ಕರಾವಳಿ

ಮೂಡಬಿದಿರೆ: ಬೈಕ್ ಸ್ಕಿಡ್; ಸವಾರ ಮೃತ್ಯು

ಸಮಗ್ರ ನ್ಯೂಸ್: ಬೈಕ್ ಸ್ಕಿಡ್ ಆಗಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸಾವನಪ್ಪಿದ ಘಟನೆ ಭಾನುವಾರ ರಾತ್ರಿ ಬೆಳುವಾಯಿಲ್ಲಿ ಸಂಭವಿಸಿದೆ. ಮೃತ ಯುವಕನ್ನು ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ರಾಣಿಕೇರಿ ನಿವಾಸಿ, ಮೂಲತಃ ಚಿಕ್ಕಮಗಳೂರಿನ ರಾಜೇಶ್ (28) ಎಂದು ಗುರುತಿಸಲಾಗಿದೆ. ಈತ ಬಾಳೆಹೊನ್ನೂರಿನಲ್ಲಿ ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿ ಮೂಡುಬಿದಿರೆಗೆ ಬೈಕ್ ನಲ್ಲಿ ಮರಳುತ್ತಿದ್ದ ವೇಳೆ ಬೆಳುವಾಯಿಯಲ್ಲಿ ಬೈಕ್ ಸ್ಕಿಡ್ ಆಗಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತೆರವುಗೊಳಿಸಿದ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತಲೆಗೆ ಬಲವಾದ ಪೆಟ್ಟು

ಮೂಡಬಿದಿರೆ: ಬೈಕ್ ಸ್ಕಿಡ್; ಸವಾರ ಮೃತ್ಯು Read More »

ಮಂಗಳೂರು: ಆಟೋ ಸ್ಪೋಟದ ಕಿಂಗ್ ಪಿನ್ ಮತೀನ್ ಪತ್ತೆಗೆ 3 ಲಕ್ಷ ಘೋಷಿಸಿದ NIA

ಸಮಗ್ರ ನ್ಯೂಸ್: ಉಗ್ರ ಮತೀನ್​​ ತಾಹ ಜೊತೆ ಶಾರಿಕ್​​​ ನಂಟು ಹೊಂದಿದ್ದು, NIA ದೇಶಭ್ರಷ್ಟ ಮತೀನ್​​ಗಾಗಿ ಹುಡುಕುತ್ತಿದೆ. NIA ಮತೀನ್​​ ತಲೆಗೆ 3 ಲಕ್ಷ ಇನಾಮು ಘೋಷಣೆ ಮಾಡಿದೆ. ಮಂಗಳೂರು ಸ್ಫೋಟಕ್ಕೂ ಮತೀನ್​ಗೂ ನಂಟಿದೆ ಎಂದು ವರದಿಗಳು ತಿಳಿಸಿವೆ. ಅಬ್ದುಲ್​​​​ ಮತೀನ್​​​ ಥಾಹಾ ಶಿವಮೊಗ್ಗ ತೀರ್ಥಹಳ್ಳಿಯವನಾಗಿದ್ದು, ಈ ಮತೀನ್​​​ ಮಂಗಳೂರು ಸ್ಫೋಟದ ಮಾಸ್ಟರ್​​ ಮೈಂಡ್​ ಎನ್ನಲಾಗ್ತಿದೆ.. ಅಲ್​​​​ ಹಿಂದ್​ ಐಸಿಸ್ ಕೇಸ್​ನ ಪ್ರಮುಖ ಆರೋಪಿ ಮತೀನ್​​​ ಆಗಿದ್ದು, ತಮಿಳುನಾಡಿನ ಹಿಂದೂ ಮುಖಂಡನ ಕೊಲೆಯಲ್ಲೂ ಪಾತ್ರದಲ್ಲಿದ್ದನು. ಮಾಜ್​ ಮುನೀರ್​​

ಮಂಗಳೂರು: ಆಟೋ ಸ್ಪೋಟದ ಕಿಂಗ್ ಪಿನ್ ಮತೀನ್ ಪತ್ತೆಗೆ 3 ಲಕ್ಷ ಘೋಷಿಸಿದ NIA Read More »

