ಕರಾವಳಿ

ಬಂಟ್ವಾಳ : ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ ಮೂವರು ಖದೀಮರ ಬಂಧನ

ಸಮಗ್ರ ನ್ಯೂಸ್: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಏಪ್ರಿಲ್ 23 ಮಧ್ಯರಾತ್ರಿ ಬಂಟ್ವಾಳ ತಾಲ್ಲೂಕು ಬಿ ಮೂಡ ಗ್ರಾಮದ ರೈಲ್ವೆ ಸ್ಟೇಷನ್ ಬಳಿ ನಿಲ್ಲಿಸಿದ್ದ ರೈಲ್ವೆ ಇಲಾಖೆಯ ಸಿಬ್ಬಂದಿಯವರಾದ ಅನೂಫ್ ಎಂಬವರ ಬೈಕ್ ಕಳ್ಳತನವಾಗಿತ್ತು ಈ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಕಳೆದ ಏಪ್ರಿಲ್ ಇಪ್ಪತ್ತ ರಂದು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಸಬಾ ಗ್ರಾಮದ

ಬಂಟ್ವಾಳ : ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ ಮೂವರು ಖದೀಮರ ಬಂಧನ Read More »

ಹಿಜಾಬ್ ವಿವಾದದ ನಡುವೆ ಶಾಲೆಗಳಲ್ಲಿ ಹೋಮಹವನ| ಡಿಡಿಪಿಐ ವರದಿ ಕೇಳಿದ ದ.ಕ ಜಿಲ್ಲಾಧಿಕಾರಿ

ಸಮಗ್ರ ನ್ಯೂಸ್: ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಆಚರಣೆಗೆ ನಿಷೇಧ ಇರುವ ನಡುವಯೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸರಕಾರಿ ಶಾಲೆಗಳಲ್ಲಿ ಪ್ರಾರಂಭೋತ್ಸವದ ವೇಳೆ ವೈದಿಕ ಆಚರಣೆ ನಡೆಸಲಾಗಿದೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಈ ಬಗ್ಗೆ ವರದಿ ನೀಡಲು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಡಿಡಿಪಿಐಗೆ ಸೂಚಿಸಿದ್ದಾರೆ. ಮೇ 16 ರಂದು ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿದ್ದು ಈ ವೇಳೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳಲ್ಲಿ ವಿವಿಧ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ವೇಳೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಡಿಬಾಗಿಲು,

ಹಿಜಾಬ್ ವಿವಾದದ ನಡುವೆ ಶಾಲೆಗಳಲ್ಲಿ ಹೋಮಹವನ| ಡಿಡಿಪಿಐ ವರದಿ ಕೇಳಿದ ದ.ಕ ಜಿಲ್ಲಾಧಿಕಾರಿ Read More »

ದ.ಕ ಇಂದು (ಮೇ. 19) ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್:- ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮೇ.19ರ ಗುರುವಾರ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ.ಕ ಇಂದು (ಮೇ. 19) ಶಾಲೆಗಳಿಗೆ ರಜೆ Read More »

ಮಂಗಳೂರು: ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕಿ ಸುಜಾತಾ ಆತ್ಮಹತ್ಯೆ

ಸಮಗ್ರ ನ್ಯೂಸ್: ಸ್ಯಾಕ್ಸೋಫೋನ್ ವಾದಕಿ ಸುಜಾತಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಕ್ತಿನಗರದ ಫ್ಲ್ಯಾಟ್ ವೊಂದರಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಶಕ್ತಿನಗರದ ಫ್ಲ್ಯಾಟ್ ನಲ್ಲಿ ಪತಿ, ತಂದೆ, ತಾಯಿ ಮತ್ತು ಮಗುವಿನೊಂದಿಗೆ ವಾಸವಿದ್ದ, ಮೂಲತಃ ಮುಲ್ಕಿಯವರಾದ ಸ್ಯಾಕ್ಸೊಫೋನ್ ವಾದಕಿ ಸುಜಾತಾ ದೇವಾಡಿಗ (29) ಆತ್ಮಹತ್ಯೆ ಮಾಡಿಕೊಂಡವರು. ತಲೆ ನೋವು ಅಗುತ್ತಿದೆ ಎಂದು ಹೇಳಿ ಕೋಣೆಗೆ ಹೋದವರು ಹೊರಗೆ ಬಾರದಿದ್ದಾಗ ಮನೆಯವರು ಕೋಣೆಯಲ್ಲಿ ನೋಡಿದಾಗ ಘಟನೆ ಗೊತ್ತಾಗಿದೆ. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ

ಮಂಗಳೂರು: ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕಿ ಸುಜಾತಾ ಆತ್ಮಹತ್ಯೆ Read More »

ಕೊಲ್ಲೂರಿಗೆ ಹೊರಟವರು ತಲುಪಿದ್ದು ಗೋವಾಕ್ಕೆ..!; ದೇವಿ ದರ್ಶನದ ಬದಲು ಕಂಡಿದ್ದು ಬಿಕಿನಿ ಸುಂದರಿಯರು!!

