ಸುಳ್ಯ: ತಾರಕಕ್ಕೇರಿದ ನ.ಪಂ ಕಸ ಜಗಳ| ನಟ ಅನಿರುದ್ಧ್ ಮತ್ತು ನ.ಪಂ ಅಧ್ಯಕ್ಷ ವಿನಯ್ ಕುಮಾರ್ ನಡುವೆ ಕಮೆಂಟ್ಸ್ ವಾರ್|
ಸಮಗ್ರ ನ್ಯೂಸ್: ಕಳೆದ ಹಲವಾರು ವರ್ಷಗಳಿಂದ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯ ಸಮಸ್ಯೆಯಿದ್ದು ಅದಕ್ಕೆ ಮುಕ್ತಿ ಸಿಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ಈ ಸಮಸ್ಯೆಯ ಬಗ್ಗೆ ಕನ್ನಡದ ಖ್ಯಾತ ನಟ ಅನಿರುದ್ದ್ ಧ್ವನಿಯೆತ್ತಿದ್ದು ಸುದ್ದಿಯಾಗುತ್ತಿದೆ. ಸ್ವಚ್ಛ ಭಾರತ್ ಅಭಿಯಾನಕ್ಕೆ ಪೋಸ್ಟ್ ಹಂಚಿಕೊಂಡಿರುವ ನಟ ಅನಿರುದ್ಧ್ ಗೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಉದ್ದಟತನದ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ನಟ ಅನಿರುದ್ಧ್ ಅಧ್ಯಕ್ಷರಿಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟಿದ್ದು ,










