ಕರಾವಳಿ

ಎರಡು ವರ್ಷಗಳ ಬಳಿಕ ಮಂಗಳೂರಿಗೆ ಬಂದ ಐಷಾರಾಮಿ ಹಡಗು….!!

ಸಮಗ್ರ ನ್ಯೂಸ್: ಮಂಗಳೂರು ನವಮಂಗಳೂರು ಬಂದರಿಗೆ ಈ ಋತುವಿನ ಮೊದಲ ಐಷರಾಮಿ ಹಡಗು ಆಗಮಿಸಿದೆ. ಮಾಲ್ಟಾದಿಂದ ಬಂದಿದ್ದ ‘ಎಂಎಸ್‌ ಯುರೋಪ–2’ ಹೆಸರಿನ ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಆಗಮಿಸಿದ್ದಾರೆ. ಹಡಗಿನಲ್ಲಿ ಆಗಮಿಸಿದ್ದ ಪ್ರಯಾಣಿಕರಿಗೆ ಎನ್ಎಂಪಿಎ ದಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು, ಹಡಗಿನಲ್ಲಿ ಬಂದಿದ್ದ ಪ್ರವಾಸಿಗರು ಸೇಂಟ್‌ ಅಲೋಶಿಯಸ್‌ ಕಾಲೇಜು, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನ, ಮಂಗಳೂರಿನ ಮಾರುಕಟ್ಟೆ, ಉಡುಪಿ ಕೃಷ್ಣ ಮಠ, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಫಿಜಾ ಮಾಲ್‌ ಮುಂತಾದ ಸ್ಥಳಗಳಿಗೆ ಭೇಟಿ

ಎರಡು ವರ್ಷಗಳ ಬಳಿಕ ಮಂಗಳೂರಿಗೆ ಬಂದ ಐಷಾರಾಮಿ ಹಡಗು….!! Read More »

ಬಂಟ್ವಾಳ: ಸ್ಕೂಟರ್‌ ಚಲಾಯಿಸಿದ ಅಪ್ರಾಪ್ತ ಬಾಲಕಿ| 26 ಸಾವಿರ ರೂ. ದಂಡ ಕಟ್ಟಿದ ತಾಯಿ

ಸಮಗ್ರ ನ್ಯೂಸ್: ಬಂಟ್ವಾಳದ ಸಿದ್ದಕಟ್ಟೆಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ಸ್ಕೂಟರ್‌ ಚಲಾಯಿಸಲು ನೀಡಿದ ಆಕೆಯ ತಾಯಿಗೆ ಬಂಟ್ವಾಳ ನ್ಯಾಯಾಲಯ 26 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಕಳೆದ ಆಗಸ್ಟ್‌ನಲ್ಲಿ ಸಿದ್ದಕಟ್ಟೆಯಲ್ಲಿ ಸ್ಕೂಟರ್‌ ಮತ್ತು ಕಾರಿನ ಮಧ್ಯೆ ಅಪಘಾತ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿದ ಎಎಸ್‌ಐ ವಿಜಯ್‌ ಅವರು ನೋಟಿಸ್‌ ಜಾರಿ ಮಾಡಿದ್ದರು. ಇದೀಗ ವಿಚಾರಣೆ ನಡೆಸಿದ

ಬಂಟ್ವಾಳ: ಸ್ಕೂಟರ್‌ ಚಲಾಯಿಸಿದ ಅಪ್ರಾಪ್ತ ಬಾಲಕಿ| 26 ಸಾವಿರ ರೂ. ದಂಡ ಕಟ್ಟಿದ ತಾಯಿ Read More »

ಕಡಬ: ಹಿಂದೂ ಯುವತಿಯನ್ನು ರೂಂಗೆ ಕರೆದ ಮುಸ್ಲಿಂ ಯುವಕ | ಹಿಂಜಾವೇ ಕಾರ್ಯಕರ್ತರಿಗೆ ಹೆದರಿ ಪರಾರಿ