ಕಾಸರಗೋಡು: ಕೇರಳದ ರಾಜಧಾನಿ ತಿರುವನಂತಪುರದಿಂದ ಕೊಲ್ಲೂರು ದೇವಸ್ಥಾನ ದರ್ಶನ ಮಾಡಲು ಹೊರಟಿದ್ದ ಯಾತ್ರಾರ್ಥಿಗಳು ಗೋವಾ ತಲುಪಿ ಚಾಲಕನೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದ ಘಟನೆ ನಡೆದಿದೆ. ಮೇ 15ರ ಸಂಜೆ ತಿರುವನಂತಪುರದಿಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಕೆ-ಸ್ವಿಫ್ಟ್‌ ಬಸ್‌ ಕೊಲ್ಲೂರಿಗೆ ಹೊರಟಿತ್ತು. ಎರ್ನಾಕುಳಂ ವರೆಗೆ ಓರ್ವ ಚಾಲಕನಿದ್ದು, ಅಲ್ಲಿಂದ ಇನ್ನೋರ್ವ ಚಾಲಕ ಬಸ್ಸನ್ನೇರಿ ಕರ್ತವ್ಯ ಆರಂಭಿಸಿದ. ಬಸ್‌ ಮಂಗಳೂರು ಮೂಲಕ ಕುಂದಾಪುರಕ್ಕೆ ತಲುಪಿತು. ಅಲ್ಲಿಂದ ಕೊಲ್ಲೂರಿಗೆ ತೆರಳಲು ಬಲಕ್ಕೆ ತಿರುವು ಪಡೆದುಕೊಳ್ಳಬೇಕು. ಆದರೆ ಕೊಲ್ಲೂರು ಬಗೆಗೆ ಯಾವುದೇ

ಕೊಲ್ಲೂರಿಗೆ ಹೊರಟವರು ತಲುಪಿದ್ದು ಗೋವಾಕ್ಕೆ..!; ದೇವಿ ದರ್ಶನದ ಬದಲು ಕಂಡಿದ್ದು ಬಿಕಿನಿ ಸುಂದರಿಯರು!! Read More »

ಬೈಂದೂರು: ಬೈಕ್ ಸ್ಕಿಡ್ ಆಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವು

ಬೈಂದೂರು: ಬೈಕ್ ನಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರೆ ಮೃತಪಟ್ಟ ಘಟನೆ ಕಾಲ್ತೋಡು ಗ್ರಾಮದ ಮುರೂರು ಎಂಬಲ್ಲಿ ಮೇ.17ರಂದು ಸಂಭವಿಸಿದೆ. ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಶೆಟ್ಟಿ (55) ಮೃತ ಪಟ್ಟ ದುರ್ದೈವಿ. ಅವರು ಮೇ.17ರಂದು ಬೆಳಗ್ಗೆ ಗ್ರಾಮ ಪಂಚಾಯತ್ ಗೆ ಬಂದು ಮೀಟಿಂಗ್ ಮುಗಿಸಿಕೊಂಡು ಮಧ್ಯಾಹ್ನ ಊಟಕ್ಕೆ ಮುರೂರು ನಲ್ಲಿ ಇರುವ ತಮ್ಮ ಮನೆಗೆ ಬೈಕ್ ನಲ್ಲಿ ಹಿಂಬದಿ ಕುಳಿತು ಕೊಂಡು ಹೋಗುವಾಗ ಆಕಸ್ಮಿಕ ವಾಗಿ ಬೈಕ್ ಸ್ಕಿಡ್ ಆಗಿ ಬಿದ್ದು

ಬೈಂದೂರು: ಬೈಕ್ ಸ್ಕಿಡ್ ಆಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವು Read More »

ಉಡುಪಿ: ನಿಶ್ಚಿತಾರ್ಥ ಬಂದಿದ್ದ ತಾಯಿ ಮಗು ನಿಗೂಢ ನಾಪತ್ತೆ

ಉಡುಪಿ: ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಹೇರೂರು ಗ್ರಾಮದಲ್ಲಿರುವ ಚಿಕ್ಕಪ್ಪನ ಮನೆಗೆ ಬಂದಿದ್ದನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ. ಮಂಗಳೂರಿನ ಉಳ್ಳಾಲ ಬಂಡಿಕೊಟ್ಯ ನಿವಾಸಿ ಪ್ರಥ್ವಿನಿ (32) ಎನ್ನುವ ಮಹಿಳೆ ತನ್ನ ನಾಲ್ಕೂವರೆ ವರ್ಷದ ಮಗಳು ಪುನರ್ವಿಯೊಂದಿಗೆ ಮೇ 13ರಿಂದ ನಾಪತ್ತೆಯಾಗಿದ್ದಾರೆ. 5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ದಪ್ಪ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್‌ ಠಾಣೆ (0820-2561044), ಪೊಲೀಸ್‌ ವೃತ್ತ