ವಿಟ್ಲ: ಮುಸ್ಲಿಂ ಯುವಕರೊಂದಿಗೆ ಹಿಂದೂ ಹುಡುಗಿ ಗುಡ್ಡದಲ್ಲಿ ಸಿಕ್ಕಿಬಿದ್ದ ಪ್ರಕರಣಕ್ಕೆ ತಿರುವು

ಸಮಗ್ರ ನ್ಯೂಸ್: ಮುಸ್ಲಿಂ ಯುವಕರೊಂದಿಗೆ ಹಿಂದೂ ಅಪ್ರಾಪ್ತ ಹುಡುಗಿ ಅಳಕಮಜಲು ಸಮೀಪದ ನಿನ್ನಿಕಲ್ಲು ಗುಡ್ಡದಲ್ಲಿ ಪತ್ತೆಯಾದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮುಸ್ಲಿಂ ಯುವಕರು, ಒಬ್ಬಳು ಮುಸ್ಲಿಂ ಯುವತಿ ಹಾಗೂ ಹಿಂದೂ ಅಪ್ರಾಪ್ತ ಹುಡುಗಿ ನಿನ್ನಿ ಕಲ್ಲು ಎಂಬಲ್ಲಿ ಸ್ಥಳೀಯರ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು ಇದೀಗ ಪೊಲೀಸ್ ಠಾಣಾ ಮೆಟ್ಟಿಲೇರಿದೆ.ಈ ಕುರಿತು ಹಿಂದೂ ಹುಡುಗಿಯ ಪೋಷಕರು ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಏನಿದೆ..?ಕಬಕ ಗ್ರಾಮ ಪಂಚಾಯತ್ ನ

ವಿಟ್ಲ: ಮುಸ್ಲಿಂ ಯುವಕರೊಂದಿಗೆ ಹಿಂದೂ ಹುಡುಗಿ ಗುಡ್ಡದಲ್ಲಿ ಸಿಕ್ಕಿಬಿದ್ದ ಪ್ರಕರಣಕ್ಕೆ ತಿರುವು Read More »

ಸಿನಿಮಾ ಚಿತ್ರೀಕರಣದ ವೇಳೆ ಅವಘಡ|ಮೂಳೆ ಮುರಿತಕ್ಕೊಳಗಾದ ನವೀನ್ ಡಿ. ಪಡೀಲ್

ಸಮಗ್ರ ನ್ಯೂಸ್: ಸಿನಿಮಾ ಚಿತ್ರೀಕರಣದ ಸಂದರ್ಭ ತುಳು ರಂಗಭೂಮಿ, ಚಿತ್ರರಂಗದ ಖ್ಯಾತ ನಟ ಕುಸೇಲ್ದರಸೆ ನವೀನ್ ಡಿ.ಪಡೀಲ್ ಬಿದ್ದು ಗಾಯ ಮಾಡಿಕೊಂಡ ಘಟನೆ ನಿನ್ನೆ ಸಂಜೆ ಮಡಂತ್ಯಾರಿನಲ್ಲಿ ಸಂಭವಿಸಿದೆ. ತೊಡೆಯ ಭಾಗದಲ್ಲಿ ಮೂಳೆ ಮುರಿತಕ್ಕೊಳಗಾದ ಅವರು ನಗರದ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಳು, ಕನ್ನಡ, ಮಲೆಯಾಳ ಭಾಷೆಯಲ್ಲಿ ಬರಲಿರುವ ಸಿನಿಮಾದ ಚಿತ್ರೀಕರಣ ವೇಳೆ ಘಟನೆ ಸಂಭವಿಸಿದೆ. ನವೀನ್ ಡಿ. ಪಡೀಲ್ ಅನೇಕ ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಇತ್ತೀಚಿಗೆ ತೆರೆಕಂಡು ದಾಖಲೆ ನಿರ್ಮಿಸಿದ ‘ಕಾಂತಾರ’ ಚಿತ್ರದಲ್ಲೂ ನಟಿಸಿದ್ದಾರೆ.

ಸಿನಿಮಾ ಚಿತ್ರೀಕರಣದ ವೇಳೆ ಅವಘಡ|ಮೂಳೆ ಮುರಿತಕ್ಕೊಳಗಾದ ನವೀನ್ ಡಿ. ಪಡೀಲ್ Read More »

ಮಂಗಳೂರು ಸ್ಪೋಟದ ಅಸಲಿಯತ್ತು ಬಯಲು| FSL ವರದಿಯಲ್ಲೇನಿದೆ ಗೊತ್ತಾ?

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಎಸ್ ಎಲ್ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ. ಆಟೋ ಬ್ಲ್ಯಾಸ್ಟ್ ಪ್ರಕರಣ ಸಂಬಂಧ ತನಿಖೆ ನಡೆಸಿರುವ ಪೊಲೀಸರು ಇದೀಗ ಒಂದೊಂದೇ ಮಾಹಿತಿಯನ್ನು ಬಯಲಿಗೆಳೆಯುತ್ತಿದ್ದಾರೆ. ಈ ನಡುವೆ ಎಫ್ ಎಸ್ ಎಲ್ ವರದಿಯಲ್ಲಿ ಆಟೋ ಬ್ಲ್ಯಾಸ್ಟ್ ನಲ್ಲಿ ಲೋಕಲ್ ಬಾಂಬ್ ಬಳಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಶಂಕಿತ ಉಗ್ರ ಕುಕ್ಕರ್ ಬಳಸಿ ಲೋಕಲ್ ಮೇಡ್ ಬಾಂಬ್ ತಯಾರಿಸಿದ್ದ, ಕುಕ್ಕರ್ ನಲ್ಲಿ ಬ್ಯಾಟರ್ ಸರ್ಕ್ಯೂಟ್ ಜೊತೆಗೆ ಸಲ್ಫರ್

