ಕರಾವಳಿ

ಮಂಗಳೂರು: ಅಡ್ಯಾರ್ ನಲ್ಲಿ ಎಸ್ಡಿಪಿಐ ಬೃಹತ್ ಜನಾಧಿಕಾರ ಸಮಾವೇಶ| ಸರ್ಕಾರ, ಹಿಂದೂ ಸಂಘಟನೆಗಳ ಮೇಲೆ ಮುಗಿಬಿದ್ದ ನಾಯಕರು|

ಸಮಗ್ರ ನ್ಯೂಸ್: ರಾಜ್ಯ ಸರಕಾರದ ಆಡಳಿತ ಹಾಗೂ ವಿರೋಧ ಪಕ್ಷದ ವೈಫಲ್ಯದ ವಿರುದ್ಧ SDPI ವತಿಯಿಂದ ಮಂಗಳೂರಿನ ಅಡ್ಯಾರು ಕಣ್ಣೂರು ಮೈದಾನದಲ್ಲಿ ಬೃಹತ್ ಜನಾಧಿಕಾರ ಸಮಾವೇಶ ಕಾರ್ಯಕ್ರಮವು ಶುಕ್ರವಾರ (ಮೇ.27) ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸಂಘಪರಿವಾರದ ಚಡ್ಡಿಗಳೇ ಧಂ ಇದ್ರೆ, ತಾಕತ್ತಿದ್ರೆ ಬಳ್ಳಾರಿಯಲ್ಲಿ ನಿಮ್ಮದೇ ನಾಯಕ ಜನಾರ್ದನ ರೆಡ್ಡಿ 200 ವರ್ಷ ಹಳೆಯದಾದ ದೇವಸ್ಥಾನ ಒಡೆದ ಸ್ಥಳದಲ್ಲಿ ತಾಂಬೂಲ ಪ್ರಶ್ನೆ ಕೇಳಿ. ಇಲ್ಲಿ ವ್ಯಾಪಾರ ಬಹಿಷ್ಕಾರ ಮಾಡಿ, ನಿಮ್ಮ ಗುರು ಬೊಮ್ಮಾಯಿ

ಮಂಗಳೂರು: ಅಡ್ಯಾರ್ ನಲ್ಲಿ ಎಸ್ಡಿಪಿಐ ಬೃಹತ್ ಜನಾಧಿಕಾರ ಸಮಾವೇಶ| ಸರ್ಕಾರ, ಹಿಂದೂ ಸಂಘಟನೆಗಳ ಮೇಲೆ ಮುಗಿಬಿದ್ದ ನಾಯಕರು| Read More »

ಬೆಳ್ತಂಗಡಿ: ಮುಸ್ಲಿಂ ಯುವಕನ ಮೇಲೆ ಹಲ್ಲೆ; ಕೊಕ್ಕಡ ಉದ್ವಿಗ್ನ

ಸಮಗ್ರ ನ್ಯೂಸ್: ಅನ್ಯಧರ್ಮೀಯ ಯುವಕನೋರ್ವ ಹಿಂದೂ ಯುವತಿಯನ್ನು ವಿವಾಹವಾದ ವಿಚಾರಕ್ಕೆ ಸಂಬಂಧಿಸಿದಂತೆ ಆತನ ಸಹೋದರನಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ. ಘಟನೆಯಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ ಎನ್ನಲಾಗಿದ್ದು ಫೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದ್ದು, ಸದ್ಯ ಕೊಕ್ಕಡ ಬೂದಿ ಮುಚ್ಚಿದ ಕೆಂಡದಂತಿದೆ. ಕೊಕ್ಕಡದ ಮಲ್ಲಿಗೆ ಮಜಲಿನ ಯುವಕನೋರ್ವ ಬೆಂಗಳೂರು ಮೂಲದ ಹಿಂದೂ ಯುವತಿಯನ್ನು ಮದುವೆಯಾಗಿದ್ದು, ಹಿಂದೂ ಸಂಘಟನೆಗಳ ಮುಖಂಡರು ಲವ್ ಜಿಹಾದ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ

