ಕರಾವಳಿ

ಕುಕ್ಕೆ: ಮೂರು ದಿನಗಳಿಂದ ಸ್ನಾನಘಟ್ಟ ಮುಳುಗಡೆ| ಭಕ್ತಾಧಿಗಳಿಗೆ ತೊಂದರೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ರಾಜ್ಯದ ಪ್ರಮುಖ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮೂರು ದಿನಗಳಿಂದ ಮುಳುಗಡೆಯಾಗಿದೆ. ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ನದಿ ತೀರದ ತಗ್ಗು ಪ್ರದೇಶಗಳು ನೆರೆ ನೀರಿಗೆ ಮುಳುಗಡೆಯಾಗಿವೆ. ಹಲವು ಕಡೆಗಳಲ್ಲಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಕೃಷಿಹಾನಿಯಾಗಿದೆ. ಸಂಗಮಕ್ಷೇತ್ರ ಉಪ್ಪಿನಂಗಡಿಯಲ್ಲಿ ನದಿ ಸಂಗಮಕ್ಕೆ ಭಕ್ತರು ಕಾತರರಾಗಿದ್ದು, ಕೆಲವೇ ಅಡಿಗಳಷ್ಟು ನೀರು ತುಂಬಲು ಬಾಕಿಇದೆ. ಸಂಗಮ ಪುಣ್ಯತೀರ್ಥದಲ್ಲಿ ಮಿಂದೇಳಲು ಭಕ್ತಾಧಿಗಳು ಕಾಯುತ್ತಿದ್ದಾರೆ. ಪುಣ್ಯ

ಕುಕ್ಕೆ: ಮೂರು ದಿನಗಳಿಂದ ಸ್ನಾನಘಟ್ಟ ಮುಳುಗಡೆ| ಭಕ್ತಾಧಿಗಳಿಗೆ ತೊಂದರೆ Read More »

ದ.ಕ. ಜಿಲ್ಲೆಯಲ್ಲಿ ಜು. 6ರಂದು ಶಾಲೆ, ಕಾಲೇಜುಗಳಿಗೆ ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬುಧವಾರವೂ (ಜುಲೈ6 )ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ನಿರಂತರ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳು, ಪಿಯು ಮತ್ತು ಪದವಿ ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಜು. 6ರಂದು ಶಾಲೆ, ಕಾಲೇಜುಗಳಿಗೆ ರಜೆ Read More »

ಸುಳ್ಯ ; ಪೌರಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ದುಗಲಡ್ಕದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ದುಗಲಡ್ಕ ನೀರಬಿದಿರೆ ನಿವಾಸಿ ದೇವನಾಥ ಎಂದು ಗುರುತಿಸಲಾಗಿದೆ. ನಗರ ಪಂಚಾಯತ್ ನಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿ ಘಟಕದಲ್ಲಿ ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು, ನಿನ್ನೆ ವಿಷ ಸೇವಿಸಿದ್ದು, ಕೂಡಲೇ ವಿಷಯ ತಿಳಿದ ಸ್ನೇಹಿತರು ಸುಳ್ಯದ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟು ಹೊತ್ತಿಗಾಗಲೇ ಮೃತಪಟ್ಟಿದ್ದಾರೆ.

ಸುಳ್ಯ ; ಪೌರಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ Read More »

ಕಾರು ನಿಯಂತ್ರಣ ತಪ್ಪಿ ಮರವಂತೆ ಬೀಚ್ ಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆ ಬೀಚ್​ನಲ್ಲಿ ಕೆಂಪು ಬಣ್ಣದ ಸ್ವಿಫ್ಟ್​ ಕಾರು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರೋಶನ್​ ಆಚಾರ್ಯ ಶವ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ನಿಯಂತ್ರಣ ತಪ್ಪಿದ ಪರಿಣಾಮ ನಾಲ್ವರು ಪ್ರಯಾಣಿಸುತ್ತಿದ್ದ ಸ್ವಿಫ್ಟ್​ ಕಾರು ಮರವಂತೆ ಕಡಲಿಗೆ ಹಾರಿತ್ತು. ಕೋಟೇಶ್ವರ ಮೂಲದ ವಿರಾಜ್​ ಆಚಾರ್ಯ ಸೀಟ್​ ಬೆಲ್ಟ್​ ಧರಿಸಿದ್ದ ಪರಿಣಾಮ ಅವರ ಮೃತದೇಹ ಕಾರಿನಲ್ಲಿಯೇ ಪತ್ತೆಯಾಗಿತ್ತು. ಇದೇ ಕಾರಿನಲ್ಲಿದ್ದ ಕಾರ್ತಿಕ್​ ಹಾಗೂ ಸಂದೀಪ್​