ಮಂಗಳೂರು ಸ್ಪೋಟದ ಅಸಲಿಯತ್ತು ಬಯಲು| FSL ವರದಿಯಲ್ಲೇನಿದೆ ಗೊತ್ತಾ? Read More »

ಸುಳ್ಯ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವಿವಾಹಿತೆಯರು ನಾಪತ್ತೆ| ಪತ್ತೆಗಾಗಿ‌ ಪ್ರಕಟಣೆ ಹೊರಡಿಸಿದ ಪೊಲೀಸರು

ಸಮಗ್ರ ನ್ಯೂಸ್: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವಿವಾಹಿತ ಮಹಿಳೆಯರು ತಮ್ಮ ಮನೆಯಿಂದ ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದು, ಎಲ್ಲಿಯಾದರೂ ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸುಳ್ಯ ಪೊಲೀಸ್ ಠಾಣೆಯಿಂದ ಪ್ರಕಟಣೆ ನೀಡಲಾಗಿದೆ. ಸಂಪಾಜೆ ಗ್ರಾಮದ ಕೀಲಾರುಮೂಲೆ ಎಂಬಲ್ಲಿ ವಾಸಿಸುತ್ತಿದ್ದ ನಾಗವೇಣಿ (28ವ) ಎಂಬಾಕೆ ಸೆ.21ರಂದು ಅರಂತೋಡು ಪೋಸ್ಟ್ ಆಫೀಸಿಗೆ ಹೋಗಿ ಬರುವುದಾಗಿ ಮಕ್ಕಳ ಬಳಿ ಹೇಳಿ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿರುತ್ತದೆ. ಸಂಬಂಧಿಕರ

ಸುಳ್ಯ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವಿವಾಹಿತೆಯರು ನಾಪತ್ತೆ| ಪತ್ತೆಗಾಗಿ‌ ಪ್ರಕಟಣೆ ಹೊರಡಿಸಿದ ಪೊಲೀಸರು Read More »

“ರಂಗಚಾವಡಿ” ವರ್ಷದ ಹಬ್ಬ ಸಂಭ್ರಮ| ರಂಗ ಚಾವಡಿ ಸಮಾಜಕ್ಕೆ ಮಾದರಿ ಸಂಘಟನೆ – ಇನಾಯತ್ ಅಲಿ

ಸಮಗ್ರ ನ್ಯೂಸ್: ರಂಗಚಾವಡಿ ಸಂಘಟನೆಯ ವರ್ಷದ ಹಬ್ಬ ಕಾರ್ಯಕ್ರಮ ಭಾನುವಾರ ಸಂಜೆ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಸಂಜೀವ ದಂಡೆಕೇರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ರಂಗ ಚಾವಡಿ ಸಂಘಟನೆ ಕಳೆದ 23 ವರ್ಷಗಳಿಂದ ನಿರಂತರವಾಗಿ ಕಲೆ ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ಸೇವೆ ಸಲ್ಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಅದೆಷ್ಟೋ ಹಿರಿ ಕಿರಿಯ ಕಲಾವಿದರಿಗೆ ಸಂಘಟನೆ ಆಸರೆಯಾಗಿ ಬೆಳೆದಿದೆ. ಸಂಘಟನೆಯು ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ”

“ರಂಗಚಾವಡಿ” ವರ್ಷದ ಹಬ್ಬ ಸಂಭ್ರಮ| ರಂಗ ಚಾವಡಿ ಸಮಾಜಕ್ಕೆ ಮಾದರಿ ಸಂಘಟನೆ – ಇನಾಯತ್ ಅಲಿ Read More »

