ ಟ್ಯಾಂಕ್ ಸ್ವಚ್ಛತೆ ತೆರಳಿದ್ದ ಕೂಲಿ ಕಾರ್ಮಿಕ ನೀರಿನಲ್ಲಿ ಮುಳುಗಿ ಅಸಹಜವಾಗಿ ಮೃತಪಟ್ಟ ಘಟನೆ ಕೊಯ್ಯೂರು ಗ್ರಾಮದ ಅತ್ಯಾರ ಎಂಬಲ್ಲಿ ನಡೆದಿದೆ. ಮೃತರನ್ನು ಶ್ರೀಧರ ಗೌಡ ಎಂದು ಗುರುತಿಸಲಾಗಿದೆ. ಇವರು ಕೂಲಿ ಕಾರ್ಮಿಕರಾಗಿದ್ದು ಭಾನುವಾರದಂದು ಅಪರಾಹ್ನ 3 ಗಂಟೆಗೆ ಕೊಯ್ಯೂರು ಗ್ರಾಮದ ಬಜಿಲ ನಿವಾಸಿ, ನೆರೆ ಮನೆಯವರು ಹಾಗೂ ಸಂಬಂಧಿಕರೂ ಆಗಿದ್ದ ಚಂದಪ್ಪ ಗೌಡ ಎಂಬವರ ಮನೆಯ ಬಳಿಯ ನೀರಿನ ಸಂಪ್ ಸ್ವಚ್ಛ ಮಾಡಲು ಹೋಗಿದ್ದರು. ಮಣ್ಣಿನಡಿಯಲ್ಲಿ ನಿರ್ಮಾಣವಾದ ಟ್ಯಾಂಕ್ ಇದಾಗಿದ್ದು, ಸಂಜೆಯಾದರು

ಬೆಳ್ತಂಗಡಿ: ನೀರಿನ ಟ್ಯಾಂಕ್‌ಗಿಳಿದ ವ್ಯಕ್ತಿ ಸಾವು! Read More »

ಸುಳ್ಯ: ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ನಿರಾಕರಣೆ ಬ್ಯಾನರ್

ಸಮಗ್ರ ನ್ಯೂಸ್: ಹಿಜಾಬ್ ವಿವಾದದ ಬಳಿಕ ರಾಜ್ಯಾದ್ಯಂತ ಮುಸ್ಲಿಂ ವ್ಯಾಪಾರಸ್ಥರು ಹೈಕೋರ್ಟ್ ತೀರ್ಪಿನ ವಿರುದ್ಧ ಬಂದ್ ಮಾಡಿರುವ ಹಿನ್ನಲೆಯಲ್ಲಿ ಇದೀಗ ಬಹುತೇಕ ಜಾತ್ರೋತ್ಸವ ಸಂತೆ ಮಾರುಕಟ್ಟೆಯಲ್ಲಿ ಮುಸಲ್ಮಾನರಿಗೆ ವ್ಯಾಪಾರ ನಿರ್ಬಂಧಿಸಲಾಗುತ್ತಿದೆ. ಇದೀಗ ಈ ವ್ಯಾಪಾರ ನಿಷೇಧ ಸುಳ್ಯಕ್ಕೂ ಕಾಲಿರಿಸಿದ್ದು, ಇಲ್ಲಿನ ಜಯನಗರದ ಜಾತ್ರೋತ್ಸವದಲ್ಲಿ ಮುಸ್ಲಿಂಮರಿಗೆ ವ್ಯಾಪಾರ ನಿಷೇಧಿಸಿರುವ ಕುರಿತಾದ ಬ್ಯಾನರ್ ಅಳವಡಿಸಲಾಗಿದೆ. ಜಯನಗರದ ಆದಿಮೊಗೇರ್ಕಳ ಕೊರಗಜ್ಜನ ಸನ್ನಿಧಾನದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರು ವ್ಯಾಪಾರ ನಡೆಸಬಾರದು ಎಂಬ ಬ್ಯಾನರ್ ಅಳವಡಿಸಲಾಗಿದೆ.

ಸುಳ್ಯ: ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ನಿರಾಕರಣೆ ಬ್ಯಾನರ್ Read More »

ಕುಂದಾಪುರ: ಮೀನುಗಾರಿಕೆಯ ವೇಳೆ ಬೋಟ್ ಮುಳುಗಡೆ – ಐವರ ರಕ್ಷಣೆ

ಸಮಗ್ರ ನ್ಯೂಸ್: ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೊರಟು ಗಾಳಿಯ ಒತ್ತಡ ಹಾಗೂ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾದ ಘಟನೆ ಗಂಗೊಳ್ಳಿಯಿಂದ ಸುಮಾರು 20 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಸಂಭವಿಸಿದ್ದು ಅದರಲ್ಲಿದ್ದ ಐದು ಮೀನುಗಾರರನ್ನು ರಕ್ಷಿಸಲಾಗಿದೆ. ಬೋಟಿನಲ್ಲಿದ್ದ ಮೀನುಗಾರರಾದ ತಾಂಡೇಲಾ ನಾಗಪ್ಪ ರಾಮ ಅಂಬಿಗ, ಕಲಾಸಿಯವರಾದ ಸಚಿನ್ ಉಲ್ಲಾಸ, ದೀಪಕ್ ಖಾರ್ವಿ, ಸುಭಾಷ್ ಗಾಂಗೇಶ್ವರ, ಸೂರಜ್ ಕುಮಾರ್ ಭಗತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಾಜರಕ್ಷಾ ಬೋಟಿನಲ್ಲಿದ್ದ ಮೀನುಗಾರರು ರಕ್ಷಿಸಿ, ದಡಕ್ಕೆ ಕರೆತಂದಿದ್ದಾರೆ. ಉದ್ಯಾವರ