ಬೆಳ್ತಂಗಡಿ: ಮುಸ್ಲಿಂ ಯುವಕನ ಮೇಲೆ ಹಲ್ಲೆ; ಕೊಕ್ಕಡ ಉದ್ವಿಗ್ನ Read More »

ಬೆಳ್ತಂಗಡಿ: ಸಿನಿಮೀಯ ರೀತಿಯಲ್ಲಿ ಮುರಿದುಬಿತ್ತು ಮದುವೆ| ವರನ ಕೈ ತಾಗಿದ್ದಕ್ಕೆ ಕೋಪಗೊಂಡ ವಧು, ತಾಳಿ ಕಟ್ಟಿಸಿಕೊಳ್ಳಲು ನಕಾರ

ಸಮಗ್ರ ನ್ಯೂಸ್: ಮದುವೆ ಛತ್ರದಲ್ಲಿ ಅದ್ದೂರಿ ವಿವಾಹವೊಂದು ಕ್ಷುಲ್ಲಕ ಕಾರಣಕ್ಕೆ ಮುರಿದು ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನಡೆದಿದೆ. ಗುರು ಹಿರಿಯರು ನಿಶ್ಚಯಿಸಿದ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಮಂಗಳ ವಾಧ್ಯಗಳ ನಿನಾದ ಮೊಳಗುತಿತ್ತು. ಇನ್ನೇನು ಮದುಮಗ ವಧುವಿನ ಕೊರಳಿಗೆ ಹೂವಿನ ಹಾರ ಹಾಕಬೇಕು, ಆಮೇಲೆ ಒಂದಾಗಿ ಬಾಳುವ ವಚನದೊಂದಿಗೆ ಸಪ್ತಪದಿ ತುಳಿಯಬೇಕು. ಅಷ್ಟರಲ್ಲಿ ಸಿನಿಮೀಯ ಘಟನೆಯೊಂದು ಅಲ್ಲಿ ನಡೆದು ಬಿಟ್ಟಿತ್ತು. ವರ ಕೈಯಲ್ಲಿ ಹಾರ ಹಿಡಿದು ಬಾಗಿ ವಧುವಿನ ಕೊರಳಿಗೆ ಹಾಕಬೇಕು, ಅಷ್ಟರಲ್ಲಿ ಜಮದಗ್ನಿಯ ರೂಪತಾಳಿದ

ಬೆಳ್ತಂಗಡಿ: ಸಿನಿಮೀಯ ರೀತಿಯಲ್ಲಿ ಮುರಿದುಬಿತ್ತು ಮದುವೆ| ವರನ ಕೈ ತಾಗಿದ್ದಕ್ಕೆ ಕೋಪಗೊಂಡ ವಧು, ತಾಳಿ ಕಟ್ಟಿಸಿಕೊಳ್ಳಲು ನಕಾರ Read More »