ಕಾರು ನಿಯಂತ್ರಣ ತಪ್ಪಿ ಮರವಂತೆ ಬೀಚ್ ಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ Read More »

ಮುಂದುವರಿದ ವರುಣಾರ್ಭಟ| ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಜು.5ರಂದು ರಜೆ ಘೋಷಣೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕುಗಳಿಗೆ ರಜೆ ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಜುಲೈ 5 ರಂದು ರಜೆ ಘೋಷಣೆ ಮಾಡಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್‌ ಆದೇಶ ಹೊರಡಿಸಿದ್ದಾರೆ. ಮುಂದಿನ ಎರಡು ದಿನಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ನಿನ್ನೆಯಷ್ಟೇ ಅಪರ ಜಿಲ್ಲಾಧಿಕಾರಿಗಳು ಅತೀ ಹೆಚ್ಚು ಮಳೆ ಸುರಿಯುತ್ತಿರುವ ಹೆಬ್ರಿ ತಾಲೂಕಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಿದ್ದರು. ಆದರೆ

ಮುಂದುವರಿದ ವರುಣಾರ್ಭಟ| ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಜು.5ರಂದು ರಜೆ ಘೋಷಣೆ Read More »

ಭಾರೀ ಮಳೆ ಹಿನ್ನಲೆ; ದ.ಕ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 5 ರ ಮಂಗಳವಾರ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನಲ್ಲಿ ಕಳೆದ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಹಿನ್ನಲೆ; ದ.ಕ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಸಂಪಾಜೆ ಭೂಕಂಪನ ಪ್ರದೇಶಕ್ಕೆ ಕೇಂದ್ರ ತಂಡ ಪರಿಶೀಲನೆ

ಸಮಗ್ರ ನ್ಯೂಸ್: ಕಳೆದ‌ ಕೆಲವಾರಗಳಿಂದ ಕಂಪಿಸುತ್ತಿರುವ ಸಂಪಾಜೆ ಗ್ರಾಮಕ್ಕೆ ಭೂಕಂಪ ಅಧ್ಯಯನ ತಂಡ ಆಗಮಿಸಿದ್ದು, ಭೂಕಂಪನ ಬಾಧಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದೆ. ಕೇಂದ್ರ ಸರಕಾರದ ಪ್ರಾಕೃತಿಕ ವಿಕೋಪ ಇಲಾಖೆಯ ಮುಖ್ಯಸ್ಥರಾದ ಅಝದ್ ಅಹಮದ್ ಭಟ್, ಸೆಂಥಿಲ್ ,ಮಂಗಳೂರು ವಿಭಾಗದ ಭೂ ಗರ್ಭ ಇಲಾಖೆಯ ಮಹದೇವ್, ತಹಸೀಲ್ದಾರ್ ಅನಿತಾಲಕ್ಷ್ಮಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಮ್. ಶಾಹಿದ್ ತೆಕ್ಕಿಲ್, ಪಂಚಾಯತ್ ಸದಸ್ಯ ಎಸ್.

ಸಂಪಾಜೆ ಭೂಕಂಪನ ಪ್ರದೇಶಕ್ಕೆ ಕೇಂದ್ರ ತಂಡ ಪರಿಶೀಲನೆ Read More »