ಕುಂದಾಪುರ: ಮೀನುಗಾರಿಕೆಯ ವೇಳೆ ಬೋಟ್ ಮುಳುಗಡೆ – ಐವರ ರಕ್ಷಣೆ Read More »

ದ. ಕ ಜಿಲ್ಲೆಯ 9, ಉಡುಪಿಯ ಇಬ್ಬರು ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ

ಸಮಗ್ರ ನ್ಯೂಸ್ : ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಎಂಟು ಮಂದಿ ಪೊಲೀಸರು ಮತ್ತು ಉಡುಪಿ ಜಿಲ್ಲೆಯ ಇಬ್ಬರು ಪೊಲೀಸರಿಗೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಟರಾಜ್ (ಎಸಿಪಿ, ಸಂಚಾರ), ಪ್ರದೀಪ್ ಟಿ.ಆರ್ (ಪಿಎಸ್‌ಐ, ಸಿಸಿಬಿ), ಶೋಭಾ (ಪಿಎಸ್‌ಐ, ಬರ್ಕೆ ಠಾಣೆ), ವನಜಾಕ್ಷಿ (ಸಿಸಿಆರ್‌‌ಬಿ, ಪಿಎಸ್‌‌ಐ), ಕುಶಾಲ್ ಮಣಿಯಾಣಿ (ಎಎಸ್‌ಐ ಬಜಪೆ ಠಾಣೆ), ಇಸಾಕ್ ಕೆ (ಸಿಎಚ್‌ಸಿ ಪಣಂಬೂರು ಠಾಣೆ) ಹಾಗೂ ಎಸಿಬಿ ಹೆಡ್ ಕಾನ್ ಸ್ಟೆಬಲ್ ಹರಿಪ್ರಸಾದ್, ಗೃಹ ರಕ್ಷಕ ದಳದ ದ.ಕ

ದ. ಕ ಜಿಲ್ಲೆಯ 9, ಉಡುಪಿಯ ಇಬ್ಬರು ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ Read More »

ಪಯಸ್ವಿನಿ ಹೊಳೆಯಲ್ಲಿ ಅತೀ ದೊಡ್ಡ ಆಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಅತೀ ದೊಡ್ಡ ಆಮೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಕಾಸರಗೋಡಿನ ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಗಿದೆ. ಬಾವಿಕ್ಕರೆ ಸಮೀಪದ ಅಣೆಕಟ್ಟಿನ ಬದಿಯಲ್ಲಿ ಆಮೆ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆಮೆಯು ಒಂದು ಮೀಟರ್ ಉದ್ದ 62 ಸೆ. ಮೀ. ಅಗಲ ಹೊಂದಿದೆ. ಈ ಹೆಣ್ಣು ಆಮೆ 40 ಕಿಲೋ ಭಾರ ಹೊಂದಿದೆ. ಹತ್ತು ವರ್ಷ ಪ್ರಾಯವನ್ನು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಸಿಹಿ ನೀರಿನಲ್ಲಿ ಈ ಆಮೆ ಕಂಡು ಬರುತ್ತಿದ್ದು, 2010ರಲ್ಲಿ ಕೋಜಿಕ್ಕೋಡ್ ಕುಟ್ಯಾಡಿ ಹೊಳೆಯಲ್ಲಿ ಇಂತಹ

ಪಯಸ್ವಿನಿ ಹೊಳೆಯಲ್ಲಿ ಅತೀ ದೊಡ್ಡ ಆಮೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ Read More »

ಉಡುಪಿ: ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ, ಆಮೇಲೆ ಸೌಹಾರ್ದದ ಮಾತಾಡೋಣ- ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ತಾಕೀತು

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಪ್ರಾರಂಭಗೊಂಡು ಮುಸ್ಲಿಮರೊಂದಿಗಿನ ವ್ಯಾಪಾರಗಳನ್ನು ನಿರ್ಬಂಧಿಸುವವರೆಗೆ ಸಮಾಜದಲ್ಲಿ ಉಂಟಾಗಿರುವ ಕಂದಕಕ್ಕೆ ಪರಿಹಾರ ಕಂಡುಕೊಳ್ಳಲು ಸಹಕರಿಸಬೇಕೆಂದು ಮುಸ್ಲಿಂ ನಿಯೋಗ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮನವಿ ಮಾಡಿತು. ನಿಯೋಗವನ್ನು ಭೇಟಿ ಮಾಡಿದ ಶ್ರೀಗಳು, ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗ ಉಂಟಾಗಿರುವ ಸಮಸ್ಯೆಗಳ ಹಿಂದೆ ಅನೇಕ ವರ್ಷಗಳ ನೋವು ಇದೆ. ಅದಕ್ಕೆ ಕಾರಣ ಯಾರು? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಸಮಾಜದಲ್ಲಿ ಕಾನೂನು

ಉಡುಪಿ: ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ, ಆಮೇಲೆ ಸೌಹಾರ್ದದ ಮಾತಾಡೋಣ- ಮುಸ್ಲಿಂ ನಿಯೋಗಕ್ಕೆ ಪೇಜಾವರ ಶ್ರೀ ತಾಕೀತು Read More »