ಮಂಗಳೂರು: ಕ್ಯಾಂಪಸ್ ನೊಳಗೂ ಹಿಜಾಬ್ ಗೆ ಅವಕಾಶವಿಲ್ಲ| ಆದೇಶ‌ ಹೊರಡಿಸಿದ ಕಾಲೇಜು ಪ್ರಾಂಶುಪಾಲರು

ಸಮಗ್ರ ನ್ಯೂಸ್: ಕೆಲ ತಿಂಗಳ ಹಿಂದೆ ಕರಾವಳಿ ಹೊತ್ತಿಕೊಂಡ ಹಿಜಾಬ್ ದಂಗಲ್ ರಾಜ್ಯಾದ್ಯಂತ ಧಗಧಗಿಸಿತ್ತು. ಕೋರ್ಟ್ ಆದೇಶದ ಬಳಿಕ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಕೇಸ್ ಈಗ ಮತ್ತೆ ಉರಿಯಲು ಆರಂಭಿಸಿದೆ. ಮತ್ತದೇ ಕರಾವಳಿಯಲ್ಲಿ ಹಿಜಾಬ್ ವಿವಾದ ಶುರುವಾಗಿದೆ. ಮೇ 10ರಂದು ಮಂಗಳೂರಿನ ವಿವಿ ಘಟಕ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಪೋಷಕರ ಸಭೆಯಲ್ಲಿ ಹಿಜಾಬ್ ಧರಿಸದಂತೆ ಮೌಖಿಕವಾಗಿ ಸೂಚಿಸಲಾಗಿತ್ತಾದರೂ, ಕಾಲೇಜು ಆಡಳಿತ ಮಂಡಳಿ ಯಾವುದೇ ಆದೇಶ ಜಾರಿ ಮಾಡಿರಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಹಿಂದೂ ವಿದ್ಯಾರ್ಥಿಗಳು

ಮಂಗಳೂರು: ಕ್ಯಾಂಪಸ್ ನೊಳಗೂ ಹಿಜಾಬ್ ಗೆ ಅವಕಾಶವಿಲ್ಲ| ಆದೇಶ‌ ಹೊರಡಿಸಿದ ಕಾಲೇಜು ಪ್ರಾಂಶುಪಾಲರು Read More »

ಕಲ್ಲಡ್ಕ: ಮಹಡಿಯಿಂದ ಬಿದ್ದು ಬಾಲಕ ಸಾವು

ಸಮಗ್ರ ನ್ಯೂಸ್: ಆಡುತ್ತಿದ್ದಾಗ 6 ನೇ ಕ್ಲಾಸಿನ ವಿದ್ಯಾರ್ಥಿಯೋರ್ವ ಆಯತಪ್ಪಿ ಮೂರನೇ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ನಿನ್ನೆ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ನಿವಾಸಿ ಅಹಮ್ಮದ್ ಅವರ ಪುತ್ರ ಮಹಮ್ಮದ್ ಸಾಹಿಲ್ (10) ಮೃತಪಟ್ಟ ಬಾಲಕ. ಕಲ್ಲಡ್ಕ ಸಮೀಪದ ಗೊಳ್ತಮಜಲು ಎಂಬಲ್ಲಿರುವ ಸಿಟಿಪ್ಲಾಜಾ ರೆಸಿಡೆನ್ಸಿಯ ಮೂರನೇ ಮಹಡಿಯ ಸೀಟ್ ಹೌಸ್ ನಲ್ಲಿ ಸಾಹಿಲ್ ಗೆಳೆಯರ ಜೊತೆ ಆಟ ಆಡುತ್ತಿದ್ದ. ಆ ವೇಳೆ ಆಯತಪ್ಪಿ ಮೂರನೇ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ

ಕಲ್ಲಡ್ಕ: ಮಹಡಿಯಿಂದ ಬಿದ್ದು ಬಾಲಕ ಸಾವು Read More »

ಮಂಗಳೂರು : ಹಿಜಾಬ್ ವಿವಾದಕ್ಕೆ ಡಿಸಿ ಮಧ್ಯಪ್ರವೇಶಿಸಲಿ – ಯು.ಟಿ ಖಾದರ್

ಸಮಗ್ರ ನ್ಯೂಸ್: ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್‌ಗೆ ಕೆಲವು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ಪ್ರಕರಣವು ಗಂಭೀರಗೊಳ್ಳುವ ಮುನ್ನ ದ.ಕ. ಜಿಲ್ಲಾಧಿಕಾರಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಗುರುವಾರ ರಾಜ್ಯ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರನ್ನು ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ , ಅಬ್ದುಲ್ ಜಬ್ಬಾರ್ ಜೊತೆ ಭೇಟಿಯಾಗಿ ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಎಳೆದು ತಂದು