ಸುಳ್ಯ; ಬಿರುಕು ಬಿಟ್ಟ ಗುಳಿಕ್ಕಾನ ಪ್ರದೇಶಕ್ಕೆ ಭೇಟಿ ನೀಡಿದ ತಜ್ಞರ ತಂಡ

ಸಮಗ್ರ ನ್ಯೂಸ್ : ಬಿರುಕು ಬಿಟ್ಟು ಜನರ ಆತಂಕಕ್ಕೆ ಕಾರಣವಾದ ಸುಳ್ಯದ ಗುಳಿಕ್ಕಾನ ಪ್ರದೇಶಕ್ಕೆ ತಜ್ಞರ ತಂಡ ಭೇಟಿ ನೀಡಿದ್ದು, 2018 ರಲ್ಲಿ ಗುಳಿಕ್ಕಾನದ ಗುಡ್ಡದಲ್ಲಿ 200 ಮೀಟರ್ ದೂರದವರೆಗೆ ಭೂಮಿ ಆಳವಾಗಿ ಭಾಗ ಬಿಟ್ಟಿತು. ಈ ವೇಳೆ ಗುಳಿಕ್ಕಾನದ ಗುಡ್ಡ ಭಾಗದಲ್ಲಿ 10 ಕುಟುಂಬಗಳು ವಾಸಿಸುತ್ತಿದ್ದವು. ಇದೀಗ ಈ ಗುಡ್ಡ ಪ್ರದೇಶದಲ್ಲಿ ಜನ ವಾಸ ಮಾಡಲು ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುವುದಕ್ಕೆ ತಂಡ ಆಗಮಿಸಿದೆ. ಸುಳ್ಯದ ಗುಳಿಕ್ಕಾನ ಪ್ರದೇಶ ಜನ ವಾಸಿಸಲು ಯೊಗ್ಯವಾಗಿದೆಯೇ ಎಂದು ತಿಳಿಯಲು

ಸುಳ್ಯ; ಬಿರುಕು ಬಿಟ್ಟ ಗುಳಿಕ್ಕಾನ ಪ್ರದೇಶಕ್ಕೆ ಭೇಟಿ ನೀಡಿದ ತಜ್ಞರ ತಂಡ Read More »

ಸ್ಕೂಟಿಗಳ ನಡುವೆ ಅಪಘಾತ; ಸುಳ್ಯದ ಪತ್ರಕರ್ತ ಕುಟುಂಬ ಸಣ್ಣ ಪುಟ್ಟ ಗಾಯಗಳಿಂದ ಪಾರು

ಸಮಗ್ರ ನ್ಯೂಸ್ : ಸುಳ್ಯದ ಜಟ್ಟಿಪಳ್ಳ ರಸ್ತೆಯಿಂದ ಮುಖ್ಯ ರಸ್ತೆಗೆ ಬರುವಲ್ಲಿ ಇಂದು ಬೆಳಗ್ಗೆ ಎರಡು ಸ್ಕೂಟಿಗಳ ನಡುವೆ ಅಪಘಾತ ಸಂಭವಿಸಿದೆ. ಸುಳ್ಯದ ಸುದ್ದಿ ಬಿಡುಗಡೆ ಪತ್ರಕರ್ತರಾಗಿರುವ ಶರೀಫ್ ಜಟ್ಟಿಪಳ್ಳ ಹಾಗೂ ಅವರ ಪತ್ನಿ, ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪತ್ರಕರ್ತ ಶರೀಫ್ ಅವರ ಪತ್ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂಬ ಮಾಹಿತಿ ದೊರಕಿದ್ದು, ಈ ವಿಷಯದ ಬಗ್ಗೆ ಪೊಲೀಸ್ ಕೇಸ್ ದಾಖಲಾಗಿದೆ. ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದ್ದು, ಇದೀಗ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ

ಸ್ಕೂಟಿಗಳ ನಡುವೆ ಅಪಘಾತ; ಸುಳ್ಯದ ಪತ್ರಕರ್ತ ಕುಟುಂಬ ಸಣ್ಣ ಪುಟ್ಟ ಗಾಯಗಳಿಂದ ಪಾರು Read More »

ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳಲ್ಲಿ; ಓರ್ವ ಎಸ್ಕೇಪ್

ಸಮಗ್ರ ನ್ಯೂಸ್ : ಗೋವುಗಳನ್ನು ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಪತ್ತೆ ಹಿಡಿದ ಘಟನೆಯೊಂದು ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ. ಉಡುಪಿಯ ಮಲ್ಪೆ ಹೂಡೆಯಲ್ಲಿ ಅಕ್ರಮ ಕಸಾಯಿ ಖಾನೆ ನಡೆಸುತ್ತಿರುವ ಸಹೋದರರಾದ ಶಕೀಲ್ ಅಹಮದ್ ಮತ್ತು ಅಖಿಲ್ ಅಹಮದ್ ಬಂಧಿತ ಆರೋಪಿಗಳು. ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ತಲ್ವಾರು ಹಿಡಿದು ದನ ಕದಿಯುತ್ತಿದ್ದ ಸಹೋದರರು ಬೇಳಂಜೆ ಗ್ರಾಮದ ಈಸ ಗದ್ದೆ ಎಂಬಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಎರಡು ಜಾನುವಾರುಗಳನ್ನು

ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳಲ್ಲಿ; ಓರ್ವ ಎಸ್ಕೇಪ್ Read More »