ಉಡುಪಿ: ನಿಶ್ಚಿತಾರ್ಥ ಬಂದಿದ್ದ ತಾಯಿ ಮಗು ನಿಗೂಢ ನಾಪತ್ತೆ Read More »

ವಿಟ್ಲ: ಹೃದಯಾಘಾತದಿಂದ ಹೈಸ್ಕೂಲ್ ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: 9ನೇ ತರಗತಿಯ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಅಳಿಕೆ ಗ್ರಾಮದ ಚಂದಾಡಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅನ್ವಿತ ಹೆಗ್ಡೆ ಎಂದು ಗುರುತಿಸಲಾಗಿದೆ. ಈಕೆ ಅಳಿಕೆ ಗ್ರಾಮದ ಚಂದಾಡಿ ನಿವಾಸಿಗಳಾದ ವಿನಯ್ ಹೆಗ್ಡೆ ಹಾಗೂ ಸಾಯಿಗೀತಾ ದಂಪತಿಗಳ ಪುತ್ರಿಯಾಗಿದ್ದು, ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇದ್ದ ಓರ್ವ ಮಗಳನ್ನು ಕಳೆದುಕೊಂಡ ಹೆತ್ತವರ ದುಃಖ ಮುಗಿಲುಮುಟ್ಟಿದೆ.

ವಿಟ್ಲ: ಹೃದಯಾಘಾತದಿಂದ ಹೈಸ್ಕೂಲ್ ವಿದ್ಯಾರ್ಥಿನಿ ಸಾವು Read More »

ಬಂಟ್ವಾಳ: ಕಾರಿಂಜೇಶ್ವರ ಬೆಟ್ಟದಿಂದ ಉರುಳಿದ ಬಂಡೆ| ಅಕ್ರಮ ಗಣಿಗಾರಿಕೆ ಪರಿಣಾಮವೆಂದ ಸ್ಥಳೀಯರು|

ಸಮಗ್ರ ನ್ಯೂಸ್: ಮಳೆಗಾಲ ಆರಂಭವಾಗುತ್ತಿದ್ದಂತೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರನ ಸನ್ನಿದಿಯ ಬಲಭಾಗದಿಂದ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಉರುಳಿ ಕೆಳಗೆ ಬಿದ್ದಿದೆ. ಘಟನೆಯಿಂದ ಕಾರಿಂಜ ರಸ್ತೆಗೆ ಮರ ಉರುಳಿ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ರಸ್ತೆಯಲ್ಲಿದ್ದ ಮರಗಳನ್ನು ತೆರವು ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಗುಡ್ಡದಲ್ಲಿರುವ ಕೆಲವು ಮರಗಳಿಗೆ ಹಾನಿಯಾಗಿದೆ. ಬೆಳಿಗ್ಗೆ ಸುಮಾರು 9 ಗಂಟೆಯ ಬಳಿಕ ಕಾರಿಂಜೇಶ್ವರನ ದೇವಾಲಯದ ಸಮೀಪದಲ್ಲೇ

ಬಂಟ್ವಾಳ: ಕಾರಿಂಜೇಶ್ವರ ಬೆಟ್ಟದಿಂದ ಉರುಳಿದ ಬಂಡೆ| ಅಕ್ರಮ ಗಣಿಗಾರಿಕೆ ಪರಿಣಾಮವೆಂದ ಸ್ಥಳೀಯರು| Read More »

ಪುತ್ತೂರು: ರೈಲು ಬಡಿದು ಯುವಕ ದುರ್ಮರಣ

ಸಮಗ್ರ ನ್ಯೂಸ್: ಪುತ್ತೂರು ಕಬಕ ಸಮೀಪದ ಮಿತ್ತೂರಿನಲ್ಲಿ ರೈಲು ಬಡಿದು ಆಲಂಕಾರು ಸಮೀಪದ ಕೊಯಿಲದ ಯುವಕ ಸಾವನ್ನಪ್ಪಿರುವ ಘಟನೆ ಮೇ 15ರಂದು ರಾತ್ರಿ ನಡೆದಿದೆ. ಕಡಬ ತಾಲೂಕಿನ ಕೊಯಿಲ ಗ್ರಾಮದ ಪುಣಿಕೆತ್ತಡಿ ನಿವಾಸಿ ಜಗದೀಶ ಹಾಗೂ ಹೇಮಾವತಿ ದಂಪತಿ ಪುತ್ರ ಕಾರ್ತಿಕ್(24ವ.)ಮೃತಪಟ್ಟ ದುರ್ದೈವಿ ಯುವಕ. ಮಿತ್ತೂರುನಲ್ಲಿ ಕಿರು ಸೇತುವೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮುಂಭಾಗದಿಂದ ಬರುತ್ತಿದ್ದ ರೈಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪುತ್ತೂರು: ರೈಲು ಬಡಿದು ಯುವಕ ದುರ್ಮರಣ Read More »