ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅವಸ್ಥೆ ಕಂಡು ಹೋಂ ಮಿನಿಸ್ಟರ್ ಗರಂ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದು ಈ ವೇಳೆ ಪೊಲೀಸ್ ಠಾಣೆಗೆ ಟರ್ಪಾಲ್ ಹೊದಿಕೆ ಕಂಡು ಗೃಹ ಸಚಿವರು ಗರಂ ಆದರು.

Ad Widget ... ..

ಹೊಸ ಠಾಣೆ ಕಟ್ಟಡ ಕಾಮಗಾರಿ ವಿಳಂಬಕ್ಕೆ ಆರಗ ಜ್ಞಾನೇಂದ್ರ ಕೋಪಗೊಂಡು ನೂತನ ‌ಕಟ್ಟಡ ನಿರ್ಮಾಣ ಇಂಜಿನಿಯರ್ ಗೆ ಕರೆ ಮಾಡಿ ತರಾಟೆ ತೆಗೆದುಕೊಂಡರು. ಜ್ಞಾನೇಂದ್ರ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು.

Ad Widget

2017ರಲ್ಲೇ ಸರ್ಕಾರ ಹೊಸ ಠಾಣೆ ಕಟ್ಟಡ ನಿರ್ಮಾಣಕ್ಕೆ 1.23 ಕೋಟಿ ಮೀಸಲಿಟ್ಟಿದೆ. ಟೆಂಡರ್ ಆದರೂ ಹಣ ಸಾಕಾಗಲ್ಲ ಅಂತ ಕಟ್ಟಡ ಕಾಮಗಾರಿ ವಿಳಂಬವಾಗಿತ್ತು. ಠಾಣೆಯಲ್ಲಿನ ಅವಸ್ಥೆ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು.

Leave a Comment

Your email address will not be published. Required fields are marked *