ಸಮಗ್ರ ನ್ಯೂಸ್: ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ ಜತೆ ರೂಂನಲ್ಲಿದ್ದಾಗ ಹಿಂಜಾವೇ ಕಾರ್ಯರ್ತರು ಬರುತ್ತಿದ್ದಂತೆ ಪರಾರಿಯಾದ ಘಟನೆ ಅಲಂಕಾರು ಸಮೀಪದ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ನ.27 ರ ಭಾನುವಾರ ಸಂಜೆ ನಡೆದಿದೆ. ಯುವತಿ ಮಂಜೇಶ್ವರ ಮೂಲದವಳಾಗಿದ್ದು, ಮುಡಿಪು ಮೂಲದ ಮುಸ್ಲಿಂ ಯುವಕನ ಸಂಪರ್ಕದಲ್ಲಿದ್ದು, ಪ್ರಸ್ತುತ ಆತ ಕೆಲಸದ ನಿಮಿತ್ತ ಕೊಂತೂರು ಪೆರಾಬೆ ಕ್ರಾಮದ ಕೋಚಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿದ್ದು, ಅಲ್ಲಿಗೆ ಯುವತಿಯನ್ನು ಬರುವಂತೆ ಹೇಳಿದ್ದ. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಯುವಕನ

ಕಡಬ: ಹಿಂದೂ ಯುವತಿಯನ್ನು ರೂಂಗೆ ಕರೆದ ಮುಸ್ಲಿಂ ಯುವಕ | ಹಿಂಜಾವೇ ಕಾರ್ಯಕರ್ತರಿಗೆ ಹೆದರಿ ಪರಾರಿ Read More »

“ವಿದ್ಯಾರ್ಥಿಗಳೇ, ಮತೀಯ ಸಂಘಟನೆಗಳ ಜೊತೆ ಗುರುತಿಸಿಕೊಳ್ಳದಿರಿ”
-ಇನಾಯತ್ ಅಲಿ |ಸುರತ್ಕಲ್ ನಲ್ಲಿ ಎನ್ ಎಸ್ ಯು ಐ ನಿಂದ “ನಮ್ಮೂರ ಹೆಮ್ಮೆ” ಪ್ರತಿಭಾ ಪುರಸ್ಕಾರ

ಸುರತ್ಕಲ್: ಎನ್ ಎಸ್ ಯು ಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ‘ನಮ್ಮೂರ ಹೆಮ್ಮೆ’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೋಮವಾರ ಸಂಜೆ ಇಲ್ಲಿನ ವಿಶ್ವ ಬ್ರಾಹ್ಮಣ ಸಭಾಭವನದಲ್ಲಿ ಜರುಗಿತು. ಈ ವೇಳೆ ಮಾತಾಡಿದ ಎನ್ ಎಸ್ ಯು ಐ ರಾಜ್ಯ ಉಸ್ತುವಾರಿ ಇನಾಯತ್ ಅಲಿ ಅವರು, “ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು.ಅದರಂತೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ

“ವಿದ್ಯಾರ್ಥಿಗಳೇ, ಮತೀಯ ಸಂಘಟನೆಗಳ ಜೊತೆ ಗುರುತಿಸಿಕೊಳ್ಳದಿರಿ”
-ಇನಾಯತ್ ಅಲಿ |ಸುರತ್ಕಲ್ ನಲ್ಲಿ ಎನ್ ಎಸ್ ಯು ಐ ನಿಂದ “ನಮ್ಮೂರ ಹೆಮ್ಮೆ” ಪ್ರತಿಭಾ ಪುರಸ್ಕಾರ
Read More »

ಶ್ರೀನಿವಾಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸೈಬರ್ ಸೆಕ್ಯೂರಿಟಿ ಮತ್ತು ಎಥಿಕಲ್ ಹ್ಯಾಕಿಂಗ್ ಸಂಸ್ಥೆ ಪ್ರಾರಂಭ

ಸಮಗ್ರ ನ್ಯೂಸ್: ಶ್ರೀನಿವಾಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ Polite Masters ಎಂಬ ಸೈಬರ್ ಸೆಕ್ಯೂರಿಟಿ ಮತ್ತು ಎಥಿಕಲ್ ಹ್ಯಾಕಿಂಗ್ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಸಂಸ್ಥೆಯ ಸ್ಥಾಪಕರಾಗಿ ಅನುಷ್ ಜಿ ಶೆಟ್ಟಿ, ಸಹ ಸ್ಥಾಪಕರಾಗಿ ಸುಪ್ರೀತ್, ಟಿ. ವಂಶಿ, ವೆಂಕಟರಮಣ ಭಟ್ ಹಾಗೂ ಸತ್ಯಪ್ರಕಾಶ್ ಕಾರ್ಯನಿರ್ವಹಿಸುತ್ತಿದಾರೆ. ಈ ಸಂಸ್ಥೆಯ ಉದ್ದೇಶ ಜನರಿಗೆ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿ ಎಥಿಕಲ್ ಹ್ಯಾಕಿಂಗ್ ನ ತರಬೇತಿ ನೀಡಿ ಜನರು ಸೈಬರ್ ಕೈಂಗೆ ಬಲಿಯಾಗದಂತೆ ತಡೆಯುವುದಾಗಿದೆ. ಇತ್ತೀಚೆಗೆ ಈ ಸಂಸ್ಥೆಯು ಉಳ್ಳಾಲ ಪೊಲೀಸ್