ಮಂಗಳೂರು : ಹಿಜಾಬ್ ವಿವಾದಕ್ಕೆ ಡಿಸಿ ಮಧ್ಯಪ್ರವೇಶಿಸಲಿ – ಯು.ಟಿ ಖಾದರ್ Read More »

ವಿಟ್ಲ: ವಾಟ್ಸಪ್ ನಲ್ಲಿ ಶಿವಲಿಂಗದ ಕುರಿತು ಅವಹೇಳನ| ಹಿಂಜಾವೆಯಿಂದ ದೂರು

ಸಮಗ್ರ ನ್ಯೂಸ್: ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಶಿವ ದೇವರನ್ನು ಅವಮಾನಿಸಿ ಬರೆದು ಹಾಕಿದ ಹಿನ್ನಲೆ ಆಕ್ರೋಶಗೊಂಡ ಹಿಂದೂ ಜಾಗರಣ ವೇದಿಕೆ ವಿಟ್ಲ ಪ್ರಖಂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ವಿಟ್ಲ ಕಸಬಾದ ಒಕ್ಕೆತ್ತೂರು ಊರುದಂಗಡಿಯ ನಿವಾಸಿ ರಸೀದ್ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಿಂದೂ ಬಾಂಧವರು ಪೂಜಿಸುವ ಶಿವಲಿಂಗವನ್ನು ಅಸಭ್ಯವಾಗಿ ನಿಂದಿಸಿದ್ದಾನೆ ” ಸಾಬ್ರೆ…. ಒಳ ಉಡುಪುಗಳನ್ನು ಬಿಗಿಯಾಗಿ, ಸರಿಯಾಗಿ ಧರಿಸಿರಿ, ಅಕಸ್ಮಾತ್ “ಅವರ” ಕಣ್ಣಿಗೆ ಆ ಪವಿತ್ರ “ಲಿಂಗ” ನಮ್ಮದೇ

ವಿಟ್ಲ: ವಾಟ್ಸಪ್ ನಲ್ಲಿ ಶಿವಲಿಂಗದ ಕುರಿತು ಅವಹೇಳನ| ಹಿಂಜಾವೆಯಿಂದ ದೂರು Read More »

ಮಂಗಳೂರು: ಮತ್ತೆ ಹಿಜಾಬ್- ಕೇಸರಿ‌ ಕದನ| ಆದೇಶ‌ ಪಾಲಿಸಲು ನಕಾರ; ವಿದ್ಯಾರ್ಥಿಗಳಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಕರಾವಳಿ ಸೇರಿದಂತೆ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಗಲಾಟೆ ಇದೀಗ ಮತ್ತೆ ಶುರುವಾಗಿದೆ. ಹೈಕೋರ್ಟ್ ತೀರ್ಪು ಬಳಿಕ ತಣ್ಣಗಾಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಚರ್ಚೆಗೆ ಬಂದಿದ್ದು,ಮಂಗಳೂರಿನ ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ. ಹಿಜಾಬ್ ಆದೇಶ ಕಟ್ಟುನಿಟ್ಟು ಪಾಲನೆ ಮಾಡಿ ಇಲ್ಲದಿದ್ದರ ಕೇಸರಿ ಶಾಲು ಹಾಕಲು ಅವಕಾಶ ಕೊಡಿ ಎಂದು ಒತ್ತಾಯಿಸಿ ಕೆಲವು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನಲ್ಲಿ ಹೈಕೋರ್ಟ್‌ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್‌ ಧರಿಸಿ

ಮಂಗಳೂರು: ಮತ್ತೆ ಹಿಜಾಬ್- ಕೇಸರಿ‌ ಕದನ| ಆದೇಶ‌ ಪಾಲಿಸಲು ನಕಾರ; ವಿದ್ಯಾರ್ಥಿಗಳಿಂದ ಪ್ರತಿಭಟನೆ Read More »