ಸುಳ್ಯ: ಕಾರಣಿಕದ ಕೊರಗಜ್ಜನ ಮತ್ತೊಂದು ಪವಾಡ| ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಬೆಂಗಳೂರಿನ ದಂಪತಿಯ ಪ್ರಾರ್ಥನೆಗೆ ಹರಸಿದ ಕೊರಂಬಡ್ಕ‌ ಸಾನಿಧ್ಯ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಕೊರಗಜ್ಜನ ಕಾರಣಿಕ ಸದಾ ಬೆಳಕಿಗೆ ಬರುತ್ತಿದ್ದು, ಇದೀಗ ಸುಳ್ಯದ ಕೊರಂಬಡ್ಕ‌ ದೈವ ಸಾನಿಧ್ಯದಲ್ಲಿ ಮತ್ತೊಂದು ಆಶ್ಚರ್ಯಕರ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಸುಳ್ಯಕ್ಕೆ ಬಂದ ದಂಪತಿಯ ಕಷ್ಟದ ಕಣ್ಣೀರ ಒರೆಸಿ ಕಾರಣಿಕ ದೈವ ಕೊರಂಬಡ್ಕದ ಸ್ವಾಮಿ ಕೊರಗಜ್ಜ‌ ಕೈ ಹಿಡಿದಿದ್ದು, ಅಜ್ಜನ ಮತ್ತೊಂದು ಪವಾಡ ಬೆಳಕಿಗೆ ಬಂದಿದೆ. ಕೊರಂಬಡ್ಕ ಕೊರಗಜ್ಜ‌ ಸಾನಿಧ್ಯ ಬೆಂಗಳೂರು ಮೂಲದ ವ್ಯಕ್ತಿ ವಿನಯ ಎಂಬಾತ ಕಳೆದ ಮೂರು ವರ್ಷದ ಹಿಂದೆ ಸುಳ್ಯದ ವ್ಯಕ್ತಿಯೊಬ್ಬರ ಬಳಿಯಿಂದ ಖರೀದಿಸಿದ್ದರು. ಕಾರನ್ನು ಖರೀದಿಸುವ

ಸುಳ್ಯ: ಕಾರಣಿಕದ ಕೊರಗಜ್ಜನ ಮತ್ತೊಂದು ಪವಾಡ| ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಬೆಂಗಳೂರಿನ ದಂಪತಿಯ ಪ್ರಾರ್ಥನೆಗೆ ಹರಸಿದ ಕೊರಂಬಡ್ಕ‌ ಸಾನಿಧ್ಯ Read More »

ಮಂಗಳೂರು: ಅಟೋರಿಕ್ಷಾದಲ್ಲಿ ನಿಗೂಢ ಸ್ಪೋಟ| ಡಿಜಿಪಿ ಪ್ರವೀಣ್ ಸೂದ್ ಮಾಹಿತಿ

ಸಮಗ್ರ ನ್ಯೂಸ್: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಸಮೀಪ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಣಿಕ ಹಿಂದಿ ಭಾಷೆ ಮಾತನಾಡುತ್ತಿದ್ದ ಮಾಹಿತಿ ಗೊತ್ತಾಗಿದೆ. ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ನಿಗೂಢವಾಗಿ ಸ್ಪೋಟ ಸಂಭವಿಸಿದ್ದು, ಪೊಲೀಸರ ಬಳಿ ಪ್ರಯಾಣಿಕ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದ ಪ್ರಯಾಣಿಕ ನಂತರ ಅಣ್ಣ ಬಾಬುರಾವ್ ಅವರಿಗೆ ಕರೆ ಮಾಡಿ ಎಂದು ನಂಬರ್ ನೀಡಿದ್ದಾನೆ. ಆ ನಂಬರ್ ಗೆ ಕರೆ ಮಾಡಿದಾಗ ಆತ

ಮಂಗಳೂರು: ಅಟೋರಿಕ್ಷಾದಲ್ಲಿ ನಿಗೂಢ ಸ್ಪೋಟ| ಡಿಜಿಪಿ ಪ್ರವೀಣ್ ಸೂದ್ ಮಾಹಿತಿ Read More »

ಮಂಗಳೂರು: ಚಲಿಸುತ್ತಿದ್ದ ರಿಕ್ಷಾದಲ್ಲಿ ನಿಗೂಢ ಸ್ಪೋಟ

ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಮಂಗಳೂರಿನ ನಾಗುರಿಯಲ್ಲಿ ಸಂಜೆ 5.30 ರ ಸುಮಾರಿಗೆ ಆಟೋದಲ್ಲಿ ಸ್ಪೋಟ ಉಂಟಾಗಿದ್ದು, ಪ್ರಯಾಣಿಕ ಮತ್ತು ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ತಜ್ಞರು ಕೂಡ ಸ್ಥಳಕ್ಕೆ ಆಗಮಿಸಲಿದ್ದಾರೆ. ಆಟೋದಲ್ಲಿ ಕುಕ್ಕರ್ ಕಂಡು ಬಂದಿದೆ. ತನಿಖೆ ನಂತರ ನಿಗೂಢ ಸ್ಪೋಟದ ಹಿಂದಿನ ರಹಸ್ಯವೇನೆಂಬುದು ಗೊತ್ತಾಗಲಿದೆ. ಘಟನೆಯ

ಮಂಗಳೂರು: ಚಲಿಸುತ್ತಿದ್ದ ರಿಕ್ಷಾದಲ್ಲಿ ನಿಗೂಢ ಸ್ಪೋಟ Read More »