ಶ್ರೀನಿವಾಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸೈಬರ್ ಸೆಕ್ಯೂರಿಟಿ ಮತ್ತು ಎಥಿಕಲ್ ಹ್ಯಾಕಿಂಗ್ ಸಂಸ್ಥೆ ಪ್ರಾರಂಭ Read More »

ಕುಕ್ಕೆ ಸುಬ್ರಹ್ಮಣ್ಯ: ಎರಡು ವರ್ಷಗಳ ಬಳಿಕ ನಡೆಯಿತು ಎಡೆಸ್ನಾನ| ಸೇವೆ ಸಲ್ಲಿಸಿದ 116 ಮಂದಿ ಭಕ್ತರು

ಸಮಗ್ರ ನ್ಯೂಸ್: ರಾಜ್ಯ ಇತಿಹಾಸ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಆಚರಣೆ ನಡೆಯುತ್ತಿದ್ದು ಇದರ ಅಂಗವಾಗಿ ನಡೆಯುವ ಎಡೆಮಡೆಸ್ನಾನ ಬರೋಬ್ಬರಿ ಎರಡು ವರ್ಷಗಳ ಬಳಿಕ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅನಾದಿ‌ ಕಾಲದಿಂದ ನಡೆದುಕೊಂಡು ಬರುತ್ತಿದ್ದ ಮಡೆ ಸ್ನಾನಕ್ಕೆ ನ್ಯಾಯಾಲಯ ನಿಷೇಧ ಹೇರಿತ್ತು. ಬ್ರಾಹ್ಮಣರು ತಿಂದು ಉಳಿಸಿದಂತಹ ಎಲೆಯ ಮೇಲೆ ಭಕ್ತಾಧಿಗಳು ಈ‌ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಸೇವೆಗೆ ಇತ್ತೀಚಿನ ಕೆಲವು ವರ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಪದ್ಧತಿಯನ್ನು ನಿಷೇಧಗೊಳಿಸಿ

ಕುಕ್ಕೆ ಸುಬ್ರಹ್ಮಣ್ಯ: ಎರಡು ವರ್ಷಗಳ ಬಳಿಕ ನಡೆಯಿತು ಎಡೆಸ್ನಾನ| ಸೇವೆ ಸಲ್ಲಿಸಿದ 116 ಮಂದಿ ಭಕ್ತರು Read More »

ಮಂಗಳೂರು: ಮತಾಂತರಗೊಳಿಸಿ ಲೈಂಗಿಕ ಕಿರುಕುಳ| ಮುಸ್ಲಿಂ ಯುವಕನ ವಿರುದ್ದ ದೂರಿತ್ತ ಯುವತಿ

ಸಮಗ್ರ ನ್ಯೂಸ್: ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ ಮೊಬೈಲ್‌ ಶಾಪ್‌ನಲ್ಲೇ ಮೊಬೈಲ್‌ ರಿಚಾರ್ಜ್‌ ಮಾಡುತ್ತಿದ್ದೆ.ಆಗ ಖಲೀಲ್‌ನ ಪರಿಚಯವಾಗಿತ್ತು. 2021ರ ಜ.14ರಂದು ಖಲೀಲ್‌ ಒಳ್ಳೆಯ ಕೆಲಸ ಮತ್ತು ಹಣ ಕೊಡುವುದಾಗಿ ಆಮಿಷವೊಡ್ಡಿ ಪುಸಲಾಯಿಸಿ ಆತನ ಕುಟುಂಬದ ಮನೆಯಾದ ಕಲ್ಲಾಪುಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಮಹಿಳೆಯರಿಗೆ ಪರಿಚಯಿಸಿದ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು, ಕುರಾನ್‌ ಓದಲು ಒತ್ತಾಯ ಮಾಡಿ ನಮಾಝ್ ಮಾಡಿಸಿದ್ದ.