ಮಂಗಳೂರು: ಮರಳು ಮಿತ್ರ ಮೂಲಕ ಜಿಲ್ಲೆಗೆ ಮರಳು ಪೂರೈಕೆ – ಡಾ| ರಾಜೇಂದ್ರ ಕೆ.ವಿ

ಸಮಗ್ರ ನ್ಯೂಸ್: ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧವಿದ್ದರೂ ಜಿಲ್ಲೆಯಲ್ಲಿ ಮರಳಿನ ಕೊರತೆ ಎದುರಾಗದು. ಹಲವು ತಿಂಗಳಿಗೆ ಬೇಕಾಗುವಷ್ಟು ಸಂಗ್ರಹವಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಭೂರು ಹಾಗೂ ಮರವೂರಿನ ಅಣೆಕಟ್ಟಿನಲ್ಲಿ ಹೂಳೆತ್ತುವ ಮೂಲಕ ತೆರವುಗೊಳಿಸಲಾದ ಮರಳನ್ನು ಸಂಗ್ರಹಿಸಲಾಗುತ್ತಿದೆ. ಸಿಹಿ ನೀರಿನ ಮರಳು ಇದಾಗಿರುವ ಕಾರಣ ಉತ್ತಮ ಗುಣಮಟ್ಟದ್ದಾಗಿದೆ. “ಮರಳು ಮಿತ್ರ’ ಆಯಪ್‌ನಲ್ಲಿ ಅರ್ಜಿ ಸಲ್ಲಿಸಿ 7,000 ರೂ.ಗೆ 10 ಮೆಟ್ರಿಕ್‌ ಟನ್‌ ಮರಳು ಪಡೆಯಬಹುದು. ಜಿಎಸ್‌ಟಿ ಮತ್ತು

ಮಂಗಳೂರು: ಮರಳು ಮಿತ್ರ ಮೂಲಕ ಜಿಲ್ಲೆಗೆ ಮರಳು ಪೂರೈಕೆ – ಡಾ| ರಾಜೇಂದ್ರ ಕೆ.ವಿ Read More »

ಮಳಲಿ ದರ್ಗಾದಲ್ಲಿ‌ ದೈವೀಶಕ್ತಿ ಗೋಚರ ಹಿನ್ನಲೆ| ಜ್ಯೋತಿಷ ಹೇಳುವವರನ್ನು ಬಂಧಿಸಲು ಡಿ.ಕೆ ಶಿವಕುಮಾರ್ ಆಗ್ರಹ

ಸಮಗ್ರ ನ್ಯೂಸ್: ಮಂಗಳೂರಿನ ಮಳಲಿ ಮಸೀದಿ ವಿಚಾರವಾಗಿ ತಾಂಬೂಲ ಪ್ರಶ್ನೆ ಕೇಳುವ ವಿಚಾರ ಸಂಬಂಧ ಸರ್ಕಾರ, ಪೊಲೀಸ್ ಅಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು. ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಬಿಜೆಪಿ ಹಾಗೂ ಕೆಲವು ಸಂಘಟನೆಗಳ ವೈಯಕ್ತಿಕ ನಂಬಿಕೆಗಳನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದರೆ ಅವು ಅದನ್ನು ಬೇರೆಯವರ ಮೇಲೆ ಹೇರಬಾರದು. ಸಾರ್ವಜನಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾರದು. ಅದು ತಪ್ಪು’ ಎಂದು ಸದಾಶಿವನಗರ ನಿವಾಸದ ಬಳಿ

ಮಳಲಿ ದರ್ಗಾದಲ್ಲಿ‌ ದೈವೀಶಕ್ತಿ ಗೋಚರ ಹಿನ್ನಲೆ| ಜ್ಯೋತಿಷ ಹೇಳುವವರನ್ನು ಬಂಧಿಸಲು ಡಿ.ಕೆ ಶಿವಕುಮಾರ್ ಆಗ್ರಹ Read More »