ಮಂಗಳೂರು: ಮತಾಂತರಗೊಳಿಸಿ ಲೈಂಗಿಕ ಕಿರುಕುಳ| ಮುಸ್ಲಿಂ ಯುವಕನ ವಿರುದ್ದ ದೂರಿತ್ತ ಯುವತಿ Read More »

ಮಂಗಳೂರು: ಬಾಂಬ್ ಸ್ಫೋಟ ಪ್ರಕರಣ|ಶಂಕಿತನಿಗೆ ಒಬ್ಬಳು ಗರ್ಲ್​ಫ್ರೆಂಡ್

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ರೂವಾರಿ ಶಾರೀಕ್ ಗೆ ಒಬ್ಬಳು ಗರ್ಲ್​ಫ್ರೆಂಡ್ ಇರೋ ವಿಷಯ ಬೆಳಕಿಗೆ ಬಂದಿದ್ದು ಇದೀಗ ಅಕೆಯನ್ನು ತನಿಖಾ ದಳ ವಿಚಾರಣೆ ನಡೆಸಿರುವುದಾಗಿ ತಿಳಿದಬಂದಿದೆ. ಶಾರೀಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತ ಹೇಳಿಕೆ ನೀಡದ ಸ್ಥಿತಿಯಲ್ಲಿದ್ದಾನೆ. ಒಂದು ವಾರದ ಬಳಿಕ ಆತನಿಂದ ಹೇಳಿಕೆ ಪಡೆಯಬಹುದು ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಇತ್ತ ಪೊಲೀಸರು ಮತ್ತು ಎನ್​ಐಎ ತಂಡ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಶಾರೀಕ್

ಮಂಗಳೂರು: ಬಾಂಬ್ ಸ್ಫೋಟ ಪ್ರಕರಣ|ಶಂಕಿತನಿಗೆ ಒಬ್ಬಳು ಗರ್ಲ್​ಫ್ರೆಂಡ್ Read More »

ಸುಳ್ಯ: ಪತ್ನಿಯನ್ನು ಕೊಂದು ಪರಾರಿಯಾದವ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿಸಿ ಪತಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪಶ್ಚಿಮ ಬಂಗಾಲದ ಪೊಲೀಸರ ಸಹಾಯದಿಂದ ಸುಳ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ ತುಂಬಿಸಿ ಪರಾರಿಯಾಗಿರುವುದಾಗಿ ಹೇಳ ಲಾಗಿದೆ. ಈತ ಕಳೆದ ಆರು ತಿಂಗಳಿನಿಂದ ಬೀರಮಂಗಲ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆ ಎಂದು ಹೊಟೇಲ್ ನವರಲ್ಲಿ ಹೇಳಿ ಊರಿಗೆ ತೆರಳಿದ್ದ. ಈ

ಸುಳ್ಯ: ಪತ್ನಿಯನ್ನು ಕೊಂದು ಪರಾರಿಯಾದವ ಪೊಲೀಸ್ ವಶಕ್ಕೆ Read More »

ಪುತ್ತೂರು: ಮನೆ ಮುಂದೆ ಮಹಿಳೆಯ ಸುಟ್ಟ ದೇಹ ಪತ್ತೆ

ಸಮಗ್ರ ನ್ಯೂಸ್: ಮಹಿಳೆಯೋರ್ವರ ದೇಹಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನ.26ರ ಪುತ್ತೂರಿನ ಕುಂಬ್ರ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಬೀಸ ಎಂದು ಗುರುತಿಸಲಾಗಿದೆ. ನಬೀಸ ಎಂದಿನಂತೆ ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು, ಬೆಳಿಗ್ಗೆ ಮನೆಯ ಮುಂಬಾಗದಲ್ಲಿ ಇವರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಬೀಸ ಅವರೇ ಬೆಂಕಿ ಹಚ್ಚಿಕೊಂಡರೇ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನಬೀಸ ಅವರು ಅಲ್ಪ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು

ಪುತ್ತೂರು: ಮನೆ ಮುಂದೆ ಮಹಿಳೆಯ ಸುಟ್ಟ ದೇಹ ಪತ್ತೆ Read More »